Home
ಸುದ್ದಿಜಾಲ

ಐಕ್ಯೂ Z5 ಸ್ಮಾರ್ಟ್‌ಫೋನ್ ಬಿಡುಗಡೆ! 5,000mAh ಬ್ಯಾಟರಿ ವಿಶೇಷ!

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ ಐಕ್ಯೂ ಕಂಪೆನಿ ಕೂಡ ಒಂದಾಗಿದೆ. ಇನ್ನು ಐಕ್ಯೂ ಕಂಪೆನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ಐಕ್ಯೂ Z5 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಇದು ಮೂರು ವಿಭಿನ್ನ ಶೇಖರಣಾ ರೂಪಾಂತರಗಳಲ್ಲಿ ಲಭ್ಯವಾಗಲಿದೆ.

ಸ್ಮಾರ್ಟ್‌ಫೋನ್

ಹೌದು, ಐಕ್ಯೂ ಕಂಪೆನಿ ಹೊಸ ಐಕ್ಯೂ Z5 ಸ್ಮಾರ್ಟ್‌ಫೋನ್ ಅನ್ನು ಚೀನಾ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ 6.67-ಇಂಚಿನ ಫುಲ್‌ ಹೆಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ 64 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ವಿಶೇಷ

ಡಿಸ್‌ಪ್ಲೇ ವಿಶೇಷ

ಐಕ್ಯೂ Z5 ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್-ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಹೊಂದಿದ್ದು, HDR ಅನ್ನು ಬೆಂಬಲಿಸಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದು ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11. ಆಧಾರಿತ ಒರಿಜಿನ್ ಓಎಸ್ 1.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಸೆನ್ಸರ್ f/2.2 ಅಪರ್ಚರ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು 44W ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G , ಟ್ರೈ-ಬ್ಯಾಂಡ್ ವೈ-ಫೈ, ಬ್ಲೂಟೂತ್ v5.2, USB ಟೈಪ್-ಸಿ, USB OTG , ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಕ್ಯೂ Z5 ಸ್ಮಾರ್ಟ್‌ಫೋನ್‌ 8GB RAM + 128GB ಶೇಖರಣಾ ರೂಪಾಂತರಕ್ಕೆ CNY 1,899 (ಅಂದಾಜು 21,600ರೂ), 8GB RAM + 256GB ಶೇಖರಣಾ ರೂಪಾಂತರಕ್ಕೆ CNY 2,099 (ಸುಮಾರು 23,900ರೂ) , ಮತ್ತು 12GB RAM + 256 GB ಸ್ಟೋರೇಜ್ ರೂಪಾಂತರಕ್ಕಾಗಿ CNY 2,299 (ಸರಿಸುಮಾರು ರೂ. 26,200) ಬೆಲೆ ಹೊಂದಿದೆ. ಈ ಫೋನ್‌ ಬ್ಲೂ ಆರಿಜಿನ್, ಡ್ರೀಮ್ ಸ್ಪೇಸ್ ಮತ್ತು ಟ್ವಿಲೈಟ್ ಮಾರ್ನಿಂಗ್ ಕಲರ್ ಆಯ್ಕೆಗಳಲ್ಲಿ ನೀಡಲಾಗಿದೆ.

Best Mobiles in India

English summary
iQoo Z5 was launched on Thursday, a 5G-enabled smartphone powered by the Snapdragon 778G SoC.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+