ವೈರಲ್ ಸುದ್ದಿ!..ಮೊಬೈಲ್ ಚಟ ಬಿಡಸಲು ಕಾನೂನನ್ನೇ ತರುತ್ತಿದೆ ಈ ದೇಶ!

|

ಯುವಕರಲ್ಲಿ ಮೊಬೈಲ್ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳ ಚಟ ಹೆಚ್ಚುತ್ತಿರುವ ವಿದ್ಯಮಾನವನ್ನು ತಡೆಗಟ್ಟುವ ಮತ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಕಾನೂನನ್ನೇ ರೂಪಿಸಲು ಇಟಲಿ ದೇಶವು ಮುಂದಾಗುತ್ತಿದೆ ಎನ್ನಲಾಗಿದೆ. ಯುವ ಜನಾಂಗದಲ್ಲಿ ವಿಪರೀತ ಎನ್ನಬಹುದಾದ ಮಟ್ಟದ ಮೊಬೈಲ್‌ ಗೀಳಿಗೆ ಕಡಿವಾಣ ಹಾಕಲು ನೂತನ ಕಾನೂನೊಂದನ್ನು ತರಲು ಇಟಲಿ ಸಂಸತ್ತಿನಲ್ಲಿ ಮಸೂದೆಯೊಂದನ್ನು ತರಲು ಸಿದ್ದತೆ ನಡೆದಿದೆ ಎಂದು ತಿಳಿದುಬಂದಿದೆ.

ವೈರಲ್ ಸುದ್ದಿ!..ಮೊಬೈಲ್ ಚಟ ಬಿಡಸಲು ಕಾನೂನನ್ನೇ ತರುತ್ತಿದೆ ಈ ದೇಶ!

ಹೌದು, ಒಂದಷ್ಟು ಹೊತ್ತು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದಿಂದ ದೂರ ಉಳಿದರೆ ಆಕಾಶ ಕಳಚಿ ಬೀಳುತ್ತದೆ ಎಂಬಂತೆ ವರ್ತಿಸುವ ಯುವಜನತೆಗೆ ಸೂಕ್ತ ಕೌನ್ಸಿಲಿಂಗ್ ನೀಡಿ, ಈ ವಿಚಾರವಾಗಿ ಯುವಕರು ಮತ್ತು ಅವರ ಹೆತ್ತವರಿಗೆ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈ ಮಸೂದೆಯಲ್ಲಿ ಉದ್ದೇಶಿಸಲಾಗಿದೆ. ಮಕ್ಕಳಲ್ಲಿ ಅತಿಯಾದ ಮೊಬೈಲ್ ಫೋನ್ ಬಳಕೆಯನ್ನು ಪತ್ತೆ ಹಚ್ಚಲು ಪೋಷಕರಿಗೆ ಶಿಕ್ಷಣ ಕಾರ್ಯಕ್ರಮಗಳನ್ನು ಇದು ಪ್ರಸ್ತಾಪಿಸುತ್ತದೆ.

'ಮೊಬೈಲ್-ಫೋನ್-ಫೋಬಿಯಾ ಎಂದು ಕರೆಯಲ್ಪಡುವ ('ನೊಮೋಫೋಬಿಯಾ') ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳನ್ನು ಹುಡುಕಲಾಗುತ್ತಿದೆ. ಸಾಮಾಜಿಕ ತಾಣಗಳು ಅಥವಾ ಮೆಸೇಜಿಂಗ್ ಆಪ್ಗಳಿಗೆ ನಿಯಮಿತವಾಗಿ ಪ್ರವೇಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಭಯಕ್ಕೆ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಲಾಗಿದ್ದು, ಸಾಮಾಜಿಕ ಜಾಲಗಳ ಆತ್ಮಸಾಕ್ಷಿಯ ಬಳಕೆಗಾಗಿ ಶಿಕ್ಷಣ ದ ಯೋಜನೆಗಳನ್ನು ಮಸೂದೆಯು ತಿಳಿಸುತ್ತದೆ.

ವೈರಲ್ ಸುದ್ದಿ!..ಮೊಬೈಲ್ ಚಟ ಬಿಡಸಲು ಕಾನೂನನ್ನೇ ತರುತ್ತಿದೆ ಈ ದೇಶ!

15-20 ವರ್ಷ ವಯಸ್ಸಿನ ಅರ್ಧದಷ್ಟು ಇಟಾಲಿಯನ್ನರು ತಮ್ಮ ಮೊಬೈಲ್ ಫೋನ್‌ಗಳನ್ನು ದಿನಕ್ಕೆ ಕನಿಷ್ಠ 75 ಬಾರಿ ಸಂಪರ್ಕಿಸುತ್ತಾರೆ ಎಂದು ಇಟಾಲಿಯನ್ ಮಾಧ್ಯಮಗಳು ನ್ಯಾಷನಲ್ ಅಸೋಸಿಯೇಶನ್ ಆಫ್ ಟೆಕ್ನಾಲಜಿಕಲ್ ಡಿಪೆಂಡೆನ್ಸ್ ಸಂಶೋಧನೆಯನ್ನು ಉಲ್ಲೇಖಿಸಿವೆ. ಮತ್ತೊಂದು ವರದಿಯ ಪ್ರಕಾರ, ಸುಮಾರು 61 ಪ್ರತಿಶತದಷ್ಟು ಇಟಾಲಿಯನ್ನರು ತಮ್ಮ ಟ್ಯಾಬ್ಲೆಟ್ ಅಥವಾ ಮೊಬೈಲ್ ಫೋನ್ ಅನ್ನು ಹಾಸಿಗೆಯಲ್ಲಿ ಬಳಸುತ್ತಾರೆ, ಈ ಸಂಖ್ಯೆ 18-34 ವರ್ಷ ವಯಸ್ಸಿನವರಲ್ಲಿ 81 ಪ್ರತಿಶತಕ್ಕೆ ಏರಿದೆ.

'ಫೇಸ್ಆಪ್' ಬಳಸದಿರಲು  5 ಶಾಕಿಂಗ್ ಕಾರಣಗಳು!'ಫೇಸ್ಆಪ್' ಬಳಸದಿರಲು 5 ಶಾಕಿಂಗ್ ಕಾರಣಗಳು!

ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲಗಳ ಆತ್ಮಸಾಕ್ಷಿಯ ಬಳಕೆಗಾಗಿ ಶಿಕ್ಷಣ ದ ಯೋಜನೆಗಳನ್ನು ಮಸೂದೆಯು ತಿಳಿಸುತ್ತದೆ.ನೊಮೋಫೋಬಿಯಾ ವಿಶೇಷವಾಗಿ ಯುವಜನರ ಮೇಲೆ ಪರಿಣಾಮ ಬೀರುತ್ತದೆ, ಆಗಾಗ್ಗೆ ಅವರಿಗೆ ಉತ್ತಮ ನಿದ್ರೆ ಬರದಂತೆ ತಡೆಯುತ್ತದೆ. ಹಾಗಾಗಿ, ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳಿಗೆ ವಿಪರೀತ ಚಟ ಬೆಳೆಸಿಕೊಂಡಿರುವವರನ್ನು ಮರಳಿ ಸರಿ ದಾರಿಗೆ ತರಬೇಕೆಂಬ ಕೂಗು ಇಟಲಿ ಸಂಸತ್ತಿನಲ್ಲಿ ಮಾರ್ದನಿಸುತ್ತಿದೆ.

Best Mobiles in India

English summary
It proposes education programs for parents to detect excessive mobile phone use in children. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X