IRCTC ಯಿಂದ ಇಂಟರ್‌ಸಿಟಿ ಆನ್‌ಲೈನ್‌ ಬಸ್‌ ಟಿಕೆಟ್‌ ಬುಕ್ಕಿಂಗ್‌ ಸೇವೆ ಪ್ರಾರಂಭ!

|

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ-(Indian Railway Catering and Tourism Corporation -IRCTC) ರೈಲ್ವೆ ವಲಯದಲ್ಲಿ ಹಲವು ಅನಕೂಲಕರ ಸೇವೆಗಳನ್ನು ನೀಡುತ್ತಾ ಸಾಗಿದೆ. ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ಹಾಗೂ ರೈಲಿನಲ್ಲಿ ಫುಡ್‌ ಆರ್ಡರ್ ಪ್ರಯೋಜನಗಳನ್ನು ಒದಗಿಸಿರೊ ಐಆರ್‌ಸಿಟಿಸಿ ಇದೀಗ ಬಳಕೆದಾರರಿಗೆ ಹೊಸ ಸೇವೆಯನ್ನು ಪ್ರಕಟಿಸಿದೆ.

IRCTC

ಹೌದು, ಭಾರತದ ರೈಲ್ವೆ ಇಲಾಖೆಯ IRCTC ಅಪ್ಲಿಕೇಶನ್‌ ಈಗಾಗಲೇ ಬಸ್ ಟಿಕೆಟ್‌ಗಳನ್ನು ಕಾಯ್ದಿರಿಸುವ ಅವಕಾಶವನ್ನು ಈಗಾಗಲೇ ನೀಡಿದೆ. ಈ ವರ್ಷದ ಆರಂಭದಲ್ಲಿಯೇ ಐಆರ್‌ಸಿಟಿಸಿ ಬಸ್ ಬುಕಿಂಗ್ ಸೇವೆಯನ್ನು ಪ್ರಾರಂಭಿಸಿದೆ. ಸದ್ಯ ಇದೀಗ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಮುಂದಾಗಿದ್ದು, ಈಗ ರೆಡ್‌ಬಸ್‌ನ ಸಹಯೋಗದೊಂದಿಗೆ ಇಂಟರ್‌ಸಿಟಿ ಬಸ್ ಟಿಕೆಟಿಂಗ್ ಸೇವೆಯನ್ನು ಪ್ರಕಟಿಸಿದೆ. ಹಾಗಾದ್ರೆ IRCTC ಅಪ್ಲಿಕೇಶನ್‌ ಬಳಸಿ ಇಂಟರ್‌ಸಿಟಿ ಬಸ್‌ ಟಿಕೆಟ್‌ ಬುಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

IRCTC

ಇನ್ಮುಂದೆ IRCTC ಅಪ್ಲಿಕೇಶನ್‌ ಮೂಲಕ ಇಂಟರ್ಸಿಟಿ ಬಸ್ ಟಿಕೆಟ್ ಬುಕಿಂಗ್ ಸೇವೆಯನ್ನು ಪಡೆಯಬಹುದಾಗಿದೆ. ಪ್ರಸ್ತುತ ಈ ಸೇವೆ ರೈಲ್ವೆ ಇಲಾಖೆಯ ವೆಬ್‌ಸೈಟ್ irctc.co.in ನಲ್ಲಿ ಲಭ್ಯವಿದೆ. ಅಲ್ಲದೆ ಶೀಘ್ರದಲ್ಲೇ IRCTC ರೈಲು ಸಂಪರ್ಕ ಅಪ್ಲಿಕೇಶನ್‌ನಲ್ಲಿಯೂ ಸಹ ಲಭ್ಯವಿರುತ್ತದೆ. ಇನ್ನು ರೆಡ್‌ಬಸ್‌ನ ಸಹಯೋಗದೊಂದಿಗೆ ಬಳಕೆದಾರರು ಈಗ ರೆಡ್‌ಬಸ್ ನೀಡುವ ಸುಮಾರು 24,000 ದೈನಂದಿನ ಬಸ್‌ಗಳಿಂದ ಸೀಟ್‌ಗಳನ್ನು ಕಾಯ್ದಿರಿಸಲು ಸಾದ್ಯವಿದೆ. ಇನ್ನು ರೆಡ್‌ಬಸ್‌ನೊಂದಿಗಿನ ಏಕೀಕರಣವು ಸ್ಲೀಪರ್ / ಸ್ಲೀಪರ್ ಅಲ್ಲದ, ಎಸಿ / ಎಸಿ ಅಲ್ಲದ ಬಸ್‌ಗಳನ್ನು ಒಳಗೊಂಡಂತೆ ಪ್ರತಿದಿನ 12 ಲಕ್ಷ ಬಸ್ ಆಸನಗಳನ್ನು ಆಯೋಜಿಸಲು ಸಹಾಯ ಮಾಡುತ್ತದೆ ಎಂದು IRCTC ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

IRCTC ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ಸೇವೆ

IRCTC ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ಸೇವೆ

IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಬಳಕೆದಾರರು ಶೀಘ್ರದಲ್ಲೇ ಬಸ್‌ನಲ್ಲಿ ಲಭ್ಯವಿರುವ ಸೌಲಭ್ಯಗಳು, ಬೋರ್ಡಿಂಗ್ ಆಯ್ಕೆ ಮಾಡುವ ಸಾಮರ್ಥ್ಯ ಮತ್ತು ಬಿಡುವಿನ ಬಿಂದುಗಳಂತಹ ಫೀಚರ್ಸ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ರೆಡ್‌ಬಸ್ ಸುರಕ್ಷತೆ + ಕಾರ್ಯಕ್ರಮದಡಿ ಬರುವ ಬಸ್‌ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಬಳಕೆದಾರರು ಪಡೆಯುತ್ತಾರೆ. ಇದು ಮೂಲತಃ ಪ್ರಯಾಣಿಕರಿಗೆ ತಮ್ಮ ಗಮ್ಯಸ್ಥಾನದ ಮಾರ್ಗದಲ್ಲಿ ಲಭ್ಯವಿರುವ ಸುರಕ್ಷಿತ ಬಸ್ ಅನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದರ ಅಡಿಯಲ್ಲಿ ಪ್ರಯಾಣಿಕರಿಗೆ ಹೊರಡುವ ಮುನ್ನ ಬಸ್ ಸಂಖ್ಯೆ ಮತ್ತು ಬಸ್ ಸಿಬ್ಬಂದಿಯ ಸಂಪರ್ಕ ಮಾಹಿತಿ ಮುಂತಾದ ವಿವರಗಳನ್ನು ಸಹ ನೀಡಲಾಗುತ್ತದೆ.

IRCTC

ಇನ್ನು IRCTC ಜೊತೆಗೆ ಸಹಯೋಗ ಹೊಂದಿರುವ ರೆಡ್‌ಬಸ್ ಸಂಸ್ಥೆ ಸಿಇಒ ಪ್ರಕಾಶ್ ಸಂಗಮ್ ಐಆರ್‌ಸಿಟಿಸಿಯೊಂದಿಗೆ ಪಾಲುದಾರಿಕೆ ಹೊಂದಲು ರೆಡ್‌ಬಸ್ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಲಕ್ಷಾಂತರ ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಐಆರ್‌ಸಿಟಿಸಿ ಹೆಚ್ಚು ಆದ್ಯತೆಯ ವೇದಿಕೆಯಾಗಿದೆ. ಈಗ ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ರೆಡ್‌ಬಸ್‌ನ ಏಕೀಕರಣದೊಂದಿಗೆ, ಐಆರ್‌ಸಿಟಿಸಿಯ ಗ್ರಾಹಕರು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಲು ವ್ಯಾಪಕ ಶ್ರೇಣಿಯ ಬಸ್ ಆಯ್ಕೆಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Best Mobiles in India

English summary
IRCTC, redBus intercity online bus ticketing service launched on irctc.co.in and IRCTC Rail Connect app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X