ನಿಮ್ಮ ಮೊಬೈಲ್ ಯಾಕೋ ಸ್ಲೋ ಆಗಿ ವರ್ಕ್ ಆಗ್ತಾ ಇದೆ ಅನಿಸ್ತಾ ಇದೀಯಾ? ಕೂಡಲೇ ಈ ಕೆಲಸ ಮಾಡಿರಿ!
ಸ್ಮಾರ್ಟ್‌ಫೋನ್ ಖರೀದಿಸಿದ ಹೊಸದರಲ್ಲಿ ಸ್ಪೀಡ್ ಆಗಿ ವರ್ಕ್ ಆಗ್ತಿದ್ದ ಫೋನ್ ಏಕಾಏಕಿ ಸ್ಲೋ ಆಗಿ ವರ್ಕ್ ಆಗ್ತಾ ಇದೀಯಾ. ಅರೆ ಫೋನ್ ಅನ್ನು ಸಾಕಷ್ಟು ಸೇಫ್ ಆಗಿ ಯೂಸ್ ಮಾಡ್ತಾ ಇದ್ದೀನಿ, ಆದ್ರು ಯಾಕೆ ನನ್ ಫೋನ್ ಈ ತರ ಆಗ್ತೀದೆ ಅನ್ನೋ ಕನ್ಫೂಸ್ ಎಲ್ಲರಲ್ಲೂ ಇರುತ್ತದೆ. ಈ ಅನುಭವ ನಿಮಗೂ ಕೂಡ ಆಗಿದ್ದರೆ ಅಚ್ಚರಿ ಏನಿಲ್ಲ.
ಹೌದು, ಸ್ಮಾರ್ಟ್‌ಫೋನ್ ಕಾರ್ಯವೈಖರಿ ದಿನಕಳೆದಂತೆ ಸ್ಲೋ ಆಗೋದಕ್ಕೆ ಹಲವು ಕಾರಣಗಳಿರುತ್ತವೆ. ಇದರಲ್ಲಿ ನಾವು ಮಾಡಿಕೊಳ್ಳುವ ಎಡವಟ್ಟುಗಳದ್ದೇ ಅಗ್ರಸ್ಥಾನ ಇರಲಿದೆ. ಫೋನ್‌ನಲ್ಲಿ ಸ್ಟೋರೇಜ್ ಇದೆ ಅಂತಾ ಹೇಳಿ ಇಲ್ಲ ಸಲ್ಲದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಕೂಡ ಒಂದು ಕಾರಣವಾಗಿದೆ. ಇದಿಷ್ಟೇ ಅಲ್ಲ ಸ್ಮಾರ್ಟ್‌ಫೋನ್ ಕಾರ್ಯವೈಖರಿ ಸ್ಲೋ ಆಗೋದಕ್ಕೆ ಅನೇಕ ಕಾರಣಗಳಿವೆ. ಅವುಗಳೆಲ್ಲದರ ಕಂಪ್ಲೀಟ್ ಡಿಟೇಲ್ಸ್ ಅನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್‌ನಲ್ಲಿ ಹೋಮ್ ಸ್ಕ್ರೀನ್ ಸೆಟ್ಟಿಂಗ್ಸ್‌ಚೇಂಜ್ ಮಾಡಿರಿ
ನಿಮ್ಮ ಮೊಬೈಲ್ ಸ್ಪೀಡ್ ಆಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಬ್ರೇಕ್ ಹಾಕುವುದು ಹೋಮ್ ಸ್ಕ್ರೀನ್ ಸೆಟ್ಟಿಂಗ್ಸ್ ಅಂತಾ ಹೇಳಬಹುದು. ಹೋಮ್ ಸ್ಕ್ರೀನ್ ತುಂಬಾ ಅಪ್ಲಿಕೇಶನ್‌ಗಳು ತುಂಬಿಕೊಂಡಿದ್ದರೆ ನಿಮ್ಮ ಮೊಬೈಲ್ ಸ್ಪೀಡ್ ಆಗಿ ಕಾರ್ಯನಿರ್ವಹಿಸುವುದನ್ನು ಕಡಿಮೆ ಮಾಡಲಿದೆ. ಏಕೆಂದರೆ ಹೋಮ್ ಸ್ಕ್ರೀನ್‌ನಲ್ಲಿ ಬೇರೆ ಬೇರೆ ಅಪ್ಲಿಕೇಶನ್‌ಗಳು ಏಕಕಾಲದಲ್ಲಿ ಒಪನ್ ಆಗಿದ್ದರೆ ಮೊಬೈಲ್ ಹ್ಯಾಂಗ್ ಆಗುವ ಸಾಧ್ಯತೆ ಇರಲಿದೆ. ಆದರಿಂದ ನಿಮ್ಮ ಮೊಬೈಲ್ ಹೋಮ್ ಸ್ಕ್ರೀನ್ ಸೆಟ್ಟಿಂಗ್ಸ್ ಅನ್ನು ಆಗಾಗ ಬದಲಾಯಿಸಿ.
ಮೊಬೈಲ್ ಅಪ್ಡೇಟ್ ಮಾಡೋದು ಮರೆಯಬೇಡಿ
ನಿಮ್ಮ ಮೊಬೈಲ್ ಸಾಫ್ಟ್‌ವೇರ್ ಅಪ್ಡೇಟ್ ಮಾಡಿದಾಗ ನಿರ್ಲಕ್ಷ್ಯ ಮಾಡದೇ ಕೂಡಲೇ ಅಪ್ಡೇಟ್ ಮಾಡಿರಿ. ಅಪ್ಡೇಟ್ ಮಾಡುವ ಮುನ್ನ ಮೊಬೈಲ್ ಚಾರ್ಜಿಂಗ್ ಬಗ್ಗೆ ಕೂಡ ಸ್ವಲ್ಪ ಗಮನವಹಿಸಿರಿ. ಕಾಲಕಾಲಕ್ಕೆ ಅಪ್ಡೇಟ್‌ಗಳನ್ನು ಮಾಡುತ್ತಾ ಹೋದರೆ ಸ್ಮಾರ್ಟ್‌ಫೋನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಆಗಾಗ ನಿಮ್ಮ ಮೊಬೈಲ್‌ನಲ್ಲಿ ಸೆಟ್ಟಿಂಗ್ಸ್ > ಸಿಸ್ಟಮ್ > ಅಬೌಂಟ್ ಫೋನ್ > ಸಿಸ್ಟಮ್ ಅಪ್‌ಡೇಟ್ ಅನ್ನು ನೋಡುತ್ತಾ ಇರಿ.
ಅವಶ್ಯಕತೆ ಇಲ್ಲದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ
ನಿಮ್ಮ ಮೊಬೈಲ್ ನಿಧಾನವಾಗಿ ಕಾರ್ಯನಿರ್ವಹಿಸುವುದಕ್ಕೆ ಮುಖ್ಯ ಕಾರಣ ಅಂದರೆ ಅದರಲ್ಲಿರುವ ಅಪ್ಲಿಕೇಶನ್‌ಗಳ ಸಂಖ್ಯೆ ಅಂತಾ ಸುಲಭವಾಗಿ ಹೇಳಿಬಿಡಬಹುದು. ಅಷ್ಟರ ಮಟ್ಟಿಗೆ ಮೊಬೈಲ್ ಅಪ್ಲಿಕೇಶನ್‌ಗಳು ಸ್ಮಾರ್ಟ್‌ಫೋನ್ ಸ್ಪೀಡ್ ಅನ್ನು ತಗ್ಗಿಸಿಬಿಡುತ್ತವೆ. ಆದರಿಂದ ನಿಮ್ಮ ಮೊಬೈಲ್‌ನಲ್ಲಿ ನಿಮಗೆ ಉಪಯೋಗವಿಲ್ಲದ ಅಪ್ಲಿಕೇಶನ್‌ಗಳಿದ್ದರೆ ಡಿಲೀಟ್ ಮಾಡಿಬಿದಿ. ಇದರಿಂದ ನಿಮ್ಮ ಫೋನ್ ಸ್ಟೋರೇಜ್ ಸ್ಪೇಸ್ ಉಳಿಯಲಿದ್ದು ಮೊಬೈಲ್ ಕೂಡೆ ಎಂದಿನಂತೆ ಸ್ಪೀಡ್ ಆಗಿ ಕಾರ್ಯನಿರ್ವಹಿಸಲಿದೆ.

ಸ್ಟೋರೇಜ್ ಫುಲ್ ಆಗದಂತೆ ನೋಡಿಕೊಳ್ಳಬೇಕು
ಇನ್ನು ನಿಮ್ಮ ಮೊಬೈಲ್ ಸ್ಟೋರೇಜ್ ಜಾಸ್ತಿಯಿದೆ ಅಂತಾ ಸಿಕ್ಕಿದ್ದನೆಲ್ಲಾ ಮೊಬೈಲ್‌ನಲ್ಲಿ ಸ್ಟೋರೇಜ್ ಮಾಡಲು ಹೋಗಬೇಡಿ. ಒಂದು ಅಂತಾದಲ್ಲಿ ನಿಮ್ಮ ಮೊಬೈಲ್ ಸ್ಟೋರೇಜ್ ತುಂಬಿಹೋದರೆ ಫೋನ್ ನಿಧಾನವಾಗಿ ಕಾರ್ಯನಿರ್ವಹಿಸಲು ಶುರುಮಾಡಲಿದೆ. ಆದರಿಂದ ನಿಮ್ಮ ಮೊಬೈಲ್‌ನಲ್ಲಿ ನಿಮಗೆ ಅತಿ ಅಗತ್ಯ ಎನಿಸುವ ಫೈಲ್‌ಗಳಿದ್ದರೆ ಅವುಗಳನ್ನು ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿ ಮತ್ತು ಮೊಬೈಲ್ ಸ್ಟೋರೇಜ್‌ನಿಂದ ಡಿಲೀಟ್ ಮಾಡಿರಿ.
ಬ್ಯಾಕ್‌ಗ್ರೌಂಡ್ ಆ್ಯಪ್‌ಗಳ ಬಗ್ಗೆ ಗಮನವಹಿಸಿ
ನೀವು ಸ್ಮಾರ್ಟ್‌ಫೋನ್ ಬಳಸದ ಸಂದರ್ಭದಲ್ಲಿಯು ಕೂಡ ನಿಮ್ಮ ಮೊಬೈಲ್ ಬ್ಯಾಕ್‌ಗ್ರೌಂಡ್‌ನಲ್ಲಿ ಹಲವು ಆ್ಯಪ್‌ಗಳು ರನ್ ಆಗುತ್ತಿರುತ್ತವೆ. ಇಂತಹ ಆ್ಯಪ್‌ಗಳಿಂದ ಕೂಡ ನಿಮ್ಮ ಮೊಬೈಲ್ ಕಾರ್ಯವೈಖರಿ ಸಂಪೂರ್ಣ ಬದಲಾಗಲಿದೆ. ಆದರಿಂದ ನಿಮ್ಮ ಮೊಬೈಲ್‌ನಲ್ಲಿರುವ ಬ್ಯಾಕ್‌ಗ್ರೌಂಡ್ ಆ್ಯಪ್‌ಗಳಿಗೆ ಗೇಟ್‌ಪಾಸ್ ನೀಡಿರಿ.
ಆಟೋ ಸಿಂಕ್ ಬಗ್ಗೆ ಗಮನಹರಿಸಿ
ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ ಸಿಂಕ್ ಆಯ್ಕೆಯು ಸಾಮನ್ಯವಾಗಿ ಸಕ್ರಿಯವಾಗಿರುತ್ತದೆ. ಇದು ಸಹ ಫೋನಿನ ಸ್ಪೀಡ್‌ಗೆ ಬ್ರೇಕ್ ಹಾಕಿದಂತೆ. ಆದರಿಂದ ನಿಮ್ಮ ಮೊಬೈಲ್‌ನಲ್ಲಿ ಆಟೋಸಿಂಕ್ ಆಯ್ಕೆಯನ್ನು ಸ್ಟಾಪ್ ಮಾಡುವುದು ಬೆಸ್ಟ್ ಎನಿಸಲಿದೆ.


Click it and Unblock the Notifications








