Home
ಸುದ್ದಿಜಾಲ

5G ತಂತ್ರಜ್ಞಾನಕ್ಕಾಗಿ ಪ್ರಾಣ ತೆರಬೇಡಿ ಎನ್ನುತ್ತಿದ್ದಾರೆ ವಿಜ್ಞಾನಿಗಳು!!

By Bhaskar N J

ಭವಿಷ್ಯದ 5G ಸಂವಹನ ತಂತ್ರಜ್ಞಾನದ ಬರುವಿಕೆಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿರುವ ಸಮಯದಲ್ಲಿ 5G ತಂತ್ರಜ್ಞಾನ ಬೇಡ ಎಂಬ ಅಪಸ್ವರ ಕೇಳಿಬಂದಿದೆ. ಜಗತ್ತು ಈ 4ಜಿ ವೇಗಕ್ಕೆ ಹೊಂದಿಕೊಂಡುಬಿಟ್ಟಿದೆ. ನಾವು ಈಗಾಗಲೇ 5ಜಿ ವೇಗ ಎದುರು ನೋಡುತ್ತಿದ್ದೇವೆ. ಆದರೆ, 5G ಬಂದರೆ ಡಿಜಿಟಲ್ ರೋಮಾಂಚನಗಳ ಮಧ್ಯೆ ಬದುಕುವ ಮಾನವ ಬಹುಬೇಗ ಸಾಯುತ್ತಾನೆ.!!

ಹೌದು, ಈಗಾಗಲೇ ರೇಡಿಯೇಶನ್‌ನಿಂದಾಗಿ ಮಾನವನ ಆರೋಗ್ಯ ಹಾಳಾಗುತ್ತಿದ್ದೆ. ಚಿಕ್ಕ ಚಿಕ್ಕ ಪಕ್ಷಿಗಳು ಅವಸಾನದ ಹತ್ತಿರ ಬಂದಿದೆ. ಇನ್ನು ನಮ್ಮನ್ನು 5ಜಿ ತಂತ್ರಜ್ಞಾನ ಎದುರಾದರೆ, ಆರೋಗ್ಯದ ಮೇಲೆ ದೀರ್ಘ‌ಕಾಲೀನ ಪರಿಣಾಮ ಉಂಟಾಗುತ್ತದೆ ಎಂದು ಹಲವು ವಿಜ್ಞಾನಿಗಳು ದಾಖಲಿಸಿದ್ದಾರೆ. ಅವರು ಇದನ್ನು ವೈಜ್ಞಾನಿಕವಾಗಿ ಸಾಬೀತೂ ಸಹ ಮಾಡಿ ತಿಳಿಸಿದ್ದಾರೆ.

5G ತಂತ್ರಜ್ಞಾನಕ್ಕಾಗಿ ಪ್ರಾಣ ತೆರಬೇಡಿ ಎನ್ನುತ್ತಿದ್ದಾರೆ ವಿಜ್ಞಾನಿಗಳು!!

5ಜಿ ತಂದೇ ಬಿಡಬೇಕು ಎಂಬ ಉತ್ಸಾಹ, ಹುಮ್ಮಸ್ಸು ಎಲ್ಲ ಟೆಲಿಕಾಂ ಕಂಪನಿಗಳು ಹಾಗೂ ಸರ್ಕಾರಗಳಲ್ಲಿದೆ. ಆದರೆ, ಈ 5ಜಿಯಿಂದಾಗಿ ಮನುಷ್ಯನ ಮೇಲೆ ಉಂಟಾಗಬಹುದಾದ ಪರಿಣಾಮದ ಬಗ್ಗೆ ಇನ್ನೂ ಸ್ಪಷ್ಟ ಅಧ್ಯಯನವೇ ನಡೆದಿಲ್ಲ ಎಂದು ವಿಜ್ಞಾನಿಗಳು ಆತಂಕ ಪಡುತ್ತಿದ್ದಾರೆ. ಹಾಗಾದರೆ, ಮನುಷ್ಯನಿಗೆ ಸಾವು ತರುವ 5G ಕಥೆಯೇನು ಎಂಬುದನ್ನು ಮುಂದೆ ತಿಳಿಯಿರಿ.

2020ರ ವೇಳೆಗೆ 5G!

2020ರ ವೇಳೆಗೆ 5G!

ಇಡೀ ವಿಶ್ವವೇ 5G ತಂತ್ರಜ್ಞಾನಕ್ಕಾಗಿ ಎದುರುನೋಡುತ್ತಿದೆ. ಭಾರತವೂ ಸೇರಿದಂತೆ ಬಹುತೇಕ ದೇಶಗಳು 5ಜಿ ನೆಟ್‌ವರ್ಕ್‌ ಪ್ರಾಯೋಗಿಕ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿವೆ. 2020ರ ವೇಳೆಗೆ ಬಹುತೇಕ ಅಭಿವೃದ್ಧಿಗೊಂಡ ಹಾಗೂ ಅಭಿವೃದ್ಧಿಗೊಳ್ಳುತ್ತಿರುವ ದೇಶಗಳಲ್ಲಿ 5ಜಿ ಜನಸಾಮಾನ್ಯರ ಬಳಕೆಗೆ ಲಭ್ಯವಿರುತ್ತದೆ ಎನ್ನುತ್ತಿವೆ ವರದಿಗಳು.

ಏನಿದು 5G ನೆಟ್‌ವರ್ಕ್?

ಏನಿದು 5G ನೆಟ್‌ವರ್ಕ್?

ಸಾಮಾನ್ಯವಾಗಿ ಪ್ರತಿ ಜನರೇಶನ್ ಟೆಕ್ನಾಲಜಿಗೂ ಒಂದೊಂದು ಫ್ರೀಕ್ವೆನ್ಸಿಯನ್ನು ನಿಗದಿಸಲಾಗಿದೆ. ಈಗಾಗಲೇ 4ಜಿಗೆ 300 ಮೆಗಾಹರ್ಟ್ಸ್ನಿಂದ 3 ಗಿಗಾಹರ್ಟ್ಸ್ ತನಕದ ಫ್ರೀಕ್ವೆನ್ಸಿ ನಿಗದಿಪಡಿಸಲಾಗಿದೆ. ಇದೇ ರೀತಿ 5ಜಿಗೆ 30 ಗಿಗಾಹರ್ಟ್ಸ್ನಿಂದ 300 ಗಿಗಾಹರ್ಟ್ಸ್ ವರೆಗಿನ ತರಂಗಾಂತರ ನಿಗದಿಸಲಾಗಿದೆ. ಇದರ ಮೇಲೆ ಸಂಶೋಧನೆಗಳು ನಡೆಯುತ್ತಿವೆ.

5G ಬಂದರೆ ಹೇಗಿರಲಿದೆ?

5G ಬಂದರೆ ಹೇಗಿರಲಿದೆ?

5G ತಂತ್ರಜ್ಞಾನ ಈಗಿರುವ 4ಜಿ ನೆಟ್‌ವರ್ಕ್‌ಗಿಂತ ಸ್ವಲ್ಪ ಭಿನ್ನ. 10 ರಿಂದ 100 ಪಟ್ಟು ಹೆಚ್ಚು ವೇಗದಲ್ಲಿ ಡೇಟಾ ವರ್ಗಾವಣೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ. ಹೆಚ್‌ಡಿ ಪ್ಲಸ್ ವಿಡಿಯೋಗಳನ್ನು 4ಜಿ ನೆಟ್‌ವರ್ಕ್‌ಗಿಂತ 100 ಪಟ್ಟು ವೇಗವಾಗಿ ಪ್ಲೇ ಮಾಡುತ್ತದೆ. ಇದು 4ಜಿ ನೆಟ್‌ವರ್ಕ್‌ನ ಮುಂದುವರೆದ ತಂತ್ರಜ್ಞಾನವೇ ಆಗಿದೆ.

3G, 4G ಗಿಂತ 5G ಅಪಾಯಕಾರಿ.!

3G, 4G ಗಿಂತ 5G ಅಪಾಯಕಾರಿ.!

ಎಲ್ಲಾ ಮೊಬೈಲ್‌ ನೆಟ್‌ವರ್ಕ್‌ಗಳು ಅಪಾಯಕಾರಿಯೇ ಆಗಿವೆ. ನೆಟ್‌ವರ್ಕ್‌ಗಳು ರೇಡಿಯೇಶನ್‌ನಿಂದ ನಮ್ಮ ತಲೆಯೇ ತಿರುಗುತ್ತದೆ.ತರಂಗಾಂತರಗಳಿಂದಾಗಿ ಹಲವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಈಗಾಗಲೇ ಇಂತಹ ಅಪಾಯಕಾರಿ ಸಮಸ್ಯೆಗಳಿಗೆ ಸಿಲುಕಿರುವ ಜನರಿಗೆ 5G ಎಂಬ ಪೆಡಂಭೂತ ಎದುರಾಗುತ್ತಿದೆ.

ವೈಜ್ಞಾನಿಕವಾಗಿ ಸಾಬೀತು!

ವೈಜ್ಞಾನಿಕವಾಗಿ ಸಾಬೀತು!

ರೇಡಿಯೇಶನ್‌ನಿಂದಾಗಿ ಆರೋಗ್ಯದ ಮೇಲೆ ದೀರ್ಘ‌ಕಾಲೀನ ಪರಿಣಾಮ ಉಂಟಾಗುತ್ತದೆ ಎಂದು ಹಲವು ವಿಜ್ಞಾನಿಗಳು ದಾಖಲಿಸಿದ್ದಾರೆ. ಇಷ್ಟು ದಿನ 4ಜಿ ಟವರ್‌ಗಳಿಂದ ತಲೆ ತಪ್ಪಿಸಿಕೊಂಡಿದ್ದಿರಿ. ಆದರೆ ಇನ್ನು ಹಾಗಾಗಲು ಸಾಧ್ಯವಿಲ್ಲ. ಏಕೆಂದರೆ, 5G ರೇಡಿಯೇಶನ್‌ನಿಂದ ನಾವು ತಪ್ಪಿಸಿಕೊಳ್ಳಲು ಅಸಾಧ್ಯ ಎನ್ನುವ ಪರಿಸ್ಥಿತಿ ಎದುರಾಗಲಿದೆ ಎಂದು ತಿಳಿಸಿದ್ದಾರೆ.

ಹೆಚ್ಚು ಅಪಾಯಕಾರಿ ಏಕೆ?

ಹೆಚ್ಚು ಅಪಾಯಕಾರಿ ಏಕೆ?

ಪ್ರತಿ ಜನರೇಶನ್ ಟೆಕ್ನಾಲಜಿಗೂ ನಿಗದಿಸಲಾಗಿರುವ ತರಂಗಾಂತರಗಳನ್ನು ಮಿಲಿಮೀಟರ್‌ ಅಲೆಗಳು ಎಂದು ಕರೆಯಲಾಗುತ್ತದೆ. ಇದರ ದೊಡ್ಡ ಸಮಸ್ಯೆಯೆಂದರೆ ಅಲೆಗಳ ಫ್ರೀಕ್ವೆನ್ಸಿ ಹೆಚ್ಚಿದಷ್ಟೂ ಅವು ಸಾಗುವ ದೂರ ಕಡಿಮೆಯಾಗುತ್ತದೆ. 5G ತಂತ್ರಜ್ಞಾನ ಅಭಿವೃದ್ದಿಯಾದರೆ, ಈಗಿರುವ ನೆಟ್‌ವರ್ಕ್‌ಗಳಿಗಿಂತ ಹೆಚ್ಚು ಗೋಪುರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಚರ್ಮ ಕೂಡ ಫ್ರೀಕ್ವೆನ್ಸಿ ಗ್ರಹಿಸುತ್ತದೆ!

ಚರ್ಮ ಕೂಡ ಫ್ರೀಕ್ವೆನ್ಸಿ ಗ್ರಹಿಸುತ್ತದೆ!

30 ಗಿಗಾಹರ್ಟ್ಸ್ನಿಂದ 300 ಗಿಗಾಹರ್ಟ್ಸ್ ವರೆಗಿನ ಮಿಲಿಮೀಟರ್‌ ಅಲೆಗಳು 5ಜಿಗಾಗಿ ಇರಲಿವೆ. ಈ ಮಿಲಿಮೀಟರ್‌ ಅಲೆಗಳು ಎಷ್ಟು ಶಕ್ತಿಶಾಲಿ ಎಂದರೆ, ನಮ್ಮ ಮೈ ಮೇಲಿನ ಚರ್ಮ ಕೂಡ ಈ ಫ್ರೀಕ್ವೆನ್ಸಿಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತವೆ. ಇದರಿಂದ ಮಾನವನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮಗಳು ಬೀರುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Best Mobiles in India

English summary
Like the wireless generations before it, 5G will need its own frequency bands to occupy as it travels across cities everywhere. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+