ಮೀಡಿಯಾಟೆಕ್‌ನ ಹೊಸ ಪ್ರೊಸೆಸರ್‌ ಬೆಂಬಲಿಸಲಿದೆ iQOO Z1 ಫೋನ್‌!

|

ಇದು ಟೆಕ್ನಾಲಜಿ ಜಮಾನ. ಟೆಕ್ನಾಲಜಿ ಮುಂದುವರೆದಂತೆ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಅದರಲ್ಲೂ ಇಂದಿನ ಯುವಜನತೆಯ ಕೈ ನಲ್ಲಿ ಬಗೆ ಬಗೆ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ನಾವಿಂದು ಕಾಣಬಹುದಾಗಿದೆ. ಇನ್ನು ಸ್ಮಾರ್ಟ್‌ಫೋನ್‌ಗಳು ಸರಿಯಾಗಿ ರ್ಕಾನಿರ್ವಹಿಸಬೇಕೆಂದರೆ ಅವುಗಳ ಪ್ರೊಸೆಸರ್‌ವೇಗ ಕೂಡ ಗುಣಮಟ್ಟದಲ್ಲಿರಬೇಕು. ಪ್ರತಿಯೊಂದು ಸ್ಮಾರ್ಟ್‌ಫೋನ್‌ ಕೂಡ ತನ್ನದೇ ಆದ ಪ್ರೊಸೆಸರ್‌ ಮಾದರಿಯನ್ನ ಹೊಂದಿರುತ್ತವೆ. ಇನ್ನು ಇತ್ತೀಚಿಗಷ್ಟೆ ಮೀಡಿಯಾಟೆಕ್ ತನ್ನ ಇತ್ತೀಚಿನ 5G ಡೈಮೆನ್ಸಿಟಿ 1000+ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಅನ್ನು ಬಿಡುಗಡೆ ಮಾಡಿದೆ.

ಮೀಡಿಯಾ

ಹೌದು, ಮೀಡಿಯಾ ಟೆಕ್‌ 5G ಡೈಮೆನ್ಸಿಟಿ 1000+ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಪ್ರೊಸೆಸರ್‌ ಅನ್ನು ಪರಿಚಯಿಸಿದೆ. ಈ 5G ಚಿಪ್‌ ಪ್ರೊಸೆಸರ್‌ ಅನ್ನು ಬಳಸುವ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸುವ ಮೊದಲ ಸಸಾಲಿನ ಕಂಪೆನಿಗಳಲ್ಲಿ ಇದೀಗ ಐಕ್ಯೂ ಕಂಪೆನಿ ಕೂಡ ಸೇರಿಕೊಂಡಿದೆ. ಸದ್ಯ ಇದೀಗ iQOO ಸ್ವತಃ ತನ್ನ ಅಧಿಕೃತ ವೀಬೊ ಖಾತೆಯ ಮೂಲಕ ದೃಡಪಡಿಸದ್ದು, ಈ ಸ್ಮಾರ್ಟ್‌ಫೋನ್ ಅನ್ನು iQOO Z1 ಎಂದು ಹೆಸರಿಸಲಾಗಿದೆ. ಅಷ್ಟೇ ಅಲ್ಲ ಈ ಹ್ಯಾಂಡ್‌ಸೆಟ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಬ್ರ್ಯಾಂಡ್ ಯೋಜಿಸುತ್ತಿದೆ ಎಂದು ಚೀನಾದ ಟಿಪ್‌ಸ್ಟರ್‌ ವರದಿ ಆಗಿದೆ.

ಸ್ಮಾರ್ಟ್‌ಫೋನ್‌

ಇನ್ನು IQOO Z1 ಸ್ಮಾರ್ಟ್‌ಫೋನ್‌ 5G ಡೈಮೆನ್ಸಿಟಿ 1000+ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಪ್ರೊಸೆಸರ್‌ ಅನ್ನು ಒಳಗೊಂಡಿರಲಿದ್ದು, ಉತ್ತಮ ಅನುಭವ ನೀಡಲಿದೆ ಎನ್ನಲಾಗ್ತಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 1000+ ಎಸ್‌ಒಸಿ ವೇಗವನ್ನ ಪಡೆದುಕೊಂಡಿದೆ. ಇನ್ನು ಈ ಡಿವೈಸ್‌ 144 Hz ರಿಫ್ರೆಶ್ ರೇಟ್‌ ಹೊಂದಿರುವ ಸ್ಕ್ರೀನ್‌ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ iQOO ನಿಯೋ 3 ಸಹ 144Hz ಡಿಸ್ಪ್ಲೇ ಹೊಂದಿದೆ.

ಸ್ಮಾರ್ಟ್‌ಫೋನ್‌

ಇದಲ್ಲದೆ IQOO Z1 ಸ್ಮಾರ್ಟ್‌ಫೋನ್‌ 5G ಅನ್ನು ಬೆಂಬಲಿಸಲಿದೆ. ಏಕೆಂದರೆ ಇತ್ತೀಚಿನ ಡೈಮೆನ್ಸಿಟಿ 1000+ SoC ಮೀಡಿಯಾ ಟೆಕ್ ನಿಂದ 5G ಚಿಪ್ ಆಗಿದೆ. ಇನ್ನು ಹೊಸದಾಗಿ ಪ್ರಾರಂಭಿಸಲಾದ ಮೀಡಿಯಾಟೆಕ್ ಡೈಮೆನ್ಸಿಟಿ 1000+ ಪ್ರೊಸೆಸರ್ ಅನ್ನು ಸ್ನಾಪ್‌ಡ್ರಾಗನ್ 825 ರಂತೆಯೇ 7 ಎನ್ಎಂ ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಇದು ನಾಲ್ಕು ಕಾರ್ಟೆಕ್ಸ್-ಎ 77 ಕೋರ್‌ಗಳನ್ನು ಮತ್ತು ನಾಲ್ಕು ಕಾರ್ಟೆಕ್ಸ್-ಎ 55 ಘಟಕಗಳನ್ನು ನೀಡುತ್ತದೆ. ಜೊತೆಗೆ ಕಂಪನಿಯ 5G ಅಲ್ಟ್ರಾಸೇವ್ ವಿದ್ಯುತ್ ಉಳಿತಾಯ ಟೆಕ್ನಾಲಜಿಯನ್ನು ಹೊಂದಿದೆ.

ಪ್ರೊಸೆಸರ್‌ನ

ಅಲ್ಲದೆ ಈ ಪ್ರೊಸೆಸರ್‌ನ ನೆಟ್‌ವರ್ಕ್‌ ಎಕೋ ಮತ್ತು ಡೇಟಾ ಪ್ರಸರಣ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರೊಸೆಸರ್ ಮೋಡೆಮ್ನ ವರ್ಕಿಂಗ್ ಮೋಡ್ ಅನ್ನು ಕ್ರಿಯಾತ್ಮಕವಾಗಿ ಹೊಂದಿಸಲು ಇದು ಅನುಮತಿಸುತ್ತದೆ. ಇದು ವಿದ್ಯುತ್ ಸಂರಚನೆ ಮತ್ತು ಆಪರೇಟಿಂಗ್ ಆವರ್ತನವನ್ನು ಸಹ ಒಳಗೊಂಡಿದೆ. ಜೊತೆಗೆ ಈ ಚಿಪ್ ಮೀಡಿಯಾಟೆಕ್‌ನ ಹೈಪರ್ ಎಂಜೈನ್ 2.0 ಗೇಮ್ ಆಪ್ಟಿಮೈಸೇಶನ್ ಎಂಜಿನ್‌ನೊಂದಿಗೆ ಬರುತ್ತದೆ. ಇದಲ್ಲದೆ, ಐಕ್ಯೂಒ 3 ಆಂಡ್ರಾಯ್ಡ್ 11 ಮತ್ತು ಆಂಡ್ರಾಯ್ಡ್ 12 ನವೀಕರಣಗಳನ್ನು ಸ್ವೀಕರಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Best Mobiles in India

English summary
MediaTek recently revealed that iQOO will be one of the first companies to launch a device with this 5G chip. iQOO itself has confirmed about the same via its official Weibo account.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X