Home
ಸುದ್ದಿಜಾಲ

ನಾಳೆ iQOO Z9s Pro ಸೇಲ್; 3,000 ಅಗ್ಗ.. ಸಖತ್ ಆಫರ್‌ ಇದೆ

ಐಕ್ಯೂ ಸ್ಮಾರ್ಟ್‌ಫೋನ್ ಕಂಪನಿಯ ಬಹುನಿರೀಕ್ಷಿತ ಐಕ್ಯೂ Z9s ಸರಣಿ (iQOO Z9s series) ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ಐಕ್ಯೂ Z9s (iQOO Z9) ಹಾಗೂ ಐಕ್ಯೂ Z9s ಪ್ರೊ (iQOO Z9 pro) ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಪೈಕಿ, ಐಕ್ಯೂ Z9s ಪ್ರೊ ಫೋನ್ ನಾಳೆ (ಆಗಸ್ಟ್ 23) ಮೊದಲ ಮಾರಾಟಕ್ಕೆ ಸಿದ್ಧವಾಗಿದೆ. ಕಂಪನಿಯು ಈ ಫೋನನ್ನು ಮೂರು ಸ್ಟೋರೇಜ್‌ ರೂಪಾಂತರಗಳಲ್ಲಿ ಪರಿಚಯಿಸಿದೆ. ಇದರ ಆರಂಭಿಕ ಬೆಲೆ 24,999 ರೂ. ಇದೆ. ಕಂಪನಿಯು ಯಾವೆಲ್ಲಾ ಆಫರ್ ಘೋಷಿಸಿದೆ ನೋಡೋಣ ಬನ್ನಿ.

ಐಕ್ಯೂ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಐಕ್ಯೂ Z9s ಪ್ರೊ ಮೊಬೈಲ್‌ ಅನ್ನು ಲಾಂಚ್ ಮಾಡಿದೆ. ಈ ಹೊಸ ಫೋನ್ 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ. ಉಳಿದಂತೆ, 256GB ಸ್ಟೋರೇಜ್, 6.77 ಇಂಚಿನ ಡಿಸ್ಪ್ಲೇ, 4500nits ಗರಿಷ್ಠ ಬ್ರೈಟ್‌ನೆಸ್, Snapdragon 7 Gen 3 ಚಿಪ್ಸೆಟ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಿದೆ.

ನಾಳೆ iQOO Z9s Pro ಸೇಲ್; 3,000 ಅಗ್ಗ.. ಆಫರ್‌ ಕೂಡ ಇದೆ

ಐಕ್ಯೂ Z9s ಪ್ರೊ ಮೊಬೈಲ್‌ನ ಬೆಲೆ

ಐಕ್ಯೂ Z9s ಪ್ರೊ ಫೋನ್‌ ಅನ್ನು ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 24,999 ರೂ. ಇದೆ. 8GB RAM ಮತ್ತು 256GB ಸ್ಟೋರೇಜ್ ಮಾಡೆಲ್ ಬೆಲೆ 26,999 ರೂ. ಇದೆ. 12GB RAM ಮತ್ತು 256GB ಸ್ಟೋರೇಜ್‌ನ ಟಾಪ್ ರೂಪಾಂತರವು 28,999 ರೂ. ಬೆಲೆಗೆ ಮಾರಾಟವಾಗಲಿದೆ.

3,000 ಡಿಸ್ಕೌಂಟ್.. 3,000 ಎಕ್ಸ್‌ಚೇಂಜ್‌ ಬೋನಸ್

ಐಕ್ಯೂ Z9s ಪ್ರೊ ಮಾರಾಟವು ನಾಳೆಯಿಂದ (ಆಗಸ್ಟ್ 23) ಪ್ರಾರಂಭವಾಗುತ್ತದೆ. ಈ ಫೋನನ್ನು ಅಮೇಜಾನ್ ಮತ್ತು ಐಕ್ಯೂ ಆನ್‌ಲೈನ್‌ ಸ್ಟೋರ್ ಮೂಲಕ ಖರೀದಿಸಬಹುದು. ಐಸಿಐಸಿಐ ಬ್ಯಾಂಕ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ ಬಳಸಿ ಈ ಫೋನ್ ಖರೀದಿಸಿದರೆ 3,000 ರೂ.ಗಳ ರಿಯಾಯಿತಿ ಲಭ್ಯವಿದೆ. 3,000 ರೂ. ವರೆಗೆ ಎಕ್ಸ್‌ಚೇಂಜ್‌ ಬೋನಸ್ ಕೂಡ ಲಭ್ಯವಿದೆ. ಈ ಫೋನನ್ನು ಲಕ್ಸ್ ಮಾರ್ಬಲ್ ಮತ್ತು ಫ್ಲಾಂಬಾಯಿಂಟ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.

ಐಕ್ಯೂ Z9s ಪ್ರೊ ಫೋನಿನ ಫೀಚರ್ಸ್‌

ಡಿಸ್ಲ್ಪೇ: ಐಕ್ಯೂ Z9s ಪ್ರೊ ಫೋನ್ 6.77 ಇಂಚಿನ ಬಾಗಿದ ಡಿಸ್ಲ್ಪೇಯನ್ನು ಹೊಂದಿದೆ. ಈ ಡಿಸ್ಲ್ಪೇಯು 2392 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120 Hz ರಿಫ್ರೆಶ್ ದರ, 4500 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.

ಪ್ರೊಸೆಸರ್: ಐಕ್ಯೂ Z9s ಪ್ರೊ ಸ್ಮಾರ್ಟ್‌ಫೋನ್ Qualcomm Snapdragon 7 Gen 3 ಪ್ರೊಸೆಸರ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿದೆ. ಜೊತೆಗೆ 8GB RAM ಮತ್ತು 128GB, 8GB ಮತ್ತು 256GB ಹಾಗೂ 12GB ಮತ್ತು 256GB ಸ್ಟೋರೇಜ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಕ್ಯಾಮೆರಾ: ಐಕ್ಯೂ Z9s ಪ್ರೊ ಮೊಬೈಲ್ ಡುಯಲ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದು 50 ಮೆಗಾ ಪಿಕ್ಸಲ್‌ ಸೋನಿ IMX882 OIS ಮುಖ್ಯಾ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ ಈ ಫೋನ್ 16 ಮೆಗಾ ಪಿಕ್ಸಲ್‌ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ: ಐಕ್ಯೂ Z9s ಪ್ರೊ ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80 ವ್ಯಾಟ್ ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. 4 ವರ್ಷಗಳ ಕಾಲ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿದೆ. 4 ವರ್ಷಗಳ ಕಾಲ ಪ್ರತಿದಿನ ಚಾರ್ಜ್ ಮಾಡಿದರೆ, ನಂತರ 80 ಪ್ರತಿಶತ ಬ್ಯಾಟರಿ ಅನಿರ್ದಿಷ್ಟವಾಗಿ ಲಭ್ಯವಿರುತ್ತದೆ.

ಇತರೆ ಫೀಚರ್ಸ್‌: ಐಕ್ಯೂ Z9s ಪ್ರೊ ಫೋನ್ IP64 ಧೂಳು ಮತ್ತು ನೀರಿನ ನಿರೋಧಕ ರೇಟಿಂಗ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, ವೈ-ಫೈ, ವಿಸಿ ಲಿಕ್ವಿಡ್ ಕೂಲಿಂಗ್ ಸಿಸ್ಟಮ್, ಅಲ್ಟ್ರಾ ಗೇಮಿಂಗ್ ಮೋಡ್, 4D ಗೇಮ್ ವೈಬ್ರೇಶನ್, ಎಐ ಫೋಟೋ ವರ್ಧನೆ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
iQOO Z9s Pro Goes on First Sale in India Tomorrow via Flipkart: Check Price, Offer, Specs and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+