Home
ಸುದ್ದಿಜಾಲ

ಬರಲಿದೆ ಹೊಸ iQOO ಫೋನ್ 50MP ಸೋನಿ ಕ್ಯಾಮೆರಾ.. 6,400mAh ಬಿಗ್ ಬ್ಯಾಟರಿ.. ಬೆಲೆಯೂ ಲೀಕ್!

ಐಕ್ಯೂ ಹೊಸ ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅದುವೇ ಐಕ್ಯೂ ನಿಯೋ 10R (iQOO Neo 10R) ಸ್ಮಾರ್ಟ್‌ಫೋನ್. ಹೌದು, ಕಂಪನಿಯು ಈ ತಿಂಗಳು ಭಾರತದಲ್ಲಿ ಈ ಫೋನನ್ನು ಬಿಡುಗಡೆ ಮಾಡಲಿದೆ.ಈಗಾಗಲೇ ಐಕ್ಯೂ ನಿಯೋ 10R ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ. ಇದು ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಭಾರತದಲ್ಲಿ 30,000 ರೂ.ಗಿಂತ ಕಡಿಮೆ ಬೆಲೆಗೆ ಈ ಮೊಬೈಲ್ ಲಾಂಚ್ ಆಗುವ ಸಾಧ್ಯತೆಯಿದೆ. ಬನ್ನಿ, ಈ ಹೊಸ ಫೋನಿನ ಬಿಡುಗಡೆ ಯಾವಾಗ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 1.5K ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿರುತ್ತದೆ. ಈ ಮೊಬೈಲ್ 6,400mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರಲಿದೆ. ಜೊತೆಗೆ 12GB RAM ಮತ್ತು 256GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಬರಲಿದೆ iQOO Neo 10R ಫೋನ್; 6400mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ನೋಡಿ

ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯ

ಕಂಪನಿಯು ಇತ್ತೀಚೆಗೆ ಐಕ್ಯೂ ನಿಯೋ 10R ಫೋನಿನ ಟೀಸರ್ ಫೋಟೋ ಹಂಚಿಕೊಂಡಿದೆ. ಇದನ್ನು 'ರೇಜಿಂಗ್ ಬ್ಲೂ' ಎಂದು ಹೆಸರಿಸಲಾಗಿದೆ. ಈ ಮೂಲಕ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದೆ. ಅದರಂತೆ, ಈ ಮೊಬೈಲ್‌ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿರುತ್ತದೆ. ಈ ಫೋನಿನ ಹಿಂಭಾಗವು ನೀಲಿ ಬಣ್ಣ ಹೊಂದಿದೆ. ಮತ್ತು ಎರಡು ಬದಿಗಳಲ್ಲಿ ಬಿಳಿ ಬಣ್ಣ ಕಾಣಬಹುದು. ಈ ಬಣ್ಣನ್ನು ವಿಶೇಷವಾಗಿ ಭಾರತೀಯ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಂದರೆ, ಇದು ಇತರೆ ಮಾರುಕಟ್ಟೆಗಳಲ್ಲಿ ಲಭ್ಯವಿರುವುದಿಲ್ಲ.

ಐಕ್ಯೂ ನಿಯೋ 10R ಬೆಲೆ (ನಿರೀಕ್ಷಿತ)

ಕಂಪನಿ ಹಂಚಿಕೊಂಡಿರುವ ಟೀಸರ್‌ನಲ್ಲಿ ಐಕ್ಯೂ ನಿಯೋ 10R ಫೋನಿನ ಬೆಲೆ ಬಗ್ಗೆ ಸುಳಿವು ನೀಡಲಾಗಿದೆ. ಅದರಂತೆ, ಭಾರತದಲ್ಲಿ ಈ ಮೊಬೈಲ್ 30,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಕಂಪನಿಯು ಐಕ್ಯೂ ನಿಯೋ 10R ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ, ಇದು ಈ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಐಕ್ಯೂ ನಿಯೋ 10R ಕುರಿತು ಹೆಚ್ಚಿನ ಮಾಹಿತಿಯು ಬಹಿರಂಗವಾಗಲಿದೆ.

ಐಕ್ಯೂ ನಿಯೋ 10R ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ 1.5K ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 44Hz ರಿಫ್ರೆಶ್ ದರದ ಬೆಂಬಲ ಪಡೆದಿರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಐಕ್ಯೂ ನಿಯೋ 10R ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಹೊಂದಿರುತ್ತದೆ. ಕಂಪನಿಯು ಈಗಾಗಲೇ ಮಾಹಿತಿ ಬಹಿರಂಗಪಡಿಸಿದೆ. ಈ ಫೋನ್ ಆಂಡ್ರಾಯ್ಡ್‌ 15 (Android 15) ಆಧಾರಿತ Funtouch ಓಸ್‌ ಜೊತೆಗೆ ಕೆಲಸ ನಿರ್ವಹಿಸುತ್ತದೆ.

RAM ಮತ್ತು ಸ್ಟೋರೇಜ್

ಐಕ್ಯೂ ನಿಯೋ 10R ಫೋನ್ ಹಲವು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಮಾಹಿತಿಯ ಪ್ರಕಾರ, ಈ ಮೊಬೈಲ್ 12GB RAM ಮತ್ತು 256GB ಸ್ಟೋರೇಜ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಬರಲಿದೆ.

ಕ್ಯಾಮೆರಾ ಸೆಟಪ್

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಸೋನಿ LYT-600 ಪ್ರಾಥಮಿಕ ಕ್ಯಾಮೆರಾ ಹೊಂದಿರುತ್ತದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್) ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ.

ದೊಡ್ಡ ಬ್ಯಾಟರಿ

ಐಕ್ಯೂ ನಿಯೋ 10R ಮೊಬೈಲ್ 6,400mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರಲಿದೆ. ಇದು ಅತಿದೊಡ್ಡ ಬ್ಯಾಟರಿ ಹೊಂದಿರುವ ಫೋನ್‌ಗಳಲ್ಲಿ ಒಂದಾಗಿದೆ. ಇದು ಚೀನಾದಲ್ಲಿ ಬಿಡುಗಡೆಯಾದ ಐಕ್ಯೂ ನಿಯೋ 10 ಸರಣಿಗಿಂತ ಹೆಚ್ಚಾಗಿರುತ್ತದೆ.

Best Mobiles in India

English summary
iQOO Neo 10R to launch in India in Blue and White colour: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+