Home
ಸುದ್ದಿಜಾಲ

iQOO Z9s: ಒಂದೇ ದಿನ 2 ಹೊಸ ಫೋನ್ ಲಾಂಚ್‌: ಆ.4ಕ್ಕೆ ಬೆಂಗಳೂರಿನಲ್ಲಿ 'Sneak Peek' ಸೆಷನ್‌!

ಐಕ್ಯೂ (iQOO) ತನ್ನ ಹೊಸ 'Z9s' ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದಾಗಿನಿಂದ, ಮೊಬೈಲ್‌ ಪ್ರಿಯರು ಈ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಇಂದು ಕಂಪನಿಯು ಸರಣಿಯಲ್ಲಿ ಒಳಗೊಂಡಿರುವ ಮೊಬೈಲ್ ಫೋನ್‌ಗಳ ಹೆಸರನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಭಾರತದಲ್ಲಿ iQOO Z9s Pro ಮತ್ತು iQOO Z9s 5G ಫೋನ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಬ್ರ್ಯಾಂಡ್ ಹೇಳಿದೆ. ಮತ್ತು ಈ ಸರಣಿಯನ್ನು ಆಗಸ್ಟ್ 4 ರಂದು (Sneak Peek session) ಅನಾವರಣಗೊಳಿಸಲಾಗುವುದು. ಈ ಹೊಸ iQOO ಸರಣಿ ಮತ್ತು ಫೋನ್‌ಗಳ ವಿವರಗಳನ್ನು ತಿಳಿಯೋಣ ಬನ್ನಿ.

ಐಕ್ಯೂನ ಸಿಇಒ ನಿಪುನ್ ಮರಿಯಾ ಇತ್ತೀಚೆಗೆ iQOO Z9s ಸರಣಿಯ ಅಧಿಕೃತ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ತಮ್ಮ ಎಕ್ಸ್‌ ಖಾತೆಯಲ್ಲಿ ಅವರು, 'ಕಾಯುವಿಕೆ ಮುಗಿದಿದೆ! ಸಂಪೂರ್ಣವಾಗಿ ಲೋಡ್ ಆಗಿರುವ 'Z' ವೈಬ್‌ಗಾಗಿ ನಿಮ್ಮನ್ನು ಬ್ರೇಸ್ ಮಾಡಿ.' ಮುಂಬರುವ ಸ್ಮಾರ್ಟ್‌ಫೋನ್ 'ಮೆಗಾ ಟೇಸರ್‌ಗಳಿಗಾಗಿ ಸಂಪೂರ್ಣವಾಗಿ ಲೋಡ್ ಆಗುತ್ತದೆ' ಎಂದು ಪೋಸ್ಟ್‌ ಮಾಡಿದ್ದರು. ಇದು ಚೀನಾದಲ್ಲಿ ಬಿಡುಗಡೆಯಾದ iQOO Z9 Turbo ಪೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿರಲಿದೆ.

ಒಂದೇ ದಿನ 2 iQOO ಫೋನ್ ಲಾಂಚ್‌: ಆ.4ಕ್ಕೆ ಬೆಂಗಳೂರಿನಲ್ಲಿ Sneak Peek ಸೆಷನ್‌!

ಆ.4 ರಂದು ಬೆಂಗಳೂರಿನಲ್ಲಿSneak Peek ಸೆಷನ್

ಐಕ್ಯೂ ಕಂಪನಿಯು ಆಗಸ್ಟ್ 4 ರಂದು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ 'ಸ್ನೀಕ್ ಪಿಕ್' (Sneak Peek) ಸೆಷನ್ ಅನ್ನು ಆಯೋಜಿಸಲಿದೆ. ಇದರಲ್ಲಿ iQOO Z9s ಪ್ರೊ ಅನ್ನು ಪ್ರದರ್ಶಿಸಲಾಗುತ್ತದೆ. ಈ ದಿನದಂದು ಫೋನ್‌ನ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಬಹಿರಂಗಪಡಿಸಲಾಗುವುದು. ಆದರೆ. ಇದರ ಬೆಲೆಯನ್ನು ನಂತರ ಪ್ರಕಟಿಸಲಾಗುವುದು. ಈ ಸರಣಿಯಲ್ಲಿ iQOO Z9s Pro ಮತ್ತು iQOO Z9s 5G ಫೋನ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಖಚಿತಪಡಿಸಲಾಗಿದೆ.

iQOO Z9s ಮತ್ತು Z9s Proನ ಫೋಟೋ

iQOO Z9s 5G ಸ್ಮಾರ್ಟ್‌ಫೋನ್ ಅನ್ನು ಎರಡು ಶೇಡ್‌ನಲ್ಲಿ ಪರಿಚಯಿಸಲಾಗುವುದು. ಈ ಫೋನ್ ಗ್ಲಾಸ್ ಫಿನಿಶ್ ಮತ್ತು ವೆಗಾನ್ ಲೆದರ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರಲ್ಲಿ ರಿಂಗ್ ಫ್ಲ್ಯಾಷ್ ಲೈಟ್ ಸಹ ಒದಗಿಸಲಾಗುತ್ತದೆ. ಇನ್ನೂ, iQOO Z9s 5G ಫೋನ್ ಡ್ಯುಯಲ್ ಕ್ಯಾಮೆರಾದೊಂದಿಗೆ ಬಿಡುಗಡೆ ಮಾಡಲಾಗುವುದು. ಇದು 2x ಪೋಟ್ರೇಟ್ ಜೂಮ್ ಬೆಂಬಲಿಸುತ್ತದೆ. ಈ ಫೋನ್‌ನಲ್ಲಿ ಔರಾ ಲೈಟ್ ಸಹ ಲಭ್ಯವಿರುತ್ತದೆ.

iQOO Z9s ಮತ್ತು Z9s ಪ್ರೊ ವಿಶೇಷತೆಗಳು

ಡಿಸ್‌ಪ್ಲೇ: ವರದಿಯ ಪ್ರಕಾರ, iQOO Z9S Pro ಸ್ಮಾರ್ಟ್‌ಫೋನ್ ಅನ್ನು 6.78 ಇಂಚಿನ FullHD+ ಪಂಚ್-ಹೋಲ್ ಡಿಸ್ಪ್ಲೇಯಲ್ಲಿ ಲಾಂಚ್ ಮಾಡಬಹುದು. ಇದು 120Hz ರಿಫ್ರೆಶ್ ದರವನ್ನು ಹೊಂದಿರುವ AMOLED ಪ್ಯಾನೆಲ್‌ನಲ್ಲಿ ಮಾಡಿದ ಡಿಸ್ಲ್ಪೇ ಆಗಿರಬಹುದು.

ಪ್ರೊಸೆಸರ್: iQOO Z9s Pro 5G ಫೋನ್ Qualcommನ Snapdragon 7 Gen ಸರಣಿಯ ಚಿಪ್‌ಸೆಟ್‌ನಲ್ಲಿ ಪ್ರಾರಂಭಿಸಬಹುದು. ಈ ಫೋನ್‌ನಲ್ಲಿ ಕಂಪನಿಯು ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಒದಗಿಸುವ ನಿರೀಕ್ಷೆಯಿದೆ. Android 14 ಆಧಾರಿತ Funtouch OS 14 ಲಭ್ಯವಿರಬಹುದು.

ಒಂದೇ ದಿನ 2 iQOO ಫೋನ್ ಲಾಂಚ್‌: ಆ.4ಕ್ಕೆ ಬೆಂಗಳೂರಿನಲ್ಲಿ Sneak Peek ಸೆಷನ್‌!

ಮೆಮೊರಿ: ಈ 'ಪ್ರೊ' ಮಾದರಿಯು ದೊಡ್ಡ RAM ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಭಾರತೀಯ ಮಾರುಕಟ್ಟೆಯಲ್ಲಿ, ಈ ಸ್ಮಾರ್ಟ್‌ಫೋನ್ ಅನ್ನು 12GB RAM ನೊಂದಿಗೆ ಪ್ರಾರಂಭಿಸಬಹುದು ಮತ್ತು 256GB ಇಂಟರ್ನಲ್ ಸ್ಟೋರೇಜ್‌ ಇರಲಿದೆ.

ಕ್ಯಾಮೆರಾ: ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿರಲಿದೆ. ಫೋನ್‌ನ ಹಿಂಭಾಗದ ಫಲಕದಲ್ಲಿ 50 ಮೆಗಾಪಿಕ್ಸೆಲ್ OIS ಸಂವೇದಕವನ್ನು ಒದಗಿಸಬಹುದು. ಇದರೊಂದಿಗೆ ವೈಡ್ ಆಂಗಲ್ ಲೆನ್ಸ್ ಮತ್ತು ಮ್ಯಾಕ್ರೋ ಸಂವೇದಕವನ್ನು ಪಡೆಯುವ ನಿರೀಕ್ಷೆಯಿದೆ.

ಬ್ಯಾಟರಿ: iQOO Z9s Pro 5G ಫೋನ್‌ನಲ್ಲಿ ದೊಡ್ಡ 5,500mAh ಬ್ಯಾಟರಿಯನ್ನು ಒದಗಿಸಬಹುದು.

Best Mobiles in India

English summary
iQOO will launch Z9s series in August in India. It is speculated to be a rebranded version of iQOO Z9 Turbo, which was launched in China.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+