Just In
- 2 hrs ago
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- 12 hrs ago
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- 15 hrs ago
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- 1 day ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
Don't Miss
- Movies
ಕ್ರಾಂತಿ ಮೊದಲ ದಿನದ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್; ಹಿಟ್ಟಾ, ಫ್ಲಾಪಾ?
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊಬೈಲ್ ಫೋನ್ ಗಳಿಂದಾಗಿ ವಿಮಾನ ಹಾರಾಟದಲ್ಲಿ ಸಮಸ್ಯೆ
ಯುಎಸ್ ನ ಸರ್ಕಾರಿ ಅಧಿಕಾರಿಗಳು 2014 ರಲ್ಲಿ ಆತಂಕಕಾರಿಯಾಗಿರುವ ಸುರಕ್ಷತಾ ಸಮಸ್ಯೆಯೊಂದರ ಬಗ್ಗೆ ತಿಳಿಸಿದ್ದಾರೆ. ಪ್ರಯಾಣಿಕರ ಸೆಲ್‌ಫೋನ್‌ಗಳು ಮತ್ತು ಇತರ ರೀತಿಯ ರೇಡಿಯೊ ಸಿಗ್ನಲ್‌ಗಳು ಬೋಯಿಂಗ್ 737 ಮತ್ತು 777 ವಿಮಾನಗಳ ಕೆಲವು ಮಾದರಿಗಳಿಗೆ ಅಪಘಾತವನ್ನುಂಟುಮಾಡಬಹುದಾದ ಸಾಧ್ಯತೆಯನ್ನು ಅವರು ತಿಳಿಸಿದ್ದಾರೆ.

ಯುಎಸ್ನಲ್ಲಿ ನೋಂದಾಯಿಸಲಾದ 1,300 ಕ್ಕೂ ಹೆಚ್ಚು ಜೆಟ್‌ಗಳು ಕಾಕ್‌ಪಿಟ್ ಪರದೆಗಳನ್ನು ಹೊಂದಿದ್ದು, ವೈ-ಫೈ, ಮೊಬೈಲ್ ಫೋನ್‌ಗಳು ಮತ್ತು ಹವಾಮಾನ ರೇಡಾರ್‌ನಂತಹ ಹೊರಗಿನ ಆವರ್ತನಗಳ ಮಧ್ಯಪ್ರವೇಶಕ್ಕೆ ಗುರಿಯಾಗಬಹುದು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಇದು ಹನಿವೆಲ್ ಇಂಟರ್ನ್ಯಾಷನಲ್ ತಯಾರಿಸಿದ ಘಟಕಗಳನ್ನು ಬದಲಾಯಿಸಲು 2019 ರ ನವೆಂಬರ್ ನಲ್ಲಿ ವಿಮಾನಯಾನ ಸಂಸ್ಥೆಗಳಿಗೆ ತಿಳಿಸಿತ್ತು.

ವಾಯುಪ್ರದೇಶ
ಎಫ್ಎಎ ವರದಿ ಅನುಸಾರ ಜಗತ್ತಿನಾದ್ಯಂತ ಇದೀಗ ಹಲವಾರು ವಿಮಾನಗಳು ಅಸುರಕ್ಷತಾ ಸಿಸ್ಟಮ್ ನಲ್ಲಿಯೇ ಹಾರಾಡುತ್ತಿವೆಯಂತೆ.ವಾಯು ಯೋಗ್ಯತೆಯ ನಿರ್ದೇಶನ ಎಂದು ಕರೆಯಲಾಗುವ ಸುರಕ್ಷತಾ ವಿಚಾರಗಳನ್ನು ಎಫ್ಎಎ ಪ್ರಸ್ತಾಪಿಸಿದೆ. ವಾಯುಪ್ರದೇಶ,ಎತ್ತರ,ಸಂಚರಣೆ ಸೇರಿದಂತೆ ವಿಮಾನ ನಿರ್ಣಾಯಕ ದತ್ತಾಂಶಗಳು ಕಣ್ಮರೆಯಾಗುವ ಭಯವನ್ನು ಈ ವರದಿಯಲ್ಲಿ ಹೇಳಲಾಗಿದೆ.
ಆದರೆ ಹನಿವೆಲ್ ಸಂಸ್ಥೆ ಇದುವರೆಗೂ ಯಾವುದೇ ಸೆಲ್ ಫೋನ್ ಅಥವಾ ರೇಡಿಯೋ ಆವರ್ತನಗಳಿಂದಾಗಿ ಉಂಟಾಗುವ ಪರದೆಯ ಬ್ಲಾಂಕ್ ಸಮಸ್ಯೆಯನ್ನು ಕೇಳಿಲ್ಲ ಎಂದು ವಕ್ತಾರೆ ನೀನಾ ಕ್ಲಾಸ್ ಹೇಳಿದ್ದಾರೆ. ವಿಮಾನಯಾನ ಮತ್ತು ಹನಿವೆಲ್ ವಿಮಾನ ಹಾರಾಟದಲ್ಲಿ ರೇಡಿಯೋ ಸಿಗ್ನಲ್ ಗಳ ಸುರಕ್ಷತಾ ಸಮಸ್ಯೆಯ ಬಗ್ಗೆ ವಾದ ನಡೆದಾಗ ಎಫ್ಎಎ ಅದರ ಸೇವೆಯ ವಿಮಾನ ಹಾರಾಟದಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಜೆಟ್ ಗಳು ಆರಾಮದಾಯಕವಾಗಿ ಹಾರಟ ನಡೆಸಿವೆ ಎಂದು ವಾದ ಮಾಡಲಾಗಿದೆ.

ಏರ್ ಕ್ರಾಫ್ಟ್
2012 ರಲ್ಲಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಲಾಗಿದ್ದು ಇತರೆ ಯಾವುದೇ ಏರ್ ಕ್ರಾಫ್ಟ್ ನಲ್ಲೂ ಈ ರೀತಿಯ ಸಮಸ್ಯೆ ಕಾಣಿಸಿಲ್ಲ ಎಂಬುದಾಗಿ ಕಂಪೆನಿ ವಕ್ತಾರರು ತಿಳಿಸಿದ್ದಾರೆ. ಹನಿವೆಲ್ ಕೇವಲ ಒಂದೇ ಒಂದು ಇಂತಹ ಕೇಸ್ ನ್ನು ನೋಡಿದೆ. 737 ಕಾಕ್ ಪಿಟ್ ನಲ್ಲಿ ಈ ರೀತಿಯ ಡಿಸ್ಪ್ಲೇ ಬ್ಲ್ಯಾಂಕ್ ಆಗಿರುವ ಸಮಸ್ಯೆ ಕಾಣಿಸಿದೆ ಎಂಬುದಾಗಿ ಕ್ಲೌಸ್ ತಿಳಿಸಿದ್ದಾರೆ. ಈ ಸಮಸ್ಯೆ ಸಾಫ್ಟ್ ವೇರ್ ನಿಂದಾಗಿದ್ದು ಅದನ್ನು ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಫೆಕ್ಟ್ ಆಗಿದ್ದ 737 ಮಾಡೆಲ್ ಮುಂದಿನ ಜನರೇಷನ್ನಿನ ಮಾಡೆಲ್ ಎಂದೆನಿಸಿಕೊಂಡಿದ್ದು,ಬೊಯಿಂಗ್ ಮ್ಯಾಕ್ಸ್ ಐದು ತಿಂಗಳ ಅವಧಿಯಲ್ಲಿ ಎರಡು ಅಪಘಾತಗಳಲ್ಲಿ ಸಿಲುಕಿದೆ. ಕಾಕ್ ಪಿಟ್ ಡಿಸ್ಪ್ಲೇ ಯನ್ನು ರಾಕ್ ವೆಲ್ ಕಾಲಿನ್ಸ್ ಮಾಡಿದ್ದಾರೆ. ಇದು ಈಗ ಹನಿವೆಲ್ ಅಲ್ಲ ಬದಲಾಗಿ ಯುನೈಟೆಡ್ ಟೆಕ್ನಾಲಜೀಸ್ ನ ಒಂದು ಘಟಕವಾಗಿದೆ.

ಮೊಬೈಲ್ ಫೋನ್ ಗಳ ಸಂಖ್ಯೆ
ಎಫ್ಎಎ ಆರ್ಡರ್ ನಲ್ಲಿ ರೇಡಿಯಾ ಸಿಗ್ನಲ್ ಗಳ ಮೊತ್ತ ಮತ್ತು ಅದರಿಂದಾಗುವ ಸಮಸ್ಯೆಗಳ ಪ್ರಮಾಣದ ಬಗ್ಗೆ ಯಾವುದೇ ವರದಿಯನ್ನು ನೀಡಲಾಗಿಲ್ಲ. ಆದರೂ ನಿರ್ಧಿಷ್ಟ ಡಿಸ್ಪ್ಲೇ ಸಿಸ್ಟಮ್ ನಲ್ಲಿ ರೇಡಿಯೋ ಸಿಗ್ನಲ್ ಗಳಿಂದಾಗುವ ಭಯವನ್ನು ಎಫ್ಎಎ ಎಚ್ಚರಿಸಿದೆ.
ರೇಡಿಯೋ ಸಿಗ್ನಲ್ ಗಳನ್ನು ಹೊರಸೂಸುವ ಮೊಬೈಲ್ ಫೋನ್ ಗಳ ಸಂಖ್ಯೆ ಅಧಿಕವಾದಷ್ಟು ವಿಮಾನ ಹಾರಾಟದ ವ್ಯವಸ್ಥೆಯಲ್ಲಿ ಹಸ್ತಕ್ಷೇಪವಾಗುವ ಸಾಧ್ಯತೆ ಇದೆ ಎಂದು ಎಂಬ್ರಿ-ರಿಡಲ್ ಏರೋನಾಟಿಕಲ್ ವಿಶ್ವವಿದ್ಯಾಲಯದ ವಿದ್ಯುತ್, ಕಂಪ್ಯೂಟರ್,ಸಾಫ್ಟ್ ವೇರ್, ಮತ್ತು ಸಿಸ್ಟಮ್ಸ್ ನ ಎಂಜಿನಿಯರಿಂಗ್ ವಿಭಾಗದ ಅಧ್ಯಕ್ಷರೂ, ಪ್ರೊಫೆಸರ್ ಆಗಿರುವ ಟಿಮ್ ವಿಲ್ಸನ್ ಹೇಳಿದ್ದಾರೆ.
ಹೆಚ್ಚಿನ ಏರ್ ಲೈನ್ ಗಳು ತಮ್ಮ ಪ್ರಯಾಣಿಕರಿಗೆ ಏರ್ ಪ್ಲೇನ್ ಮೋಡ್ ನಲ್ಲಿ ಫೋನ್ ಗಳನ್ನು ಬಳಸುವುದಕ್ಕೆ ಅವಕಾಶ ನೀಡುತ್ತದೆ. ಇದು ವೈಫೈ ಟ್ರಾನ್ಸ್ ಮಿಷನ್ ಗೆ ಅವಕಾಶ ನೀಡುತ್ತದೆ. ಆದರೆ ಮೊಬೈಲ್ ಗಳು ಅತ್ಯಧಿಕ ಪವರ್ ಲೆವೆಲ್ ನಲ್ಲಿ ಆಪರೇಟ್ ಮಾಡುತ್ತವೆ ಎಂದು ವಿಲ್ಸನ್ ತಿಳಿಸಿದ್ದಾರೆ.ಸೆಲ್ ಟವರ್ ಗಳನ್ನು ತಲುಪುವುದಕ್ಕೆ ಸಿಗ್ನಲ್ ಗಳು ಪ್ರಯತ್ನಿಸುತ್ತವೆ ಕೇವಲ ಸ್ಥಳೀಯ ಆಂಟೆನಾ ಅಥವಾ ರೂಟರ್ ಅಲ್ಲ. ಹಾಗಾಗಿ ವಿಮಾನ ಪ್ರಯಾಣದಲ್ಲಿ ಇವು ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಪ್ರಾರಂಭಿಕವಾಗಿ ಹನಿವೆಲ್ ಸಂಸ್ಥೆ ಎಫ್ಎಎ ಗೆ ಜಗತ್ತಿನಾದ್ಯಂತ 10,100 ಡಿಸ್ಪ್ಲೇ ಯುನಿಟ್ ಗಳು ಅಥವಾ 1,700 ವಿಮಾನಗಳಲ್ಲಿರುವ ಇಕ್ವಿಪ್ಮೆಂಟ್ ಗಳು ಪರಿಣಾಮಕ್ಕೆ ಒಳಗಾಗಿರಬಹುದೆಂದು ಹೇಳಿತ್ತು. ಆ ಪರಿಣಾಮಗಳ ಪರಿಹಾರದ ಬಗ್ಗೆ ಈ ವಾರ ಕೇಳಿದಾಗ ಹನಿವೆಲ್ ಸಂಸ್ಥೆ 8,000 ಕಾಂಪೋನೆಂಟ್ಸ್ ಗಳನ್ನು ಬದಲಾವಣೆ ಮಾಡಿರುವ ಬಗ್ಗೆ ಹೇಳಿದೆ ಮತ್ತು 400 ಅಪ್ ಗ್ರೇಡಿಂಗ್ ಕೆಲಸಗಳು ಬಾಕಿ ಇರುವ ಬಗ್ಗೆ ತಿಳಿಸಿದೆ.

ಎವಿಯೇಷನ್ ಸೇಫ್ಟಿ
ಕಳೆದ ಮೂರು ವರ್ಷಗಳಲ್ಲಿ ಬೋಯಿಂಗ್ ಎನ್ ಜಿ ಅಥವಾ 777 ಜೆಟ್ ಗಳಲ್ಲಿ ಒಂದು ಡಝನ್ ಗೂ ಅಧಿಕ ಇದೇ ರೀತಿಯ ವಿಮಾನ ಮಾಹಿತಿ ಕಾಣೆಯಾಗುವ ಘಟನೆಗಳು ಸಂಭವಿಸಿವೆ ಎಂದು ಎಫ್ಎಎ ತಿಳಿಸಿದ್ದು ಇದಕ್ಕೆ ಸೆಲ್ ಫೋನ್ ಗಳು ಕಾರಣವೆಂದು ಹೇಳಿದೆ. ಈ ಸಂದರ್ಬದ ತೀವ್ರತೆಯನ್ನು ಅರಿತಿರುವ ಪೈಲೆಟ್ ಗಳು ಎವಿಯೇಷನ್ ಸೇಫ್ಟಿ ರಿಪೋರ್ಟಿಂಗ್ ಸಿಸ್ಟಮ್ ಅಥಾ ಎಎಸ್ಆರ್ಎಸ್ ಗೆ ತಮ್ಮ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ಈ ಸಂಸ್ಥೆ ನಾಸಾದಿಂದ ನಿರ್ವಹಿಸಲ್ಪಡುತ್ತದೆ.
ಕಳೆದ ಸೆಪ್ಟೆಂಬರ್ ನಲ್ಲಿ 737-700 ಫೈಲೆಟ್ ವಿವಿಧ ಹಾರಾಟದ ಸಮಯದಲ್ಲಿ ಸಿಗ್ನಲ್ ಆನ್ ಮತ್ತು ಆಫ್ ಆಗುವುದನ್ನು ಗಮನಿಸಿದರು ಮತ್ತು ವಿಭಿನ್ನ ಗಾಳಿಯ ವೇಗ,ಎತ್ತರದ ಪರಿಣಾಮದಿಂದಾಗಿ ವ್ಯತ್ಯಯವನ್ನು ಗುರುತಿಸಿದರು. ಕೆಲವು ತಾಂತ್ರಿಕವಾದ ಸಿಗ್ನಲ್ ಸಮಸ್ಯೆಯಿಂದಾಗಿ ವಿಮಾನವು ಹಾರಾಡುವುದರ ಬದಲಾಗಿ ನೆಲದ ಮೇಲೆ ಇರುವುದೇ ಸೂಕ್ತ ಎಂದು ಅವರು ಅಭಿಪ್ರಾಯ ಪಟ್ಟಿದ್ದರು.
2017ರ ಜನವರಿಯಲ್ಲಿ ಕೋಸ್ಟಾರಿಕಾದಿಂದ ಹೊರಟ್ಟಿದ್ದ 737 ವಿಮಾನದ ಪೈಲೆಟ್ ತಮ್ಮ ಎಲ್ಲಾ ನಕ್ಷೆಗಳನ್ನು ಮತ್ತು ವಿಮಾನದ ಬದಿಯ ಫ್ಲೈಟ್ ಮ್ಯಾನೇಜ್ ಮೆಂಟ್ ನ ಕಂಪ್ಯೂಟರ್ ಗಳನ್ನು ಪರ್ವತ ಭೂಪ್ರದೇಶದ ಒಂದು ನಿರ್ಣಾಯಕ ಹಂತದಲ್ಲಿ ಕಳೆದುಕೊಂಡರು ಎಂಬುದಾಗಿ ಎಎಸ್ಆರ್ಎಸ್ ನ ವರದಿಯಲ್ಲಿ ಹೇಳಲಾಗಿದೆ. ಕೆಟ್ಟ ವಾತಾವರಣದಿಂದ ಅಥವಾ ರಾತ್ರಿಯ ವೇಳೆಯಲ್ಲಿ ಈ ರೀತಿ ಮಾಹಿತಿ ಕಾಣೆಯಾಗುವುದು ವಿಮಾನಕ್ಕೆ ಕೆಟ್ಟ ಸಂದೇಶ ಎಂದು ಪೈಲೆಟ್ ಬರೆದುಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲೂ ಕೂಡ 737-800 ಜೆಟ್ ವಿಮಾನದಲ್ಲೂ ಕೂಡ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಮಾಹಿತಿ ಇದೆ. ಅದಾದ ನಂತರ ಪ್ಲೇನ್ ನ್ನು ಲ್ಯಾಂಡ್ ಮಾಡಲಾಗಿತ್ತು ಆದರೆ ಡಿಸ್ಪ್ಲೇ ಬ್ಲ್ಯಾಂಕ್ ಆಗಿರುವುದಕ್ಕೆ ವಿಮಾನದ ನಿರ್ವಹಣಾ ಅಧಿಕಾರಿಗಳು ಯಾವುದೇ ಕಾರಣವನ್ನು ಹುಡುಕುವುದರಲ್ಲಿ ವಿಫಲವಾಗಿದ್ದರು.
ನಾಸಾ ಈ ನಿಟ್ಟಿನಲ್ಲಿ ಅಧ್ಯಯನವನ್ನು ಕೈಗೊಂಡಿದ್ದು ಎಲ್ಲಾ ವಿವರಗಳನ್ನು ಏರ್ ಲೈನ್, ಪೈಲಟ್ಸ್ ಮತ್ತು ಯಾವ ಪ್ರದೇಶದಲ್ಲಿ ಡಿಸ್ಪ್ಲೇ ಕಾಣೆಯಾಯಿತು ಎಂಬಿತ್ಯಾದಿ ವಿವರಗಳೊಂದಿಗೆ ಸಂಶೋಧನೆ ಮುಂದುವರಿಸಿದೆ. ಅಧಿಕೃತ ಮಾಹಿತಿಗಳು ಇನ್ನು ಹೊರಬಿದ್ದಿಲ್ಲ. ಈ ರೀತಿಯ ಡಿಸ್ಪ್ಲೇ ಬ್ಲ್ಯಾಂಕ್ ಆಗುವಿಕೆಯಿಂದಾಗಿ ಯಾವುದೇ ದೊಡ್ಡ ವಿಮಾನ ಅಪಘಾತ ಇದುವರೆಗೂ ಸಂಭವಿಸಿಲ್ಲ. ಆದರೆ ಡಿಸ್ಪ್ಲೇ ಬ್ಲ್ಯಾಂಕ್ ಆಗುವ ಸಮಸ್ಯೆ ಮಾತ್ರ ಪದೇ ಪದೇ ಮರುಕಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವುದು ಸೂಕ್ತ.
ಎರಡು ವರ್ಷಗಳ ಹಿಂದೆ. 737-800 ನ ಪೈಲಟ್ ಬ್ಲಾಕಿಂಗ್ ಅಥವಾ ಸರಳವಾಗಿ ಕೆಲಸ ಮಾಡದ ಪರದೆಯ ಬಗ್ಗೆ ಹಲವಾರು ವರದಿಗಳನ್ನು ಮಾಡಿದ್ದಾರೆ.
ಒಟ್ಟಿನಲ್ಲಿ ವಿಮಾನ ಹಾರಾಟದ ಸಂದರ್ಬದಲ್ಲಿ ಡಿಸ್ಪ್ಲೇ ಬ್ಲ್ಯಾಂಕ್ ಆಗುವಿಕೆಯ ಹಿಂದೆ ಮೊಬೈಲ್ ತರಂಗಗಳ ಕಾರಣ ಸದ್ಯಕ್ಕೆ ಎದ್ದು ಕಾಣುತ್ತಿದೆ.ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳು ನಡೆದು ಸಮಸ್ಯೆಗೊಂದು ಶಾಶ್ವತ ಪರಿಹಾರ ದೊರೆತರೆ ಒಳ್ಳೆಯದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470