Home
ಸುದ್ದಿಜಾಲ

ವರ್ಷಾಂತ್ಯಕ್ಕೆ ಬರಲಿದೆ iQoo 13 ಸ್ಮಾರ್ಟ್‌ಫೋನ್‌ ! ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ವಿಶೇಷ ?

ತನ್ನದೇ ಆದ ವಿಶೇಷ ಫೀಚರ್ಸ್‌ ಹೊಂದಿರುವ iQoo ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಬೇರೆ ಬೇರೆ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಪೈಪೋಟಿ ನಿಡುತ್ತಿವೆ. ಉತ್ತಮ ಫೀಚರ್ಸ್‌ನ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುವ ಸಂಸ್ಥೆ ಇದೀಗ iQoo 13 ಸರಣಿಯ ನೂತನ ಮೊಬೈಲ್‌ ಒಂದನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಉದ್ದೇಶಿತ ಸ್ಮಾರ್ಟ್‌ಫೋನ್ iQoo 12 ಸರಣಿಯ ಮುಂದುವರೆದ ಸರಣಿಯಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದನ್ನು ನವೆಂಬರ್ 2023 ರಲ್ಲಿ ಚೀನಾದಲ್ಲಿ ಅನಾವರಣಗೊಳಿಸಲಾಗಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ ಕುರಿತು ಟಿಪ್‌ಸ್ಟರ್‌ ಬಹಿರಂಗಪಡಿಸಿರುವ ಮಾಹಿತಿ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಈ ಹಿಂದಿನ iQoo 12 ಸ್ಮಾರ್ಟ್‌ಫೋನ್‌ ಅನ್ನು iQoo 12 Pro ಮಾದರಿಯೊಂದಿಗೆ ಬಿಡುಗಡೆ ಮಾಡಲಾಗಿತ್ತು ಆದರೆ ಇದೀಗ ಮುಂಬರುವ ಉದ್ದೇಶಿ iQoo 13 ಶ್ರೇಣಿಯು ಪ್ರೊ ಆಯ್ಕೆಯನ್ನು ಒಳಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಮುಂಬರುವ iQoo ಫ್ಲ್ಯಾಗ್‌ಶಿಪ್‌ಗೆ ಸಂಬಂಧಿಸಿದ ವಿವರಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಇದೀಗ ಟಿಪ್‌ಸ್ಟರ್ iQoo 13 ಮೊಬೈಲ್‌ನ ವದಂತಿಯ ಕುರಿತು ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಸೋರಿಕೆ ಮಾಡಿದೆ. ಇದು ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಮತ್ತು ಹೆಚ್ಚಿನ ರೆಸಲ್ಯೂಶನ್‌ನ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವರ್ಷಾಂತ್ಯಕ್ಕೆ ಬರಲಿದೆ iQoo 13 ಸ್ಮಾರ್ಟ್‌ಫೋನ್‌ !

iQoo 13 ನಿರೀಕ್ಷಿತ ಫೀಚರ್ಸ್:
ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ iQoo 13 ಇದು 2K ಫ್ಲಾಟ್ ಡಿಸ್‌ಪ್ಲೇ ಜೊತೆಗೆ ಬರುವ ಸಾಧ್ಯತೆ ಇದೆ ಎಂದು Weibo ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಫೋನ್ 3x ಆಪ್ಟಿಕಲ್ ಜೂಮ್‌ ಜೊತೆಗೆ ಪೆರಿಸ್ಕೋಪ್ ಟೆಲಿಫೋಟೊ ಕ್ಯಾಮೆರಾವನ್ನು ಪಡೆಯಲಿದೆ ಎಂದು ಅವರು ಹೇಳಿದ್ದಾರೆ. ಇದು iQoo 12 ನಲ್ಲಿ ಕಂಡು ಬಂದಿರುವ 3x ಆಪ್ಟಿಕಲ್ ಜೂಮ್‌ ಹಾಗೂ ಅದೇ ರೀತಿಯಾದ 64 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಹೊಂದಿರಲಿದೆಯೇ ಎಂಬುದರ ಕುರಿತು ಇನ್ನೂ ಮಾಹಿ ಸ್ಪಷ್ಟವಾಗಿಲ್ಲ.

iQoo 13 ಭದ್ರತೆಗಾಗಿ ಸಿಂಗಲ್ ಪಾಯಿಂಟ್ ಅಲ್ಟ್ರಾ ಸಾನಿಕ್ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರುವ ಸಾಧ್ಯತೆ ಇದೆ, ಅಂದರೆ ಸೆನ್ಸಾರ್ ಪರದೆಯ ದೊಡ್ಡ ಪ್ರದೇಶವನ್ನು ಒಳಗೊಳ್ಳುವುದಿಲ್ಲ. ಮುಂಬರಲಿರುವ ಈ ಸ್ಮಾರ್ಟ್‌ಫೋನ್ ಸೂಪರ್ ಲಾರ್ಜ್ ಎಕ್ಸ್ ಆಕ್ಸಿಸ್ ಲೀನಿಯರ್ ಮೋಟಾರ್‌ನೊಂದಿಗೆ ಅಳವಡಿಸಲಾಗುವುದು ಮತ್ತು IP68 ರೇಟೆಡ್ ಬಿಲ್ಡ್ ಅನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ಗಮನಾರ್ಹವಾದ ಅಂಶವೆಂಧರೆ, ಟಿಪ್‌ಸ್ಟರ್ ಈ ಹಿಂದೆಯೇ ಹ್ಯಾಂಡ್‌ಸೆಟ್‌ ಕುರಿತು ಕೆಲವು ವೈಶಿಷ್ಟ್ಯಗಳ ಬಗ್ಗೆ ಸುಳಿವು ನೀಡಿದ್ದರು. ಇದು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 8 Gen 4 SoC ನಿಂದ ಫೋನ್ ಚಾಲಿತವಾಗಬಹುದೆಂದು ಅವರು ಮೊದಲೇ ಹೇಳಿದ್ದರು. ಮುಂಬರುವ ದಿನಗಳಲ್ಲಿ ಸ್ಮಾರ್ಟ್‌ಫೋನ್ ಕುರಿತು ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.

iQoo 12 ವಿಶೇಷತೆಗಳು:
ಈ ಹಿಂದಿನ iQoo 12 ಮಾದರಿಯು 6.78 ಇಂಚಿನ 144Hz ಕ್ವಾಡ್ HD LTPO AMOLED ಡಿಸ್‌ಪ್ಲೇ ಹೊಂದಿದೆ ಮತ್ತು ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 120W ಫ್ಲ್ಯಾಶ್‌ಚಾರ್ಜ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಹ್ಯಾಂಡ್‌ಸೆಟ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ನೀಡುತ್ತದೆ.

ಕ್ಯಾಮೆರಾಕ್ಕಾಗಿ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವನ್ನು ಫೋನ್ ಒಳಗೊಂಡಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಬ್ಯಾಕ್ ಸೆನ್ಸಾರ್, ಅಲ್ಟ್ರಾ ವೈಡ್-ಆಂಗಲ್ ಲೆನ್ಸ್‌ನೊಂದಿಗೆ 50 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು 64 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಶೂಟರ್ ಅನ್ನು ಒಳಗೊಂಡಿರುವ. ಇದರ ಜೊತೆಗೆ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಹೊಂದಿದೆ.

Best Mobiles in India

English summary
IQ is said to be launching of its new iQoo 13 series phone later this year. This targeted smartphone is expected to be launched as a continuation of the iQoo 12 series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+