ಐಟೆಲ್‌ನಿಂದ ಐಟೆಲ್‌A25 ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಬಜೆಟ್‌ ಬೆಲೆಯ ಫೋನ್‌ ನೀಡುವಲ್ಲಿ ಸೈ ಅನ್ನಿಸಿಕೊಂಡಿರೋ ಐಟೆಲ್‌ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಐಟೆಲ್‌ A25 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮಲ್ಟಿ ಲ್ಯಾಗ್ವೇಜ್‌ ಅನ್ನ ಬೆಂಬಲಿಸುವ, ಡ್ಯುಯಲ್ 4 ಜಿ VoLTE ಸಿಮ್‌ಗೆ ಅವಕಾಶ ನೀಡಿದ್ದು, ಕಾಂಪ್ಯಾಕ್ಟ್ ಸ್ಕ್ರೀನ್ ಮಾದರಿಯ ಫೋನ್‌ ಇದಾಗಿದೆ. ಫೇಸ್ ಅನ್ಲಾಕ್ ವೈಶಿಷ್ಟ್ಯ ಮತ್ತು ಗೂಗಲ್ ಲೆನ್ಸ್ ಅನ್ನು ಸಹ ಬೆಂಬಲಿಸಲಿದ್ದು, ನೂರು ದಿನಗಳ ವಾರಂಟಿ ಆಫರ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಹಾಕಿದೆ.

ಹೌದು

ಹೌದು, ಐಟೆಲ್‌ಕಂಪೆನಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಐಟೆಲ್‌A25 ಸ್ಮಾರ್ಟ್‌ಫೋನ್‌ ಅನ್ನ ಭಾರತದಲ್ಲಿ ಬಿಡುಗಡೆ ಮಾಡಿದ್ದು, ನೂರು ದಿನಗಳ ವಾರಂಟಿ ಆಫರ್‌ ನೀಡಿದೆ. ಅಲ್ಲದೆ ಈ ಮೊಬೈಲ್‌ ಬಜೆಟ್‌ ಬೆಲೆಯದಾಗಿದ್ದು 3020mah ಬ್ಯಾಟರಿ ಪ್ಯಾಕಪ್‌ ಅನ್ನ ಹೊಂದಿದೆ. ಸದ್ಯ ಈ ಮೊಬೈಲ್‌ ಗ್ರೇಡಿಯಂಟ್ ಪರ್ಪಲ್, ಗ್ರೇಡಿಯಂಟ್ ಬ್ಲೂ ಮತ್ತು ಗ್ರೇಡಿಯಂಟ್ ಸೀ ಬ್ಲೂ ಸೇರಿದಂತೆ ಮೂರು ಗ್ರೇಡಿಯಂಟ್ ಟೋನ್‌ಗಳಲ್ಲಿ ಲಭ್ಯವಿದೆ.

ಐಟೆಲ್‌

ಇನ್ನು ಐಟೆಲ್‌ ಹ್ಯಾಂಡ್ಸೆಟ್ 5.0-ಇಂಚಿನ ಐಪಿಎಸ್ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಈ ಹ್ಯಾಂಡ್‌ಸೆಟ್ 1.4Ghz ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು ಆಂಡ್ರಾಯ್ಡ್ 9 ಪೈ ಓಎಸ್ ನ ಬೆಂಬಲದಿಂದ ಕಾರ್ಯನಿರ್ವಹಿಸಲಿದೆ. ಇನ್ನು 1GB RAM ಮತ್ತು 16GB ಶೇಖರಣಾ ಸಾಮರ್ಥ್ಯವನ್ನ ಹೊಂದಿದ್ದು ಮೆಮೊರಿ ಕಾರ್ಡ್‌ ಮೂಲಕ 32GBಯವರೆಗೆ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಅಲ್ಲದೆ

ಅಲ್ಲದೆ ಐಟೆಲ್‌A25 ಫೋನ್ ಫೇಸ್ ಅನ್ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸಲಿದ್ದು, ಸುಮಾರು 12 ಭಾಷೆಗಳಿಗೆ ಬೆಂಬಲವನ್ನು ನೀಡುತ್ತದೆ. ಇನ್ನು ಈ ಸ್ಮಾರ್ಟ್‌ ಫೋನ್‌ನ ಹಿಂಭಾಗದಲ್ಲಿ ಒಂದೇ ಕ್ಯಾಮೆರಾವನ್ನ ಹೊಂದಿದ್ದು ಅದು 5 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನ ಹೊಂದಿದೆ. ಜೊತೆಗೆ 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕೂಡ ನೀಡಿದೆ. ಫೋನ್‌ನ ಕ್ಯಾಮೆರಾ ಸ್ಮಾರ್ಟ್ ಗುರುತಿಸುವಿಕೆ ಮತ್ತು ಎಚ್‌ಡಿಆರ್ ವೈಶಿಷ್ಟ್ಯಗಳನ್ನ ಒಳಗೊಂಡಿದೆ ಎಂದು ಐಟೆಲ್‌ ಹೇಳಿಕೊಂಡಿದೆ.

ಬಿಡುಗಡೆ

ಇನ್ನು ಫೋನ್‌ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿರೋ ಐಟೆಲ್ ಬಿಸಿನೆಸ್ ಯುನಿಟ್ ಮಾರ್ಕೆಟಿಂಗ್ ಮುಖ್ಯಸ್ಥ ಗೋಲ್ಡಿ ಪಟ್ನಾಯಕ್, ಐಟೆಲ್ ಎ25 ಸ್ಮಾರ್ಟ್‌ಫೋನ್‌ ಬಹುಭಾಷಾ ಬೆಂಬಲ, ಫೇಸ್ ಅನ್ಲಾಕ್, ಗೂಗಲ್ ಲೆನ್ಸ್ ನಂತಹ ಮಾಂತ್ರಿಕ ವೈಶಿಷ್ಟ್ಯಗಳ ಒಂದು ಅತ್ಯುತ್ತಮ ಸ್ಮಾರ್ಟ್‌ಫೋನ್‌ ಆಗಿದ್ದು, ಬಜೆಟ್ ಸ್ನೇಹಿ ಬೆಲೆಯಲ್ಲಿ ದೊರೆಯಲಿದೆ. ಇದು ಗ್ರಾಹಕರಿಗೆ ಬಹಳ ಸಂತೋಷಕರ ಅನುಭವವನ್ನು ನೀಡುತ್ತದೆ. ಫೀಚರ್ ಫೋನ್‌ಗಳಿಂದ ತಮ್ಮ ಮೊಟ್ಟಮೊದಲ ಸ್ಮಾರ್ಟ್‌ಫೋನ್ ಖರೀದಿಗೆ ಉತ್ಸುಕರಾಗಿರುವ ಅಪ್‌ಗ್ರೇಡರ್‌ಗಳಿಗೆ ಇದು ಗೇಮ್ ಚೇಂಜರ್ ಆಗಿರುತ್ತದೆ ಎಂದು ನಮಗೆ ವಿಶ್ವಾಸವಿದೆ, ಎಂದು ಹೇಳಿದ್ದಾರೆ.

Most Read Articles
Best Mobiles in India

English summary
itel has launched a new entry-level phone in India, which is called itel A25. This smartphone comes with multi-language support, Dual 4G VoLTE, a compact screen, and more. It offers a total of two cameras, and even supports face unlock feature and Google Lens. itel A25 is priced at Rs 3,999 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X