Home
ಸುದ್ದಿಜಾಲ

ಚಂದ್ರ, ಮಂಗಳ ಮತ್ತು ಸೂರ್ಯ ಆಯ್ತು...ಈಗ ಇಸ್ರೋ ಕಣ್ಣು ಶುಕ್ರನತ್ತ!!

ಈಗಾಗಲೇ ಚಂದ್ರ, ಮಂಗಳ ಮತ್ತು ಸೂರ್ಯನತ್ತ ದೃಷ್ಟಿಹಾಯಿಸಿರುವ ಇಸ್ರೋ ಇದೀಗ ಶುಕ್ರನೆಡೆಗೆ ಉಪಗ್ರಹ ಕಳುಹಿಸುವ ಯೋಜನೆಗೆ ತನ್ನ ಮೊದಲ ಹೆಜ್ಜೆಯಿಟ್ಟಿದೆ. ಶುಕ್ರ ಗ್ರಹದ ಮೇಲಿನ ಅಧ್ಯಯನಕ್ಕೆ ಅಂತರಿಕ್ಷ ಆಧಾರಿತ ಅವಕಾಶಗಳ ಘೋಷಣೆ ಇದಾಗಿದ್ದು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಂದ ಅಂತಾರಾಷ್ಟ್ರೀಯ ವಿಜ್ಞಾನಿಗಳನ್ನು ಮುಕ್ತವಾಗಿ ಆಹ್ವಾನಿಸಿದೆ.

2023ಕ್ಕೆ ಶುಕ್ರನ ಬಳಿಗೆ ಇಸ್ರೋವಿನ ವೈಜ್ಞಾನಿಕ ಸಿಡಿತಲೆಯನ್ನು ಹೊತ್ತೊಯ್ಯುವ ಪ್ರಯೋಗಕ್ಕೆ ಇಸ್ರೋ ಮುಂದಾಗಿದೆ.ಕ್ರನ ಕಡೆಗೆ ಕಳುಹಿಸುವ ಉದ್ದೇಶಿತ ಉಪಗ್ರಹ 100 ಕೆಜಿ ತೂಕವನ್ನು ಹೊಂದಿದ್ದು 500 ವ್ಯಾಟ್ ಇಂಧನ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅದು ಶುಕ್ರನ ಸುತ್ತ 500 ಕಿಲೋ ಮೀಟರ್ ನಿಂದ 60 ಸಾವಿರ ಕಿಲೋ ಮೀಟರ್ ವರೆಗೆ ಸುತ್ತುವ ಸಾಧ್ಯತೆಯಿದೆ.

ಚಂದ್ರ, ಮಂಗಳ ಮತ್ತು ಸೂರ್ಯ ಆಯ್ತು...ಈಗ ಇಸ್ರೋ ಕಣ್ಣು ಶುಕ್ರನತ್ತ!!

ಈ ಕುರಿತು ತನ್ನ ವೆಬ್‌ಸೈಟ್ ನಲ್ಲಿ ಪ್ರಕಟಿಸಿರುವ ಇಸ್ರೊ, ಶುಕ್ರ ಗ್ರಹದ ನಿರ್ದಿಷ್ಟ ಕ್ಷೇತ್ರಗಳ ವಿಜ್ಞಾನದ ಆಸಕ್ತಿ ವಿಷಯಗಳನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ಆಧಾರಿತ ಪ್ರಯೋಗಗಳಿಗೆ ಅಂತರರಾಷ್ಟ್ರೀಯ ವೈಜ್ಞಾನಿಕ ಸಮುದಾಯದಿಂದ ಪ್ರಸ್ತಾವನೆಗಳನ್ನು ಕೋರಲಾಗಿದ್ದು, ಕಾರ್ಯಾಚರಣೆಗೆ ಅವಕಾಶಗಳ ಘೋಷಣೆ ಆಧಾರಿತ ಪ್ರಯೋಗಗಳು ಹೆಚ್ಚು ನೆರವಾಗಲಿವೆ ಎಂದಿದೆ.

ಶುಕ್ರ ಗ್ರಹದಲ್ಲಿ ವಿಶಾಲ ಸಂಶೋಧನಾ ವಿಷಯಗಳು, ಗ್ರಹದ ಮೇಲ್ಮೈ, ಉಪ ಮೇಲ್ಮೈ ವೈಶಿಷ್ಟ್ಯಗಳು ಮತ್ತು ಮರು ಮೇಲ್ಮುಖ ಪ್ರಕ್ರಿಯೆಗಳ ಸಂಶೋಧನೆ ಮತ್ತು ಅದರ ವಾತಾವರಣದ ರಸಾಯನಶಾಸ್ತ್ರ, ಚಲನಶಾಸ್ತ್ರ ಮತ್ತು ಸಂಯೋಜನೆ ವ್ಯತ್ಯಾಸಗಳು ಹಾಗೂ ಸೌರ ವಿಕಿರಣ, ಸೌರ ಮಾರುತದೊಂದಿಗಿನ ಪರಸ್ಪರ ಕ್ರಿಯೆಗಳನ್ನು ಗುರುತಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಚಂದ್ರ, ಮಂಗಳ ಮತ್ತು ಸೂರ್ಯ ಆಯ್ತು...ಈಗ ಇಸ್ರೋ ಕಣ್ಣು ಶುಕ್ರನತ್ತ!!

ಶುಕ್ರನೆಡೆಗೆ ಉಪಗ್ರಹ ಕಳುಹಿಸುವ ಯೋಜನೆಗೆ ಆಹ್ವಾನಿಸಿರುವ ಹಲವು ಅಂತರಿಕ್ಷ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯಗಳ ಪ್ರಸ್ತಾವನೆಗಳನ್ನು ಡಿಸೆಂಬರ್ 20ರ ಮಧ್ಯರಾತ್ರಿ ವರೆಗೆ ಸ್ವೀಕರಿಸಲಾಗುತ್ತದೆ ಎಂದು ಇಸ್ರೋ ಹೇಳಿದೆ. ಬಾಹ್ಯಾಕಾಶ ವಿಜ್ಞಾನ ಸಾಧನಗಳ ಅಭಿವೃದ್ಧಿ ಮತ್ತು ಯೋಗ್ಯ ಪ್ರಯೋಗಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆಗಾರರು ಸಿದ್ಧವಾಗಿರುತ್ತಾರೆ.

Best Mobiles in India

English summary
This AO for space-based experiments to study Venus is open to international scientists from various space agencies, research laboratories. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+