Home
ಸುದ್ದಿಜಾಲ

ಮಾ.19ಕ್ಕೆ ಸೇಲ್! 6400mAh ಬ್ಯಾಟರಿ.. 32MP ಸೆಲ್ಫಿ ಕ್ಯಾಮೆರಾ.. ಈ ಹೊಸ iQOO ಫೋನಿಗೆ ಬೊಂಬಾಟ್ ಆಫರ್

ಐಕ್ಯೂ ಇತ್ತೀಚೆಗೆ ಹೊಸ ಗೇಮಿಂಗ್ ಫೋನ್ ಬಿಡುಗಡೆ ಮಾಡಿದೆ. ಈ ಮೂಲಕ ಗೇಮಿಂಗ್ ಪ್ರಿಯರ ಗಮನ ಸೆಳೆದಿದೆ. ಹೌದು, ಬಹುನಿರೀಕ್ಷಿತ ಐಕ್ಯೂ ನಿಯೋ 10R (iQOO Neo 10R) ಮೊಬೈಲ್ ದೇಶೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಗ್ಗೆ ಇಟ್ಟಿದೆ. ಅಂದಹಾಗೆ, ಕಂಪನಿಯು ಇದೇ ಮಾರ್ಚ್ 19 ರಿಂದ ಈ ಫೋನಿನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಇದನ್ನು 30,000 ರೂ.ಗಳ ಬಜೆಟ್‌ನಲ್ಲಿ ಲಭ್ಯಗೊಳಿಸಿದೆ. ಈಗಾಗಲೇ ಮುಂಗಡ ಬುಕಿಂಗ್ ಶುರುವಾಗಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್‌ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಹಾಗೆಯೇ 6000mm2 ವೇಪರ್ ಕೂಲಿಂಗ್ ಚೇಂಬರ್ ಹೊಂದಿದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. 6400mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾ.19ಕ್ಕೆ iQOO Neo 10R ಸೇಲ್! ಕಡಿಮೆ ಬೆಲೆ.. ಆಫರ್, ವಿಶೇಷತೆಗಳೇನು?

ಐಕ್ಯೂ ನಿಯೋ 10R ಬೆಲೆ ಮತ್ತು ಲಭ್ಯತೆ

ಗೇಮಿಂಗ್ ಅಥವಾ ಹೆಚ್ಚು ಸ್ಟೋರೇಜ್ ಇಷ್ಟಪಡುವವರಿಗೆ, ಹೊಸ ಐಕ್ಯೂ ನಿಯೋ 10R ಉತ್ತಮ ಆಯ್ಕೆಯಾಗಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ಬೆಲೆ 26,999 ರೂ. ಆಗಿದೆ. 8GB RAM + 256GB ಸ್ಟೋರೇಜ್ ರೂಪಾಂತರವನ್ನು 28,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ವೇರಿಯಂಟ್ 30,999 ರೂ.ಗೆ ಮಾರಾಟವಾಗಲಿದೆ.

ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ಕೆಲವು ಆಫರ್ ನೀಡುತ್ತದೆ. ಮಾರ್ಚ್ 19 ರಿಂದ ಅಮೆಜಾನ್ (Amazon.in) ಮತ್ತು ಐಕ್ಯೂ ಆನ್‌ಲೈನ್ ಸ್ಟೋರ್‌ ಈ ಫೋನ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ನಾಳೆಯಿಂದ (ಮಾರ್ಚ್ 18) ಮುಂಗಡ ಬುಕಿಂಗ್ ಮಾಡಿರುವ ಗ್ರಾಹಕರು ಈ ಫೋನ್ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ ಮೂನ್‌ನೈಟ್ ಟೈಟಾನಿಯಂ ಮತ್ತು ರೇಜಿಂಗ್ ಬ್ಲೂ ಬಣ್ಣಗಳಲ್ಲಿ ಬಿಡುಗಡೆಯಾಗಿದೆ.

ಮಾ.19ಕ್ಕೆ iQOO Neo 10R ಸೇಲ್! ಕಡಿಮೆ ಬೆಲೆ.. ಆಫರ್, ವಿಶೇಷತೆಗಳೇನು?

ಐಕ್ಯೂ ನಿಯೋ 10R ವೈಶಿಷ್ಟ್ಯಗಳು

ಐಕ್ಯೂ ನಿಯೋ 10R ಫೋನ್‌ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2800 × 1260 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಹೊಂದಿದೆ. ಇದು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 144Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಲಭ್ಯವಿದೆ. ಈ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8S ಜೆನ್ 3 ಪ್ರೊಸೆಸರ್‌ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಆಂಡ್ರಾಯ್ಡ್ 15 ಆಧಾರಿತ Funtouch ಓಎಸ್‌ 15 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ ಈ ಸ್ಮಾರ್ಟ್‌ಫೋನ್, ಅಡ್ರಿನೊ 735 ಜಿಪಿಯು ಸಹ ಹೊಂದಿದೆ.

ಈ ಐಕ್ಯೂ ಮೊಬೈಲ್ ಅನ್ನು ಗೇಮಿಂಗ್‌ಗಾಗಿ ವಿನ್ಯಾಸಗೊಳಿಸಿದೆ. ಈ ಫೋನ್ 2000Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಇನ್ ಬಿಲ್ಟ್ FPS ಮೀಟರ್ ಹೊಂದಿದೆ. ದೀರ್ಘಕಾಲದ ಭಾರೀ ಗೇಮಿಂಗ್ ಬಳಿಕ ಫೋನ್ ಬಿಸಿಯಾಗದಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ 6000mm2 ವೇಪರ್ ಕೂಲಿಂಗ್ ಚೇಂಬರ್ ಹೊಂದಿದೆ. ಐಕ್ಯೂ ನಿಯೋ 10R ಫೋನಿನಲ್ಲಿ ವಿಶೇಷ ಮಾನ್ಸ್ಟರ್ ಮೋಡ್ ಅಳವಡಿಸಲಾಗಿದೆ. ಈ ಫೋನ್ 8GB RAM ಮತ್ತು 12GB RAM ಹೊಂದಿದೆ. ಈ ಫೋನ್ ವಿಸ್ತೃತ RAM ತಂತ್ರಜ್ಞಾನ ಹೊಂದಿದೆ. ನೀವು 12GB ವರ್ಚುವಲ್ RAM ಬಳಸಬಹುದು. ಈ ಫೋನಿನಲ್ಲಿ 128GB ಸ್ಟೋರೇಜ್ ಲಭ್ಯವಿದೆ.

ಐಕ್ಯೂ ನಿಯೋ 10R ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮೊಬೈಲ್ 6400mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದರೊಂದಿಗೆ ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಲಭ್ಯವಿದೆ.

Best Mobiles in India

English summary
iQOO Neo 10R goes on sale in India on March 19: check price, offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+