ಇಸ್ರೋದಿಂದ INSAT-3DS ಸ್ಯಾಟ್‌ಲೈಟ್ ಉಡವಾಣೆಗೆ ತಯಾರಿ: ಉದ್ದೇಶ ಏನು?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಸ್ಯಾಟ್‌ಲೈಟ್ ಉಡಾವಣೆಯ ಬಗ್ಗೆ ಮಾಹಿತಿ ನೀಡಿದೆ. ಇದೇ ಫೆಬ್ರವರಿ 17 ರಂದು ಹವಾಮಾನ ಉಪಗ್ರಹ INSAT-3DS (meteorological satellite) ಅನ್ನು ಉಡಾವಣೆ ಮಾಡಲಾಗುವುದು ಎಂದು ಹೇಳಿದೆ. ಇನ್ನು GSLV-F14/INSAT-3DS ಮಿಷನ್‌ನ ಉಡಾವಣೆಯು ಶ್ರೀಹರಿಕೋಟಾದ SDSC-SHARನಿಂದ ನಡೆಯಲಿದೆ.
ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) INSAT-3DS ಹವಾಮಾನ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಇದನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ಗೆ ನಿಯೋಜಿಸುವ ಗುರಿಯನ್ನು ಹೊಂದಿದೆ. ನಂತರದ ಕಕ್ಷೆ ಏರಿಸುವ ತಂತ್ರಗಳು ಉಪಗ್ರಹವು ಭೂ-ಸ್ಥಾಯಿ ಕಕ್ಷೆಯಲ್ಲಿ ಸ್ಥಾನ ಪಡೆದಿರುವುದನ್ನು ಖಚಿತಪಡಿಸುತ್ತದೆ ಎಂದು ಇಸ್ರೋ ಹೇಳಿದೆ. ಹಾಗಾದ್ರೆ ಇಸ್ರೋದ ಹೊಸ ಸ್ಯಾಟ್‌ಲೈಟ್ ಉಡವಾಣೆಯ ಉದ್ದೇಶ ಏನು? ಇದರ ಪ್ರಯೋಜನಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

INSAT-3DS ಸ್ಯಾಟ್‌ಲೈಟ್ ಕಾರ್ಯವೇನು?
ಇಸ್ರೋ ಹೊಸ INSAT-3DS ಸ್ಯಾಟ್‌ಲೈಟ್ ಉಡಾವಣೆ ಮಾಡುವುದಕ್ಕೆ ಎಲ್ಲಾ ರೀತಿಯ ತಯಾರಿಯನ್ನು ನಡೆಸಿದೆ. ಇದು ಭೂಸ್ಥಿರ ಕಕ್ಷೆಯಿಂದ ಮೂರನೇ ತಲೆಮಾರಿನ ಹವಾಮಾನ ಉಪಗ್ರಹದ ಫಾಲೋ-ಆನ್ ಮಿಷನ್ ಆಗಿದೆ. ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ಎಚ್ಚರಿಕೆಗಳನ್ನು ನೀಡುವ ಕೆಲಸವನ್ನು ಈ ಸ್ಯಾಟ್‌ಲೈಟ್ ಮಾಡಲಿದೆ. ಅಲ್ಲದೆ ವರ್ಧಿತ ಹವಾಮಾನ ವೀಕ್ಷಣೆಗಳು ಮತ್ತು ಭೂಮಿ ಮತ್ತು ಸಾಗರ ಮೇಲ್ಮೈಗಳ ಮೇಲ್ವಿಚಾರಣೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಉದ್ದೇಶ ಏನು?
ಇನ್ನು ಈ ಉಪಗ್ರಹವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ INSAT-3D ಮತ್ತು INSAT-3DR ಉಪಗ್ರಹಗಳೊಂದಿಗೆ ಹವಾಮಾನ ಸೇವೆಗಳನ್ನು ಇನ್ನಷ್ಟು ವೃದ್ಧಿಸಲಿದೆ. ಅಂದರೆ ಈ ಮಿಷನ್‌ನ ಪ್ರಾಥಮಿಕ ಉದ್ದೇಶಗಳು ಭೂಮಿಯ ಮೇಲ್ಮೈಯನ್ನು ಮೇಲ್ವಿಚಾರಣೆ ಮಾಡುವುದು, ಸಾಗರ ವೀಕ್ಷಣೆಗಳು ಮತ್ತು ಅದರ ಪರಿಸರವನ್ನು ಹವಾಮಾನ ಪ್ರಾಮುಖ್ಯತೆಯ ವಿವಿಧ ಸ್ಪೆಕ್ಟ್ರಲ್ ಚಾನಲ್‌ಗಳಲ್ಲಿ ನಡೆಸುವುದು ಎಂದು ಇಸ್ರೋ ಹೇಳಿದೆ.
ಸ್ಯಾಟ್‌ಲೈಟ್ ಬೇಸ್ಡ್ ಸರ್ಚ್ ಸೇವೆಗಳನ್ನು ಒದಗಿಸಲು ವಾತಾವರಣದ ವಿವಿಧ ಹವಾಮಾನ ನಿಯತಾಂಕಗಳ ಲಂಬ ಪ್ರೊಫೈಲ್ ಅನ್ನು ಈ ಸ್ಯಾಟ್‌ಲೈಟ್ ಒದಗಿಸಲಿದೆ. ಇದು ನೀಡುವ ಡೇಟಾವನ್ನು ಭೂ ವಿಜ್ಞಾನ ಸಚಿವಾಲಯದ (MoES) ವಿವಿಧ ಇಲಾಖೆಗಳಾದ ಭಾರತ ಹವಾಮಾನ ಇಲಾಖೆ (IMD), ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ (NCMRWF), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿ (IITM), ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT) , ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಮತ್ತು ಹಲವಾರು ಇತರ ಏಜೆನ್ಸಿಗಳು ಮತ್ತು ಸಂಸ್ಥೆಗಳು ಬಳಸಿಕೊಳ್ಳಲಿವೆ.

ಇನ್ನು ಉಪಗ್ರಹವನ್ನು ಹೊತ್ತೊಯ್ಯುತ್ತಿರುವ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಮೂರು-ಹಂತದ 51.7 ಮೀ ಉದ್ದದ ಉಡಾವಣಾ ವಾಹನವಾಗಿದೆ. ಇದು 420 ಟನ್‌ಗಳ ಲಿಫ್ಟ್‌ಆಫ್ ದ್ರವ್ಯರಾಶಿಯನ್ನು ಹೊಂದಿದೆ. ಮೊದಲ ಹಂತವು (GS1) 139-ಟನ್ ಪ್ರೊಪೆಲ್ಲಂಟ್ ಹೊಂದಿರುವ ಘನ ಪ್ರೊಪೆಲ್ಲಂಟ್ (S139) ಮೋಟಾರು ಮತ್ತು ನಾಲ್ಕು ಭೂಮಿ-ಶೇಖರಿಸಬಹುದಾದ ಪ್ರೊಪೆಲ್ಲಂಟ್ ಹಂತಗಳ (L40) ಸ್ಟ್ರಾಪಾನ್‌ಗಳನ್ನು ಒಳಗೊಂಡಿದೆ. ಇದು ಪ್ರತಿಯೊಂದರಲ್ಲೂ 40 ಟನ್ ದ್ರವ ನೋದಕವನ್ನು ಹೊಂದಿರುತ್ತದೆ.
ಇನ್ನು ಎರಡನೇ ಹಂತವು (GS2) 40-ಟನ್ ಪ್ರೊಪೆಲ್ಲಂಟ್‌ನೊಂದಿಗೆ ಲೋಡ್ ಮಾಡಲಾದ ಭೂಮಿ-ಸಂಗ್ರಹಿಸಬಹುದಾದ ಪ್ರೊಪೆಲ್ಲಂಟ್ ಹಂತವಾಗಿದೆ. ಮೂರನೇ ಹಂತವು (GS3) ದ್ರವ ಆಮ್ಲಜನಕ (LOX) ಮತ್ತು ದ್ರವ ಹೈಡ್ರೋಜನ್ (LH2) ನ 15-ಟನ್ ಪ್ರೊಪೆಲ್ಲಂಟ್ ಲೋಡಿಂಗ್ ಹೊಂದಿರುವ ಕ್ರಯೋಜೆನಿಕ್ ಹಂತವಾಗಿದೆ. ಇದನ್ನು ಓಗಿವ್ ಪೇಲೋಡ್ ಫೇರಿಂಗ್ ಮೂಲಕ ರಕ್ಷಿಸಲಾಗಿದ್ದು, ಯಾವುದೆ ರೀತಿಯ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.


Click it and Unblock the Notifications








