ಸ್ವಾತಂತ್ರ್ಯ ದಿನಾಚರಣೆಗೆ ಕನ್ನಡದಲ್ಲಿ ಶುಭಕೋರಿದ ಇಸ್ರೇಲ್!..ನೆಟ್ಟಿಗರ ಧನ್ಯವಾದ ವೈರಲ್!!
ಭಾರತದ ಜೊತೆ ಇಸ್ರೇಲ್ ದೇಶದ ಸಂಭಂಧ ಗಟ್ಟಿಯಾಗುತ್ತಿರುವಂತೆಯೇ ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಇಸ್ರೇಲ್ ಕನ್ನಡದಲ್ಲಿಯೂ ಶುಭಾಷಯ ಕೋರಿ ಅಚ್ಚರಿ ಮೂಡಿಸಿದೆ. ಇಸ್ರೇಲ್ ಸರಕಾರದ ವಿದೇಶಾಂಗ ಕಚೇರಿಯ ರಾಯಭಾರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕನ್ನಡ ಸೇರಿದಂತೆ ಪ್ರಮುಖ ನಾಲ್ಕು ಭಾಷೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಲಾಗಿದೆ.
ಹೌದು, ಕನ್ನಡಿಗರಿಗೆ ಇಸ್ರೇಲ್ ದೇಶ ನೀಡಿರುವ ಸಿಹಿಸುದ್ದಿ ಇದಾಗಿದ್ದು, ಇಂಗ್ಲಿಷ್, ಹಿಂದಿ ಜತೆಗೆ ಕನ್ನಡ ಮತ್ತು ಮರಾಠಿಯಲ್ಲೂ ಭಾರತದ ಸ್ವಾತಂತ್ರ್ಯ ದಿನದ ಶುಭ ಕೋರಿದೆ. ''ಆತ್ಮೀಯ ಭಾರತ, ಸ್ವಾತಂತ್ರ್ಯ ದಿನದ ಶುಭಾಷಯಗಳು!'' ಎಂದು ಕನ್ನಡದಲ್ಲಿ ಶುಭ ಕೋರಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಶುಭ ಕೋರಿದ ಇಸ್ರೇಲ್ ದೇಶದ ಅಧಿಕೃತ ಈ ಟ್ವೀಟ್ ಅನ್ನು ಹಲವಾರು ಕನ್ನಡಿಗರು ಸೇರಿ ನೂರಾರು ಟ್ವೀಟಿಗರು ಇದನ್ನು ರೀಟ್ವೀಟ್ ಮಾಡಿದ್ದಾರೆ. ಅಲ್ಲದೆ, ಇಸ್ರೇಲ್ ಕನ್ನಡದಲ್ಲಿ ಶುಭಾಶಯ ಕೋರಿದ್ದಕ್ಕೆ ಹಲವು ನೆಟ್ಟಿಗರು ಧನ್ಯವಾದ ಸಲ್ಲಿಸಿದ್ದಾರೆ. ಕರ್ನಾಟಕ ಮತ್ತು ಕನ್ನಡಿಗರಿಂದ ಇಸ್ರೇಲ್ ಗೆಳೆಯರಿಗೆ ನಮ್ಮ ನಮನ ಎನ್ನುವ ಟ್ವಿಟ್‌ಗಳು ಹೆಚ್ಚು ರೀಟ್ವಿಟ್ ಆಗಿವೆ.
ಇದೇ ಮೊದಲ ಬಾರಿಗೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ನಡುವೆ ಕನ್ನಡ ಭಾಷೆಯೂ ಕೂಡ ಇತರ ದೇಶಗಳ ಗಮನ ಸೆಳೆದಿರುವುದು ಕರ್ನಾಟಕ ಮತ್ತು ಕನ್ನಡಿಗರಿಗೂ ಕೂಡ ಹೆಮ್ಮೆಯ ವಿಷಯವಾಗಿದೆ. ಹಾಗಾಗಿ, ಸ್ವಾತಂತ್ರ್ಯ ದಿನಾಚರಣೆಗೆ ಕನ್ನಡದಲ್ಲಿ ಶುಭಕೋರಿದ ಇಸ್ರೇಲ್‌ಗೆ ಕನ್ನಡಿಗರು ಹೇಗೆ ಟ್ವಿಟ್‌ಗಳ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ ಎಂಬುದನ್ನು ಮುಂದೆ ನೋಡಿ.


Click it and Unblock the Notifications








