ಇನ್ಮುಂದೆ ರೈಲು ಟಿಕೆಟ್ ಬುಕ್ ಮಾಡಲು ತಿಳಿಯಲೇಬೇಕು ಬದಲಾದ ಈ 10 ನಿಯಮಗಳನ್ನು!!

  ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವಾದ ಭಾರತೀಯ ರೈಲ್ವೆ ತನ್ನ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ಇದೀಗ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (ಐಆರ್‌ಸಿಟಿಸಿ) ಆನ್‌ಲೈನಿನಲ್ಲಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ನಿಯಮಗಳನ್ನು ಪರಿಷ್ಕರಿಸಿದೆ.

  ಈಗ ಐಆರ್‌ಸಿಟಿಸಿ ಮೂಲಕ 120 ದಿನಗಳ ಮುಂಚಿತವಾಗಿ ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಬಹುದಾದ ಹೊಸ ಆಯ್ಕೆಯನ್ನು ತರಲಾಗಿದೆ. ಇಷ್ಟು ಮಾತ್ರವಲ್ಲದೇ, ಆಧಾರ್ ನಂಬರ್ ಪರಿಶೀಲಿಸಿದ ಪ್ರತಿಯೋರ್ವ ಬಳಕೆದಾರನು ಕೂಡ ಪ್ರತಿ ತಿಂಗಳು 12 ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು ಎಂದು ಐಎಸ್‌ಆರ್‌ಟಿಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

  ಇನ್ಮುಂದೆ ರೈಲು ಟಿಕೆಟ್ ಬುಕ್ ಮಾಡಲು ತಿಳಿಯಲೇಬೇಕು ಬದಲಾದ ಈ 10 ನಿಯಮಗಳನ್ನು!!

  ರೈಲ್ವೆ ಬಳಕೆದಾರರಿಗೆ ಈ ಮೊದಲು ಸಂಯಮವನ್ನು ಕಳೆದುಕೊಳ್ಳುವಂತೆ ಮಾಡುತ್ತಿದ್ದ ರೈಲು ಆಗಮನದ ವಿಳಂಬಕ್ಕೆ ಐಆರ್‌ಸಿಟಿಸಿ ಪರಿಹಾರ ತೋರಿದೆ. ನಿಗದಿತ ವೇಳೆಗಿಂತ 3 ಗಂಟೆಯಷ್ಟು ರೈಲು ಆಗಮನ ವಿಳಂಬವಾದರೆ ಹಣವಾಪಸ್ ಸಿಗಲಿದೆ. ಹಾಗಾದರೆ, ಆನ್‌ಲೈನಿನಲ್ಲಿ ಪರಿಷ್ಕರಣೆಯಾಗಿರುವ ಎಲ್ಲಾ ಬದಲಾವಣೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ವೇಗವಾಗಿ ಕಾರ್ಯನಿರ್ವಹಿಸಬೇಕು!!

  ಆನ್‌ಲೈನಿನಲ್ಲಿ ಇನ್ಮುಂದೆ ರೈಲ್ವೆ ಟಿಕೆಟ್ ಬುಕ್ ಮಾಡಲು ನೀವು ಬಹಳ ವೇಗವಾಗಿ ಕಾರ್ಯನಿರ್ವಹಿಸಬೇಕು. 25 ಸೆಕೆಂಡ್‌ಗಳ ಒಳಗಾಗಿ ನೀವು ಪ್ಯಾಸೆಂಜರ್ ಡೀಟೇಲ್ಸ್ ಅನ್ನು ಪೇಜ್‌ನಲ್ಲಿ ನಮೂದಿಸಬೇಕು. ಹಾಗೆಯೇ, ಪ್ಯಾಸೆಂಜರ್ ಡೀಟೇಲ್ಸ್ ಪೇಜ್ ಮತ್ತು ಪೇಮೆಂಟ್ಸ್ ಪೇಜ್‌ನಲ್ಲಿ ಕೇವಲ 5 ಸೆಕೆಂಡ್ಸ್‌ನಲ್ಲಿ ಕ್ಯಾಪ್ಚಾವನ್ನು ನಮೂದಿಸಬೇಕು.

  120 ದಿನಗಳ ಮುಂಚಿತವಾಗಿ ಟಿಕೆಟ್!

  ಓರ್ವ ಪ್ರಯಾಣಿಕನು ಪ್ರಯಾಣದ ದಿನಾಂಕವನ್ನು ಹೊರತುಪಡಿಸಿ 120 ದಿನಗಳ ಮುಂಚಿತವಾಗಿ ಆನ್‌ಲೈನ್ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಓರ್ವ ಬಳಕೆದಾರ ಒಂದು ಐಡಿಯಿಂದ ಆರು ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದ್ದು, ಅದೇ ಬಳಕೆದಾರನು ಆಧಾರ್-ಪರಿಶೀಲಿಸಿದಲ್ಲಿ 12 ಟಿಕೆಟ್ ಬುಕ್ ಮಾಡಬಹುದು.

  ತತ್ಕಾಲ್ ಟಿಕೆಟ್ ಬುಕ್ಕಿಂಗ್!

  ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ನೀವು ತತ್ಕಾಲ್ ಟಿಕೆಟ್ ಅನ್ನು ಬುಕ್ ಮಾಡಬೇಕಿದ್ದರೆ, ರೈಲ್ವೆ ಪ್ರಯಾಣಕ್ಕೆ ಒಂದು ದಿನದ ಮೊದಲು ಟಿಕೆಟ್ ಅನ್ನು ಬುಕ್ ಮಾಡಬಹುದು. ನಿವು ಎಸಿ ಕೋಚ್ ಅನ್ನು ಬೆಳಗ್ಗೆ 10 ಗಂಟೆಗೆ ಬುಕ್ ಮಾಡಲು ಶುರುಮಾಡಬಹುದಾದರೆ, ಸ್ಲೀಪರ್ ಕೋಚ್ ಟಿಕೆಟ್ ಅನ್ನು 11 ಗಂಟೆಗೆಯಿಂದ ಬುಕ್ ಮಾಡಲು ಶುರುಮಾಡಬಹುದು.

  ಒಂದು ಬಾರಿ ಪಾಸ್ವರ್ಡ್ (OTP)

  ಐಆರ್‌ಸಿಟಿಸಿವೆಬ್‌ಸೈಟ್ ಮೂಲಕ ನೀವು ನೆಟ್‌ಬ್ಯಾಂಕಿಂಗ್ ಪೇಮೆಂಟ್ ಮಾಡಲು ಒಂದು ಬಾರಿ ಪಾಸ್ವರ್ಡ್ (OTP) ಮೂಲಕ ತಮ್ಮನ್ನು ಪರಿಶೀಲಿಸಬೇಕಾಗುತ್ತದೆ. ಯಾವುದೇ ಬ್ಯಾಂಕ್ ಬಳಕೆದಾರನು ಕೂಡ ಒಂದು ಬಾರಿ ಪಾಸ್ವರ್ಡ್ (OTP) ಇಲ್ಲದೇ ನೆಟ್‌ಬ್ಯಾಂಕಿಂಗ್ ಪೇಮೆಂಟ್ ಮಾಡಲು ಸಾಧ್ಯವಿಲ್ಲ ಎಂದು ಐಎಸ್‌ಆರ್‌ಟಿಸಿ ತಿಳಿಸಿದೆ.

  ಎರಡು ತತ್ಕಾಲ್ ಟಿಕೆಟ್!

  ಒರ್ವ ಬಳಕೆದಾರ ಒಂದು ID (ಆಧಾರ್-ಪರಿಶೀಲಿಸಿ) ಯಿಂದ ಎರಡು ತತ್ಕಾಲ್ ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡುವ ಅವಕಾಶವನ್ನು ನೀಡಲಾಗಿದೆ. ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಮಾತ್ರ ತತ್ಕಾಲ್ ಟಿಕೆಟ್ ಬುಕ್ ಮಾಡಲು ಸಮಯದ ಮಿತಿ ಇರುತ್ತದೆ.

  ಆರು ತತ್ಕಾಲ್ ಆಸನ!

  ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಒಂದು ಸಂದರ್ಭದಲ್ಲಿ ಆರು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದಾದ ಅವಕಾಶವನ್ನು ರೈಲ್ವೆ ನೀಡಿದೆ. ರೈಲ್ವೆ ನಿರ್ಬಂಧಗಳನ್ನು ನಿಯಂತ್ರಿಸುವ ಯಾವುದೇ ಎರಡು ನಿಲ್ದಾಣಗಳ ನಡುವಿನ ನಿರ್ದಿಷ್ಟ ಪ್ರಯಾಣದ ಸಮಯದಲ್ಲಿ ಗರಿಷ್ಟ ಆರು ತತ್ಕಾಲ್ ಆಸನಗಳನ್ನು ಬುಕ್ ಮಾಡಬಹುದಾಗಿದೆ.

  ಹಲವು ಟಿಕೆಟ್ ಬುಕ್!

  ಇನ್ಮುಂದೆ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಒಂದು ತತ್ಕಾಲ್ ಟಿಕೆಟ್ ಅನ್ನು ಒಂದು ಅವಧಿಯಲ್ಲಿ (ರಿಟರ್ನ್ ಪ್ರಯಾಣ ಹೊರತುಪಡಿಸಿ) ಬುಕ್ ಮಾಡಬಹುದು. ಇಲ್ಲಿ ಲಾಗಿನ್, ಪ್ರಯಾಣಿಕ ವಿವರ ಮತ್ತು ಪಾವತಿ ವೆಬ್ ಪುಟಗಳಲ್ಲಿ ಕ್ಯಾಪ್ಚಾವನ್ನು ನೀಡಲಾಗುವುದರಿಂದ ಒಮ್ಮೆಲೆ ಹಲವು ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ.

  ಒಮ್ಮೆ ಮಾತ್ರ ಲಾಗ್-ಇನ್!

  ಇನ್ಮುಂದೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ಸಮಯದ ಮಧ್ಯದಲ್ಲಿ ತ್ವರಿತವಾಗಿ ರೈಲ್ವೆ ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ. ಓರ್ವ ಬಳಕೆದಾರ ಒಂದು ಸಮಯದಲ್ಲಿ ಒಮ್ಮೆ ಮಾತ್ರ ಲಾಗ್-ಇನ್ ಮಾತ್ರ ಹೊಂದಬಹುದಾಗಿದೆ. ನಂತರೆ ಟಿಕೆಟ್ ಬುಕ್ ಮಾಡಲು ಮತ್ತೆ ಲಾಗಿನ್ ಆಗಬೇಕು.

  ಹಣ ಮರುಪಾವತಿ ಪಡೆಯಬಹುದು!

  ರೈಲು ನಿಗದಿತ ನಿರ್ಗಮನ ಸಮಯದಿಂದ ಮೂರು ಗಂಟೆಗಳ ಒಳಗೆ ನಿರ್ಗಮಿಸದಿದ್ದರೆ, ರೈಲು ಮಾರ್ಗ ಬದಲಾವಣೆಯಾದರೆ, ಬುಕ್ ಮಾಡಿದ್ದ ಟಿಕೆಟ್ ಮೌಲ್ಯದಲ್ಲಿ ಬದಲಾವಣೆಯಾದರೆ ಪ್ರಯಾಣಿಕರು ಈಗ ಹಣವನ್ನು ಮರುಪಾವತಿ ಪಡೆಯಬಹುದು ಎಂದು ಐಎಸ್‌ಆರ್‌ಟಿಸಿ ತಿಳಿಸಿದೆ.

  ಟ್ರಾವೆಲ್ ಏಜೆಂಟ್ಸ್

  ಟಿಕೆಟ್ ಬುಕ್ ಏಜೆಂಟರು ಬೆಳಗ್ಗೆ 8 ರಿಂದ 8.30 ರವರೆಗೆ, ಬೆಳಗ್ಗೆ 10 ರಿಂದ 10.30 ರವರೆಗೆ ಮತ್ತು 11 ರಿಂದ 11.30 ರವರೆಗೆ ಮಾತ್ರ ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶ ನೀಡಲಾಗಿದೆ. ತತ್ಕಾಲ್ ಟಿಕೆಟ್‌ಗಾಗಿ ಆನ್‌ಲೈನ್ ಕಾಯ್ದಿರಿಸುವಿಕೆಯ ನಂತರ ಮೊದಲ 30 ನಿಮಿಷಗಳಲ್ಲಿ ಅಧಿಕೃತ ಟ್ರಾವೆಲ್ ಏಜೆಂಟ್ಸ್ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಿಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  IRCTC train ticket reservations new rules: Now, tickets can be booked up to 120 days in advance and an Aadhaar-verified user can book 12 tickets every month.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more