Home
ಸುದ್ದಿಜಾಲ

ಡಬಲ್ ಸಿಹಿಸುದ್ದಿ: ಇಂದು iQOO Z10, iQOO Z10x ಲಾಂಚ್; 7300mAh ಬ್ಯಾಟರಿ ಖಚಿತ.. ಬೆಲೆಯೂ ಲೀಕ್!

iQOO Z10 and iQOO Z10x Launch in India Today: ಐಕ್ಯೂ ತನ್ನ ಎರಡು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ. ಕಂಪನಿಯು ಇದನ್ನು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಪರಿಚಯಿಸಲಿದೆ. ಹೌದು, ಐಕ್ಯೂ Z10 (iQOO Z10) ಮತ್ತು ಐಕ್ಯೂ Z10x (iQOO Z10x) ಫೋನನ್ನು ಇಂದು (ಏಪ್ರಿಲ್ 11) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಮಾರಾಟದ ವಿವರಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಐಕ್ಯೂ Z10 ಮೊಬೈಲ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಈ ಐಕ್ಯೂ Z10 ಫೋನಿನ ಪ್ರಮುಖ ವಿಶೇಷತೆಯೆಂದರೆ, ಇದರ ಬೃಹತ್ 7,300mAh ಬ್ಯಾಟರಿ. ಇದು ಕಂಪನಿಯ ಫೋನಿನಲ್ಲಿ ಈವರೆಗಿನ ಅತಿದೊಡ್ಡ ಬ್ಯಾಟರಿಯಾಗಿದೆ. ಈ ಶಕ್ತಿಶಾಲಿ ಬ್ಯಾಟರಿ 90W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ ಎಂದು ಐಕ್ಯೂ ದೃಢಪಡಿಸಿದೆ. ಕೇವಲ 33 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಮಾಡಬಹುದು. ದೊಡ್ಡ ಬ್ಯಾಟರಿಯ ಹೊರತಾಗಿಯೂ, ಈ ಫೋನ್ ಸ್ಲಿಮ್ ಮತ್ತು ಹಗುರವಾಗಿದೆ. ಇದು ಕೇವಲ 7.9 ಮಿಮೀ ದಪ್ಪ ಇದೆ.

ಇಂದು iQOO Z10, iQOO Z10x ಲಾಂಚ್; ಬೆಲೆಯೂ ಲೀಕ್.. ವಿಶೇಷತೆಗಳೇನು?

ಐಕ್ಯೂ Z10 ವೈಶಿಷ್ಟ್ಯಗಳು (ನಿರೀಕ್ಷಿತ)

ಐಕ್ಯೂ Z10 ಮೊಬೈಲ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್ ಹೊಂದರಲಿದೆ. ಇದನ್ನು 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಇದು LPDDR5 RAM ಮತ್ತು UFS 3.1 ಸ್ಟೋರೇಜ್ ಆಯ್ಕೆಯೊಂದಿಗೆ ಬರಲಿದೆ. ದೈನಂದಿನ ಬಳಕೆ ಮತ್ತು ಗೇಮಿಂಗ್‌ಗೆ ಸುಗಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಫೋನ್ ಕ್ವಾಡ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಇದು 5,000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಡಿಸ್ಪ್ಲೇ ಆಗಿದೆ. ಇದರೊಂದಿಗೆ 120Hz ರಿಫ್ರೆಶ್ ದರವನ್ನು ಬೆಂಬಲ ಹೊಂದಿರುವ ನಿರೀಕ್ಷೆಯಿದೆ.

ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ಐಕ್ಯೂ Z10 ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರಲಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಫನ್‌ಟಚ್ OS 15 ನಲ್ಲಿ ಕೆಲಸ ನಿರ್ವಹಿಸುತ್ತದೆ. ಅಲ್ಟ್ರಾ ಗೇಮ್ ಮೋಡ್, ಟಚ್ ಬೂಸ್ಟ್ ಮತ್ತು ಫ್ರೇಮ್ ದರ ಸ್ಥಿರೀಕರಣದಂತಹ ಗೇಮಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇತರೆ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 5G ಬೆಂಬಲ ಸೇರಿವೆ.

ಭಾರತದಲ್ಲಿ ಐಕ್ಯೂ Z10 ಬೆಲೆ (ನಿರೀಕ್ಷಿತ)

ಐಕ್ಯೂ Z10 ಫೋನಿನ 8GB + 128GB ರೂಪಾಂತರವು 21,999 ರೂ.ಗೆ ಬಿಡುಗಡೆಯಾಗಲಿದೆ. ಬ್ಯಾಂಕ್ ಆಫರ್ ಜೊತೆಗೆ ಇದನ್ನು 19,999 ರೂ.ಗೆ ಖರೀದಿಸಬಹುದು. ಇದು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ಮಾರಾಟಬಾಗಲಿದೆ. ಈ ಮೊಬೈಲ್ ಬಿಡುಗಡೆ ನಂತರ ಮುಂಗಡ ಬುಕಿಂಗ್‌ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಐಕ್ಯೂ Z10 ಫೋನ್ ಭಾರತೀಯ ಮಾರುಕಟ್ಟೆಯಲ್ಲಿ Redmi Note 13 Pro, Realme 12 Pro ಮತ್ತು OnePlus Nord CE 4 ಫೋನ್‌ಗಳೊಂದಿಗೆ ನೇರ ಸ್ಪರ್ಧೆಯನ್ನು ನಡೆಸಲಿದೆ.

ಐಕ್ಯೂ Z10x ಕೂಡ ಬಿಡುಗಡೆ

ಐಕ್ಯೂ Z10 ಜೊತೆಗೆ, ಐಕ್ಯೂ ಹೆಚ್ಚು ಬಜೆಟ್ ಸ್ನೇಹಿ ಐಕ್ಯೂ Z10x ಫೋನನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಮೊಬೈಲ್ 6,500mAh ಬ್ಯಾಟರಿ, ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್, ರಿಂಗ್ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ಕ್ಯಾಮೆರಾಗಳು, 120Hz ಅಮೋಲೆಡ್ ಡಿಸ್ಪ್ಲೇ ಮತ್ತು ವೇಗದ ಚಾರ್ಜಿಂಗ್ ಒಳಗೊಂಡಿರಲಿದೆ. ಇದು 15,000 ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ. ಈ ಫೋನ್ ಕಡಿಮೆ ವೆಚ್ಚದಲ್ಲಿ 5G ಕಾರ್ಯಕ್ಷಮತೆಯನ್ನು ನೀಡುವ ಗುರಿಯನ್ನು ಹೊಂದಿದೆ. ಈ ಎರಡೂ ಮೊಬೈಲ್‌ಗಳು ಇಂದು ಅನಾವರಣಗೊಳ್ಳಲಿವೆ. ಕಂಪನಿಯು ಇಂದು (ಏಪ್ರಿಲ್ 11) ಬಿಡುಗಡೆ ಸಮಾರಂಭ ಆಯೋಜಿಸಿದೆ.

Best Mobiles in India

English summary
iQOO Z10 and iQOO Z10x Launch in India Today: Expected price, specifications, Features and more Details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+