ನಾಸಾದ ಪಾರ್ಕರ್ ಬೆನ್ನಲ್ಲೇ ಸೂರ್ಯನ ಬಳಿಗೆ ಇಸ್ರೋದಿಂದ ನೌಕೆ..!

  By Avinash
  |

  72ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ 2022ರ ಗಗನಯಾನದ ಕುರಿತು ಪ್ರಸ್ತಾಪಿಸಿದ ಬೆನ್ನಲ್ಲೇ ಇಸ್ರೋ ಅಧ್ಯಕ್ಷ ಕೆ.ಶಿವನ್ ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಇಸ್ರೋದ ಮುಂದಿನ ಯೋಜನೆಗಳನ್ನು ವಿವರಿಸಿದರು.

  ನಾಸಾದ ಪಾರ್ಕರ್ ಬೆನ್ನಲ್ಲೇ ಸೂರ್ಯನ ಬಳಿಗೆ ಇಸ್ರೋದಿಂದ ನೌಕೆ..!

  ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಇಸ್ರೋದ ಪ್ರಧಾನ ಕಚೇರಿ ಅಂತರಿಕ್ಷ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಕೆ.ಶಿವನ್‌ ಮುಂದಿನ ಮೂರು ವರ್ಷದಲ್ಲಿ ಬರೋಬ್ಬರಿ 50 ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡುವುದಾಗಿ ಘೋಷಿಸಿದ್ದು, ಇದರಲ್ಲಿ ಚಂದ್ರಯಾನ 2 ಮತ್ತು ಆದಿತ್ಯ 1 ಪ್ರಮುಖ ಯೋಜನೆಗಳಾಗಿವೆ ಎಂದು ತಿಳಿಸಿದರು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಇಸ್ರೋದ ಹಿರಿಮೆ ಹೆಚ್ಚಿಸಲಿದೆ ಆದಿತ್ಯ 1

  ಇತ್ತೀಚೆಗೆ ತಾನೇ ನಾಸಾ ಪಾರ್ಕರ್‌ ನೌಕೆಯನ್ನು ಸೂರ್ಯನ ಅಧ್ಯಯನಕ್ಕಾಗಿ ಕಳಿಸಿದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಸಹ ಸೂರ್ಯನ ಅಧ್ಯಯನಕ್ಕಾಗಿ ಮುಂದಿನ ವರ್ಷ ನೌಕೆಯನ್ನು ಕಳಿಸುವ ಯೋಜನೆಯಲ್ಲಿದೆ. 2019ರ ಡಿಸೆಂಬರ್‌ನಲ್ಲಿ ಉದ್ದೇಶಿತ "ಆದಿತ್ಯ 1' ಯೋಜನೆಯನ್ನು ಇಸ್ರೋ ರೂಪುಗೊಳಿಸುತ್ತಿದ್ದು, ಯೋಜನೆ ಯಶಸ್ವಿಯಾದರೆ ಭಾರತದ ಹಿರಿಮೆ ಮತ್ತಷ್ಟು ಹೆಚ್ಚಲಿದೆ.

  ಮೂರು ವರ್ಷ 50 ನೌಕೆ

  ಇಸ್ರೋದಿಂದ ಈ ವರ್ಷ 9, 2019ರಲ್ಲಿ 22 ಮತ್ತು 2020ರಲ್ಲಿ 19 ಉಡಾವಣೆಗಳು ನಡೆಯಲಿವೆ. ಅದಕ್ಕಾಗಿಯೇ ವಿವಿಧ ಉದ್ದೇಶಗಳಿಗಾಗಿ 50 ಉಪಗ್ರಹಗಳನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಲೇ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಉಪಗ್ರಹಗಳ ಕಾರ್ಯನಿರ್ವಹಣೆ ಅವಧಿ ಮುಗಿದಿದ್ದು, ಅವುಗಳನ್ನು ಬದಲಿಸುವ ಕಾರ್ಯ ಮಾಡಬೇಕಾಗಿದೆ ಎಂದಿದ್ದಾರೆ. ಇದರಲ್ಲಿ ಕಾರ್ಟೋಸ್ಯಾಟ್‌ ಮತ್ತು ಭೂವೀಕ್ಷಣಾ ಸರಣಿಯ ಉಪಗ್ರಹಗಳು ಪ್ರಮುಖವಾಗಿವೆ ಎಂದು ಶಿವನ್ ಹೇಳಿದರು.

  72 ಗಂಟೆಗಳಲ್ಲಿ ತಯಾರಾಗುತ್ತೆ ಉಡಾವಣೆ ನೌಕೆ

  ಇಸ್ರೋ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಮೂರರಿಂದ ಆರು ಜನ ಸೇರಿ ಕೇವಲ 72 ರಿಂದ 74 ಗಂಟೆಗಳಲ್ಲಿ ಪುಟ್ಟ ಬಾಹ್ಯಾಕಾಶ ಉಡಾವಣಾ ತಯಾರಿಸಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಯೋಜನೆ ಇಸ್ರೋದಲ್ಲಿ ಆರಂಭವಾಗಲಿದೆ. ವಿವಿಧ ದೇಶಗಳಿಂದ ಚಿಕ್ಕ ಉಪಗ್ರಹಗಳ ಉಡಾವಣೆಗೆ ಭಾರೀ ಬೇಡಿಕೆ ಇದೆ. ಆದ್ದರಿಂದ ಈ ಪ್ರಯೋಗ ಬಹಳಷ್ಟು ಉಪಯುಕ್ತವಾಗಲಿದೆ.

  2019ರಲ್ಲಿ ಪ್ರಯೋಗ

  ಅತ್ಯಂತ ಕಡಿಮೆ ವೆಚ್ಚ ಹಾಗೂ ಅವಧಿಯಲ್ಲಿ ಚಿಕ್ಕ ಉಡಾವಣಾ ನೌಕೆಗಳನ್ನು ಸಿದ್ಧಪಡಿಸಲಾಗುತ್ತದೆ. ಈ ತಂತ್ರಜ್ಞಾನ ಬಳಸಿ ತಯಾರಿಸಿದ ಎಸ್‌ಎಸ್‌ಎಲ್‌ವಿ ನೌಕೆಯ ಪರೀಕ್ಷಾರ್ಥ ಪ್ರಯೋಗವನ್ನು 2019ರಲ್ಲಿ ನಡೆಸಲಾಗುವುದು. ಅಧಿಕೃತ ಉಡಾವಣೆ ಮೇ ಅಥವಾ ಜೂನ್‌ನಲ್ಲಿ ನಡೆಯಲಿದೆ ಎಂದು ಶಿವನ್ ಹೇಳಿದರು.

  ಕಡಿಮೆ ವೆಚ್ಚ

  ಎಸ್‌ಎಸ್‌ಎಲ್‌ವಿ ನೌಕೆಯ ನಿರ್ಮಾಣ ಮತ್ತು ಉಡಾವಣಾ ವೆಚ್ಚ ಅತ್ಯಂತ ಕಡಿಮೆ. ಸದ್ಯ ಬಳಸುತ್ತಿರುವ ಜಿಎಸ್‌ಎಲ್‌ವಿ ನೌಕೆಗಳನ್ನು ನಿರ್ಮಿಸುವ ಮೊತ್ತಕ್ಕಿಂತ ಹತ್ತನೇ ಒಂದರಷ್ಟು ಮೊತ್ತದಲ್ಲಿ ಎಸ್‌ಎಸ್‌ಎಲ್‌ವಿ ನಿರ್ಮಿಸಬಹುದು. ಎಸ್‌ಎಸ್‌ಎಲ್‌ವಿ ಒಟ್ಟು ತೂಕ 500 ರಿಂದ 600 ಕೆ.ಜಿ.ಯಾಗಿರುತ್ತದೆ. ಭೂ ಕಕ್ಷೆಯ ಒಳ ಆವರಣದಲ್ಲಿ ಉಡಾವಣೆ ಮಾಡಿ ಉಪಗ್ರಹಗಳನ್ನು ಸ್ಥಾಪಿಸಬಹುದು. ಎಸ್‌ಎಸ್‌ಎಲ್‌ವಿಯು ಹೊಸ ತಲೆಮಾರಿನ ಉಡಾವಣಾ ನೌಕೆಯಾಗಲಿದ್ದು, ವಿನ್ಯಾಸದ ಅಂತಿ ರೂಪು ರೇಷೆಗಳು ನಡೆಯುತ್ತಿವೆ ಎಂದಿದ್ದಾರೆ.

  ಚಂದ್ರಯಾನ 2ಕ್ಕೆ ಮುಹೂರ್ತ ನಿಗದಿ

  ಇಸ್ರೋದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ 2ಕ್ಕೆ ಮುಹೂರ್ತ ನಿಗದಿಯಾಗಿದ್ದು, ಮುಂದಿನ ವರ್ಷ ಜನೇವರಿ 3ಕ್ಕೆ ನಭಕ್ಕೆ ಉಡಾವಣೆ ನೌಕೆ ಜಿಗಿಯಲಿದೆ. ಇದೇ ವರ್ಷ ಉಡಾವಣೆಯಾಗಬೇಕಿದ್ದ ಚಂದ್ರಯಾನ 2 ನೌಕೆಯ ವಿನ್ಯಾಸದ ಬದಲಾವಣೆಯ ಕಾರಣದಿಂದ ಮುಂದೂಡಲ್ಪಟ್ಟಿತ್ತು.

  ಗಗನಯಾನ

  ಮೋದಿ ಭಾಷಣದಲ್ಲಿ ಪ್ರಸ್ತಾಪಿಸಲ್ಪಟ್ಟ ಗಗನಯಾನ ಯೋಜನೆ, ಇಸ್ರೋದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ದೇಶದ 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಅಂದರೆ 2022ರ ಹೊತ್ತಿಗೆ ಇಸ್ರೋ ಮಾನವ ಸಹಿತ ಗಗನಯಾನ ಮಾಡುವ ಯೋಜನೆಯಾಗಿದೆ. ಇಷ್ಟು ದಿನ ಮಾನವ ರಹಿತ ಉಪಗ್ರಹಗಳನ್ನು ಉಡಾವಣೆ ಮಾಡಿ ಅನೇಕ ಮೈಲಿಗಲ್ಲುಗಳನ್ನು ನೆಟ್ಟಿರುವ ಇಸ್ರೋಗೆ ಗಗನಯಾನ ಪ್ರಮುಖವಾಗಿದೆ.

  ವಿಶ್ವದ ನಾಲ್ಕನೇ ರಾಷ್ಟ್ರ

  ಉದ್ದೇಶಿತ ಗಗನಯಾನ ಯೋಜನೆಯ ಮೂಲಕ ಭಾರತ ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು ಯಶಸ್ವಿಗೊಳಿಸಿದರೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಇದಕ್ಕೂ ಮೊದಲು ಅಮೇರಿಕಾ ಸಂಯುಕ್ತ ಸಂಸ್ಥಾನ, ರಷ್ಯಾ ಹಾಗೂ ಚೀನಾ ದೇಶಗಳು ಮಾತ್ರ ಈ ಸಾಧನೆಯನ್ನು ಮಾಡಿವೆ.

  ಪರೀಕ್ಷೆಯಲ್ಲಿ ಯಶಸ್ವಿ

  ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡಲು ಇಸ್ರೋ ಹೀಗಾಗಲೇ ಅನೇಕ ಪರೀಕ್ಷಾರ್ಥ ಪ್ರಯೋಗಗಳನ್ನು ಆರಂಭಿಸಿದ್ದು, ಕಳೆದ ತಿಂಗಳು ಪ್ಯಾಡ್‌ ಅಬಾರ್ಟ್‌ ಎಂಬ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಪ್ಯಾಡ್‌ ಅಬಾರ್ಟ್‌ ಅಥವಾ ಕ್ರೂ ಎಸ್ಕೇಪ್‌ ಸಿಸ್ಟಮ್‌ ತುರ್ತು ಪಾರಾಗುವ ವ್ಯವಸ್ಥೆಯಾಗಿದ್ದು, ಉಡಾವಣಾ ವಾಹನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದಾಗ ಬಾಹ್ಯಾಕಾಶಯಾನಿಗಳು ಪಾರಾಗಲು ಇರುವ ಉತ್ತಮ ಮಾರ್ಗವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಈ ಪರೀಕ್ಷೆಯನ್ನು ಮಾಡಲಾಯಿತು.

  9000 ಕೋಟಿ ರೂ. ಯೋಜನೆ

  ಇಸ್ರೋ ಉದ್ದೇಶಿತ ಗಗನಯಾನ ಯೋಜನೆಗೆ 9000 ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಿದ್ದು, ಇದುವರೆಗೂ 173 ಕೋಟಿ ರೂ.ಗಳನ್ನು ಹ್ಯೂಮನ್ ಸ್ಪೇಸ್‌ ಪ್ಲೈಟ್‌ನಲ್ಲಿ ಸೂಕ್ಷ್ಮ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಖರ್ಚು ಮಾಡಿದ್ದು, ಯಶಸ್ವಿಯಾಗಿ ಗಗನಯಾನ ಮಾಡುವ ಉತ್ಸಾಹದಲ್ಲಿ ಇಸ್ರೋ ಇದೆ.

  ಉದ್ಯೋಗ ಸೃಷ್ಟಿ

  ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನಯಾನದಿಂದ ಸುಮಾರು 15000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

  ಮೋದಿ ಹೇಳಿಕೆ ಅಚ್ಚರಿ ಎಂದ ಶಿವನ್

  ಮಾನವ ಸಹಿತ ಅಂತರಿಕ್ಷ ಯಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವುದು ಅಚ್ಚರಿ ತಂದಿದೆ. ಇದರಿಂದ ಸಂತಸವಾಗಿದೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ದೇಶದ ಹೆಮ್ಮೆ ಮತ್ತು ಪ್ರತಿಷ್ಠಿತ ಘೋಷಣೆ ಇಸ್ರೋ ಮತ್ತು ಇಸ್ರೋದ ಸಹಭಾಗಿ ಸಂಸ್ಥೆಗಳಿಗೆ ಉತ್ತೇಜನ ನೀಡಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Isro chairman spoke about first manned space mission by india. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more