ಭಾರತೀಯ ಮಾರುಕಟ್ಟೆಗೆ 'iQOO' ಪ್ರೀಮಿಯಂ ಫೋನ್‌ ಪರಿಚಯಿಸಲಿದೆ!

|

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಬೇಡಿಕೆ ಇದೆ. ಅಲ್ಲದೆ ಭಾರತದ 'ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್' ಮಾರುಕಟ್ಟೆಯಲ್ಲಿ ಹೆಚ್ಚಾಗಿ ಆಪಲ್, ಸ್ಯಾಮ್‌ಸಂಗ್ ಮತ್ತು ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಪ್ರಾಬಲ್ಯ ಸಾಧಿಸಿವೆ. ಆದರೆ ಈ ಸ್ಮಾರ್ಟ್‌ಫೋನ್‌ಗಳ ವಿಶೇಷ ಫೀಚರ್ಸ್‌ಗಳು ಪ್ರೀಮಿಯಂ ಬಳಕೆದಾರ-ಅನುಭವಕ್ಕೆ ತಕ್ಕಂತೆ ಇಲ್ಲ.ಅಷ್ಟೇ ಯಾಕೆ ಈ ದಿನಗಳಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳು ಸಹ ಹೊಸತನವನ್ನು ಹೊಂದಿರುವುದಿಲ್ಲ, ಆದರೆ ಗ್ರಾಹಕರ ಈ ಕೊರಗನ್ನ ನೀಗಿಸೊದಕ್ಕೆ ಅಂತಾನೆ ಎಂಟ್ರಿ ಕೊಟ್ಟಿದೆ ವಿವೋ ಕಂಪೆನಿಯ ಸಬ್‌ಬ್ರ್ಯಾಂಡ್‌ ಐಕ್ಯೂಒ (iQOO) ಸ್ಮಾರ್ಟ್‌ಫೋನ್‌.

ಹೌದು

ಹೌದು, ಪ್ರೀಮಿಯಂ ಫ್ಲಾಗ್‌ಶಿಫ್‌ ಸ್ಮಾರ್ಟ್‌ಫೋನ್‌ ವಲಯದಲ್ಲಿ ಐಕ್ಯೂ ಕಂಪನಿಯು ಆಕರ್ಷಕ ಫೀಚರ್ಸ್‌ಗಳನ್ನ ಹೊಂದಿರುವ ಸ್ಮಾರ್ಟ್‌ಫೋನ್‌ ಪರಿಚಯಿಸುವ ಮೂಲಕ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಬಳಕೆದಾರರ ಅನುಭವವನ್ನ ಉತ್ತಮ ಪಡಿಸುವತ್ತ ಹೆಜ್ಜೆ ಹಾಕಿದೆ. ಅಲ್ಲದೆ ಪ್ರೀಮಿಯಂ ಮತ್ತು ವ್ಯಾಲ್ಯೂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಇನ್ನೂ ಲಭ್ಯವಿಲ್ಲದ ಹೊಸ ಫೀಚರ್ಸ್‌ಗಳನ್ನ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನ ಹೊರತರಲಿದೆ. ಹಾಗಾದ್ರೆ ಐಕ್ಯೂಒ ಪರಿಚಯಿಸಲಿರುವ ಸ್ಮಾರ್ಟ್‌ಫೋನ್‌ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಕೊಡ್ತೀವಿ ಓದಿ.

IQOO ಎಂದರೇನು?

IQOO ಎಂದರೇನು?

ಐಕ್ಯೂಒ (iQOO) ಸ್ಮಾರ್ಟ್‌ಫೋನ್‌ ವಿವೊನ ಕಂಪೆನಿಯ ಸಬ್‌ ಬ್ರ್ಯಾಂಡ್‌ ಆಗಿತ್ತು. ಆದರೆ ಇನ್ನು ಮುಂದೆ ಐಕ್ಯೂ ತನ್ನದೇ ಆದ ಬ್ರಾಂಡ್ ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನ ಹೊರತರಲಿದೆ. ಇನ್ನು 'ಐಕ್ಯೂಒ' ಕಂಪೆನಿಯ ಧ್ಯೇಯವಾಕ್ಯ "ಐ ಕ್ವೆಸ್ಟ್ ಆನ್ ಮತ್ತು ಆನ್" ಎಂಬುದಾಗಿದ್ದು, ಇದು ಐಕ್ಯೂಒ ಸ್ಮಾರ್ಟ್‌ಫೋನ್‌ಗಳ ಟೆಕ್ನಾಲಜಿ ಹೇಗೆ ಸುಧಾರಿಸಲಿದೆ ಅನ್ನೊದರ ಸೂಚಕವಾಗಿದೆ. ಅಲ್ಲದೆ ಕ್ಯಾಮೆರಾ, ಸಾಫ್ಟ್‌ವೇರ್ ಮತ್ತು ಗೇಮಿಂಗ್ ಸಾಮರ್ಥ್ಯಗಳಲ್ಲಿ ಉತ್ತಮ ಸಾಧನೆ ತೋರುವ ಡಿವೈಸ್‌ಗಳನ್ನ ಮೂಲಕ ಬಳಕೆದಾರ ಅನುಭವವನ್ನು ಇನ್ನಷ್ಟು ಉತ್ತಮ ಪಡಿಸಲು ನೀಡಲು ಐಕ್ಯೂಒ ಕಂಪೆನಿ ಮುಂದಾಗಿದೆ.

ಐಕ್ಯೂಒ

ಐಕ್ಯೂಒ ಉತ್ಪನ್ನಗಳ ಪ್ರಮುಖ ಉದ್ದೇಶವೆಂದರೆ ಬಜೆಟ್ ಮಧ್ಯ ಶ್ರೇಣಿಯ ಬೆಲೆ ವಿಭಾಗದಲ್ಲಿ ಸಾಟಿಯಿಲ್ಲದ ಅನುಭವವನ್ನು ನೀಡಲು ಐಕ್ಯೂಒ ಪ್ರೀಮಿಯಂ ವಿಭಾಗದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸುವುದಾಗಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗಕ್ಕೆ ಅಪ್‌ಗ್ರೇಡ್ ಮಾಡಲು ಅನುವು ಮಾಡಿಕೊಡುವ ಉತ್ಪನ್ನಗಳನ್ನು ಪರಿಚಯಿಸುವುದು ಬ್ರಾಂಡ್‌ನ ಉದ್ದೇಶವಾಗಿದೆ. ಅಲ್ಲದೆ ಅತ್ಯುತ್ತಮವಾದ ಫೀಚರ್ಸ್‌ಗಳನ್ನ ನೀಡಿದರೂ ಕೂಡ ಐಕ್ಯೂಒ ಸ್ಮಾರ್ಟ್‌ಫೋನ್‌ಗಳು ಕೈಗೆಟುಕುವ ಬೆಲೆಯನ್ನು ಹೊಂದಿರುತ್ತವೆ ಎಂದು ಹೇಳಲಾಗಿದೆ.

ಐಕ್ಯೂಒ ನಿಂದ ಏನನ್ನು ನಿರೀಕ್ಷಿಸಬಹುದು

ಐಕ್ಯೂಒ ನಿಂದ ಏನನ್ನು ನಿರೀಕ್ಷಿಸಬಹುದು

ಹೌದು, ಪ್ರೀಮಿಯಂ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಇತರೆ ಕಂಪೆನಿಗಳಿಗೆ ಪರ್ಯಾಯವಾಗಿರರುವ ಐಕ್ಯೂಒ ಉತ್ತಮ ಅನುಭವ ನೀಡಲಿದೆ. ಬಹಳ ಉತ್ತಮ ಗುಣಮಟ್ಟದ ಕಾರ್ಯಕ್ಷಮತೆ ಮತ್ತು ಸ್ಟಾಕ್ ಆಂಡ್ರಾಯ್ಡ್ ಬಳಕೆದಾರರ ಅನುಭವದಲ್ಲಿ ಹೊಸತನವನ್ನು ಕಾಣುವಂತೆ ಮಾಡುವ ಗುರಿಯನ್ನು ಹೊಂದಿದೆ. ಸದ್ಯ ಐಕ್ಯೂಒ ಕಂಪೆನಿ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು iQOO ಮತ್ತು iQOO ನಿಯೋ ಸರಣಿಯಡಿಯಲ್ಲಿ ಬಿಡುಗಡೆ ಮಾಡಲಿದೆ. ಅಲ್ಲದೆ ಈಗಾಗಲೇ ಚೀನಾದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಐಕ್ಯೂಒ ಪ್ರೊ 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು, ಬಿಡುಗಡೆಯಾದ ಕೇವಲ 4 ಗಂಟೆಗಳ ಅವಧಿಯಲ್ಲಿ 2ಲಕ್ಷಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನ ಮಾರಾಟ ಮಾಡಿದೆ.

ಭಾರತದ ಮೊದಲ 5G ಸ್ಮಾರ್ಟ್‌ಫೋನ್

ಭಾರತದ ಮೊದಲ 5G ಸ್ಮಾರ್ಟ್‌ಫೋನ್

ಇನ್ನು ಐಕ್ಯೂಒ ಕಂಪೆನಿ ಭಾರತದಲ್ಲಿ ಮೊದಲ ಕಮರ್ಷಿಯಲ್‌ 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಮುಂದಾಗಿದೆ. ಸದ್ಯ ಭಾರತದಲ್ಲಿ 5G ನೆಟ್‌ವರ್ಕ್ ಇನ್ನೂ ದೇಶದಲ್ಲಿ ಲಭ್ಯವಿಲ್ಲ, ಆದರೂ ಐಕ್ಯೂಒ ಸ್ಮಾರ್ಟ್‌ಫೋನ್‌ ಬಳಕೆದಾರರು ವೇಗವಾಗಿ ನೆಟ್‌ವರ್ಕ್‌ಗಳನ್ನು ಬಳಸಬಹುದಾಗಿದೆ. ಮುಂದಿನ ದಿನಗಳಲ್ಲಿ 5G ನೆಟ್‌ವರ್ಕ್‌ ಲಭ್ಯವಾದ ನಂತರ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಅಲ್ಲದೆ ಗ್ರಾಹಕರಿಗೆ ನೆಟ್‌ವರ್ಕ್‌ಗಳಲ್ಲಿ ಉತ್ತಮ ಅನುಭವವನ್ನು ನೀಡಲಿವೆ. ಬಫರ್-ಮುಕ್ತ ವೀಡಿಯೊ ಸ್ಟ್ರೀಮಿಂಗ್ ಅನ್ನು ನೀಡುತ್ತದೆ.

ಸ್ನಾಪ್‌ಡ್ರಾಗನ್ 865 ಪ್ರೊಸೆಸರ್‌ ಇರಲಿದೆ

ಸ್ನಾಪ್‌ಡ್ರಾಗನ್ 865 ಪ್ರೊಸೆಸರ್‌ ಇರಲಿದೆ

ಐಕ್ಯೂಒ ಕಂಪೆನಿ ಹೊರತರಲಿರುವ ಸ್ಮಾರ್ಟ್‌ಫೋನ್‌ನಲ್ಲಿ ಇದೇ ಮೊದಲ ಬಾರಿಗೆ ವೇಗದ ಸ್ನಾಪ್‌ಡ್ರಾಗನ್‌ 865 ಪ್ರೊಸೆಸರ್‌ ಇರಲಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಬಳಕೆದಾರರಿಗೆ ಅತ್ಯುತ್ತಮವಾದ ಕಾರ್ಯಕ್ಷಮತೆಯ ಅನುಭವವ ಸಿಗಲಿದೆ. ಇದಲ್ಲದೆ ವಿಭಿನ್ನ ಮಾದರಿಯ ಕ್ಯಾಮೆರಾ ಸೆಟಪ್, ಗೇಮಿಂಗ್‌ ಫೀಚರ್ಸ್‌ಗಳ ಜೊತೆಗೆ ಉತ್ತಮವಾದ ಡಿಸ್‌ಪ್ಲೇ ವಿನ್ಯಾಸ ಕೂಡ ಇರಲಿದೆ ಎಂದು ಅಂದಾಜಿಸಬಹುದಾಗಿದೆ.

ಐಕ್ಯೂಒ ಸ್ಮಾರ್ಟ್‌ಫೋನ್‌ಗಳ ಬೆಲೆ ಏನು.?

ಐಕ್ಯೂಒ ಸ್ಮಾರ್ಟ್‌ಫೋನ್‌ಗಳ ಬೆಲೆ ಏನು.?

ವೇಗದ ಎಸ್‌ಡಿ 865 ಪ್ರೊಸೆಸರ್‌ ಚಾಲಿತ 5G ಸ್ಮಾರ್ಟ್‌ಫೋನ್‌ ಎಂದ ಮೇಲೆ ಬೆಲೆ ಏನಿರಲಿದೆ ಅನ್ನೊ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತೆ. ಸದ್ಯ ಲಭ್ಯ ಮಾಹಿತಿಯ ಪ್ರಕಾರ ಬರಲಿರುವ ಐಕ್ಯೂಒ ಸ್ಮಾರ್ಟ್‌ಫೋನ್‌ ಪ್ರೀಮಿಯಂ ಬೆಲೆಯನ್ನು ಹೊಂದಿರಲಿದೆ. ಇನ್ನು 'ನಿಯೋ' ಸರಣಿಯ ಪವರ್-ಪ್ಯಾಕ್ಡ್ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿವೆ. ಐಕ್ಯೂಒ ನಿಯೋ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು 15-30 ವರ್ಷದೊಳಗಿನ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ.

ಆನ್‌ಲೈನ್‌ ಮಾರಾಟಕ್ಕೆ ಆದ್ಯತೆ

ಆನ್‌ಲೈನ್‌ ಮಾರಾಟಕ್ಕೆ ಆದ್ಯತೆ

ಐಕ್ಯೂಒ ಕಂಪೆನಿ ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಿದ್ದು, ಕಂಪೆನಿಯ ಮೊದಲ ಸ್ಮಾರ್ಟ್‌ಫೋನ್‌ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ, ಇದು ಎಲ್ಲಾ ವಯೋಮಾನದವರ ಅನುಭವಕ್ಕೆ ತಕ್ಕಂತೆ ರೂಪಿಸಲಾಗಿರುವ ಸ್ಮಾರ್ಟ್‌ಫೋನ್‌ ಆಗಿರಲಿದೆ. ಸ್ಮಾರ್ಟ್‌ಫೋನ್ ಆದಾಯವನ್ನು ಹೆಚ್ಚಿಸುವ ಸಲುವಾಗಿ, ಐಕ್ಯೂಒ ಸಹ ತನ್ನ ಸಾಧನಗಳನ್ನು ಮಾರಾಟ ಮಾಡಲು 'ಆನ್‌ಲೈನ್-ಫಸ್ಟ್‌' ಮಾರಾಟ ತಂತ್ರವನ್ನ ಅನುಸರಿಲಿದೆ.

ಐಕ್ಯೂಒ ಬಗ್ಗೆ ನಿಮಗೂ ಆಸಕ್ತಿ ಇದೆಯಾ?

ಐಕ್ಯೂಒ ಬಗ್ಗೆ ನಿಮಗೂ ಆಸಕ್ತಿ ಇದೆಯಾ?

ಸದ್ಯ ಪ್ರೀಮಿಯಂ ಬೆಲೆಯ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಅಗ್ರ ಮಾರಾಟಗಾರಲ್ಲಿ ಒಬ್ಬರಾಗಬೇಕೆಂಬ ದೃಷ್ಟಿಯೊಂದಿಗೆ ಐಕ್ಯೂಒ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಡುತ್ತಿದೆ. ಭಾರತದಲ್ಲಿ ಸಂಪೂರ್ಣ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಕಂಪೆನಿಯು ವೇಗದ ನೆಟ್‌ವರ್ಕ್‌ ಮತ್ತು ಉನ್ನತ ದರ್ಜೆಯ ಹಾರ್ಡ್‌ವೇರ್‌ ಅನ್ನು ಆಧರಿಸಿದೆ. ಇದು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ನೀಡಲಿದೆ ಎಂದು ಹೇಳಲಾಗ್ತಿದೆ.

Most Read Articles
Best Mobiles in India

English summary
iQOO will soon be introducing the disruptive product lineup, which is touted to offer innovative features that are not yet available in the premium and value flagship smartphone segment.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more