Home
ಸುದ್ದಿಜಾಲ

ಹೊಸ iQOO Z10 ಸೇಲ್ ಶುರು; 2000 ರಿಯಾಯಿತಿ ಘೋಷಣೆ.. 7300mAh ಬ್ಯಾಟರಿ.. ಬೆಲೆಯೂ ಕಡಿಮೆ!

ಟೆಕ್ ದೈತ್ಯ ಐಕ್ಯೂ (iQOO) ಇತ್ತೀಚೆಗೆ ಭಾರತದಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ಗಳನ್ನು ತನ್ನ 'Z' ಸರಣಿಯ ಅಡಿಯಲ್ಲಿ ಪರಿಚಯಿಸಲಾಗಿದೆ. ಅವುಗಳೇ, ಐಕ್ಯೂ Z10 5G (iQOO Z10 5G) ಮತ್ತು ಐಕ್ಯೂ Z10x 5G (iQOO Z10x 5G ) ಫೋನ್‌ಗಳು. ಈ ಪೈಕಿ, ಐಕ್ಯೂ Z10 5G ಮೊಬೈಲ್ ಇಂದು (ಏಪ್ರಿಲ್ 16) ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಿದೆ. ಕಂಪನಿಯು ಆರಂಭಿಕ ಮಾರಾಟದ ಪ್ರಯುಕ್ತ 2000 ರೂ.ಗಳ ರಿಯಾಯಿತಿ ಘೋಷಿಸಿದೆ. ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳು ಇಲ್ಲಿವೆ ನೋಡಿ.

ಐಕ್ಯೂ Z10 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಹಾಗೆಯೇ 12GB RAM + 256GB ಸ್ಟೋರೇಜ್, ಮಿಲಿಟರಿ ದರ್ಜೆಯ ಬಾಳಿಕೆ, IP65 ರೇಟಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ iQOO Z10 ಸೇಲ್ ಶುರು; 2000 ರಿಯಾಯಿತಿ.. 7300mAh ಬ್ಯಾಟರಿ; ಕಡಿಮೆ ಬೆಲೆ!

ಐಕ್ಯೂ Z10 5G ಬೆಲೆ ಮತ್ತು ಆಫರ್

ಐಕ್ಯೂ Z10 5G ಫೋನಿನ 8GB RAM + 128GB ಸ್ಟೋರೇಜ್ ಆಯ್ಕೆಯು 21,999 ರೂ.ಗೆ ಲಭ್ಯವಿದೆ. 8GB RAM + 256GB ಸ್ಟೋರೇಜ್ ಬೆಲೆ 23,999 ರೂ. ಆಗಿದೆ. ಇನ್ನು 12GB RAM + 256GB ಸ್ಟೋರೇಜ್ ರೂಪಾಂತರವನ್ನು 25,999 ರೂ.ಗೆ ಬಿಡುಗಡೆಯಾಗಲಿದೆ. ಈ ಫೋನ್ ಗ್ಲೇಸಿಯರ್ ಸಿಲ್ವರ್ ಮತ್ತು ಸ್ಟೆಲ್ಲಾರ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಮೊಬೈಲ್ ಇಂದಿನಿಂದ (ಏಪ್ರಿಲ್ 16) ತನ್ನ ಮೊದಲ ಮಾರಾಟ ಶುರು ಮಾಡಿದೆ. ನೀವು ಆರಂಭಿಕ ಮಾರಾಟದಲ್ಲಿ 2,000 ರೂ.ಗಳ ಬ್ಯಾಂಕ್ ರಿಯಾಯಿತಿಯ ಲಾಭ ಪಡೆಯಬಹುದು.

ಐಕ್ಯೂ Z10 5G ವೈಶಿಷ್ಟ್ಯಗಳು

ಐಕ್ಯೂ Z10 5G ಸ್ಮಾರ್ಟ್‌ಫೋನ್ 6.77 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,392 × 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 5000 ನಿಟ್ಸ್ ಗರಿಷ್ಠ ಬ್ರೈಟ್‌ನೆಟ್‌ ಹೊಂದಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಒಳಗೊಂಡಿದೆ. ಈ ಐಕ್ಯೂ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಕೆಲಸ ಮಾಡುತ್ತದೆ. ಈ ಐಕ್ಯೂ ಫೋನ್, ಗ್ರಾಫಿಕ್ಸ್‌ಗಾಗಿ ಅಡ್ರಿನೊ 720 ಜಿಪಿಯು ಹೊಂದಿದೆ.

ಐಕ್ಯೂ Z10 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಹಾಗೆಯೇ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಐಕ್ಯೂ ಮೊಬೈಲ್, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಫೋನ್ 7,300mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 90W ಫ್ಲ್ಯಾಶ್‌ ಚಾರ್ಜ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಈ ಫೋನ್ ಕೇವಲ 42 ನಿಮಿಷಗಳಲ್ಲಿ ಶೇ.100 ರಷ್ಟು ಸಂಪೂರ್ಣ ಚಾರ್ಜ್ ಆಗಲಿದೆ.

Best Mobiles in India

English summary
iQOO Z10 Goes on Sale in India at 12PM Today via Amazon: Check Price, Offers, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+