ಇಸ್ರೋ ಮುಡಿಗೆ ಮತ್ತೊಂದು ಗರಿ: ಒಂದೇ ಬಾರಿ 104 ಉಪಗ್ರಹ ಉಡಾವಣೆ

Written By:
ಬಾಹ್ಯಕಾಶದಲ್ಲಿ ಭಾರತದ ಸಾಧನೆ ದಿನೇ ದಿನೇ ಒಂದೊಂದೇ ಮೈಲಿಗಲ್ಲುಗಳನ್ನು ತಲುಪುತ್ತಿದ್ದು, ಈ ಬಾರಿ ದೊಡ್ಡದೊಂದು ಸಾಹಸ ಮಾಡಿ ಸೈ ಎನ್ನಿಸಿಕೊಂಡಿದೆ. ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋ ಒಂದೇ ಬಾರಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇಸ್ರೋ ಮುಡಿಗೆ ಮತ್ತೊಂದು ಗರಿ: ಒಂದೇ ಬಾರಿ 104 ಉಪಗ್ರಹ ಉಡಾವಣೆ

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಕೇಂದ್ರದಿಂದ ಪಿಎಸ್'ಎಲ್'ವಿ-ಸಿ37 ಮೂಲಕ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ ಇಸ್ರೋ ಪಶ್ವಿಮದ ರಾಷ್ಟ್ರಗೂ ಮತ್ತೊಮ್ಮೆ ಭಾರತದ ಕಡೆ ತಿರುಗುವಂತೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಟ್ಟು 104 ಉಪಗ್ರಹ:

ಒಟ್ಟು 104 ಉಪಗ್ರಹ:

ಇಂದು ಬೆಳಿಗ್ಗೆ 9.28 ಗಂಟೆ ಸಮಯದಲ್ಲಿ ಗಂಟೆಗೆ ಉಡಾವಣೆಗೊಂಡ ಪಿಎಸ್'ಎಲ್'ವಿ-ಸಿ37 ವಾಹಕದಲ್ಲಿ 4 ದೇಶೀಯ ಉಪಗ್ರಹಗಳು ಸೇರಿದಂತೆ 101 ವಿದೇಶಿ ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಕಾಶಕ್ಕೆ ಕಳುಹಿಸಿದೆ.

ಯಾವ ರಾಷ್ಟ್ರವು ಈ ಸಾಧನೆ ಮಾಡಿಲ್ಲ:

ಯಾವ ರಾಷ್ಟ್ರವು ಈ ಸಾಧನೆ ಮಾಡಿಲ್ಲ:

ಈ ಮೂಲದ ಇದುವರೆಗೂ ವಿಶ್ವದ ಯಾವುದೇ ರಾಷ್ಟ್ರಗಳು ಮಾಡದ ಸಾಧನೆಯನ್ನು ಮಾಡಿದೆ, ಏಕಕಾಲಕ್ಕೆ ಒಂದೇ ವಾಹಕದಲ್ಲಿ ಇಷ್ಟು ಸಂಖ್ಯೆ ಉಪಗ್ರಹಗಳನ್ನು ಉಡಾವಣೆ ಮಾಡಿರುವುದಯ ಇದೇ ಮೊದಲು ಎನ್ನಲಾಗಿದೆ.

ಇಸ್ರೋ ಸಾಧನೆಗೆ ಸರಿಸಮರಿಲ್ಲ:

ಇಸ್ರೋ ಸಾಧನೆಗೆ ಸರಿಸಮರಿಲ್ಲ:

ವಿಶ್ವದ ಪ್ರಮುಖ ಶಕ್ತಿತಗಳಾಗಿರುವ ಅಮೆರಿಕ, ರಷ್ಯಾ, ಚೀನಾ ಸೇರಿದಂತೆ ಯಾವ ದೇಶವು ಇಸ್ರೋ ಸಾಧನೆಗೆ ಸರಿಸಮರಿಲ್ಲ. 2014ರಲ್ಲಿ ರಷ್ಯಾ ಒಮ್ಮೆಗೆ 37 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು, ಇದನ್ನು ಬಿಟ್ಟರೆ ನಾಸಾ 29 ಉಪಗ್ರಹಗಳನ್ನು ಒಮ್ಮೆಗೆ ಕಕ್ಷೆಗೆ ಸೇರಿಸಿತ್ತು. ಕಳೆದ ವರ್ಷ ಇಸ್ರೊ 22 ಉಪಗ್ರಹಗಳನ್ನು ಒಟ್ಟಿಗೆ ಉಡಾವಣೆ ಮಾಡಿತ್ತು.

ಅಭಿನಂದನೆಗಳ ಮಹಾಪೂರಾ;

ಅಭಿನಂದನೆಗಳ ಮಹಾಪೂರಾ;

ಈ ಅದ್ಭುತ ಸಾಧನೆ ಮಾಡಿರುವ ಇಸ್ರೋ ವಿಜ್ಞಾನಿಗಳ ಸಾಧನೆಗೆ ದೇಶಾದ್ಯಂತ ಮೆಚ್ಚುಗೆಯ ವ್ಯಕ್ತವಾಗಿದ್ದು, ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಅಭಿನಂದನೆ ವ್ಯಕ್ತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
India successfully put a record 104 satellites from a single rocket into orbit on Wednesday in the latest triumph for its famously frugal space agency. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot