Home
ಸುದ್ದಿಜಾಲ

ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..

By Ashwath

ಇಸ್ರೋದ ಮಂಗಳಯಾನ ಉಪಗ್ರಹ ಭಾನುವಾರ ಮುಂಜಾನೆ ಭೂಮಿಯ ಕಕ್ಷೆಯನ್ನು ತೊರೆದು ಮಂಗಳನ ಗ್ರಹದತ್ತ ತನ್ನ ಪ್ರಯಾಣವನ್ನು ಆರಂಭಿಸಿದೆ.ಈ ಮೂಲಕ ಭೂಕಕ್ಷೆ ತೊರೆದು ಅನಗ್ರಹದ ಕಕ್ಷೆಯತ್ತ ಪ್ರಯಾಣ ಬೆಳೆಸಿದ ಇಸ್ರೋದ ಮೊದಲ ಉಪಗ್ರಹ ಎಂಬ ಪ್ರಖ್ಯಾತಿಗೆ ಮಂಗಳಯಾನ ಉಪಗ್ರಹ ಪಾತ್ರವಾಗಿದೆ.

ಶನಿವಾರ ತರಾತ್ರಿ 12.49ಕ್ಕೆ ಭೂ ಕಕ್ಷೆಯಿಂದ ಬೇರ್ಪಡಿಸುವ ಕಾರ್ಯಾಚರಣೆ ಆರಂಭಿಸಿದ ವಿಜ್ಞಾನಿಗಳು,ಯಾವುದೇ ಅಡೆ ತಡೆ ಇಲ್ಲದೆ 22 ನಿಮಿಷದಲ್ಲಿ ಉಪಗ್ರಹವನ್ನು ಭೂ ಕಕ್ಷೆಯಿಂದ ಮಂಗಳನತ್ತ ನೂಕಿದರು.440 ನ್ಯೂಟನ್‌ ಲಿಕ್ವಿಡ್‌ ಇಂಜಿನ್‌ ಚಾಲೂ ಮಾಡಿ ಸೆಕೆಂಡ್‌‌ಗೆ 648 ಮೀಟರ್‌ ವೇಗದಲ್ಲಿ ಉಪಗ್ರಹ ಚಲಿಸುವ ಮೂಲಕ ಈ ಕಾರ್ಯಾಚರಣೆಯನ್ನು ವಿಜ್ಞಾನಿಗಳು ಯಶಸ್ವಿಗೊಳಿಸಿದರು.

ಇಸ್ರೋದ ಈ ಮಂಗಳಯಾನ ಯೋಜನೆ ಯಶಸ್ವಿಯಾದಲ್ಲಿ ಮಂಗಳನ ಅಧ್ಯಯನಕ್ಕೆ ಉಪಗ್ರಹವನ್ನು ಕಳುಹಿಸಿದ ನಾಲ್ಕನೇಯ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಈಗಾಗಲೇ ಮಂಗಳಯಾನಕ್ಕೆ ರಷ್ಯಾ, ಅಮೆರಿಕ,ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ಉಪಗ್ರಹವನ್ನು ಕಳುಹಿಸಿ ಅಧ್ಯಯನ ನಡೆಸುತ್ತಿದೆ.

ಇಸ್ರೋದ ಮಂಗಳಯಾನ ಉಪಗ್ರಹದ ಎತ್ತರವನ್ನು ಹಂತಹಂತವಾಗಿ ಏರಿಸುತ್ತಿರುವ ಇಸ್ರೋದ ಮೂರು ಹಂತದ ಕಾರ್ಯಾಚರಣೆ ಯಶಸ್ವಿಯಾಗಿ, ನಾಲ್ಕನೇಯ ಹಂತದ ಕಾರ್ಯಾಚರಣೆ ವೇಳೆ ಉಪಗ್ರಹದ ವೇಗ ಕುಸಿದಿತ್ತು.ಭೂಮಿಯಿಂದ 71,623 ಕಿ.ಮೀ ದೂರದಲ್ಲಿರುವ ಉಪಗ್ರಹ ಸೆಕೆಂಡ್‌ಗೆ 130 ಮೀಟರ್‌ ವೇಗದಲ್ಲಿ ಚಲಿಸಿ 1ಲಕ್ಷ ಕಿ.ಮೀ ಕ್ರಮಿಸಬೇಕಿತ್ತು.

ಇಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡದ್ದರಿಂದ ಉಪಗ್ರಹ ಸೆಕೆಂಡ್‌‌ಗೆ 35 ಮೀಟರ್‌ ವೇಗದಲ್ಲಿ ಚಲಿಸಿ 78,276 ಕಿ.ಮೀ ಎತ್ತರಕ್ಕೆ ಏರಿಸಲು ಮಾತ್ರ ಇಸ್ರೋಗೆ ಸಾಧ್ಯವಾಗಿತ್ತು.ಈ ಸಂದರ್ಭಲ್ಲಿ ಇಸ್ರೋ ವಿಜ್ಞಾನಿಗಳು ಒಮ್ಮೆ ಆತಂಕಕ್ಕೆ ಒಳಗಾಗಿದ್ದರು.ಆದರೆ ನ.12 ರಂದು ಬೆಳಗ್ಗೆ 5 ಗಂಟೆಗೆ ಕಾರ್ಯಾಚರಣೆ ನಡೆಸಿ ಉಪಗ್ರಹವನ್ನು ಒಂದು ಲಕ್ಷ ಕಿ.ಮೀ ದೂರಕ್ಕೆ ಇಸ್ರೋ ಯಶಸ್ವಿಯಾಗಿ ನೂಕಿತ್ತು.

 ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..

ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..


ಇಸ್ರೋದ ಮಂಗಳ ಯಾನ ಯಶಸ್ವಿಯಾದಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಮಂಗಳ ಯಾನಕ್ಕೆ ವಿವಿಧ ದೇಶಗಳುಕೈಗೊಂಡ 51 ಯೋಜನೆಗಳಲ್ಲಿ 21 ಸಫಲವಾಗಿದೆ.

 ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..

ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..


2011ರ ನವೆಂಬರ್‌ನಲ್ಲಿ ಚೀನಾ ತನ್ನ ಮಂಗಳಯಾನ ಉಪಗ್ರಹವನ್ನು ಯಶಸ್ವಿಯಾಗಿ ಭೂಕಕ್ಷೆಗೆ ಸೇರಿಸಿತ್ತು. ಆದರೆ ಭೂಕಕ್ಷೆಯಿಂದ ಮಂಗಳ ಹಾದಿಗೆ ತಲುಪಿಸುವಾಗ ಉಪಗ್ರಹ ಚೂರುಚೂರಾಗಿತ್ತು.

1999ರಲ್ಲಿ ಜಪಾನ್‌ನ ಮಂಗಳ ಉಪಗ್ರಹದಲ್ಲಿ ದೋಷ ಕಂಡುಬಂದಿದ್ದರಿಂದ,ಉಪಗ್ರಹ ಮಂಗಳ ಕಕ್ಷೆ ಸೇರಲು ವಿಫ‌ಲವಾಗಿತ್ತು.

 ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..

ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..

ಇಸ್ರೊ ಕಳುಹಿಸಿದ್ದ ‘ಚಂದ್ರಯಾನ-1 ಉಪಗ್ರಹ ಚಂದ್ರನ ಅಂಗಳದಲ್ಲಿ ನೀರಿನ ಕುರುಹನ್ನು ಮೊದಲ ಸಲ ಪತ್ತೆ­ಹಚ್ಚಿತ್ತು.ಅದುವರೆಗೆ ಬೇರೆ ಯಾವ ದೇಶಕ್ಕೂ ಚಂದ್ರ­ನಲ್ಲಿ ನೀರಿನ ಕುರುಹನ್ನು ದೃಢಪಡಿಸಲು ಸಾಧ್ಯವಾಗಿರಲಿಲ್ಲ.ಹೀಗಾಗಿ ಇಸ್ರೋದ ಮಂಗಳ ಯಾನ ಸಹ ಇದೇ ರೀತಿಯ ಅಚ್ಚರಿಯ ಫಲಿತಾಂಶ ನೀಡಬಹುದು ಎಂಬ ನಿರೀಕ್ಷೆಯನ್ನು ಇಸ್ರೋ ವಿಜ್ಞಾನಿಗಳು ಹೊಂದಿದ್ದಾರೆ.

 ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..

ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..


ಇಸ್ರೋದ ಮಂಗಳಯಾನಕ್ಕೆ ಕೇಂದ್ರ ಸರ್ಕಾರ 2012 ಅಗಸ್ಟ್‌ 3ರಂದು ಅನುಮತಿ ನೀಡಿತ್ತು. ಅನುಮತಿ ದೊರಕಿದ ಒಂದೇ ವರ್ಷ‌ದಲ್ಲಿ ಇಸ್ರೋ ಈ ಉಪಗ್ರಹಕ್ಕೆ ಸಂಬಂಧಿಸಿದ ಎಲ್ಲಾ ಉಪಕರಣಗಳನ್ನು ಅಭಿವೃದ್ಧಿಪಡಿಸಿದೆ ಉಡಾವಣೆ ಮಾಡಿದೆ. ಯೋಜನೆಗೆ 450 ಕೋಟಿ ರೂಪಾಯಿ ವೆಚ್ಚವಾಗಿದೆ. ಈ ಹಣದಲ್ಲಿ150 ಕೋಟಿ ರೂ. ಬಾಹ್ಯಾಕಾಶ ನೌಕೆ ನಿರ್ಮಾಣಕ್ಕೆ, 110 ಕೋಟಿ ರೂ. ಉಡಾವಣೆಗೆ ವೆಚ್ಚವಾಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಮಂಗಳಯಾನಕ್ಕೆ ಸಂಬಂಧಿಸಿದ ಯೋಜನೆ ರೂಪಿಸಿದ ಕೀರ್ತಿಗೆ ಇಸ್ರೋ ಪಾತ್ರವಾಗಿದೆ.

 ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..

ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..


ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುತ್ತಿರುವ ಹೆಲೆನ್‌ ಚಂಡಮಾರುತ ಚಿತ್ರವನ್ನು ಇಸ್ರೋ ಉಪಗ್ರಹ ನ.19ರಂದು ಭೂಮಿಗೆ ರವಾನಿಸಿತ್ತು. ನ.19ರಂದು ಭಾರತದ ಮೇಲೆ 68,000 ಕಿ.ಮೀ ಎತ್ತರದಲ್ಲಿ ಹಾದು ಹೋಗುವ ವೇಳೆ, ಆಂಧ್ರಪ್ರದೇಶ ಸಮೀಪ ಚಂಡಮಾರುತ ರೂಪುಗೊಳ್ಳುವಿಕೆಯ ಚಿತ್ರವನ್ನು ಉಪಗ್ರಹದ ಕ್ಯಾಮೆರಾ ಸೆರೆಹಿಡಿದಿತ್ತು.

 ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..

ಮಂಗಳನೆಡೆಗೆ ಇಸ್ರೋ ಉಪಗ್ರಹದ ಯಶಸ್ವಿ ಹೆಜ್ಜೆ..


ಉಪಗ್ರಹ ಹಾರಿಸಿದ ಬಳಿಕ ಮಂಗಳ ಗ್ರಹ ತಲುಪಲು ಸುಮಾರು 10 ತಿಂಗಳು ಬೇಕಾಗುತ್ತದೆ.ಉಪಗ್ರಹದ ಕನಿಷ್ಠ ಅವಧಿ 6 ತಿಂಗಳು.ಗರಿಷ್ಟ ಅವಧಿ 10 ತಿಂಗಳು.ಉಪಗ್ರಹ ಮೊದಲ ಪೂರ್ಣ ಪ್ರಮಾಣದ ಚಿತ್ರವನ್ನು 9 ತಿಂಗಳ ಬಳಿಕ(ಸೆ.21,2014) ಭೂಮಿಗೆ ಕಳುಹಿಸಲಿದೆ.68 ಕೋಟಿ ಕಿ.ಮೀ.ದೂರವನ್ನು 300 ದಿನಗಳಲ್ಲಿ ನಿತ್ಯ 25 ಲಕ್ಷ ಕಿ.ಮೀ. ವೇಗದಲ್ಲಿ ಉಪಗ್ರಹ ಕ್ರಮಿಸಿಲಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+