ಭಾರತದಲ್ಲಿ ಐಕ್ಯೂ Z6 ಲೈಟ್ 5G ಫೋನ್ ಲಾಂಚ್ ಡೇಟ್ ಬಹಿರಂಗ!
ಭಾರತದ ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳಿಗೆ ಐಕ್ಯೂ ಬ್ರ್ಯಾಂಡ್ ಹೆಸರುವಾಸಿಯಾಗಿದೆ. ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಗಮನ ಸೆಳೆದಿರುವ ಐಕ್ಯೂ ಬ್ರ್ಯಾಂಡ್ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ತನ್ನ ಹೊಸ ಐಕ್ಯೂ Z6 ಲೈಟ್ 5G ಫೋನ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಪ್ಲಾಟ್‌ಫಾರ್ಮ್ ಮೂಲಕ ಇದೇ ಸೆಪ್ಟೆಂಬರ್ 14 ರಂದು ಲಾಂಚ್ ಆಗೋದು ಪಕ್ಕಾ ಆಗಿದೆ. ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಐಕ್ಯೂ Z6 ಲೈಟ್ 5G ಫೋನಿವ ಕೆಲವು ವಿಶೇಷತೆಗಳನ್ನು ಬಹಿರಂಗಪಡಿಸಿದೆ.

ಹೌದು, ಅಮೆಜಾನ್ ಮೈಕ್ರೋಸೈಟ್‌ನಲ್ಲಿ ಐಕ್ಯೂ Z6 ಲೈಟ್ 5G ಸ್ಮಾರ್ಟ್‌ಫೋನ್ ಲ್ಯಾಂಡಿಂಗ್ ಪೇಜ್ ಲೈವ್ ಆಗಿದೆ. ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ಸೆಪ್ಟೆಂಬರ್ 14 ರಂದು ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನಿನ ಪ್ರೊಸೆಸರ್ ವಿವರವನ್ನು ಇದೇ ಸೆಪ್ಟೆಂಬರ್ 7ರಂದು ಬಹಿರಂಗಪಡಿಸುವುದಾಗಿ ಹೇಳಿದೆ. ಅಲ್ಲದೆ ಕ್ಯಾಮೆರಾ ಫೀಚರ್ಸ್‌ಗಳನ್ನು ಸೆಪ್ಟೆಂಬರ್ 8 ರಂದು ಬಹಿರಂಗಗೊಳಿಸಲಿದೆ ಎನ್ನಲಾಗಿದೆ. ಇನ್ನು ಕೆಲವು ಫೀಚರ್ಸ್ ವಿವರಗಳು ಈಗಾಗಲೇ ಸೋರಿಕೆಯಾಗಿದೆ. ಹಾಗಾದ್ರೆ ಐಕ್ಯೂ Z6 ಲೈಟ್ 5G ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಹೇಗಿರಲಿದೆ?
ಐಕ್ಯೂ Z6 ಲೈಟ್ 5G ಸ್ಮಾರ್ಟ್‌ಫೋನ್ 6.58 ಇಂಚಿನ ಡಿಸ್ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 1080 x 2408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರುವ ಸಾಧ್ಯತೆಯಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದಿರಲಿದ್ದು, 401 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿರಲಿದೆ. ಇದಲ್ಲದೆ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ ಎಂದು ಹೇಳಲಾಗಿದೆ.

ಪ್ರೊಸೆಸರ್ ಯಾವುದು?
ಈ ಸ್ಮಾರ್ಟ್‌ಫೋನಿನ ಪ್ರೊಸೆಸರ್ ವಿವರ ಇದೇ ಸೆಪ್ಟೆಂಬರ್ 7 ರಂದು ಬಹಿರಂಗಗೊಳ್ಳಲಿದೆ ಎಂದು ಕಂಪನಿ ತಿಳಿಸಿದೆ. ಒಂದು ಮಾಹಿತಿ ಪ್ರಕಾರ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4-ಸರಣಿ SoC ಪ್ರೊಸೆಸರ್ ಹೊಂದಿರಲಿದೆ ಎನ್ನಲಾಗಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಹೊಂದಿರಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್ ಎಷ್ಟಿದೆ?
ಅಮೆಜಾನ್ ಐಕ್ಯೂ Z6 ಲೈಟ್ 5G ಗಾಗಿ ತೆರೆದಿರುವ ಮೈಕ್ರೋಸೈಟ್ ಪ್ರಕಾರ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿದೆ. ಆದರೆ ಈ ಕ್ಯಾಮೆರಾ ಫೀಚರ್ಸ್‌ಗಳ ವಿವರ ಸೆಪ್ಟೆಂಬರ್ 8ರಂದು ಬಹಿರಂಗಗೊಳ್ಳುವುದಾಗಿ ಕಂಪೆನಿ ಹೇಳಿದೆ. ಆದರೆ ಆನ್‌ಲೈನ್ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನಿನ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿರುವ ಸಾಧ್ಯತೆಯಿದೆ.

ಬ್ಯಾಟರಿ ಮತ್ತು ಇತರೆ
ಐಕ್ಯೂ Z6 ಲೈಟ್ 5G ಸ್ಮಾರ್ಟ್‌ಫೋನ್ ಬ್ಯಾಟರಿ ವಿಶೇಷತೆ ಇನ್ನು ಬಹಿರಂಗವಾಗಿಲ್ಲ. ಆದರೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸುವ ನಿರೀಕ್ಷೆಯಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, 5G ನೆಟ್‌ವರ್ಕ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೊಮೀಟರ್ ಸೆನ್ಸಾರ್ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಬೆಲೆ ಮತ್ತು ಲಭ್ಯತೆ
ಈ ಸ್ಮಾರ್ಟ್‌ಫೋನ್ ಬೆಲೆ ವಿವರಗಳು ಇನ್ನು ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 14 ರಂದು ಲಾಂಚ್ ಆಗೋದು ಪಕ್ಕಾಗಿದೆ.


Click it and Unblock the Notifications








