Home
ಸುದ್ದಿಜಾಲ

ಗ್ಲೋಬಲ್‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಐಟೆಲ್‌ A70 4G ! ಸ್ಟೈಲಿಶ್‌ ಡಿಸೈನ್‌!

ಐಟೆಲ್‌ ಕಂಪೆನಿ ತನ್ನ ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಎಂಟ್ರಿ ಲೆವೆಲ್‌ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಐಟೆಲ್‌ A70 4G ಆನಾವರಣಗೊಳಿಸಿದೆ. ಇದು ಯುನಿಸೊಕ್ T603 ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಐಟೆಲ್‌ A70 4G ಸ್ಮಾರ್ಟ್‌ಫೋನ್‌ ಗ್ಲೋಬಲ್‌ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದು ಸುರಕ್ಷಿತ ಅನ್‌ಲಾಕಿಂಗ್‌ಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗ್ಲೋಬಲ್‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಐಟೆಲ್‌ A70 4G ! ಸ್ಟೈಲಿಶ್‌ ಡಿಸೈನ್‌!

ಐಟೆಲ್‌ A70 4G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಐಟೆಲ್‌ A70 4G ಸ್ಮಾರ್ಟ್‌ಫೋನ್‌ 6.6 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 500ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಸ್ಕ್ರೀನ್‌ ಡೈನಾಮಿಕ್ ಬಾರ್ ಅನ್ನು ಸಹ ಸಂಯೋಜಿಸುತ್ತದೆ.

ಐಟೆಲ್‌ A70 4G ಪ್ರೊಸೆಸರ್‌ ಯಾವುದು?
ಐಟೆಲ್‌ A70 4G ಸ್ಮಾರ್ಟ್‌ಫೋನ್‌ ಯುನಿಸೊಕ್ T603 ಆಕ್ಟಾ-ಕೋರ್ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB ಅಥವಾ 4GB RAM ಮತ್ತು 256GB ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್‌ 8GB ವರೆಗೆ ವರ್ಚುವಲ್ RAM ವಿಸ್ತರಣೆಯನ್ನು ಸಹ ಬೆಂಬಲಸಿಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಮೈಕ್ರೊ SD ಕಾರ್ಡ್‌ ಬೆಂಬಲದೊಂದಿಗೆ 2TB ವರೆಗೆ ಸ್ಟೋರೇಜ್‌ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಗ್ಲೋಬಲ್‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಐಟೆಲ್‌ A70 4G ! ಸ್ಟೈಲಿಶ್‌ ಡಿಸೈನ್‌!

ಐಟೆಲ್‌ A70 4G ಕ್ಯಾಮೆರಾ ಸೆಟ್‌ಅಪ್‌

ಐಟೆಲ್‌ A70 4G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಐಟೆಲ್‌ A70 4G ಬ್ಯಾಟರಿ ಮತ್ತು ಇತರೆ
ಐಟೆಲ್‌ A70 4G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಟೈಪ್‌ ಸಿ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, 3G ಮತ್ತು 2G ನೆಟ್‌ವರ್ಕ್ ಸಂಪರ್ಕವನ್ನು ಬೆಂಬಲಿಸುತ್ತದೆ.

ಗ್ಲೋಬಲ್‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಐಟೆಲ್‌ A70 4G ! ಸ್ಟೈಲಿಶ್‌ ಡಿಸೈನ್‌!

ಬೆಲೆ ಮತ್ತು ಲಭ್ಯತೆ

ಐಟೆಲ್‌ A70 4G ಸ್ಮಾರ್ಟ್‌ಫೋನ್‌ ಬೆಲೆ ವಿವರ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಬ್ರಿಲಿಯಂಟ್ ಗೋಲ್ಡ್, ಸ್ಟೈಲಿಶ್ ಬ್ಲ್ಯಾಕ್, ಫೀಲ್ಡ್ ಗ್ರೀನ್ ಮತ್ತು ಅಜುರೆ ಬ್ಲೂ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಇನ್ನು ಐಟೆಲ್‌ ಕಂಪೆನಿ ಇತ್ತೀಚಿಗೆ ಐಟೆಲ್‌ T1 ಪ್ರೊ ಇಯರ್‌ಬಡ್ಸ್‌ ಪರಿಚಯಿಸಿದೆ. ಇದು ಪೂರ್ಣ ಇನ್-ಇಯರ್ ಇಯರ್‌ಬಡ್ಸ್ ಆಗಿದ್ದು, IPX5-ರೇಟೆಡ್ ಆಗಿದ್ದು, ನೀರಿನ ಸ್ಪ್ಲಾಶ್‌ಗಳು ಅಥವಾ ನೀರಿನ ಸೋರಿಕೆಯನ್ನು ಪ್ರತಿರೋಧಿಸುವ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಆದರಿಂದ ಇದನ್ನು ನೀವು ಮಳೆಗಾಲದಲ್ಲಿಯೂ ಸಹ ಬಳಸಿಕೊಳ್ಳುವುದಕ್ಕೆ ಅವಕಾಶವಿದೆ. ಇನ್ನು ಈ ಇಯರ್‌ಬಡ್ಸ್‌ಗಳ ಶೈಲಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ.

ಐಟೆಲ್‌ T1 ಪ್ರೊ ಇಯರ್‌ಬಡ್ಸ್‌ 10mm ಬಾಸ್ ಬೂಸ್ಟ್ ಡ್ರೈವರ್‌ಗಳೊಂದಿಗೆ ಅಳವಡಿಸಲಾಗಿದೆ. ಇನ್ನು ಡ್ರೈವರ್ ಸೆಟಪ್ ಅನ್ನು ಬಾಸ್ ಔಟ್‌ಪುಟ್ ಅನ್ನು ಹೆಚ್ಚಿಸಲು ಮತ್ತು ತಲ್ಲೀನಗೊಳಿಸುವ ಇನ್ನೂ ಶಕ್ತಿಯುತವಾದ ಆಡಿಯೊ ಔಟ್‌ಪುಟ್ ಅನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ AI ENC ವ್ಯವಸ್ಥೆಯನ್ನು ಸಹ ಹೊಂದಿದ್ದು, ವಾತಾವರಣದ ಶಬ್ದವನ್ನು ಸ್ವಯಂಚಾಲಿತವಾಗಿ ವಿಶ್ಲೇಷಿಸುತ್ತದೆ. ಜೊತೆಗೆ ಉತ್ತಮ ಗುಣಮಟ್ಟದ ಕಾಲ್‌ ಮಾಡುವ ಆಡಿಯೋಗಾಗಿ ಪ್ರತಿ ಇಯರ್‌ಬಡ್‌ನಲ್ಲಿ ಮೈಕ್ ಅನ್ನು ಸಹ ನೀಡಲಾಗಿದೆ.

Best Mobiles in India

English summary
itel A70 4G entry-level smartphone with Unisoc T603 SoC unveiled
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+