ಭಾರತದಲ್ಲಿ ಐಟೆಲ್ A70 ಸಾರ್ಟ್‌ಫೋನ್ ಬಿಡುಗಡೆ: 256GB ಸ್ಟೋರೇಜ್ ಸಾಮರ್ಥ್ಯ!
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಯಸುವವರಿಗೆ ಐಟೆಲ್ ಕಂಪೆನಿ ಗುಡ್‌ನ್ಯೂಸ್ ನೀಡಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಐಟೆಲ್ A70 ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ಹೌದು, Itel A70 ಸ್ಮಾರ್ಟ್‌ಫೋನ್ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ Unisoc T603 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಡ್ಯುಯಲ್ ಸಿಮ್-ಬೆಂಬಲಿತ ಈ ಹ್ಯಾಂಡ್‌ಸೆಟ್ Android 13 Go ಆವೃತ್ತಿ-ಆಧಾರಿತ ItelOS ನಲ್ಲಿ ರನ್ ಆಗಲಿದೆ. ಜೊತೆಗೆ ಡೈನಾಮಿಕ್ ಬಾರ್ ಫೀಚರ್ಸ್ ಅನ್ನು ಸಹ ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್ A70 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
Itel A70 ಸ್ಮಾರ್ಟ್‌ಫೋನ್ 6.6 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 120Hz ವರೆಗಿನ ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 500 ನಿಟ್ಸ್‌ನ ಬ್ರೈಟ್‌ನೆಸ್ ಲೆವೆಲ್ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಡೈನಾಮಿಕ್ ಬಾರ್ ಫೀಚರ್ಸ್‌ನೊಂದಿದೆ ಬರಲಿದೆ.
ಐಟೆಲ್ A70 ಪ್ರೊಸೆಸರ್ ಯಾವುದು?
ಐಟೆಲ್ A70 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ Unisoc T603 ಚಿಪ್‌ಸೆಟ್ ಹೊಂದಿದೆ. ಇದು ಆಂಡ್ರಾಯ್ಡ್ 13 Go ಆವೃತ್ತಿ ಆಧಾರಿತ ItelOS 13 ನಲ್ಲಿ ರನ್ ಆಗಲಿದೆ. ಹಾಗೆಯೇ 4GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಲ್ಲಿ RAM ಅನ್ನು ವಾಸ್ತವಿಕವಾಗಿ ಹೆಚ್ಚುವರಿ 8GB ಯಿಂದ 12GB ವರೆಗೆ ವಿಸ್ತರಿಸಬಹುದಾಗಿದೆ. ಇದರೊಂದಿಗೆ ಮೆಮೊರಿ ಕಾರ್ಡ್ ಮೂಲಕ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಐಟೆಲ್ A70 ಕ್ಯಾಮೆರಾ ರಚನೆ
ಐಟೆಲ್ A70 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನಲ್ಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದು ಅನಿರ್ದಿಷ್ಟ AI-ಬೆಂಬಲಿತ ಸೆಕೆಂಡರಿ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಐಟೆಲ್ A70 ಬ್ಯಾಟರಿ ಮತ್ತು ಇತರೆ ಫೀಚರ್ಸ್
ಐಟೆಲ್ A70 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi 802.11, ಬ್ಲೂಟೂತ್ 5.0, GPS/GLONASS, ಮತ್ತು USB ಟೈಪ್-C ಹಾಗೂ ಹೆಡ್‌ಫೋನ್ ಜ್ಯಾಕ್ ಸಂಪರ್ಕವನ್ನು ಬೆಂಬಲಿಸುತ್ತದೆ. ಇದಲ್ಲದೆ ಭದ್ರತೆಗಾಗಿ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರುತ್ತದೆ.

ಐಟೆಲ್ A70 ಬೆಲೆ ಮತ್ತು ಲಭ್ಯತೆ
ಐಟೆಲ್ A70 ಸ್ಮಾರ್ಟ್‌ಫೋನ್ ಭಾರತದಲ್ಲಿ ಬೇಸ್ ಮಾಡೆಲ್ 4GB + 64GB ಆಯ್ಕೆಗೆ 6,299ರೂ ಬೆಲೆಯನ್ನು ಹೊಂದಿದೆ. ಇದರ 4GB + 128GB ಸ್ಟೋರೇಜ್ ಆಯ್ಕೆಯು 6.799ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು 4GB + 256GB ರೂಪಾಂತರದ ಆಯ್ಕೆಗೆ 7,299ರೂ ಬೆಲೆಯನ್ನು ನಿಗಧಿಪಡಿಸಲಾಗಿದೆ. ಇದು ಅಜೂರ್ ಬ್ಲೂ, ಬ್ರಿಲಿಯಂಟ್ ಗೋಲ್ಡ್, ಫೀಲ್ಡ್ ಗ್ರೀನ್ ಮತ್ತು ಸ್ಟೈಲಿಶ್ ಬ್ಲ್ಯಾಕ್ ಬಣ್ಣಗಳಲ್ಲಿ ನೀಡಲಾಗುತ್ತದೆ. ಇದನ್ನು ಅಮೆಜಾನ್ ವೆಬ್‌ಸೈಟ್ ಮತ್ತು ದೇಶಾದ್ಯಂತ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಜನವರಿ 5 ರಿಂದ ಖರೀದಿಸಬಹುದಾಗಿದೆ.


Click it and Unblock the Notifications








