ತನ್ನದೇ ವಾಷಿಂಗ್ ಮಷಿನ್, ಫ್ರಿಡ್ಜ್ ಬಿಡುಗಡೆ ಮಾಡುತ್ತಿದೆ ಫ್ಲಿಪ್‌ಕಾರ್ಟ್!..ಖರೀದಿಗೆ ರೆಡಿಯಾಗಿ!!
ಭಾರತದ ನಂಬರ್ ಒನ್ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಭಾರತೀಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗೃಹಪಯೋಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಒದಗಿಸಲು ಫ್ಲಿಪ್‌ಕಾರ್ಟ್ ಮುಂದಾಗಿದ್ದು, ತನ್ನದೇ ನೂತನ ಬ್ರ್ಯಾಂಡ್ ಅಡಿಯಲ್ಲಿ ಹಲವು ಹೊಸ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಮಾಡಿ ಗಮನಸೆಳೆದಿದೆ.
'ಗುಣಮಟ್ಟ ಅಥವಾ ಬೆಲೆ: ಎರಡರಲ್ಲಿಯೂ ರಾಜಿಯಿಲ್ಲ' ಎಂಬ ಟ್ಯಾಗ್‌ಲೈನ್ ಹೊತ್ತು "ಮಾರ್ಕ್ (MarQ)" ಎಂಬ ನೂತನ ಬ್ರ್ಯಾಂಡ್ ಹೆಸರಿನಲ್ಲಿ ಫ್ಲಿಪ್‌ಕಾರ್ಟ್ ಕಂಪೆನಿಯ ಉತ್ಪನ್ನಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ಹಬ್ಬದ ಋತುವಿನಲ್ಲಿರುವ ಭಾರತೀಯರಿಗೆ ಕಡಿಮೆ ಬೆಲೆಯಲ್ಲಿ ಅತ್ಯಂತ ಗುಣಮಟ್ಟದ ಗೃಹಪಯೋಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಫ್ಲಿಪ್‌ಕಾರ್ಟ್ ಒದಗಿಸಲಿದೆ.

ಇದೇ ಮೊದಲ ಬಾರಿಗೆ ಇ- ಕಾಮರ್ಸ್ ಕಂಪೆನಿಯೊಂದು 3 ಪ್ರಮುಖ ಗೃಹಪಯೋಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಒಮ್ಮೆಲೆ ಮಾರುಕಟ್ಟೆಗೆ ಪರಿಚಯಿಸಿದೆ. ಹಾಗಾದರೆ, ಫ್ಲಿಪ್‌ಕಾರ್ಟ್ ಒಡೆತನದ 'ಮಾರ್ಕ್' ಬ್ರ್ಯಾಂಡ್ ಅಡಿಯಲ್ಲಿ ಪರಿಚಯವಾಗುತ್ತಿರುವ ಗೃಹಪಯೋಗಿ ಎಲೆಕ್ಟ್ರಾನಿಕ್ ಸಾಧನಗಳು ಯಾವುವು? ಅವುಗಳ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಮುಂದೆ ತಿಳಿಯಿರಿ.

ಹಬ್ಬದ ಸಂಭ್ರಮಕ್ಕೆ ಭಾರೀ ಕೊಡುಗೆ!
ಹಬ್ಬಗಳ ಸಂಭ್ರಮದಲ್ಲಿರುವ ಭಾರತೀಯರಿಗೆ ಫ್ಲಿಪ್‌ಕಾರ್ಟ್ ಕಂಪೆನಿಯು ನೂತನ ಬ್ರ್ಯಾಂಡ್‌ನ ಅಡಿಯಲ್ಲಿ 3 ಪ್ರಮುಖ ಗೃಹಪಯೋಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಚಯಿಸುತ್ತಿದೆ. ಮಾರ್ಕ್ ವಾಷಿಂಗ್ ಮಷಿನ್, 565L ಕೃತಕ ಬುದ್ದಿಮತ್ತೆ ರೆಫ್ರಿಜರೇಟರ್ ಹಾಗೂ ಮಾರ್ಕ್ ಇನ್ವರ್ಟರ್ ಎಸಿ ಮೂರು ಸಾಧನಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ಬಗ್ಗೆ ಫ್ಲಿಪ್‌ಕಾರ್ಟ್ ಹೇಳಿದೆ. ಹಾಗಾದರೆ, ಫ್ಲಿಪ್‌ಕಾರ್ಟ್ ಕಂಪೆನಿಯ ಈ ಮೂರು ಸಾಧನಗಳ ವಿಶೇಷತೆಗಳನ್ನು ಹೇಗಿವೆ ಮುಂದೆ ತಿಳಿಯಿರಿ.

ಮಾರ್ಕ್ ವಾಷಿಂಗ್ ಮಷಿನ್!
ಮನೆಗೊಂದು ಅತ್ಯುತ್ತಮ ವಾಷಿಂಗ್ ಮಷಿನ್ ಬೇಕೆಂದರೆ ಖಂಡಿತವಾಗಿ ಇದು ನಿಮಗೆ ಸಿಹಿಸುದ್ದಿ. ಏಕೆಂದರೆ, 7.5 KG ಸಾಮರ್ಥ್ಯದ ಸಂಪೂರ್ಣ ಸ್ವಯಂಚಾಲಿತ ಫ್ರಂಟ್ ಲೋಡ್ ವಾಷಿಂಗ್ ಮಷಿನ್ ಒಂದು ಕೇವಲ 16,999 ರೂಪಾಯಿಗಳಿಗೆ ಪರಿಚಯವಾಗುತ್ತಿದೆ. ಕೇವಲ 18 ನಿಮಿಷಗಳಲ್ಲಿ ತೊಳೆಯಲು ಅನುಮತಿಸುವ ಎಕ್ಸ್ಪ್ರೆಸ್ ವಾಶ್ ವೈಶಿಷ್ಟ್ಯವನ್ನು ಹೊಂದಿರುವ ಮಾರ್ಕ್ ವಾಷಿಂಗ್ ಮಷಿನ್ ಫ್ರಂಟ್ ಲೋಡ್ ವಾಷಿಂಗ್ ಮಷಿನ್‌ಗಳಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಗುಟ್ಟಮಟ್ಟದ ಸಾಧನವಾಗಿದೆ.

565L ಕೃತಕ ಬುದ್ದಿಮತ್ತೆ ರೆಫ್ರಿಜರೇಟರ್!
ಎಕ್ಸ್ಪ್ರೆಸ್ ಕೂಲಿಂಗ್ ಮತ್ತು ಘನೀಕರಣದಂತಹ ಹೆಚ್ಚು ಅಗತ್ಯವಿರುವ ಕಾರ್ಯಗಳನ್ನು ನೀಡುವ ಅತ್ಯುತ್ತಮ 565L ಸೈಡ್ ಬೈ ಸೈಡ್ 'ಮಾರ್ಕ್ ರೆಫ್ರಿಜರೇಟರ್' ಮಾರುಕಟ್ಟೆಗೆ ಪರಿಚಯವಾಗುತ್ತಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಡಿಜಿಟಲ್ ಸಂವೇದಕಗಳಂತಹ ತಂತ್ರಜ್ಞಾನವನ್ನು ಹೊತ್ತಿರುವ ಈ ರೆಫ್ರಿಜರೇಟರ್ ಬೆಲೆ 39,999 ಸಾವಿರ ರೂಪಾಯಿಗಳಾಗಿವೆ. ಮಾರುಕಟ್ಟೆಯಲ್ಲಿ 70,000+ ರೂ.ಗಳಿಗಿಂತ ಹೆಚ್ಚು ಬೆಲೆಯಲ್ಲಿ ಇಂತಹ ರೆಫ್ರಿಜರೇಟರ್‌ಗಳು ಲಭ್ಯವಿರಬಹುದು ಎಂದು ಫ್ಲಿಪ್‌ಕಾರ್ಟ್ ಹೇಳಿದೆ. (ವಿಡಿಯೋ ನೋಡಿ)

ಮಾರ್ಕ್ ಇನ್ವರ್ಟರ್ ಎಸಿ
ಮಾರ್ಕ್ ಬ್ರ್ಯಾಂಡ್‌ನ ಅಡಿಯಲ್ಲಿ ಮಾರುಕಟ್ಟೆಗೆ ಪರಿಚಯವಾಗುತ್ತಿರುವ ಫ್ಲಿಪ್‌ಕಾರ್ಟ್ 'ಮಾರ್ಕ್ ಇನ್ವರ್ಟರ್ ಎಸಿ' ನಿಜವಾಗಿಯೋ ನಿಮ್ಮ ಗಮನ ಸೆಳೆಯಲಿದೆ. ಏರುಪೇರುಗಳಿಲ್ಲದೆ ನಿಖರವಾದ ತಾಪಮಾನ, ವಿದ್ಯುತ್ ಬಿಲ್‌ನಲ್ಲಿನ ಉಳಿತಾಯವನ್ನು ಯಾವಾಗಲೂ ನಿರ್ವಹಿಸುವಂತಹ ತಂತ್ರಜ್ಞಾನವನ್ನು ಹೊಂದಿರುವ ಈ ಇನ್ವರ್ಟರ್ ಎಸಿ 25,999 ರೂ.ಗಳಿಗೆ ಲಭ್ಯವಿದೆ. ಇತರೆ ಕಂಪೆನಿಗಳಿಗೆ ಹೋಲಿಸಿದರೆ ಇದು 25% ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ ಎಂದರೆ ಆಶ್ಚರ್ಯವೇನಿಲ್ಲ.


Click it and Unblock the Notifications








