Home
ಸುದ್ದಿಜಾಲ

Israel-Palestine war: ಟೆಕ್‌ ಸೇರಿದಂತೆ ವಿವಿಧ ವಲಯಗಳ ಮೇಲಾಗುವ ಪರಿಣಾಮಗಳೇನು?

ಇಸ್ರೇಲ್‌-ಪ್ಯಾಲೆಸ್ಟೈನ್‌ ಯುದ್ಧ ಶುರವಾಗಿರುವುದರಿಂದ ಹಲವು ವಲಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡು ಬರುತ್ತಿದೆ. ಅದರಲ್ಲೂ ಭಾರತದಲ್ಲಿ ಇದರ ಪರಿಣಾಮ ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎನ್ನಲಾಗಿದೆ. ಇಸ್ರೇಲ್‌ ತಂತ್ರಜ್ಞಾನವನ್ನು ಸಾಕಷ್ಟು ರೀತಿಯಲ್ಲಿ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಇಸ್ರೇಲ್‌ ಕೂಡ ಭಾರತದಿಂದ ಹಲವು ಆಮದುಗಳನ್ನು ಮಾಡಿಕೊಳ್ಳುತ್ತಿದೆ.

ಹೌದು, ಇಸ್ರೇಲ್‌ ಪ್ಯಾಲೆಸ್ಟೈನ್‌ ನಡುವಿನ ಯುದ್ಧ ಭಾರತದ ರಫ್ತುದಾರರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎನ್ನಲಾಗಿದೆ. ಇಸ್ರೇಲ್‌ಗೆ ಸರಕುಗಳನ್ನು ಸಾಗಿಸುವ ಭಾರತೀಯ ರಫ್ತುದಾರರು ಹೆಚ್ಚಿನ ವಿಮಾ ಪಾಲಿಸಿ ಮತ್ತು ಶಿಪ್ಪಿಂಗ್‌ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹಾಗಾದ್ರೆ ಇಸ್ರೇಲ್‌ ಮತ್ತು ಪ್ಯಾಲೆಸ್ಟೈನ್‌ ನಡುವಿನ ಯುದ್ಧದಿಂದ ಯಾವೆಲ್ಲಾ ವಲಯಗಳ ಮೇಲೆ ಪರಿಣಾಮ ಬೀರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Israel-Palestine war: ಟೆಕ್‌ ಸೇರಿದಂತೆ ವಿವಿಧ ವಲಯಗಳ ಮೇಲಾಗುವ ಪರಿಣಾಮಗಳೇನು?

ಟೆಕ್‌ ವಲಯದ ಮೇಲೆ ಬೀರುವ ಪರಿಣಾಮ ಏನು?
ಭಾರತವು ಪ್ರಮುಖವಾಗಿ ಐಟಿ ಸೇವೆಗಳನ್ನು ರಫ್ತು ಮಾಡುವ ರಾಷ್ಟ್ರಗಳಲ್ಲಿ ಇಸ್ರೇಲ್‌ ಕೂಡ ಒಂದಾಗಿದೆ. ಇಸ್ರೇಲ್‌ಗೆ ಭಾರತ ಹಲವು ರೀತಿಯ ಐಟಿ ಸೇವೆಗಳನ್ನು ರಫ್ತು ಮಾಡುತ್ತಿದೆ. ಇದೇ ಕಾರಣಕ್ಕೆ ಎರಡು ರಾಷ್ಟ್ರಗಳ ನಡುವಿನ ಧ್ವಿ ಪಕ್ಷೀಯ ಸಂಬಂಧವು ಕೂಡ ಉತ್ತಮವಾಗಿದೆ. ಇದಲ್ಲದೆ ಇಸ್ರೇಲ್‌ನಲ್ಲಿರುವ ಆಧುನಿಕ ಕೃಷ್ಟಿ ತಂತ್ರಜ್ಞಾನ, ಆಟೋ ಮೊಬೈಲ್‌ ಟೆಕ್ನಾಲಜಿ, ಸ್ಮಾರ್ಟ್‌ಫೋನ್‌ ಟೆಕ್ನಾಲಜಿಯು ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳನ್ನು ಆಕರ್ಷಿಸಿದೆ. ಇನ್ನು ಇಸ್ರೇಲ್‌ನ ಮಿಲಿಟರಿ ಟೆಕ್ನಾಲಜಿಯು ಕೂಡ ಉತ್ಕೃಷ್ಟ ಮಟ್ಟದ್ದಾಗಿದ್ದು, ಹಲವು ರಾಷ್ಟ್ರಗಳಿಗೆ ಇಸ್ರೇಲ್‌ ತನ್ನ ಮಿಲಿಟರಿ ಟೆಕ್ನಾಲಜಿ ಡಿವೈಸ್‌ಗಳನ್ನು ಪೂರೈಕೆ ಮಾಡುತ್ತಿದೆ. ಇದೆಲ್ಲದರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ತೈಲ ಬೆಲೆಗಳಲ್ಲಿ ಏರಿಕೆ
ಇನ್ನು ಈ ಯುದ್ಧದ ಪರಿಣಾಮವಾಗಿ ತೈಲ ಬೆಲೆಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಏಕೆಂದರೆ ಜಾಗತಿಕ ತೈಲ ಪೂರೈಕೆಯ ಮೂರನೇ ಒಂದು ಭಾಗದಷ್ಟು ನೆಲೆಯಾಗಿರುವ ಮಧ್ಯಪ್ರಾಚ್ಯದಲ್ಲಿಯೇ ಈ ಯುದ್ಧದ ಉದ್ವಿಗ್ನತೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 3.44% ಏರಿಕೆಯಾಗಿ $87.49 ಕ್ಕೆ ತಲುಪಿದೆ, ಆದರೆ US ವೆಸ್ಟ್ ಟೆಕ್ಸಾಸ್ ಮಧ್ಯಂತರ ಕಚ್ಚಾ ತೈಲವು ಬ್ಯಾರೆಲ್‌ಗೆ $85.98 ಕ್ಕೆ 3.85% ರಷ್ಟು ಏರಿಕೆಯಾಗಿದೆ.

ಹೆಚ್ಚಾಗಲಿದೆ ಹಣದುಬ್ಬರ
ಇನ್ನು ಕಚ್ಚಾ ತೈಲದ ಬೆಲೆಗಳು ಹೆಚ್ಚಾಗುತ್ತಿದ್ದಂತೆ, ಹಣದುಬ್ಬರ ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಅದರಲ್ಲಿಯೂ ಯುನೈಟೆಡ್ ಸ್ಟೇಟ್ಸ್, ಭಾರತ, ಚೀನಾ ಸೇರಿದಂತೆ ಪ್ರಮುಖ ಆಮದುದಾರರು ಹೆಚ್ಚಿನ ಆಮದು ಹಣದುಬ್ಬರವನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಹೊಸ ಹಣದುಬ್ಬರದ ಪ್ರವೃತ್ತಿಗಳು ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಕೇಂದ್ರೀಯ ಬ್ಯಾಂಕುಗಳ ಪ್ರಯತ್ನಗಳನ್ನು ದುರ್ಬಲಗೊಳಿಸಬಹುದು. ಇದು ದೀರ್ಘಾವಧಿಯವರೆಗೆ ಹೆಚ್ಚಿನ ಮಟ್ಟದಲ್ಲಿ ಬಡ್ಡಿದರಗಳನ್ನು ನೋಡಬಹುದು.

ಹೇಗಿದೆ ಭಾರತ ಮತ್ತು ಇಸ್ರೇಲ್‌ ನಡುವಿನ ವ್ಯಾಪಾರ ಸಂಬಂಧ
ಭಾರತ-ಇಸ್ರೇಲ್ ನಡುವಿನ ದ್ವಿಪಕ್ಷೀಯ ಸೇವೆಗಳ ವ್ಯಾಪಾರ ಸುಮಾರು USD 1.3 ಬಿಲಿಯನ್ ಇರಬಹುದು ಎಂಬ ಅಂದಾಜಿದೆ. ಅಲ್ಲದೆ 2022-2023ರಲ್ಲಿ ಸರಕು ಮತ್ತು ಸೇವಾ ವಲಯಗಳಲ್ಲಿ ಭಾರತ-ಇಸ್ರೇಲ್ ವ್ಯಾಪಾರವು USD 12 ಶತಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಈ ಸಮಯದಲ್ಲಿದೆ ಇಸ್ರೇಲ್‌ಗೆ ಭಾರತ ಪ್ರಮುಖವಾಗಿ ಡೀಸೆಲ್ (USD 5.5 ಶತಕೋಟಿ) ಮತ್ತು ಕತ್ತರಿಸಿ ಪಾಲಿಶ್ ಮಾಡಿದ ವಜ್ರಗಳನ್ನು (USD 1.2 ಶತಕೋಟಿ) ರಫ್ತು ಮಾಡಿದೆ.

ಇದಲ್ಲದೆ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಘಟಕಗಳಾದ ICಗಳು, ದ್ಯುತಿವಿದ್ಯುಜ್ಜನಕ ಕೋಶಗಳ ಭಾಗಗಳು (USD 411 ಮಿಲಿಯನ್), ಪೊಟ್ಯಾಸಿಯಮ್ ಕ್ಲೋರೈಡ್ (USD 105 ಮಿಲಿಯನ್) ಮತ್ತು ಸಸ್ಯನಾಶಕ (USD 6 ಮಿಲಿಯನ್)ಗಳನ್ನು ಸಹ ರಫ್ತು ಮಾಡಿದೆ. ಇದರೊಂದಿಗೆ ಸಾಫ್ಟ್‌ವೇರ್ ಅಭಿವೃದ್ಧಿ, ಐಟಿ ಸಲಹಾ ಮತ್ತು ಡೇಟಾ ಸಂಸ್ಕರಣೆ ಸೇರಿದಂತೆ ಭಾರತವು ಇಸ್ರೇಲ್‌ಗೆ ವ್ಯಾಪಕ ಶ್ರೇಣಿಯ ಐಟಿ ಸೇವೆಗಳನ್ನು ರಫ್ತು ಮಾಡುತ್ತಿದೆ. ಇದೆಲ್ಲದರ ಮೇಲೆ ಪರಿಣಾಮ ಬಿರುವ ಸಾಧ್ಯತೆಯಿದೆ.

ಇನ್ನು ಇಸ್ರೇಲ್‌ ವೈದ್ಯಕೀಯ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿದೆ. ಆದರಿಂದ ಭಾರತೀಯ ಆಸ್ಪತ್ರೆಗಳು ಇಸ್ರೇಲ್‌ನಿಂದ ಹಲವು ರೀತಿಯ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುತ್ತಿವೆ. ಹಾಗೆಯೇ ಇಸ್ರೇಲಿ ಕಂಪನಿಗಳು ಭಾರತೀಯ ಆರೋಗ್ಯ ಸೇವೆಯಲ್ಲಿ ಹೂಡಿಕೆಯನ್ನು ಕೂಡ ಮಾಡಿವೆ. ಜೊತೆಗೆ ಭಾರತೀಯ ಕಂಪೆನಿಗಳಾದ ಸನ್ ಫಾರ್ಮಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿಪ್ರೋ, ಟೆಕ್ ಮಹೀಂದ್ರಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಲಾರ್ಸೆನ್ ಮತ್ತು ಟೂಬ್ರೊ ಮತ್ತು ಇನ್ಫೋಸಿಸ್‌ ಕಂಪನಿಗಳು ಇಸ್ರೇಲ್‌ನಲ್ಲಿ ತಮ್ಮ ಅಸ್ತಿತ್ವವನ್ನು ಕೂಡ ಹೊಂದಿವೆ. ಈ ಕಂಪೆನಿಗಳ ವಹಿವಾಟುಗಳ ಮೇಲೆ ಯುದ್ಧದ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.

Best Mobiles in India

English summary
Israel-Palestine war: How to Impact on India-Israel trade and financial markets?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+