ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್ ಬಿಡುಗಡೆ! ಫೀಚರ್ಸ್‌ ಹೇಗಿದೆ?

|

ಐಕ್ಯೂ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ತನ್ನ ವೈವಿಧ್ಯಮಯ ಕ್ಯಾಮೆರಾ ಫೀಚರ್ಸ್‌ ಸ್ಮಾರ್ಟ್‌ಫೋನ್‌ಗಳಿಂದ ಗಮನ ಸೆಳೆದಿದೆ. ಸದ್ಯ ಇದೀಗ ಹೊಸ ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ 120Hz ರಿಪ್ರೆಶ್‌ ರೇಟ್‌ ಹೊಂದಿರುವ ಅಮೋಲೆಡ್‌ ಡಿಸ್‌ಪ್ಲೇ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ.

ಐಕ್ಯೂ ನಿಯೋ 6 5G

ಹೌದು, ಐಕ್ಯೂ ಕಂಪೆನಿ ಹೊಸ ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾಕೋರ್‌ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಜೊತೆಗೆ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.62 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಹಾಗೆಯೇ 120Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ OriginOS ಓಷನ್ ಕಸ್ಟಮ್ ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ ISOCELL ಪ್ಲಸ್‌ GW1P ಸೆನ್ಸಾರ್‌ ಕ್ಯಾಮೆರಾವನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್‌ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್‌ 8GB + 128GB ಸ್ಟೋರೇಜ್ ರೂಪಾಂತರಕ್ಕಾಗಿ CNY 2,799 (ಸುಮಾರು 33,500ರೂ) ಬೆಲೆ ನಿಗದಿಪಡಿಸಲಾಗಿದೆ. ಹಾಗೆಯೇ ಈ ಫೋನ್ 8GB + 256GB ಮಾದರಿಯ ಆಯ್ಕೆಗೆ CNY 2,999 (ಸುಮಾರು 35,900ರೂ) ಬೆಲೆ ಹೊಂದಿದೆ. ಜೊತೆಗೆ ಟಾಪ್-ಎಂಡ್ 12GB + 256GB ಆಯ್ಕೆ CNY 3,299 (ಸರಿಸುಮಾರು. 39,400ರೂ)ಬೆಲೆಯಲ್ಲಿ ಲಭ್ಯವಾಗಲಿದೆ. ಈ ಫೋನ್‌ ನೀಲಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ಹಿಂಭಾಗದಲ್ಲಿ ಕ್ಲಾಸಿಕ್ ಲೈಸಿ ಲೆದರ್‌ನೊಂದಿಗೆ ಬರುತ್ತದೆ.

Best Mobiles in India

English summary
The new iQoo phone comes with a 120Hz AMOLED display and carries triple rear cameras

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X