ಆನ್‌ಲೈನಿನಲ್ಲಿನ್ನು ಸಾಮಾನ್ಯನು ಕೂಡ ಸುಲಭವಾಗಿ ರೈಲ್ವೆ ಟಿಕೆಟ್ ಬುಕ್ ಮಾಡಬಹುದು!..ಏಕೆ ಗೊತ್ತಾ?

|

ರೈಲ್ವೆ ಪ್ರಯಾಣಿಕರಿಗೆ ಡಿಜಿಟಲ್ ಸಹಾಯಕನಾಗಿರುವ ಭಾರತೀಯ ರೈಲ್ವೆಯ ಆನ್‌ಲೈನ್ ಪೋರ್ಟಲ್ IRCTC ಹೊಸ ವಿನ್ಯಾಸದೊಂದಿಗೆ ಬಳಕೆದಾರರಿಗೆ ಲಭ್ಯವಿದೆ. ರೈಲ್ವೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುವ ರೀತಿಯಲ್ಲಿ IRCTC ವೆಬ್‌ಸೈಟ್ ಅನ್ನು ಬದಲಾವಣೆ ಮಾಡಲಾಗಿದೆ. ಹಾಗಾಗಿ, IRCTC ಇದೀಗ ಮತ್ತಷ್ಟು 'ಬಳಕೆದಾರ ಸ್ನೇಹಿ' ಆಗಿ ಬದಲಾಗಿದೆ.

ರೈಲು ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡಲು ಸುಲಭವಾಗುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಸದ್ಯ ಈಗಿರುವ IRCTC ವೆಬ್ ಸೈಟ್ ಓಪನ್ ಮಾಡಿದರೆ 'Try new Version of Website' ಎಂದು ಸೂಚಿಸಲಿದೆ. ಈ ಕೆಂಪು ಬಣ್ಣದ ಐಕಾನ್ ಅನ್ನು ಕ್ಲಿಕ್ ಮಾಡಿದ ಕೂಡಲೇ ವೆಬ್‌ಸೈಟ್ ನ beta version ತೆರೆದುಕೊಳ್ಳುತ್ತದೆ.

ಆನ್‌ಲೈನಿನಲ್ಲಿನ್ನು ಸಾಮಾನ್ಯನು ಕೂಡ ಸುಲಭವಾಗಿ ರೈಲ್ವೆ ಟಿಕೆಟ್ ಬುಕ್ ಮಾಡಬಹುದು!

ಹೊಸ ವಿನ್ಯಾಸದ ಈ ವೆಬ್ ಸೈಟ್ ಇದೀಗ ಮತ್ತಷ್ಟು 'ಬಳಕೆದಾರ ಸ್ನೇಹಿ' ಆಗಿ ಬದಲಾಯಿಸಲು ಮತ್ತು ಮತ್ತಷ್ಟು ಅಂದಗಾಣಿಸಲು ಬಳಕೆದಾರರ ಅಭಿಪ್ರಾಯಗಳನ್ನು ರೈಲ್ವೆ ಇಲಾಖೆ ಕೋರಿದೆ. ಹಾಗಾದರೆ, 13 ದಿನಗಳವರೆಗೆ ಟ್ರೈಯಲ್ ವರ್ಷನ್‌ಗೆ (trail version) ನಿಡಲಾಗಿರುವ ಹೊಸ ವಿನ್ಯಾಸದ IRCTC ಆನ್‌ಲೈನ್ ಪೋರ್ಟಲ್ ಹೇಗೆ ಬದಲಾಗಿದೆ ಎಂಬುದನ್ನು ಮುಂದೆ ತಿಳಿಯಿರಿ.

ಹೊಸತು ಏನಿದೆ?

ಹೊಸತು ಏನಿದೆ?

ರೈಲ್ವೆ ಪ್ರಯಾಣಿಕರು ರೈಲು ಸೀಟು ಚೆಕ್ ಮಾಡಲು ಲಾಗಿನ್ ಬೇಡ ಹೊಸ. ನೂತನ ವಿನ್ಯಾಸದ ಈ ವೆಬ್ ಸೈಟ್‌ನಲ್ಲಿ ಲಾಗಿನ್ ಆಗದೆಯೇ ರೈಲು ಹುಡುಕಾಟ, ಲಭ್ಯವಿರುವ ಸೀಟು ಎಲ್ಲವನ್ನೂ ಪರಿಶೀಲಿಸಬಹುದಾಗಿದೆ. ಇದರಿಂದಾಗಿ IRCTC ಆನ್‌ಲೈನ್ ಪೋರ್ಟಲ್ ಬಳಕೆದಾರರಿಗೆ ಬಹಳಷ್ಟು ಸಮಯ ಉಳಿಯಲಿದೆ.

ಎಲ್ಲವೂ ಒಂದೆಡೆ ಲಭ್ಯ

ಎಲ್ಲವೂ ಒಂದೆಡೆ ಲಭ್ಯ

ಹೊಸ ವಿನ್ಯಾಸದ IRCTC ಆನ್‌ಲೈನ್ ಪೋರ್ಟಲ್‌ನಲ್ಲಿ, ರೈಲು ಸಂಖ್ಯೆ , ರೈಲಿನ ಹೆಸರು, ರೈಲು ಹೊರಡುವ ಮತ್ತು ತಲುಪುವ ಸ್ಥಳ, ಕ್ರಮಿಸುವ ದೂರ ಎಲ್ಲವೂ ಒಂದೇ ಸ್ಕ್ರೀನ್‌ನಲ್ಲಿ ಲಭ್ಯವಾಗಲಿದೆ. ಇದರಿಂದ IRCTC ಆನ್‌ಲೈನ್ ಪೋರ್ಟಲ್ ಬಳಕೆದಾರರಿಗೆ ಮೊದಲು ಇದ್ದ ಗೊಂದಲ ತಪ್ಪಲಿದೆ.

ಪ್ರಯಾಣ ಪ್ಲಾನಿಂಗ್ ಸುಲಭ

ಪ್ರಯಾಣ ಪ್ಲಾನಿಂಗ್ ಸುಲಭ

ಹೊಸ ವಿನ್ಯಾಸದ IRCTC ಆನ್‌ಲೈನ್ ಪೋರ್ಟಲ್‌ನಲ್ಲಿ ರೈಲು , ಪ್ರಯಾಣದ ಸ್ಥಳ, ಹೊರಡುವ/ ತಲುಪುವ ಸಮಯಕ್ಕೆ ಅನುಗುಣವಾಗಿ ಫಿಲ್ಟರ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಇದರಿಂದಾಗಿ ದೇಶದಾಧ್ಯಂತ ರೈಲ್ವೆ ಪ್ರಯಾಣದ ಪ್ಲಾನಿಂಗ್ ಬಹಳಷ್ಟು ಸುಲಭವಾಗಲಿದೆ.

ದೊಡ್ಡ ಹಿಂಸೆಯೊಂದು ತಪ್ಪುತ್ತದೆ.!

ದೊಡ್ಡ ಹಿಂಸೆಯೊಂದು ತಪ್ಪುತ್ತದೆ.!

ರೈಲ್ವೆ ಟಿಕೆಟ್ Waiting list ನಲ್ಲಿದ್ದರೆ ಟಿಕೆಟ್ ಖಚಿತವಾಗುವುದೋ ಇಲ್ಲವೋ ಎಂಬುದನ್ನು ತೋರಿಸುವ ವ್ಯವಸ್ಥೆ ಈ ವೆಬ್‌ಸೈಟ್‌ನಲ್ಲಿದೆ. ಟಿಕೆಟ್ ಬುಕಿಂಗ್ ಮಾಡುವಾಗಲೇ ಅದು ಖಚಿತವಾಗುವುದೋ ಇಲ್ಲವೋ ಎಂಬ ಸುಳಿವನ್ನು ಇದು ನೀಡುತ್ತದೆ.ಹಾಗಾಗಿ, ಬಳಕೆದಾರರ ಬಹುದೊಡ್ಡ ಹಿಂಸೆಯೊಂದಕ್ಕೆ ಪರಿಹಾರ ಸಿಕ್ಕಿದಂತಾಗಿದೆ.

How to use WhatsApp in Kannada - GIZBOT KANNADA
ವ್ಯವಹಾರಗಳ ಮಾಹಿತಿ ಲಭ್ಯ!

ವ್ಯವಹಾರಗಳ ಮಾಹಿತಿ ಲಭ್ಯ!

IRCTC ವೆಬ್ ಸೈಟ್‌ನಲ್ಲಿ My transaction ಎಂಬ ಫಿಲ್ಟರ್ ಅನ್ನು ನೀಡಲಾಗಿದೆ. ಇದರಿಂದ ಪ್ರಯಾಣಿಕರು ತಾವು ಬುಕ್ ಮಾಡಿದ ಟಿಕೆಟ್ ವಿವರ ಮತ್ತು ಹಿಂದಿನ ಪ್ರಯಾಣದ ವಿವರಗಳು ಇಲ್ಲಿ ಲಭ್ಯವಾಗಲಿವೆ. ಇನ್ನು ಒಂದೇ ವಿಂಡೋದಲ್ಲಿ ರೈಲು ಟಿಕೆಟ್ ರದ್ದುಗೊಳಿಸಲು, ಪ್ರಿಂಟ್ ತೆಗೆಯಲು ಇರುವ ಆಯ್ಕೆಗಳೂ ಕೂಡ ಇಲ್ಲಿವೆ.

Best Mobiles in India

English summary
IRCTC Railways’ Premium Tatkal rules & Ticket refund charges; New changes you need to know. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X