ಭಾರತದಲ್ಲಿ ಐಟೆಲ್‌ G ಸರಣಿಯ ನಾಲ್ಕು ಹೊಸ ಸ್ಮಾರ್ಟ್‌ಟಿವಿ ಬಿಡುಗಡೆ!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಟಿವಿಗಳಿಗೆ ಭಾರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ವಿವಿಧ ಗಾತ್ರದ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ಇದರಲ್ಲಿ ಐಟೆಲ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ಐಟೆಲ್‌ ಕಂಪೆನಿ ಹೊಸ ಐಟೆಲ್‌ G ಸರಣಿ ಆಂಡ್ರಾಯ್ಡ್ ಟಿವಿ ಮಾದರಿಗಳನ್ನು ಭಾರತದಲ್ಲಿ ಪರಿಚಯಿಸಿದೆ. ಈ ಸರಣಿಯಲ್ಲಿ ಐಟೆಲ್ G 3230 IE, ಇಟೆಲ್ G 4330 IE, ಇಟೆಲ್ G 4334 IE, ಮತ್ತು ಇಟೆಲ್ G 5534 IE ಸ್ಮಾರ್ಟ್‌ಟಿವಿಗಳು ಸೇರಿವೆ.

ಐಟೆಲ್‌

ಹೌದು, ಐಟೆಲ್‌ ಕಂಪೆನಿ ನಾಲ್ಕು ಹೊಸ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಐಟೆಲ್ G 3230 IE 32 ಇಂಚು, ಐಟೆಲ್ G 4330 IE ಮತ್ತು ಇಟೆಲ್ G 4334 IE 43 ಇಂಚುಗಳು, ಮತ್ತು ಐಟೆಲ್ G 5534 IE 55 ಇಂಚಿನ ಸ್ಮಾರ್ಟ್‌ಟಿವಿಗಳಾಗಿವೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಫ್ರೇಮ್‌ಲೆಸ್ ವಿನ್ಯಾಸ, 24W ಸ್ಪೀಕರ್‌ಗಳು ಮತ್ತು ಪ್ರಮಾಣಿತ 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್ G

ಐಟೆಲ್ G ಸರಣಿಯು ಒಂದು 32-ಇಂಚು, ಎರಡು 43-ಇಂಚು, ಮತ್ತು ಒಂದು 55-ಇಂಚು ಸೇರಿದಂತೆ ನಾಲ್ಕು ಮಾದರಿಗಳನ್ನು ಒಳಗೊಂಡಿದೆ. ಐಟೆಲ್ G 3230 IE 32 ಇಂಚಿನ ಹೆಚ್‌ಡಿ ಸ್ಮಾರ್ಟ್‌ಟಿವಿ ಆಗಿದೆ. ಇದು 1,366x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 3,000: 1 ಕಾಂಟ್ರಾಸ್ಟ್ ಅನುಪಾತ, 170 ಡಿಗ್ರಿ ವೀಕ್ಷಣಾ ಕೋನವನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ 9 ನಲ್ಲಿ ಕಾರ್ಯನಿರ್ವಹಿಸುತ್ತದೆ.ಇನ್ನು ಈ ಸ್ಮಾರ್ಟ್‌ಟಿವಿಗಳು 60Hz ರಿಫ್ರೆಶ್ ದರ ಮತ್ತು ಗೂಗಲ್ ಪ್ಲೇ ಸ್ಟೋರ್, ಗೂಗಲ್ ಅಸಿಸ್ಟೆಂಟ್ ಮತ್ತು Chromecast ಗೆ ಪ್ರವೇಶವನ್ನು ಸಹ ಹೊಂದಿವೆ.

ಐಟೆಲ್ G4330 IE 43

ಇನ್ನು ಐಟೆಲ್ G4330 IE 43 ಇಂಚಿನ ಸ್ಮಾರ್ಟ್‌ಟಿವಿ ಫುಲ್‌ ಹೆಚ್‌ಡಿ ಸ್ಕ್ರೀನ್‌ ಹೊಂದಿದೆ. ಇದು 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 4,000: 1 ಕಾಂಟ್ರಾಸ್ಟ್ ಅನುಪಾತ ಮತ್ತು 170 ಡಿಗ್ರಿ ವೀಕ್ಷಣಾ ಕೋನವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 2x12W ಕಾನ್ಫಿಗರೇಶನ್‌ನಲ್ಲಿರುವ 24W ಸ್ಪೀಕರ್‌ಗಳನ್ನು ಹೊಂದಿದ್ದು, ಡಾಲ್ಬಿ ಆಡಿಯೊವನ್ನು ಬೆಂಬಲಿಸಲಿದೆ.

ಐಟೆಲ್ G

ಐಟೆಲ್ G 43344 IE 43 ಇಂಚಿನ 4K ಸ್ಮಾರ್ಟ್‌ಟಿವಿ ಆಗಿದೆ. ಇದು 3,840x2,160 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ ಸ್ಕ್ರೀನ್‌ ಅನ್ನು ಹೊಂದಿದೆ. ಇದು 1,300: 1 ಕಾಂಟ್ರಾಸ್ಟ್ ಅನುಪಾತ, 178-ಡಿಗ್ರಿ ವೀಕ್ಷಣಾ ಕೋನವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ವಹಿಸಲಿದೆ.

ಐಟೆಲ್ G 5534

ಐಟೆಲ್ G 5534 IE ಸ್ಮಾರ್ಟ್‌ಟಿವಿ 55 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 3,840x2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇದು 1,200: 1 ಕಾಂಟ್ರಾಸ್ಟ್ ಅನುಪಾತ ಮತ್ತು 178-ಡಿಗ್ರಿ ವೀಕ್ಷಣಾ ಕೋನವನ್ನು ಹೊಂದಿದೆ. ಅಲ್ಲದೆ ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಐಟೆಲ್ G ಸರಣಿಯ ಎಲ್ಲಾ ಸ್ಮಾರ್ಟ್‌ಟಿವಿಗಳು ಫ್ರೇಮ್‌ಲೆಸ್ ವಿನ್ಯಾಸ ಮತ್ತು 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿವೆ.

ಐಟೆಲ್ G

ಇನ್ನು ಐಟೆಲ್ G 3230 IE ಬೆಲೆ ರೂ. 16,999 ಆಗಿದ್ದರೆ, ಇಟೆಲ್ G 4330 IE ಬೆಲೆ ರೂ. 28,499.ಆಗಿದೆ. ಈ ಸ್ಮಾರ್ಟ್‌ಟಿವಿಗಳು ಇಂದಿನಿಂದ ಆಫ್‌ಲೈನ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

Read more about:
English summary
Itel G series Android TV models launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X