ಕೋಪ ಬೇಡ..! ನಿಮ್ಮ ಫೋನಿನಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲವೇ?: ಈ ಟ್ರಿಕ್ ಬಳಸಿ
ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಹಾಗೆಯೇ, ನೀವು ನೆಟ್‌ವರ್ಕ್ (Network) ಮತ್ತು ಇಂಟರ್ನೆಟ್ (Internet) ಸಮಸ್ಯೆಯ ಅನುಭವ ಆಗಿರುತ್ತದೆ. ಈ ಸಮಯದಲ್ಲಿ ನಿಮಗೆ ತಡೆಯಲಾರದ ಕೋಪ ಬರುತ್ತದೆ. ಹೌದು, ನಿಮ್ಮ ಮೊಬೈಲ್‌ನಲ್ಲಿ ನೆಟ್‌ವರ್ಕ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಇದು ಸಾಮಾನ್ಯ. ಈ ರೀತಿ ತೊಂದರೆ ಉಂಟಾಗಬಾರದು ಎಂದರೆ ಜಸ್ಟ್ ಈ ಟ್ರಿಕ್ ಫಾಲೋ ಮಾಡಿ. ನೀವು ಕರೆ ಮಾಡುವಾಗ, ನಿಮ್ಮವರೊಂದಿಗೆ ಮಾತನಾಡುವಾಗ ನೆಟ್‌ವರ್ಕ್ ಪದೇ ಪದೆ ಕೈಕೊಡಲ್ಲ. ಬನ್ನಿ, ಈ ಉತ್ತಮ ನೆಟ್‌ವರ್ಕ್ ಪಡೆಯಲು ಯಾವ ತಂತ್ರಗಳನ್ನು ಬಳಸಬೇಕು ಎಂಬುವುದನ್ನು ತಿಳಿಯೋಣ.
ಪ್ರಸ್ತುತ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳಷ್ಟೇ (Smartphones) ಇಂಟರ್ನೆಟ್ ಸಹ ಮುಖ್ಯವಾಗಿದೆ. ಇವೆರಡೂ ಇಲ್ಲದೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಮೊಬೈಲ್‌ಗಳು (mobile) ಮತ್ತು ಇಂಟರ್ನೆಟ್ ಇಲ್ಲದಿದ್ದರೆ, ನಿಮ್ಮ ಪ್ರಮುಖ ಕೆಲಸಗಳು ನಡೆಯುವುದೇ ಇಲ್ಲ. ಹೆಚ್ಚಿನದಾಗಿ ಆ ಕೆಲಸವೇ ಕಳೆದುಹೋಗುತ್ತದೆ. ಸದ್ಯ, ನಿಮ್ಮ ದೈನಂದಿನ ಕೆಲಸಗಳು ನಿಮ್ಮ ಅಂಗೈಯಲ್ಲಿರುವ ಫೋನ್‌ಗಳನ್ನೇ ಅವಲಂಬಿಸಿವೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಫೋನಿನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೆ, ಅದಕ್ಕಿಂತ ದೊಡ್ಡ ಸಮಸ್ಯೆ ಬೇರೆ ಯಾವುದೂ ಇಲ್ಲ. ದುರ್ಬಲ ನೆಟ್‌ವರ್ಕ್‌ನಿಂದಾಗಿ ನಿಮಗೆ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗಲ್ಲ.

ಹೌದು, ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಫೋನ್ ಡೇಟಾವನ್ನು ಬಳಸಲು ಸಾಧ್ಯವಾಗುವುದಿಲ್ಲ. ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್, ವೊಡಾಫೋನ್ ಐಡಿಯಾ ಬಳಕೆದಾರರು ಕೆಲವೊಮ್ಮೆ ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿಮ್ಮ ಫೋನ್ ಎಷ್ಟೇ ಪ್ರೀಮಿಯಂ ಆಗಿದ್ದರೂ ಅಥವಾ ಎಷ್ಟೇ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ನೆಟ್‌ವರ್ಕ್ ಇಲ್ಲದೆ ಅದು ನಿಷ್ಪ್ರಯೋಜಕವಾಗುತ್ತದೆ. ಹೀಗಾಗಿ, ನೀವು ಬಳಸುತ್ತಿರುವ ಯಾವುದೇ ಸಿಮ್ ಸಂಪೂರ್ಣ ನೆಟ್‌ವರ್ಕ್ ಪಡೆಯಲು ಈ ಕೆಳಗಿನ ಪ್ರಮುಖ ಟ್ರಿಕ್‌ಗಳನ್ನು ಫಾಲೋ ಮಾಡಿ. ಈ ಮೂಲಕ ನೆಟ್‌ವರ್ಕ್ ಕಿರಿಕಿರಿಯಿಂದ ಪಾರಾಗಬಹುದು.
ನೆಟ್‌ವರ್ಕ್ 'ಕೈ' ಕೊಟ್ಟರೆ ಕೂಡಲೇ ಹೀಗೆ ಮಾಡಿ
* ಕರೆ ಮಾಡುವಾಗ ನೆಟ್‌ವರ್ಕ್ ಪದೇ ಪದೆ ಕಡಿತಗೊಂಡರೆ, ನಿಮ್ಮ ಫೋನನ್ನು ಒಮ್ಮೆ ಏರ್‌ಪ್ಲೇನ್ ಮೋಡ್ ಅಥವಾ ಫ್ಲೈಟ್ ಮೋಡ್‌ಗೆ ಹಾಕಿ. ಸ್ವಲ್ಪ ಸಮಯದ ಬಳಿಕ ಅದನ್ನು (ಏರ್‌ಪ್ಲೇನ್ ಮೋಡ್ / ಫ್ಲೈಟ್ ಮೋಡ್) ಆನ್ ಮಾಡಿ.
* ಕೆಲವೊಮ್ಮೆ ಸ್ಮಾರ್ಟ್‌ಫೋನ್ ಅನ್ನು ದೀರ್ಘಕಾಲ ಬಳಸುವುದರಿಂದ ನೆಟ್‌ವರ್ಕ್ ಸಮಸ್ಯೆಗಳು ಉಂಟಾಗಬಹುದು. ನೀವು ಹಲವು ದಿನಗಳಿಂದ ಮೊಬೈಲ್ ಆಫ್ ಮಾಡದಿದ್ದರೆ, ಒಮ್ಮೆ ಅದನ್ನು ಸ್ವಿಚ್ ಆಫ್ ಮಾಡುವುದು ಉತ್ತಮ.
* ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸ್ವಿಚ್ ಆಫ್ ಮಾಡಿದಾಗ ಅಥವಾ ಪುನಃ ಪ್ರಾರಂಭಿಸಿದಾಗ ಈ ಸಮಸ್ಯೆಯನ್ನು ಪರಿಹರಿಸದಿದ್ದರೆ, ತಕ್ಷಣ ಸೆಟ್ಟಿಂಗ್‌ಗಳಿಗೆ ಹೋಗಬೇಕು. ಬಳಿಕ ಮೊಬೈಲ್ ನೆಟ್‌ವರ್ಕ್‌ಗಳಿಗೆ ಹೋಗಿ ಮತ್ತು ನೆಟ್‌ವರ್ಕ್ ಆಯ್ಕೆಯನ್ನು ಬದಲಾಯಿಸಲು ಪ್ರಯತ್ನಿಸಬೇಕು.
* ಈ ಮೇಲೆ ತಿಳಿಸಿದ ಸಲಹೆಗಳಿಂದ ನೆಟ್‌ವರ್ಕ್ ಕವರೇಜ್ ಸಮಸ್ಯೆ ಬಗೆಹರಿಯದಿದ್ದರೆ, ಗೊಂದಲಕ್ಕೀಡಾಗಬೇಡಿ. ಒಮ್ಮೆ ನೀವು ಫೋನಿನಲ್ಲಿರುವ ಸಿಮ್ ಕಾರ್ಡ್ ಅನ್ನು ತೆಗೆಯಿರಿ. ಆ ಸಿಮ್ ಕಾರ್ಡ್ ಅನ್ನು ಹತ್ತಿ ಬಟ್ಟೆಯಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಬಳಿಕ ಸಿಮ್ ಅನ್ನು ಫೋನಿನ ಒಳಗೆ ಹಾಕಬೇಕು.
* ನೀವು ಫೋನಿನಲ್ಲಿ ಸಮಯಕ್ಕೆ ಸರಿಯಾಗಿ ಸಾಫ್ಟ್‌ವೇರ್ ಅಪ್ಡೇಟ್ ಮಾಡಿರುವುದಿಲ್ಲ. ಈ ಕಾರಣದಿಂದಾಗಿ ನೆಟ್‌ವರ್ಕ್ ಸಮಸ್ಯೆಗಳು ಉಂಟಾಗುತ್ತವೆ. ನಿಮ್ಮ ಮೊಬೈಲ್ ಅನ್ನು ನೀವು ಅಪ್ಡೇಟ್ ಮಾಡದಿಡ್ಡರೆ, ಕೂಡಲೇ ಅದನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿ.
* ನೆಟ್‌ವರ್ಕ್ ಅಥವಾ ಇಂಟರ್ನೆಟ್ ಕೊರತೆಗೆ ಮೊಬೈಲ್ ಕವರೇಜ್ ಸಹ ಕಾರಣವಾಗಬಹುದು. ನೀವು ಫೋನಿಗೆ ಹಾಕಿರುವ ಕವರ್ ಕೂಡ ಸಿಗ್ನಲ್‌ಗೆ ಅಡ್ಡಿಪಡಿಸುತ್ತದೆ. ಕಳಪೆ ನೆಟ್‌ವರ್ಕ್ ಕವರೇಜ್ ಇರುವ ಪ್ರದೇಶದಲ್ಲಿ ನಿಮ್ಮ ಮೊಬೈಲ್ ಕವರ್ ತೆಗೆದುಹಾಕಿ.
* ಮನೆಯಲ್ಲಿ ಉತ್ತಮ ಸಿಗ್ನಲ್ ಪಡೆಯಲು ನೆಟ್‌ವರ್ಕ್ ರಿಸೀವರ್ ಖರೀದಿಸುವುದು ಉತ್ತಮ. ನೀವು ಪ್ರಯಾಣ ಮಾಡುವಾಗ ರಿಸೀವರ್ ನಿಂದ ಹೆಚ್ಚಿನ ಪ್ರಯೋಜನವಾಗದಿರಬಹುದು. ಆದರೆ, ಒಳಾಂಗಣದಲ್ಲಿ ನೆಟ್‌ವರ್ಕ್ ಉತ್ತಮವಾಗಿ ಸ್ವೀಕರಿಸಲು ಸಾಧ್ಯವಾಗದಿದ್ದರೆ, ನೆಟ್‌ವರ್ಕ್ ರಿಸೀವರ್ ತುಂಬಾ ಉಪಯುಕ್ತವಾಗಲಿದೆ.


Click it and Unblock the Notifications








