Home
ಸುದ್ದಿಜಾಲ

ISRO’s Aditya L1 Mission: ಇಸ್ರೋಗೆ ಆದಿತ್ಯ L1 ಮಿಷನ್‌ನಿಂದ ಬಂತು ಅಚ್ಚರಿಯ ಸಂದೇಶ!

ಸೂರ್ಯ ಶಿಕಾರಿಗೆ ಇಸ್ರೋ ಕಳುಹಿಸಿದ್ದ ಆದಿತ್ಯ ಎಲ್ 1 (aditya L1) ಸೋಲಾರ್ ಪ್ರೋಬ್ ಮಿಷನ್ ಕಡೆಯಿಂದ ಗುಡ್‌ನ್ಯೂಸ್‌ ಬಂದಿದೆ. ಇಸ್ರೋ ಅಂದುಕೊಂಡಂತೆ ಈ ಮಿಷನ್‌ ಒಂದು ಪ್ರಮುಖ ಮೈಲಿಗಲ್ಲನ್ನು ಪೂರ್ಣಗೊಳಿಸಿದ್ದು, ತನ್ನ ಮೊದಲ ಹೈ-ಎನರ್ಜಿ ಸೌರ ಜ್ವಾಲೆಯ ಎಕ್ಸ್-ರೇ ಸೆರೆಹಿಡಿದು ಕಳುಹಿಸಿದೆ.

ಹೌದು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಆದಿತ್ಯ ಎಲ್‌ 1 ಮಿಷನ್‌ ಸೂರ್ಯನ ಜ್ವಾಲೆಯ ಎಕ್ಸ್‌ ರೇ ಕಳುಹಿಸಿದೆ. ಈ ಮೂಲಕ ಸೂರ್ಯನ ಮೇಲ್ಮೈ ಅಧ್ಯಯನಕ್ಕೆ ಮುಂದಾಗಿರುವ ಇಸ್ರೋದ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ. ಇದರಿಂದ ಚಂದ್ರಯಾನದ ಯಶಸ್ಸು ಸೂರ್ಯಯಾನಕ್ಕೂ ಕೂಡ ಮುಂದುವರೆದಿದೆ. ಹಾಗಾದ್ರೆ ಆದಿತ್ಯ ಆದಿತ್ಯ-L1 ಕಳುಹಿಸಿರುವ ದಾಖಲೆಗಳಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ISRO’s Aditya L1 Mission: ಇಸ್ರೋಗೆ ಆದಿತ್ಯ L1 ನಿಂದ ಬಂತು ಅಚ್ಚರಿಯ ಸಂದೇಶ!

ಆದಿತ್ಯ-L1 ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆ, ಸೂರ್ಯನ ಮೇಲ್ಮೈನಲ್ಲಿ ಏನೆಲ್ಲಾ ವಿದ್ಯಮಾನಗಳು ಜರುಗಲಿವೆ ಅನ್ನೊದನ್ನ ಅಧ್ಯಯನ ಮಾಡಲಿದೆ. ಈಗಾಗಲೇ ಸೂರ್ಯನ ಅಂಗಳದ ಕಡೆಗೆ ಜಿಗಿದ್ದಿದ್ದ ಈ ನೌಕೆಯಿಂದ ಇದೀಗ ಮಹತ್ವದ ಡೇಟಾ ಇಸ್ರೋಗೆ ಬಂದಿದೆ. ಇದರಲ್ಲಿ ಅಕ್ಟೋಬರ್ 29, 2023 ರಂದು ಸರಿಸುಮಾರು 12:00 ರಿಂದ 22:00 UT ವರೆಗಿನ ಸಮಯದಲ್ಲಿ ಆದಿತ್ಯ-L1 ತಾನು ಕಂಡ ಮೊದಲ ವ್ಯೂ ಅವಧಿಯನ್ನು ದಾಖಲಿಸಿದೆ.

ಅಂದರೆ ಈ ಸಮಯದಲ್ಲಿ ಆದಿತ್ಯ-L1 ಬೋರ್ಡ್‌ನಲ್ಲಿರುವ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (HEL1OS) ಸೌರ ಜ್ವಾಲೆಗಳ ಹಠಾತ್ ಹಂತವನ್ನು ದಾಖಲಿಸಿದೆ. ರೆಕಾರ್ಡ್ ಮಾಡಲಾದ ಡೇಟಾವು NOAA ಯ GOES ಒದಗಿಸಿದ ಎಕ್ಸ್-ರೇ ಲೈಟ್ ಕರ್ವ್‌ಗಳೊಂದಿಗೆ ಸ್ಥಿರವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ISRO ಉಲ್ಲೇಖಿಸುವ GOES ಅನ್ನೊದು "ಜಿಯೋಸ್ಟೇಷನರಿ ಆಪರೇಷನಲ್ ಎನ್ವಿರಾನ್ಮೆಂಟಲ್ ಸ್ಯಾಟಲೈಟ್" ಆಗಿದೆ. ಇದನ್ನು ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (NOAA) ನಿರ್ವಹಿಸುತ್ತಿದೆ.

ISRO’s Aditya L1 Mission: ಇಸ್ರೋಗೆ ಆದಿತ್ಯ L1 ನಿಂದ ಬಂತು ಅಚ್ಚರಿಯ ಸಂದೇಶ!

ಇನ್ನು ಆದಿತ್ಯ L1 ಮಿಷನ್‌ HEL1OS ಉಪಕರಣದಿಂದ ಚಿತ್ರವನ್ನು ಸೆರೆಹಿಡಿಯಲಾಗಿದೆ. ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಮಿಷನ್‌ನಲ್ಲಿರುವ ಹಾರ್ಡ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಆಗಿದ್ದು, 10 ಮತ್ತು 150 keV ನಡುವಿನ ವಿಶಾಲ X- ರೇ ಎನರ್ಜಿ ಬ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸೂರ್ಯನ ಮೇಲೆ ಸೌರ ಜ್ವಾಲೆಯ ಆಕ್ಟಿವಿಟಿಗಳನ್ನು ಅಧ್ಯಯನ ಮಾಡುವುದಕ್ಕೆ ಸಹಾಯ ಮಾಡಲಿದೆ.

ಸೂರ್ಯನಿಂದ ಹೊರಸೂಸುವ ಸೌರ ಜ್ವಾಲೆಗಳ ಬಗ್ಗೆ ಅಧ್ಯಯನ ಮಾಡುವುದು ಇಸ್ರೋದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಈ ಅಧ್ಯಯನದಿಂದ ಭವಿಷ್ಯದಲ್ಲಿ ಭೂಮಿಯ ಮೇಲಿನ ಜೀವನದ ಮೇಲೆ ಏನೆಲ್ಲಾ ಪರಿಣಾಮ ಬೀರಬಹುದು ಅನ್ನೊದು ತಿಳಿಯಲಿದೆ. ಅಲ್ಲದೆ ಸೂರ್ಯನ ಜ್ವಾಲೆ ವಿದ್ಯುತ್ ವ್ಯವಸ್ಥೆಗಳು, ಉಪಗ್ರಹ ಸಂವಹನ ವ್ಯವಸ್ಥೆಗಳು ಮತ್ತು ರೇಡಿಯೋ ಸಂವಹನಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಅಧ್ಯಯನ ನಡೆಯಲಿದೆ.

ISRO’s Aditya L1 Mission: ಇಸ್ರೋಗೆ ಆದಿತ್ಯ L1 ನಿಂದ ಬಂತು ಅಚ್ಚರಿಯ ಸಂದೇಶ!

ಇನ್ನು ಇಸ್ರೋ ಸೆಪ್ಟೆಂಬರ್‌ನಲ್ಲಿ ಆದಿತ್ಯ L1 ಮಿಷನ್‌ ಅನ್ನು ಉಡಾವಣೆ ಮಾಡಿತ್ತು. ಇದು ಭೂಮಿಯ ಕಕ್ಷೆಯಿಂದ ನಿರ್ಗಮಿಸಿದ ನಂತರ, ಬಾಹ್ಯಾಕಾಶ ನೌಕೆಯು L1 ಬಿಂದುವನ್ನು ತಲುಪಲು ಸುಮಾರು 110 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ಅದರಂತೆ ಜನವರಿ ಮೊದಲ ವಾರದಲ್ಲಿ ಬಾಹ್ಯಾಕಾಶ ನೌಕೆಯು ಎಲ್ 1 ಇಸ್ರೋ ನಿಗದಿಪಡಿಸಿರುವ ಬಿಂದುವಿಗೆ ಬಂದು ಸೇರಲಿದೆ. ಅಂದರೆ ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಲಾಂಗ್ರೇಜ್ ಪಾಯಿಂಟ್‌ನಲ್ಲಿ ಇದು ನೆಲೆಗೊಳ್ಳಲಿದೆ. ಈ ಪಾಯಿಂಟ್‌ನಲ್ಲಿದ್ದುಕೊಂಡು ಸೂರ್ಯನ ಮೇಲ್ಮೈಯನ್ನು ಅಧ್ಯಯನ ಮಾಡಲಿದೆ. ಜೊತೆಗೆ ಸೌರ ಮಾರುತದ ಬಗ್ಗೆ ಕೂಡ ಅಧ್ಯಯನ ನಡೆಸಲಿದೆ.

Best Mobiles in India

English summary
ISRO’s Aditya L1 Mission: Aditya L1 captures X-ray glimpse of benign solar flare
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+