ಮೈಕ್ರೋಸಾಫ್ಟ್ ಗೆ ಮಾರಾಟವಾಗಲಿದೆಯೇ ನೋಕಿಯಾ

Posted By: Varun
ಮೈಕ್ರೋಸಾಫ್ಟ್ ಗೆ ಮಾರಾಟವಾಗಲಿದೆಯೇ ನೋಕಿಯಾ
ಯಾವಾಗ ಸ್ಯಾಮ್ಸಂಗ್, ನೋಕಿಯಾ ಏಷಿಯಾದಲ್ಲಿ 11 ವರ್ಷಗಳಿಂದ ಸ್ಥಾಪಿಸಿಕೊಂಡಿದ್ದ ಚಕ್ರಾಧಿಪತ್ಯವನ್ನು ಅಂತ್ಯಗೊಳಿಸಿತೋ, ಆಗಲೇ ಯಾವುದಾದರೂ ದೈತ್ಯ ಕಂಪನಿ ನೋಕಿಯಾವನ್ನು ಖರೀದಿಮಾಡಲಿದೆ ಎಂಬ ಗುಮಾನಿ ನಮಗಿತ್ತು. ಈಗ ಅದು ನಿಜವಾಗುವ ಎಲ್ಲ ಲಕ್ಷಣಗಳಿವೆ.

ಹೌದು. ಫಿನ್ಲ್ಯಾಂಡ್ ನ ನೋಕಿಯಾವನ್ನು ಅಮೆರಿಕಾದ ದೈತ್ಯ ಮೈಕ್ರೋಸಾಫ್ಟ್ ಖರೀದಿ ಮಾಡಲಿದೆ ಎಂಬ ಸುದಿಯನ್ನು ಹೆಲ್ಸಿಂಕಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಹನ್ನೊಂದು ವರ್ಷಗಳಿಂದ ಮೊಬೈಲು ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಹೊಂದಿದ್ದ ನೋಕಿಯಾ, ಒಂದು ಮೂಲದ ಪ್ರಕಾರ ತನ್ನ ಲ್ಯಾಬಿನಲ್ಲಿ ದಿನಕ್ಕೊಂದು ಹೊಸ ಮೊಬೈಲ್ ಮಾಡಲ್ ಅನ್ನು ಉತ್ಪಾದನೆ ಮಾಡುತ್ತಿತ್ತಂತೆ!ಹಾಗಿದ್ದ ನೋಕಿಯಾಗೆ ಮೊದಲು ಏಟು ಬಿದ್ದಿದ್ದು ಕಡಿಮೆ ಬೆಲೆಯ ಚೀನೀ ಮೊಬೈಲುಗಳಿಂದ. ಕಡಿಮೆ ಬೆಲೆಗೆ ಹಲವಾರು ಫೀಚರುಗಳನ್ನು ಯಾವಾಗ ಅವುಗಳು ನೋಕಿಯಾದ ಬೆಲೆಗಿಂತಾ ಕಡಿಮೆಗೆ ಮಾರಾಟ ಮಾಡಲು ಶುರು ಮಾಡಿದವೋ ಆಗ ನಿಜವಾದ ಹೊಡೆತ ಶುರುವಾಯಿತು.

ಅದೇ ರೀತಿ ಹೈ ಎಂಡ್ ಸ್ಮಾರ್ಟ್ ಫೋನುಗಳ ಲೆಕ್ಕಕ್ಕೆ ಬಂದರೆ ಅದು ಆಂಡ್ರಾಯ್ಡ್ ತಂತ್ರಾಂಶವನ್ನು ಪ್ರಾರಂಭದಲ್ಲಿ ಕಡೆಗಣಿಸಿದ್ದೇ ಅದರ ಬಹುದೊಡ್ಡ ತಪ್ಪು ಎಂದು ಹೇಳಬಹುದು. ಒಂದು ಕಡೆ ಇತರೆ ಮೊಬೈಲ್ ಉತ್ಪಾದಕ ಕಂಪನಿಗಳು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನುಗಳನ್ನು ಹೊರತಂದರೆ ನೋಕಿಯಾ, ತನ್ನದೇ ಆದ ಸಿಮ್ಬಿಯನ್ ತಂತ್ರಾಂಶದ ಸ್ಮಾರ್ಟ್ ಫೋನ್ ಹಾಗು ವಿಂಡೋಸ್ ಆಧಾರಿತ ಫೋನುಗಳನ್ನು ಬಿಡತೊಡಗಿತು. ಹೀಗಾಗಿ ಅದು ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳಷ್ಟು ಖ್ಯಾತಿಗಳಿಸಲಿಲ್ಲ ಹಾಗು ಹೆಚ್ಚಾದ ಆಂಡ್ರಾಯ್ಡ್ ಆಪ್ ಗಳು ಇರುವುದರಿಂದ ಬಳಕೆದಾರರು ಆಂಡ್ರಾಯ್ಡ್ ಫೋನುಗಳಿಗೆ ಮೊರೆ ಹೋದರು.

ಇಷ್ಟೆಲ್ಲಾ ಅಂಶಗಳು ನೋಕಿಯಾದ ವ್ಯಾಪಾರದ ಮೇಲೆ ಪರಿಣಾಮ ಬೀರಿದವು. ಇದರಿಂದಾಗಿ ಕಂಪನಿಯ ಆರ್ಥಿಕ ಪರಿಸ್ಥಿತಿ ಹಾಗು ಶೇರು ಬೆಲೆ ಕುಸಿಯತೊಡಗಿದ್ದರಿಂದ ಈಗ ಸಂಕಷ್ಟದಲ್ಲಿ ಇರುವುದರಿಂದ ಮೈಕ್ರೋಸಾಫ್ಟ್ ನಂತಹ ಕಂಪನಿ ಇದನ್ನು ಕೊಂಡರೆ ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಲಿದೆ ಎಂದೇ ಹೇಳಬಹುದು.

ಮೈಕ್ರೋಸಾಫ್ಟ್ ನೋಕಿಯಾವನ್ನು ಖರೀದಿ ಮಾಡಿದರಷ್ಟೆನೇ ಅದು ಸ್ಮಾರ್ಟ್ ರೀತಿಯಲ್ಲಿ ಮುಂದುವರೆಯಲು ಸಾಧ್ಯ ಎಂಬ ಸ್ಥಿತಿ ಬಂದೊದಗಿದೆ.

ಮೈಕ್ರೋ ಸಾಫ್ಟ್ 46 ಬಿಲಿಯನ್ ನಷ್ಟು ಕಾಪು ಧನ ಹೊಂದಿದ್ದು, ನೋಕಿಯಾ ವನ್ನು ಖರೀದಿಸುವ ಎಲ್ಲ ಸಾಧ್ಯತೆಗಳಿವೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot