ಆಪಲ್ ಐಪ್ಯಾಡ್ ಖರೀದಿಸುವ ಆಸೆ ನಿಮಗಿದೆಯೇ?..ಈಗ ನೀವು ಖರೀದಿಸಬಹುದು!!

|

ಆಪಲ್ ಕಂಪೆನಿಯ ಐಫೋನ್, ಐಪ್ಯಾಡ್ ಅಥವಾ ಲ್ಯಾಪ್‌ಟಾಪ್ ಖರೀದಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಇತರೆ ಸಂಸ್ಥೆಗಳ ಉತ್ಪನ್ನಗಳಿಗೆ ಹೋಲಿಸಿದರೆ ಸ್ಟೀವ್ಸ್ ಜಾಬ್ಸ್ ಅವರ್ 'ಆಪಲ್'ಗಳು ತುಂಬಾ ದುಬಾರಿ ಆಗಿರುವುದರಿಂದ ಆಪಲ್ ಉತ್ಪನ್ನಗಳನ್ನು ಖರೀದಿಸುವ ಆಸೆಯನ್ನು ಬಹುತೇಕರು ಬಿಟ್ಟಿರುತ್ತಾರೆ.

ಆದರೆ, ಈಗ ಮೊದಲಿನ ಪರಿಸ್ಥಿತಿಯಂತಿಲ್ಲ. ಹೊಸ ರೂಪದಲ್ಲಿ, ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುವ ಆಪಲ್ ಸಂಸ್ಥೆ ಕೆಲವು ಉತ್ಪನ್ನಗಳು ಈಗ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿವೆ. ಈಗಲೂ ಖ್ಯಾತಿ ಕುಗ್ಗಿಲ್ಲದ ಆಪಲ್ ಐಪ್ಯಾಡ್‌ಗಳು ಇತರೆ ಸರಿಸಮಾನ ಡಿವೈಸ್‌ಗಳಿಗಿಂತಲೂ ಖರೀದಿಸಲು ಯೋಗ್ಯವಾದ ಸಾಧನಗಳಾಗಿವೆ.

ಆಪಲ್ ಐಪ್ಯಾಡ್ ಖರೀದಿಸುವ ಆಸೆ ನಿಮಗಿದೆಯೇ?..ಈಗ ನೀವು ಖರೀದಿಸಬಹುದು!!

'ಐಪ್ಯಾಡ್ ಮಿನಿ 4', ಐಪ್ಯಾಡ್ ಪ್ರೊ 12.9 ನಂತಹ ಐಪ್ಯಾಡ್ ಸಾಧನಗಳಿಗೆ ಈಗಲೂ ಬಹುಬೇಡಿಕೆಯನ್ನು ನೀಡವು ಕಾಣಬಹುದದಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ತಂತ್ರಜ್ಞಾನ ಪ್ರಿಯರ ನೆಚ್ಚಿನ ಸಾಧನ ಆಪಲ್ ಐಪ್ಯಾಡ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಅವುಗಳ ಫೀಚರ್ಸ್, ಬೆಲೆ ಪಟ್ಟಿಯನ್ನು ನಾವು ನೀಡುತ್ತಿದ್ದೇವೆ.

‘ಐಪ್ಯಾಡ್ ಮಿನಿ 4’!!

‘ಐಪ್ಯಾಡ್ ಮಿನಿ 4’!!

7.9 ಇಂಚಿನ ಡಿಸ್‌ಪ್ಲೇ ಹೊಂದಿರುವ ಐಪ್ಯಾಡ್ ಮಿನಿ 4 ಕಡಿಮೆ ಗಾತ್ರದ ಮತ್ತು ನಾಜೂಕಾಗಿ ಇರುವಂತಹ ಟ್ಯಾಬ್ ಬಯಸುವವರಿಗೆ ಸೂಕ್ತ ಸಾಧನವಾಗಿದೆ. ಇದರಲ್ಲಿ ‘ಎ-8' ಪ್ರೊಸೆಸರ್ ಅಳವಡಿಸಲಾಗಿದ್ದು, ಹಿಂಬದಿ 8 ಮತ್ತು ಮುಂಬದಿ 1.2 ಮೆಗಾಪಿಕ್ಸಲ್ ಕ್ಯಾಮರಾಗಳಿವೆ. ಒಮ್ಮೆ ಚಾರ್ಜ್ ಮಾಡಿದರೆ 10 ಗಂಟೆ ಕೆಲಸ ಮಾಡುವ ಸಾಮರ್ಥ್ಯವನ್ನು ಈ ಐಪ್ಯಾಡ್ ಮಿನಿ 4 ಹೊಂದಿದೆ.

‘ಐಪ್ಯಾಡ್ ಮಿನಿ 4’ ಬೆಲೆ?

‘ಐಪ್ಯಾಡ್ ಮಿನಿ 4’ ಬೆಲೆ?

ಐಪ್ಯಾಡ್ ಮಿನಿ 4 ಎರಡು ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. 128 ಜಿಬಿ ಮತ್ತು ವೈಫೈ ಸೌಲಭ್ಯ ಬೆಲೆ 33,800 ರೂಪಾಯಿಗಳಾಗಿದ್ದರೆ, 128 ಜಿಬಿ, ವೈಫೈ ಸೌಲಭ್ಯ ಮತ್ತು ಸಿಮ್ ಅಳವಡಿಸಬಹುದಾದ ಐಪ್ಯಾಡ್ ಮಿನಿ 4 ಸಾಧನದ ಬೆಲೆ 44,500 ರೂಪಾಯಿಗಳಾಗಿವೆ. ಹಾಗಾದರೆ, ಇನ್ನೇಕೆ ತಡ?

‘ಐಪ್ಯಾಡ್ ಪ್ರೊ 12.9’!!

‘ಐಪ್ಯಾಡ್ ಪ್ರೊ 12.9’!!

ಕಚೇರಿ ಕೆಲಸಗಳಿಗಾಗಿ ಬಳಸುವ ಹೈಎಂಡ್ ಕಂಪ್ಯೂಟರ್ ಮತ್ತು ಐ ಮ್ಯಾಕ್ ರೀತಿಯಲ್ಲಿಯೇ ಕೆಲಸ ಮಾಡುವ ಐಪ್ಯಾಡ್ ಪ್ರೊ 12.9 ಖರೀದಿಗೆ ಉತ್ತಮವಾದ ಸಾಧನವಾಗಿದೆ. 12.9' 12.9 ಇಂಚು ಡಿಸ್‌ಪ್ಲೇ, ‘ಎ10ಎಕ್ಸ್' ಪ್ರೊಸೆಸರ್ ಅನ್ನು ಹೊಂದಿದೆ. ಮಲ್ಟಿಟಾಸ್ಕಿಂಗ್ ಸೌಲಭ್ಯವೂ ಇರುವ ಈ ಸಾಧನದಲ್ಲಿ ಎರಡು ಅಥವಾ ಮೂರು ಅಪ್ಲಿಕೇಷನ್‌ಗಳನ್ನು ಒಮ್ಮೆಗೆ ಬಳಸಬಹುದು. ಹಿಂಬದಿ 12, ಮುಂದೆ 7 ಮೆಗಾಪಿಕ್ಸಲ್ ಕ್ಯಾಮೆರಾಳನ್ನು ಹೊಂದಿರುವ ಈ ಲ್ಯಾಪ್‌ಟಾಪ್ ಅನ್ನು ಕಿಬೋರ್ಡ್ ಜೋಡಿಸಿ ಲ್ಯಾಪ್ ಟಾಪ್ ರೀತಿ ಬಳಸಿಕೊಳ್ಳಬಹುದು.

‘ಐಪ್ಯಾಡ್ ಪ್ರೊ 12.9'  ಬೆಲೆ?

‘ಐಪ್ಯಾಡ್ ಪ್ರೊ 12.9' ಬೆಲೆ?

ಐಪ್ಯಾಡ್ ಪ್ರೊ 12.9 ಆರು ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. 64ಜಿಬಿ ವೈ-ಫೈ ಮಾದರಿಯ ಐಪ್ಯಾಡ್ ಪ್ರೊ 12.9 ಬೆಲೆ 63,500 ರೂಪಾಯಿಗಳಾಗಿದೆ, ಇದೇ ರೀತಿಯಲ್ಲಿ, 246ಬಿಬಿ ವೈ-ಫೈ ಮಾದರಿ ಸಾಧನದ ಬೆಲೆ 76,200 ರೂ, 512 ಬಿಬಿ ವೈ-ಫೈ ಮಾದರಿ ಸಾಧನದ ಬೆಲೆ ರೂ. 93,200, 64 ಬಿಬಿ ವೈ-ಫೈ ಸಿಮ್ ಸಪೋರ್ಟ್ ಸಾಧನದ ಬೆಲೆ 74,100 ರೂ. 256 ಬಿಬಿ, ವೈ-ಫೈ ಸಿಮ್ ಸಪೋರ್ಟ್ ಸಾಧನದ ಬೆಲೆ 86,800 ರೂ ಹಾಗೂ 512 ಬಿಬಿ ವೈ-ಫೈ ಸಿಮ್ ಸಪೋರ್ಟ್ ಸಾಧನದ ಬೆಲೆ 1,03,800 ರೂಪಾಯಿಗಳಾಗಿವೆ.

'ಐಪ್ಯಾಡ್ ಪ್ರೊ 10.5'!!

'ಐಪ್ಯಾಡ್ ಪ್ರೊ 10.5'!!

ಐಪ್ಯಾಡ್ ಪ್ರೊ 12.9 ಗಿಂತ ಸ್ವಲ್ಪ ಚಿಕ್ಕದಾದ ಈ 'ಐಪ್ಯಾಡ್ ಪ್ರೊ 10.5' ಗ್ಯಾಜೆಟ್ 10.5 ಇಂಚಿನ ಡಿಸ್‌ಪ್ಲೇ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 10 ಗಂಟೆ ಕೆಲಸ ಮಾಡುವ ಇದರಲ್ಲಿ ಫೋಟೊ ಎಡಿಟಿಂಗ್, ವಿಡಿಯೊ ಎಡಿಟಿಂಗ್ ಮಾಡುವುದು ಸುಲಭ. ಇನ್ನು ಎ10ಎಕ್ಸ್ ಪ್ರೊಸೆಸರ್ ಅನ್ನು ಈ 'ಐಪ್ಯಾಡ್ ಪ್ರೊ 10.5' ಸಾಧನದಲ್ಲಿ ಬಳಸಲಾಗಿದೆ.

'ಐಪ್ಯಾಡ್ ಪ್ರೊ 10.5 ಬೆಲೆ?

'ಐಪ್ಯಾಡ್ ಪ್ರೊ 10.5 ಬೆಲೆ?

'ಐಪ್ಯಾಡ್ ಪ್ರೊ 10.5' ಆರು ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. 64ಜಿಬಿ ವೈ-ಫೈ ಮಾದರಿಯ ಐಪ್ಯಾಡ್ ಪ್ರೊ 10.5' ಬೆಲೆ 50,800 ರೂಪಾಯಿಗಳಾಗಿವೆ. ಇದೇ ರೀತಿಯಲ್ಲಿ,256 ಜಿಬಿ ವೈ-ಫೈ ಮಾದರಿ ಸಾಧನದ ಬೆಲೆ 63,500 ರೂ, 512 ಜಿಬಿ ವೈ-ಫೈ ಮಾದರಿ ಸಾಧನದ ಬೆಲೆ 80,500 ರೂ, 64 ಬಿಬಿ ವೈ-ಫೈ ಸಿಮ್ ಸಪೋರ್ಟ್ ಮಾದರಿ ಸಾಧನದ ಬೆಲೆ 61,400ರೂ, 256 ಬಿಬ ವೈ-ಫೈ ಸಿಮ್ ಸಪೋರ್ಟ್ ಸಾಧನದ ಬೆಲೆ 74,100 ರೂ, 512 ಬಿಬಿ, ವೈ-ಫೈ ಸಿಮ್ ಸಪೋರ್ಟ್ ಸಾಧನದ ಬೆಲೆ 91,100 ರೂಪಾಯಿಗಳಾಗಿವೆ.

How to Send Message to Multiple Contacts on WhatsApp - GIZBOT KANNADA
ಐಪ್ಯಾಡ್ (2018)

ಐಪ್ಯಾಡ್ (2018)

ಇತ್ತೀಚಿಗಷ್ಟೆ ದೇಶದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಆಪಲ್ ಸಂಸ್ಥೆಯ ಮೊದಲ ಸಾಧನ ಐಪ್ಯಾಡ್ (2018) ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿದೆ.ಕಳೆದ ವರ್ಷ ಹೈ ಎಂಡ್ ಮಾದರಿಯಲ್ಲಿ ತಂತ್ರಜ್ಞಾನ ಪ್ರಿಯರ ಗಮನ ಸೆಳೆದ ‘ಐ ಪ್ಯಾಡ್ ಪ್ರೊ'ನ ಸಹೋದರನಂತಿರುವ ಐಪ್ಯಾಡ್ (2018) ಸಾಧನದಲ್ಲಿ 9.7 ಇಂಚಿನ ಡಿಸ್‌ಪ್ಲೇ ನೀಡಲಾಗಿದೆ. ಎ-10 ಪ್ರೊಸೆಸರ್ ಒಳಗೊಂಡಿರುವ ಈ ಸಾಧನ ಮಿಂಚಿನ ವೇಗದಲ್ಲಿ ಕೆಲಸ ಮಾಡುತ್ತದೆ.

ಐಪ್ಯಾಡ್ (2018) ಬೆಲೆ?

ಐಪ್ಯಾಡ್ (2018) ಬೆಲೆ?

ಐಪ್ಯಾಡ್ (2018) ನಾಲ್ಕು ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. 32 ಜಿಬಿ ವೈ-ಫೈ ಮಾದರಿಯ ಐಪ್ಯಾಡ್ (2018) ಬೆಲೆ 28,900 ರೂಪಾಯಿಗಳಾಗಿವೆ. 128 ಜಿಬಿ ವೈ-ಫೈ ಮಾದರಿ ಸಾಧನದ ಬೆಲೆ 35,700 ರೂ, 32 ಬಿಬಿ ವೈ-ಫೈ ಸಿಮ್ ಸಪೋರ್ಟ್ ಮಾದರಿ ಸಾಧನದ ಬೆಲೆ 38,000 ರೂ, ಹಾಗೂ 128 ಬಿಬಿ ವೈ-ಫೈ ಸಿಮ್ ಸಪೋರ್ಟ್ ಮಾದರಿ ಸಾಧನದ ಬೆಲೆ 46,300 ರೂಪಾಯಿಗಳಾಗಿವೆ.

Best Mobiles in India

English summary
Apple is known for sticking to fairly rigid release schedules, which leads many to believe there are rightand wrong times to buy Apple products. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X