Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಅನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಂಡರೆ ಅಕಾಲಿಕ ಮರಣ ಸಾಧ್ಯತೆ!

ನೀವು ಬಳಸುವ ಸ್ಮಾರ್ಟ್‌ಫೋನ್ ನಿಮ್ಮ ಮೇಲೆ ಹಲವು ಕಟ್ಟ ಪರಿಣಾಮಗಳನ್ನು ಬೀರುತ್ತದೆ ಎಂಬುದು ನಿಮಗೆ ಗೊತ್ತು. ಆದರೆ, ಸ್ಮಾರ್ಟ್‌ಫೋನ್‌ಗಳನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಶೇ 20 ರಿಂದ 30ರಷ್ಟು ಪಾರ್ಶ್ವವಾಯು ಅಥವಾ ಅಕಾಲಿಕ ಮರಣದ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ ಎಂದರೆ ನಿಮಗೆ ಖಂಡಿತಾ ಶಾಕ್ ಆಗದೇ ಇರದು.

ಹೌದು, ಸ್ಮಾರ್ಟ್‌ಪೋನ್‌ಗ ಬಳಕೆ ಮಾನವನ ಆರೋಗ್ಯದಲ್ಲಿ ಭಾರೀ ಏರುಪೇರುಗೊಳಿಸುತ್ತಿದೆ. ಅದರಲ್ಲಂತೂ ಸ್ಮಾರ್ಟ್‌ಫೋನ್‌ ಅನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಂಡರೆ ಅಕಾಲಿಕ ಮರಣ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಸ್ಮಾರ್ಟ್‌ಪೋನಿನಿಂದ ಹೊರಹೊಮ್ಮುವ ತರಂಗಗಳು ಹೃದಯವನ್ನು ಸ್ಥಬ್ದ ಮಾಡುವಷ್ಟು ಸಾಮರ್ಥವನ್ನು ಹೊಂದಿದೆ ಎಂದಿವೆ.

ಸ್ಮಾರ್ಟ್‌ಫೋನ್‌ ಅನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಂಡರೆ ಅಕಾಲಿಕ ಮರಣ ಸಾಧ್ಯತೆ!

ಸ್ಮಾರ್ಟ್‌ಫೋನ್‌ ಕಂಪನಗಳು ಹೃದಯದ ಲಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ಸ್ಮಾರ್ಟ್‌ಫೋನ್‌ಗಳನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಳ್ಳುವುದನ್ನು ತಪ್ಪಿಸಿ ಎನ್ನುತ್ತಿವೆ ಅಧ್ಯಯನಗಳು. ಹಾಗಾದರೆ, ಸ್ಮಾರ್ಟ್‌ಫೋನ್‌ ನಿಮ್ಮ ಮೇಲೆ ಬೀರುತ್ತಿರುವ ಕೆಟ್ಟ ಪರಿಣಾಮಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಮಲಗುವಾಗ ಸ್ಮಾರ್ಟ್‌ಫೋನ್‌ ಬೇಡ!

ಮಲಗುವಾಗ ಸ್ಮಾರ್ಟ್‌ಫೋನ್‌ ಬೇಡ!

ರಾತ್ರಿ ಮಲಗುವಾಗ ಸ್ಮಾರ್ಟ್‌ಫೋನ್‌ ಅನ್ನು ತಲೆಯ ಹತ್ತಿರ ಇಟ್ಟುಕೊಳ್ಳುವ ಅಭ್ಯಾಸ ಇದೆಯೆ? ಖಂಡಿತವಾಗಿ, ಆ ಅಭ್ಯಾಸವನ್ನು ತಕ್ಷಣ ಬಿಟ್ಟುಬಿಡಿ. ಸ್ಮಾರ್ಟ್‌ಫೋನ್‌ ಅನ್ನು ತಲೆಯ ಹತ್ತಿರ ಇಟ್ಟುಕೊಳ್ಳುವುದರಿಂದ ಮೆದುಳು ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇನ್ನು ಸ್ಮಾರ್ಟ್‌ಪೋನ್ ಒಂದು ವಿಕಿರಣ ಸೂಸುವ ವಸ್ತುವಾಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದ, ಅದನ್ನು ತಲೆಯ ಹತ್ತಿರ ಇಟ್ಟುಕೊಂಡು ನಿದ್ದೆಹೋಗಬೇಡಿ.

ಕಣ್ಣುಗಳಿಗೆ ವಿಶ್ರಾಂತಿ ನೀಡಿ

ಕಣ್ಣುಗಳಿಗೆ ವಿಶ್ರಾಂತಿ ನೀಡಿ

ಸ್ಮಾರ್ಟ್‌ಫೋನನ್ನು ಜಾಸ್ತಿ ಬಳಸುವವರನ್ನು ಕಾಡುವ ಇನ್ನೊಂದು ಸಮಸ್ಯೆ ಎಂದರೆ, ಕಣ್ಣಿನ ಬಳಲಿಕೆ. ಈಗಿನ ಸ್ಮಾರ್ಟ್‌ಫೋನ್‌ಗಳ ಬೆಳಕಿನ ತೀವ್ರತೆ, ಪ್ರಖರತೆ ಜಾಸ್ತಿ. ಕಣ್ಣುಗಳನ್ನು ಕೀಲಿಸಿಕೊಂಡು ದೀರ್ಘ ಕಾಲ ಬಳಸುವುದರಿಂದ ಕಣ್ಣಿನ ನರಗಳು ದುರ್ಬಲವಾಗುತ್ತವೆ ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಆದ್ದರಿಂದ ಪದೇ ಪದೇ ಮತ್ತು ದೀರ್ಘಕಾಲ ಸ್ಮಾರ್ಟ್‌ಫೋನ್ ನೋಡುವವರು ಆಗಾಗ ಕಣ್ಣುಗಳಿಗೆ ವಿಶ್ರಾಂತಿ ನೀಡುವುದು ಅಗತ್ಯ.

ರೇಡಿಯೇಶನ್ ಬಗ್ಗೆ ಎಚ್ಚರವಿರಲಿ!

ರೇಡಿಯೇಶನ್ ಬಗ್ಗೆ ಎಚ್ಚರವಿರಲಿ!

ಕೆಲವು ಅಧ್ಯಯನಗಳ ಪ್ರಕಾರ ಮೊಬೈಲುಗಳಿಂದ ಹೊರಹೊಮ್ಮುವ ರೇಡಿಯೇಶನ್‌ ಮಕ್ಕಳ ಮೆದುಳಿನಲ್ಲಿ ವಯಸ್ಕ ಮೆದುಳಿಗೆ ಹೋಲಿಸಿದಾಗ ಶೇ.60ರಷ್ಟು ಬೇಗ ಗ್ರಹಿಸಲ್ಪಡುತ್ತದೆ ಎನ್ನಲಾಗಿದೆ. ಇದರಿಂದ ಮಕ್ಕಳ ಮಾನಸಿಕ ಆರೋಗ್ಯ ಹದಗಡುತ್ತಿರುವ ಉದಾಹರಣೆಗಳು ಇತ್ತೀಚೆಗೆ ಹೆಚ್ಚುತ್ತಿರುವುದನ್ನು ಮಾಧ್ಯಮಗಳಲ್ಲಿ ನೀವು ನೋಡಬಹುದು.

ಒತ್ತಡದ ಬದುಕಿನಿಂದ ಹೊರಬರಬೇಕೆ?

ಒತ್ತಡದ ಬದುಕಿನಿಂದ ಹೊರಬರಬೇಕೆ?

ಒತ್ತಡದ ಬದುಕಿನಿಂದ ಹೊರಬರಬೇಕೆ? ಹಾಗಿದ್ದರೆ ಸ್ಮಾರ್ಟ್‌ಫೋನ್‌ ದೂರವಿಡಿ. ಇಂತಹ ಒಂದು ಸರಳ ಸೂತ್ರದ ಸಲಹೆಯನ್ನು ಸಂಶೋಧಕರು ನೀಡಿದ್ದಾರೆ. ಅಧ್ಯಯನವೊಂದರ ಪ್ರಕಾರ ಹೆಚ್ಚು, ಹೆಚ್ಚು ಜನರು ಸ್ಮಾರ್ಟ್‌ಫೋನ್‌ ವ್ಯಸನಿಗಳಾಗಿ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ರೋಮ್ಯಾಂಟಿಕ್ ಸಮಯ

ರೋಮ್ಯಾಂಟಿಕ್ ಸಮಯ

ಸಂಬಂಧದಲ್ಲಿ ಸಂಗಾತಿಗಳು ಸ್ಮಾರ್ಟ್‌ಫೋನ್ ಪರಿಣಾಮಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಇತ್ತೀಚಿನ ಸಂಶೋಧನೆಗಳು ತೋರಿಸುತ್ತವೆ. ಸ್ಮಾರ್ಟ್‌ಫೋನಿನಿಂದಾಗಿ ಸಂಗಾತಿಗಳು ತಮ್ಮ ಜೀವನದಲ್ಲಿ ಅತೃಪ್ತರಾಗಿದ್ದಾರೆ. ಕೆಲವರು ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.

Best Mobiles in India

English summary
Is it safe to carry a cellphone in a handy shirt pocket all the time over your heart? to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+