ಉಡಾವಣೆಗೂ ಮುನ್ನ ತಿರುಪತಿ ಸನ್ನಿದಾನದಲ್ಲಿ ಉಪಗ್ರಹವಿಟ್ಟು ಪೂಜೆ-ಪ್ರಾರ್ಥನೆ!

|

ಮೇ 22ರಂದು ಬೆಳಗ್ಗೆ 5.30ಕ್ಕೆ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿರುವ PSLV-C46 ಉಪಗ್ರಹದ ಪ್ರತಿಕೃತಿಯನ್ನು ತಮ್ಮೊಂದಿಗೆ ಒಯ್ದ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು ಉಪಗ್ರಹದ ಯಶಸ್ವೀ ಅಭಿಯಾನಕ್ಕಾಗಿ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದಾರೆ. ಪಿಎಸ್‌ಎಲ್‌ವಿ-ಸಿ-46 ಉಪಗ್ರಹ ಉಡಾವಣೆಯ ಮುನ್ನಾ ದಿನವಾದ ಇಂದು ಮಂಗಳವಾರ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ PSLV-C 46 ಉಪಗ್ರಹದ ಪ್ರತಿಕೃತಿ ಜೊತೆಗೆ ಕಾಣಿಸಿಕೊಂಡ ಕೆ ಶಿವನ್ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಹೌದು, RISAT 2B ಎಂಬ ಹೆಸರಿನ ರಾಡಾರ್‌ ಇಮೇಜಿಂಗ್‌ ಭೂ ಪರಿವೀಕ್ಷಣೆಯ ಉಪಗ್ರಹವನ್ನು ಮೇ 22ರಂದು ಬೆಳಗ್ಗೆ 5.30ಕ್ಕೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗುತ್ತಿದ್ದು, RISAT 2B ಉಪಗ್ರಹವನ್ನು ಪಿಎಸ್‌ಎಲ್‌ವಿ ಸಿ46 ಎಂಬ ವಾಹಕ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್ ಕೇಂದ್ರದಿಂದ ನಭಕ್ಕೆ ಹೊತ್ತೂಯ್ಯಲಿದೆ. ಇದು ಪಿಎಸ್‌ಎಲ್‌ವಿ ಸಿ46 ಯೋಜನೆಯ 46ನೇ ರಾಕೆಟ್ ಆಗಿದ್ದು, ಈ ಕೇಂದ್ರದಿಂದ ಉಡಾವಣೆ ಯಾಗುತ್ತಿರುವ 72ನೇ ಉಪಗ್ರಹ ವಾಹಕವಾಗಿದೆ.

ಉಡಾವಣೆಗೂ ಮುನ್ನ ತಿರುಪತಿ ಸನ್ನಿದಾನದಲ್ಲಿ ಉಪಗ್ರಹವಿಟ್ಟು ಪೂಜೆ-ಪ್ರಾರ್ಥನೆ!

ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಭೋಮಂಡಲದಲ್ಲಿ ಮತ್ತೂಂದು ಮೈಲುಗಲ್ಲು ಸ್ಥಾಪಿಸಲು ಸಿದ್ಧವಾಗಿದ್ದು, ಇದಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಹಾಗಾದರೆ, ದೇಶದ ಹೆಮ್ಮೆ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕೈಗೊಂಡಿರುವ ಭೂ ಪರಿವೀಕ್ಷಣೆಯ ರೇಡಾರ್‌ ಇಮೇಜಿಂಗ್‌ ಉಪಗ್ರಹ ಆರ್‌ಐಸ್ಯಾಟ್‌-2ಬಿ ಯೋಜನೆ ಹೇಗಿರಲಿದೆ?, ಭೂ ಪರಿವೀಕ್ಷಣೆಯ ರೇಡಾರ್‌ ಇಮೇಜಿಂಗ್‌ ಉಪಗ್ರಹದ ಉಪಯೋಗಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ!

ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ!

ಇಸ್ರೋ ಮೇ 22ರಂದು ಭೂ ಪರಿವೀಕ್ಷಣೆಯ ರೇಡಾರ್‌ ಇಮೇಜಿಂಗ್‌ ಉಪಗ್ರಹ ಆರ್‌ಐಸ್ಯಾಟ್‌-2ಬಿ ಯನ್ನು ಪಿಎಸ್‌ಎಲ್‌ವಿ-ಸಿ46 ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸುವುದಾಗಿ ಹೇಳಿತ್ತು. ಆ ಪ್ರಕಾರ ಪಿಎಸ್‌ಎಲ್‌ವಿ ಸಿ46 ಉಡಾವಣೆಯು ಬುಧವಾರ ಮೇ 22ರಂದು ನಸುಕಿನ 5.27ರ ವೇಳೆಗೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರದಿಂದ ನಡೆಯಲಿದೆ. ಇದು ಹವಾಮಾನ ಸ್ಥಿತಿಗತಿಯನ್ನು ಅವಲಂಬಿಸಿರುತ್ತದೆ ಎಂದು ಇಸ್ರೋ ಹೇಳಿದೆ

ಉಪಗ್ರಹ ವಿಶೇಷತೆ ಏನು?

ಉಪಗ್ರಹ ವಿಶೇಷತೆ ಏನು?

ಇಸ್ರೋ ಉಡಾವಣೆ ಮಾಡುತ್ತಿರುವ ರೇಡಾರ್ ಇಮೇಜಿಂಗ್ ಉಪಗ್ರಹದಲ್ಲಿ ಆಕ್ಟಿವ್‌ ಸೆನ್ಸರ್ ಜತೆಗೆ ಸಿಂಥೆಟಿಕ್ ಅಪರ್ಚರ್‌ ರಾಡಾರ್‌ (SAR) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು 500 ಕಿ.ಮೀ.ಗೂ ಅಧಿಕ ದೂರದಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು ಇದು ರಕ್ಷಣೆ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣ ಸಂಸ್ಥೆಗಳಿಗೆ ಬಹಳ ಪ್ರಯೋಜನಕಾರಿಯಾಗಲಿದೆ. ಹಗಲು ರಾತ್ರಿ ಸಮಾನ ಕ್ಷಮತೆಯಿಂದ ಕೆಲಸ ಮಾಡುವ ಸಾಮರ್ಥ್ಯ ಇದಕ್ಕಿದೆ ಎಂದು ಇಸ್ರೋ ತಿಳಿಸಿದೆ.

ರಕ್ಷಣಾ ಕ್ಷೇತ್ರಕ್ಕೆ ಹೊಸ ಅಸ್ತ್ರ!

ರಕ್ಷಣಾ ಕ್ಷೇತ್ರಕ್ಕೆ ಹೊಸ ಅಸ್ತ್ರ!

ಸಾಮಾನ್ಯವಾಗಿ ಉಪಗ್ರಹಗಳು ಮೋಡ ಅಥವಾ ಪ್ರತಿ ಕೂಲ ಹವಾಮಾನ ಸಂದರ್ಭ ತೆಗೆಯುವ ಚಿತ್ರಗಳಲ್ಲಿ ಸ್ಪಷ್ಟತೆ ಇರುವುದಿಲ್ಲ. ದಟ್ಟ ಮೋಡಗಳು ನಿರ್ಮಾಣ ವಾದರೆ ಭೂಭಾಗದ ಚಿತ್ರ ತೆಗೆಯಲು ಸಾಧ್ಯವಾಗುವುದಿಲ್ಲ. ಇದು ರಕ್ಷಣಾ ಕ್ಷೇತ್ರಕ್ಕೆ ಸವಾಲಿನ ಸಂಗತಿಯಾಗಿತ್ತು. ಆದರೆ ರೇಡಾರ್ ಇಮೇಜಿಂಗ್ ಉಪಗ್ರಹ ಈ ಸಮಸ್ಯೆಯನ್ನು ನಿವಾರಿಸಲಿದೆ. ರಕ್ಷಣೆ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣ ಸಂಸ್ಥೆಗಳಿಗೂ ಸಹ ಉಪಗ್ರಹ ಬಹಳ ಪ್ರಯೋಜನಕಾರಿ ಎಂದು ಹೇಳಲಾಗಿದೆ.

ಇದರಲ್ಲಿದೆ ಅಧಿಕ ಸಾಮರ್ಥ್ಯ

ಇದರಲ್ಲಿದೆ ಅಧಿಕ ಸಾಮರ್ಥ್ಯ

ಇಸ್ರೋ ಈಗಾಗಲೇ ರಾಡಾರ್‌ ವ್ಯವಸ್ಥೆ ಇರುವ ಇಂತಹ 2 ಉಪಗ್ರಹಗಳನ್ನು ಉಡಾವಣೆ ಮಾಡಿದೆ. 2009ರಲ್ಲಿ ಮತ್ತು 2012ರಲ್ಲಿ ಇವು ಬಾಹ್ಯಾಕಾಶವನ್ನು ಸೇರಿದ್ದವು. ಆದರೆ, ನಾಳೆ ಉಡಾವಣೆಯಾಗಲಿರುವ RISAT 2B ಈ ಎರಡು ಉಪಗ್ರಹಗಳ ಒಟ್ಟು ಸಾಮರ್ಥ್ಯಕ್ಕೆ ಸಮನಾಗಿದೆ ಎಂದು ಇಸ್ರೋ ತಿಳಿಸಿದೆ. ಇತ್ತೀಚಿನಆಕ್ಟಿವ್‌ ಸೆನ್ಸರ್ ಜತೆಗೆ ಸಿಂಥೆಟಿಕ್ ಅಪರ್ಚರ್‌ ರಾಡಾರ್‌ (SAR) ತಂತ್ರಜ್ಞಾನವು ಈ ಉಪಗ್ರಹಕ್ಕೆ ಮತ್ತಷ್ಟು ಬಲವನ್ನು ತುಂಬಿದೆ.

Best Mobiles in India

English summary
Indian Space Research Organisation (ISRO) Chairman K Sivan on Tuesday visited Lord Venkateshwara in Tirupati on the eve of launching of PSLV-C 46 satellite. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X