ಭಾರತದಲ್ಲಿ ಐಕ್ಯೂ ನಿಯೋ 7 ಪ್ರೊ ಲಾಂಚ್ ಡೇಟ್ ಬಹಿರಂಗ! ಫೀಚರ್ಸ್ ನಿರೀಕ್ಷೆ ಏನು?
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಐಕ್ಯೂ ಕಂಪನಿ ತನ್ನ ಬಹು ನಿರೀಕ್ಷಿತ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್ ಲಾಂಚ್ ಡೇಟ್ ಬಹಿರಂಗಪಡಿಸಿದೆ. ಭಾರತದ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್ ಇದೇ ಜುಲೈ 4 ರಂದು ಎಂಟ್ರಿ ನೀಡೋದು ಪಕ್ಕಾ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8+ Gen 1SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ.
ಹೌದು, ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿರಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಕ್ಯೂ ನಿಯೋ 7 ಪ್ರೊ ಡಿಸ್‌ಪ್ಲೇ ವಿಶೇಷ: ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಇದು ಸ್ಯಾಮ್‌ಸಂಗ್ E5 ಅಮೋಲೆಡ್ ಡಿಸ್‌ಪ್ಲೇ ಎನಿಸಿಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, HDR ಮತ್ತು 1500nits ಪೀಕ್ ಬ್ರೈಟ್‌ನೆಸ್ ಅನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.
ಐಕ್ಯೂ ನಿಯೋ 7 ಪ್ರೊ ಪ್ರೊಸೆಸರ್ ಯಾವುದು: ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಆಂಡ್ರಾಯ್ಡ್ 13 ಆಧಾರಿತ Funtouch OS 13 ನಿಂದ ಚಾಲಿತವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ 16GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಐಕ್ಯೂ ನಿಯೋ 7 ಪ್ರೊ ಕ್ಯಾಮೆರಾ ಸೆಟ್‌ಅಪ್: ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ.

ಐಕ್ಯೂ ನಿಯೋ 7 ಪ್ರೊ ಬ್ಯಾಟರಿ ಬ್ಯಾಕ್‌ಅಪ್ ವಿವರ: ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದು 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಐಕ್ಯೂ ನಿಯೋ 7 ಪ್ರೊ ಬೆಲೆ ಮತ್ತು ಲಭ್ಯತೆ: ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಅಂದಾಜು 40,000ರೂ. ಬೆಲೆ ಅಡಿಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಜುಲೈ 4 ರಂದು ಭಾರತಕ್ಕೆ ಎಂಟ್ರಿ ನೀಡಲಿದ್ದು, ಬಿಡುಗಡೆಯಾದ ನಂತರ ಇದರ ಸೇಲ್ ಡೇಟ್ ಬಹಿರಂಗವಾಗಲಿದೆ.
ಇದಲ್ಲದೆ ಐಕ್ಯೂ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.


Click it and Unblock the Notifications








