ಮಾ.11ಕ್ಕೆ iQOO Neo 10R ಬಿಡುಗಡೆ; 6400mAh ಬಿಗ್ ಬ್ಯಾಟರಿ.. 256GB ಸ್ಟೋರೇಜ್.. ಬೆಲೆಯೂ ಸೋರಿಕೆ!
ಐಕ್ಯೂ ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ. ಇದು ಐಕ್ಯೂ ನಿಯೋ 10R (iQOO Neo 10R) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಬಿಡುಗಡೆ ಹೌದು, ಕಂಪನಿಯು ಈಗಾಗಲೇ ಐಕ್ಯೂ ನಿಯೋ 10R (iQOO Neo 10R) ಫೋನಿನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೊಬೈಲ್ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ಮಾರಾಟವಾಗಲಿದೆ. ಈ ಮಧ್ಯೆಯೇ ಮುಂಬರುವ ಹೊಸ ಐಕ್ಯೂ ಫೋನಿನ ಬೆಲೆ ಸೋರಿಕೆಯಾಗಿದೆ. ಬನ್ನಿ, ಈ ಹೊಸ ಫೋನಿನ ವಿಶೇಷತೆ ಮತ್ತು ಇನ್ನಿತರ ವಿವರಗಳನ್ನು ತಿಳಿಯೋಣ.
ಐಕ್ಯೂ ನಿಯೋ 10R ಮೊಬೈಲ್ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಇದು ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಹಾಗಯೇ 6,400mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರುತ್ತದೆ. ಜೊತೆಗೆ 12GB + 256GB ಸ್ಟೋರೇಜ್, 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಐಕ್ಯೂ ನಿಯೋ 10R ಬಿಡುಗಡೆ ದಿನಾಂಕ
ಐಕ್ಯೂ ನಿಯೋ 10R ಫೋನ್ ಭಾರತದಲ್ಲಿ ಮಾರ್ಚ್ 11 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಫೋನಿನ ಟೀಸರ್ ಫೋಟೋ ಬಿಡುಗಡೆಯಾಗಿದೆ. ಇದನ್ನು 'ರೇಜಿಂಗ್ ಬ್ಲೂ' ಎಂದು ಕರೆಯಲಾಗಿದೆ. ಈ ಮೊಬೈಲ್ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿದೆ. ಈ ಫೋನಿನ ಹಿಂಭಾಗವು ನೀಲಿ ಬಣ್ಣವನ್ನು ಹೊಂದಿದೆ. ಎರಡು ಬದಿಗಳಲ್ಲಿ ಬಿಳಿ ಬಣ್ಣ ಕಾಣಬಹುದು.
ಐಕ್ಯೂ ನಿಯೋ 10R ಬೆಲೆ (ಸೋರಿಕೆ)
ಐಕ್ಯೂ ನಿಯೋ 10R ಬೆಲೆಯ ಬಗ್ಗೆ ಟಿಪ್‌ಸ್ಟರ್ ಮಾಹಿತಿ ಹಂಚಿಕೊಂಡಿದೆ. ಅಂದರೆ ಈ ಫೋನಿನ 12GB ರೂಪಾಂತರದ ಬೆಲೆಯನ್ನು ಬಹಿರಂಗಪಡಿಸಲಾಗಿದೆ. ಇದು 35,999 ರೂ.ಗೆ ಬಿಡುಗಡೆಯಾಗಲಿದೆ. ಇದು ಐಕ್ಯೂ ನಿಯೋ 10R ಫೋನಿನ 12GB + 256GB ರೂಪಾಂತರದ ಬೆಲೆಯಾಗಿದೆ. ಈ ಐಕ್ಯೂ ಮೊಬೈಲ್ ರಿಯಾಯಿತಿ ಮತ್ತು ಬ್ಯಾಂಕ್ ಆಫರ್‌ಗಳೊಂದಿಗೆ 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುತ್ತದೆ. ಈ ಫೋನಿನ ಅಧಿಕೃತ ಬೆಲೆಯನ್ನು ತಿಳಿಯಲು, ಈ ಮೊಬೈಲ್ ಬಿಡುಗಡೆ ವರೆಗೂ ಕಾಯಬೇಕಿದೆ.

ಐಕ್ಯೂ ನಿಯೋ 10R ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ 6.78 ಇಂಚಿನ 1.5K ಅಮೋಲೆಡ್ ಡಿಸ್ಪ್ಲೇ ಹೊಂದಿರಲಿದೆ. ಇದು 144Hz ರಿಫ್ರೆಶ್ ದರದ ಬೆಂಬಲ ಪಡೆದಿರುವ ನಿರೀಕ್ಷೆಯಿದೆ.
ಕ್ಯಾಮೆರಾ ಸೆಟಪ್
ಐಕ್ಯೂ ನಿಯೋ 10R ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ LYT-600 ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ. ಐಕ್ಯೂ ನಿಯೋ 9 ಪ್ರೊ ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ IMX920 ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ.
ಪ್ರೊಸೆಸರ್ ಮತ್ತು ಸ್ಟೋರೇಜ್
ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಹೊಂದಿರಲಿದೆ. ಈ ಫೋನ್ ಆಂಡ್ರಾಯ್ಡ್ 15 (Android 15) ಆಧಾರಿತ Funtouch ಓಸ್ ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಫೋನ್ 8GB + 256GB ಮತ್ತು 12GB + 256GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು 8GB + 128GB ರೂಪಾಂತರದಲ್ಲೂ ಬರಬಹುದು ಎಂದು ಹೇಳಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಕ್ಯೂ ನಿಯೋ 10R ಫೋನ್ 6400mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದು ಬೃಹತ್ ಬ್ಯಾಟರಿ ಹೊಂದಿರುವ ಫೋನ್‌ಗಳಲ್ಲಿ ಒಂದಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು.


Click it and Unblock the Notifications








