ಇಸ್ರೋ ನಡೆಸಿದ ಚೊಚ್ಚಲ ಪರೀಕ್ಷೆಯಲ್ಲಿಯೇ 'ಕ್ರೂ ಎಸ್ಕೇಪ್' ತಂತ್ರಜ್ಞಾನ ಯಶಸ್ವಿ!!
ವಿಶ್ವದ ಕೆಲವೇ ಕೆಲವು ರಾಷ್ಟ್ರಗಳು ಹೊಂದಿರುವ ಅತ್ಯಾಧುನಿಕ ಕ್ರೂ ಎಸ್ಕೇಪ್ ತಂತ್ರಜ್ಞಾನ ವ್ಯವಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಇಲಾಖೆ (ಇಸ್ರೋ) ಯಶಸ್ವಿಯಾಗಿ ಪರೀಕ್ಷಿಸಿದೆ. . ಗಗನಯಾನದಲ್ಲಿ ಸಂಭವಿಸಬಹುದಾದ ಅವಘಡಗಳಿಂದ ಪಾರಾಗುವ ಮಹತ್ವದ ತಂತ್ರಜ್ಞಾನವನ್ನು ಹೊಂದುವ ಮೂಲಕ ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಇದೇ ಮೊದಲ ಬಾರಿಗೆ ಇಸ್ರೋ ನಡೆಸಿದ ಚೊಚ್ಚಲ ಕ್ರೂ ಎಸ್ಕೇಪ್ ಸಿಸ್ಟಂ ಪರೀಕ್ಷೆಯಲ್ಲಿ ಕ್ರೂ ಮಾಡ್ಯೂಲನ್ನು ಸುರಕ್ಷಿತವಾಗಿ ಮರಳಿಪಡೆಯುವಲ್ಲಿ ಯಶಸ್ವಿಯಾಗಿದೆ. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ 12.6 ಟನ್ ಹೊತ್ತು ಹೊರಟ ಉಡ್ಡಯನ ವಾಹಕದಿಂದ ಕ್ರೂ ಎಸ್ಕೇಪ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಕ್ರೂ ಎಸ್ಕೇಪ್ ತಂತ್ರಜ್ಞಾದ ಸಹಾಯದಿಂದ ಉಡ್ಡಯನ ಹಂತದ ತುರ್ತು ಸಂದರ್ಭಗಳಲ್ಲಿ ನೌಕೆಯನ್ನು ಸ್ಥಗಿತಗೊಳಿಸಿ ಗಗನಯಾತ್ರಿಗಳುಳ್ಳ ಘಟಕವನ್ನು ಬೇರ್ಪಡಿಸಿ ಅವರನ್ನು ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರು ಮಾಡಬಹುದಾಗಿದೆ ಎಂದು ಇಸ್ರೋ ತಿಳಿಸಿದ್ದು, ಹಾಗಾದರೆ, ಅತ್ಯಾಧುನಿಕ ಕ್ರೂ ಎಸ್ಕೇಪ್ ತಂತ್ರಜ್ಞಾನ ವ್ಯವಸ್ಥೆ ಹೇಗಿದೆ ಎಂಬುದನ್ನು ಮುಂದೆ ತಿಳಿಯಿರಿ.

ಕ್ರೂ ಎಸ್ಕೇಪ್ ತಂತ್ರಜ್ಞಾನ!
ಭಾರತೀಯ ಬಾಹ್ಯಾಕಾಶ ಇಲಾಖೆ (ಇಸ್ರೋ) ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿರುವ 'ಕ್ರೂ ಎಸ್ಕೇಪ್ ಸಿಸ್ಟಂ' ಇಂದು ಪರೀಕ್ಷಿಸಿ ಯಶಸ್ವಿಯಾಗಿದೆ. ಈ ತಂತ್ರಜ್ಞಾನದ ಸಹಾಯದಿಂದ ತುರ್ತು ಸಂದರ್ಭಗಳಲ್ಲಿ ಗಗನನೌಕೆಯಿಂದ ಗಗನಯಾತ್ರಿಗಳನ್ನು ಕ್ರೂ ಎಸ್ಕೇಪ್ ತಂತ್ರಜ್ಞಾನ ವ್ಯವಸ್ಥೆ ಮೂಲಕ ಪಾರು ಮಾಡಬಹುದಾಗಿದೆ.

ತಂತ್ರಜ್ಞಾನ ಯಶಸ್ವಿಯಾಗಿದ್ದು ಹೇಗೆ?
ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ 12.6 ಟನ್ ಹೊತ್ತು ಹೊರಟ ಉಡ್ಡಯನ ವಾಹಕದಿಂದ ಕ್ರೂ ಎಸ್ಕೇಪ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಆಗಸದಿಂದ ಬೇರ್ಪಟ್ಟ ಕ್ರೂ ಮಾಡ್ಯೂಲ್ ಸುರಕ್ಷಿತವಾಗಿ ಪ್ಯಾರಾಚೂಟ್ ಮೂಲಕ ಶ್ರೀಹರಿಕೋಟದಿಂದ ಸುಮಾರು 2.9 ಕಿ.ಮೀ ದೂರದಲ್ಲಿ ಬಂಗಾಳಕೊಲ್ಲಿಯಲ್ಲಿ ಇಳಿದಿದೆ.

ಸುರಕ್ಷಿತವಾಗಿ ಮರಳಿಪಡೆಯಲಾಗಿದೆ.
ಆಗಸದಿಂದ ಬೇರ್ಪಟ್ಟ ಕ್ರೂ ಮಾಡ್ಯೂಲ್ ಸುರಕ್ಷಿತವಾಗಿ ಪ್ಯಾರಾಚೂಟ್ ಮೂಲಕ ಶ್ರೀಹರಿಕೋಟದಿಂದ ಸುಮಾರು 2.9 ಕಿ.ಮೀ ದೂರದಲ್ಲಿ ಬಂಗಾಳಕೊಲ್ಲಿಯಲ್ಲಿ ಇಳಿದ ನಂತರ ಸುಮಾರು 2.7 ಕಿ.ಮೀ ಎತ್ತರದಿಂದ ಧರೆಗಿಳಿದ ಕ್ರೂ ಮಾಡ್ಯೂಲನ್ನು ಮೂರು ರಿಕವರಿ ಹಡಗುಗಳ ಮೂಲಕ ಸುರಕ್ಷಿತವಾಗಿ ಮರಳಿಪಡೆಯಲಾಗಿದೆ. ಸುಮಾರು 300 ಸೆನ್ಸಾರ್‌ಗಳು ಮಿಷನ್‌ನ ವಿವಿಧ ಕಾರ್ಯಕ್ಷಮತೆಯನ್ನು ದಾಖಲಿಸಿವೆ ಎಂದು ಇಸ್ರೋ ತಿಳಿಸಿದೆ.

ಚೊಚ್ಚಲ ಪರೀಕ್ಷೆಯಲ್ಲಿಯೇ ಯಶಸ್ವಿ!
ಆಗಸದಿಂದ ಬೇರ್ಪಟ್ಟ ಕ್ರೂ ಮಾಡ್ಯೂಲ್ ಸುರಕ್ಷಿತವಾಗಿ ವಾಪಸ್ ಪಡೆಯುವ ಕ್ರೂ ಎಸ್ಕೇಪ್ ಸಿಸ್ಟಂ ಪರೀಕ್ಷೆಯು ಇಸ್ರೋ ನಡೆಸಿದ ಚೊಚ್ಚಲ ಪರೀಕ್ಷೆಯಾಗಿದೆ. ಕ್ರೂ ಎಸ್ಕೇಪ್ ಸಿಸ್ಟಂ ಪರೀಕ್ಷೆಯಲ್ಲಿ ಕ್ರೂ ಮಾಡ್ಯೂಲನ್ನು ಸುರಕ್ಷಿತವಾಗಿ ಮರಳಿಪಡೆಯುವಲ್ಲಿ ಯಶಸ್ವಿಯಾಗಿರುವ ಇಸ್ರೋ ಚೊಚ್ಚಲ ಪರೀಕ್ಷೆಯಲ್ಲಿಯೇ ಈ ಸಾಧನೆ ಮಾಡಿದ ಖ್ಯಾತಿ ಪಡೆದಿದೆ.

'ಚಂದ್ರಯಾನ 2' ಯೋಜನೆಗಾಗಿ?
ತುರ್ತು ಸಂದರ್ಭಗಳಲ್ಲಿ ಗಗನನೌಕೆಯಿಂದ ಗಗನಯಾತ್ರಿಗಳನ್ನು ಕ್ರೂ ಎಸ್ಕೇಪ್ ತಂತ್ರಜ್ಞಾನ ವ್ಯವಸ್ಥೆ ಮೂಲಕ ಪಾರು ಮಾಡುವ 'ಕ್ರೂ ಎಸ್ಕೇಪ್ ಸಿಸ್ಟಂ' 'ಚಂದ್ರಯಾನ 2' ಯೋಜನೆಗೆ ಮುನ್ನುಡಿಯಾಗಿದೆ. ಇಸ್ರೋವಿನ ಮಹತ್ವಾಕಾಂಕ್ಷೆಯ ಈ ಯೋಜನೆಯಲ್ಲಿ ಚಂದ್ರನಲ್ಲಿ ಮಾನವವನ್ನು ಇಳಿಸುವ ಗುರಿಯನ್ನು ಇಸ್ರೋ ಹೊಂದಿದೆ.


Click it and Unblock the Notifications








