Home
ಸುದ್ದಿಜಾಲ

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಐಕ್ಯೂ ನಿಯೋ 8 ಸರಣಿ!..ಫೀಚರ್ಸ್‌ ಹೇಗಿದೆ?

ಟೆಕ್‌ ಮಾರುಕಟ್ಟೆಯಲ್ಲಿ ಐಕ್ಯೂ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಗಮನಸೆಳೆದಿದೆ. ಸದ್ಯ ಇದೀಗ ತನ್ನ ಐಕ್ಯೂ ನಿಯೋ 8 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಐಕ್ಯೂ ನಿಯೋ 8 ಮತ್ತು ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ.

ಹೌದು, ಐಕ್ಯೂ ನಿಯೋ 8 ಸರಣಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು 144Hz ರಿಫ್ರೆಶ್ ರೇಟ್‌ ಬೆಂಬಲಿಸುವ ಡಿಸ್‌ಪ್ಲೇಯನ್ನು ಒಳಗೊಂಡಿವೆ. ಜೊತೆಗೆ 120W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿವೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಐಕ್ಯೂ ನಿಯೋ 8 ಸರಣಿ!..ಫೀಚರ್ಸ್‌ ಹೇಗಿದೆ?

ಐಕ್ಯೂ ನಿಯೋ 8 ಸರಣಿ ಫೀಚರ್ಸ್‌ ಹೇಗಿದೆ?

ಐಕ್ಯೂ ನಿಯೋ 8 ಸರಣಿ ಸ್ಮಾರ್ಟ್‌ಫೋನ್‌ 6.78 ಇಂಚಿನ 1.5K ಅಮೋಲೆಡ್‌ ಡಿಸ್‌ಪ್ಲೇಗಳನ್ನು ಹೊಂದಿವೆ. ಈ ಡಿಸ್‌ಪ್ಲೇ 2800 x 1260 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 144Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 2160Hz PWM ಡಿಮ್ಮಿಂಗ್ ಅನ್ನು ಹೊಂದಿದೆ.

ಐಕ್ಯೂ ನಿಯೋ 8 ಸರಣಿ ಪ್ರೊಸೆಸರ್‌ ಯಾವುದು?

ಐಕ್ಯೂ ನಿಯೋ 8 ಸರಣಿಯಲ್ಲಿ ಐಕ್ಯೂ ನಿಯೋ 8 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಆದರೆ ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾಟೆಕ್‌ ಡೈಮೆನ್ಸಿಟಿ 9200+ ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇನ್ನು ಈ ಸರಣಿಯು 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಐಕ್ಯೂ ನಿಯೋ 8 ಸರಣಿ!..ಫೀಚರ್ಸ್‌ ಹೇಗಿದೆ?

ಐಕ್ಯೂ ನಿಯೋ 8 ಸರಣಿ ಕ್ಯಾಮೆರಾ ಸೆಟ್‌ಅಪ್‌ ಏನು?

ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX866V ಸೆನ್ಸಾರ್‌ ಅನ್ನು ಹೊಂದಿದೆ. ಆದರೆ ಐಕ್ಯೂ ನಿಯೋ 8 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 MP ಸೋನಿ ಸ್ಯಾಮ್‌ಸಂಗ್‌ GNV ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿವೆ.

ಐಕ್ಯೂ ನಿಯೋ 8 ಸರಣಿ ಬ್ಯಾಟರಿ ಸಾಮರ್ಥ್ಯ ಎಷ್ಟಿದೆ?

ಐಕ್ಯೂ ನಿಯೋ 8 ಸರಣಿ ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಜೊತೆಗೆ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌, 5G, 4G LTE, Wi-Fi 7, ಬ್ಲೂಟೂತ್ 5.3, GPS ಮತ್ತು NFC ಸಂಪರ್ಕವನ್ನು ಬೆಂಬಲಿಸಲಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಐಕ್ಯೂ ನಿಯೋ 8 ಸರಣಿ!..ಫೀಚರ್ಸ್‌ ಹೇಗಿದೆ?

ಐಕ್ಯೂ ನಿಯೋ 8 ಸರಣಿ ಬೆಲೆ ಮತ್ತು ಲಭ್ಯತೆ

ಐಕ್ಯೂ ನಿಯೋ 8 ಸರಣಿ ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿವೆ. ಇದರಲ್ಲಿ ಐಕ್ಯೂ ನಿಯೋ 8 ಸ್ಮಾರ್ಟ್‌ಫೋನ್‌ 12GB + 256GB ರೂಪಾಂತರದ ಬೆಲೆ CNY 2,499 (ಸುಮಾರು 29,300ರೂ) ಆಗಿದೆ. ಇದರ 12GB + 512GB ಆಯ್ಕೆಯು CNY 2,799 (ಸುಮಾರು 32,800ರೂ)ಬೆಲೆ ಪಡೆದಿದೆ.
ಇನ್ನು ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್‌ 16GB + 256GB ರೂಪಾಂತರದ ಆಯ್ಕೆಯು CNY 3,299 (ಅಂದಾಜು 38,700ರೂ)ಬೆಲೆ ಹೊಂದಿದೆ. ಇದರ 16GB + 512GB ಆಯ್ಕೆಯು CNY 3,599 (ಅಂದಾಜು 42,300ರೂ)ಬೆಲೆಯನ್ನು ಪಡೆದುಕೊಂಡಿದೆ.

Best Mobiles in India

English summary
iQoo Neo 8 Series With 5,000mAh Battery Launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+