Home
ಸುದ್ದಿಜಾಲ

ಐಕ್ಯೂ U3X 5G ಸ್ಮಾರ್ಟ್‌ಫೋನ್‌ ಬಿಡುಗಡೆ!..ವಿಶೇಷತೆ ಏನು?

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ವಿವೋ ಸಬ್ ಬ್ರಾಂಡ್‌ ಐಕ್ಯೂ ಸಂಸ್ಥೆ ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಹಲವು ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ಐಕ್ಯೂ U3X 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಐಕ್ಯೂ U3 ಸ್ಮಾರ್ಟ್‌ಫೋನ್‌ನ ಮುಂದುವರೆದ ಆವೃತ್ತಿಯಾಗಿದೆ. ಇನ್ನು ಐಕ್ಯೂ U3X 5G ಸ್ಮಾರ್ಟ್‌ಫೋನ್ 6.58-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್‌ ಅನ್ನು ಪಡೆದುಕೊಂಡಿದೆ.

ಐಕ್ಯೂ

ಹೌದು, ವಿವೋ ಸಬ್‌ ಬ್ರಾಂಡ್‌ ಐಕ್ಯೂ ತನ್ನ ಹೊಸ ಐಕ್ಯೂ U3X 5G ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 5G SoC ಪ್ರೊಸೆಸರ್‌ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಡ್ಯುಯೆಲ್‌ ಎಂಜಿನ್‌ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಐಕ್ಯೂ U3X 5G ಸ್ಮಾರ್ಟ್‌ಫೋನ್‌ 1080x2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.58-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20.07:9 ರಚನೆಯ ಅನುಪಾತವನ್ನು ಹೊಂದಿದ್ದು, 90.61% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಜೊತೆಗೆ 401 ಪಿಪಿ ಪಿಕ್ಸೆಲ್ ಸಾಂದ್ರತೆಯನ್ನು ನೀಡುತ್ತದೆ.

ಪ್ರೊಸೆಸರ್‌

ಪ್ರೊಸೆಸರ್‌

ಐಕ್ಯೂ U3X 5G ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 5G ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 4GB RAM+128GB, 6GB RAM+64GB ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದು 4x ಡಿಜಿಟಲ್ ಜೂಮ್ ಮತ್ತು ಭಾವಚಿತ್ರ, ಡೈನಾಮಿಕ್ ಫೋಟೋ, ವಿಹಂಗಮ ಮತ್ತು ಇತರ ಕ್ಯಾಮೆರಾ ಮೋಡ್‌ಗಳನ್ನು ಬೆಂಬಲಿಸುತ್ತದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಐಕ್ಯೂ U3X 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ಡ್ಯುಯಲ್ ಎಂಜಿನ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ, ಬ್ಲೂಟೂತ್ ವಿ 5.1, USB ಟೈಪ್-ಸಿ, ಮತ್ತು 3.5mm ಹೆಡ್‌ಫೋನ್‌ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಕ್ಯೂ U3X 5G ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಬಿಡುಗಡೆ ಆಗಿದೆ. ಸದ್ಯ ಚೀನಾದಲ್ಲಿ 4GB RAM + 128GB ಶೇಖರಣಾ ರೂಪಾಂತರ ಆಯ್ಕೆಯ ಬೆಲೆ CNY 1,199 (ಸುಮಾರು 13,300 ರೂ.), 6GB RAM + 64GB ಶೇಖರಣಾ ಆಯ್ಕೆಯ ಬೆಲೆ CNY 1,199 (ಸರಿಸುಮಾರು 13,300 ರೂ.) ಮತ್ತು 8GB RAM+128GB ಸಂಗ್ರಹ ಆವೃತ್ತಿಗೆ CNY 1,499 (ಸುಮಾರು 16,600 ರೂ.) ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಏಪ್ರಿಲ್ 1 ರಿಂದ ಮಾರಾಟವಾಗಲಿದೆ. ಇನ್ನು ಈ ಫೋನ್‌ ಬ್ಲೂ ಮತ್ತು ಗ್ರೇ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
iQoo U3X 5G was launched in China on Monday as the latest 5G smartphone in the Vivo sub-brand's lineup.to know more visit to kannada.gizbot.com v
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+