ಐಟೆಲ್‌ ಸಂಸ್ಥೆಯಿಂದ ಬ್ಲೂಟೂತ್ 5.0 ಬೆಂಬಲಿಸುವ IBS -10 ಸ್ಪೀಕರ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್‌ಪ್ರಾಡಕ್ಟ್‌ಗಳ ಮೂಲಕ ಐಟೆಲ್ ಸಂಸ್ಥೆ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಸ್ಮಾರ್ಟ್‌ಪ್ರಾಡಕ್ಟ್‌ಗಳಿಂದ ಸೈ ಎನಿಸಿಕೊಂಡಿರುವ ಐಟೆಲ್‌ ಕಂಪೆನಿ ಇದೀಗ ತನ್ನ ಹೊಸ IBS -10 ಬ್ಲೂಟೂತ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಸದ್ಯ IBS -10 ಬ್ಲೂಟೂತ್ ಸ್ಪೀಕರ್ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು ಬಜೆಟ್ ಸ್ನೇಹಿ ಆಗಿದೆ. ಇನ್ನು ಈ ಬ್ಲೂಟೂತ್‌ ಸ್ಪೀಕರ್‌ ಕಪ್ಪು ಮತ್ತು ಕೆಂಪು ಬಣ್ಣಗಳ ಮಿಶ್ರಣವನ್ನು ಹೊಂದಿದ್ದು, ಸರಳ ವಿನ್ಯಾಸವನ್ನು ಹೊಂದಿದೆ.

ಐಟೆಲ್

ಹೌದು, ಐಟೆಲ್ ಕಂಪೆನಿ ತನ್ನ ಹೊಸ IBS -10 ಬ್ಲೂಟೂತ್ ಸ್ಪೀಕರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಬ್ಲೂಟೂತ್‌ ಸ್ಪೀಕರ್‌ 10W output, ರಬ್ಬರ್ ಲೇಪಿತ ಮೇಲ್ಮೈ ಅನ್ನು ಹೊಂದಿದೆ. ಅಲ್ಲದೆ ಇದು ಸಿಂಗಲ್‌ ಚಾರ್ಜ್‌ನಲ್ಲಿ ಆರು ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ಈ ಬ್ಲೂಟೂತ್ ಸ್ಪೀಕರ್ ಕಾಂಪ್ಯಾಕ್ಟ್ ಮತ್ತು ಸುಲಭವಾಗಿ ಸಾಗಿಸಬಹುದಾದ ಫಾರ್ಮ್ ಫ್ಯಾಕ್ಟರ್‌ನಲ್ಲಿ ಸ್ಟಿರಿಯೊ ವಾಯ್ಸ್‌ ಅನ್ನು ನೀಡುತ್ತದೆ. ಜೊತೆಗೆ ಬ್ಲೂಟೂತ್ 5.0 ಬೆಂಬಲಹೊಂದಿರುವ IBS -10 ಬ್ಲೂಟೂತ್ ಸ್ಪೀಕರ್ 33 ಅಡಿಗಳಷ್ಟು ದೂರದಿಂದ ಆಡಿಯೊ ಅನ್ನು ಕೇಳಬಹುದಾಗಿದೆ. ಇನ್ನುಳಿದಂತೆ ಈ ಸ್ಪೀಕರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್‌

ಐಟೆಲ್‌ ಕಂಪೆನಿಯ ಹೊಸ IBS -10 ಬ್ಲೂಟೂತ್ ಸ್ಪೀಕರ್‌ ಮೊದಲೇ ಹೇಳಿದಂತೆ, ಸ್ಪೀಕರ್ ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಬ್ಲೂಟೂತ್ ಸಾಧನದಿಂದ 33 ಅಡಿಗಳಷ್ಟು ದೂರದಲ್ಲಿ ಆಡಿಯೊವನ್ನು ತಲುಪಿಸಬಹುದೆಂದು ಐಟೆಲ್ ಹೇಳಿದೆ. ಅಲ್ಲದೆ ಇದು ಅಸಿಸ್ಟೆಂಟ್‌ ಪೋರ್ಟ್, ಟಿ-ಕಾರ್ಡ್ ಸ್ಲಾಟ್ ಮತ್ತು ಫ್ಲ್ಯಾಷ್ ಡ್ರೈವ್‌ಗಳನ್ನು ಕನೆಕ್ಟ್‌ ಮಾಡಲು ಪ್ರಮಾಣಿತ ಯುಎಸ್‌ಬಿ ಪೋರ್ಟ್ ಅನ್ನು ಸಹ ಹೊಂದಿದೆ. ಜೊತೆಗೆ ವಾಯರ್‌ಲೆಸ್‌ ಎಫ್‌ಎಂ ಅನ್ನು ಈ ಸ್ಪೀಕರ್‌ನಲ್ಲಿ ಅಳವಡಿಸಲಾಗಿದೆ.

ಬ್ಲೂಟೂತ್‌

ಇನ್ನು ಈ ಬ್ಲೂಟೂತ್‌ ಸ್ಪೀಕರ್‌ 120Hz ನಿಂದ 18KHz ವರೆಗೆ ಫ್ರಿಕ್ವೆನ್ಸಿ ರೆಸ್ಪಾನ್ಸ್‌ ಶ್ರೇಣಿಯನ್ನು ಹೊಂದಿದೆ. ಅಲ್ಲದೆ ಇದರ ಸ್ಟಿರಿಯೊ ವಾಯ್ಸ್‌ ಅನ್ನು ಎರಡು 5W ಸ್ಪೀಕರ್‌ಗಳು ಒದಗಿಸುತ್ತವೆ, ಉತ್ತಮ ಥಂಪಿಂಗ್‌ ಬಾಸ್‌ ಅನ್ನು ಇದು ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಇದು 1,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ ಆರು ಗಂಟೆಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ. ಈ ಸ್ಪೀಕರ್‌ ಅನ್ನು ಮೈಕ್ರೋ-ಯುಎಸ್‌ಬಿ ಪೋರ್ಟ್ ಮೂಲಕ ಚಾರ್ಜ್‌ ಮಾಡಬಹುದಾಗಿದೆ.

ಸ್ಪೀಕರ್

ಇದಲ್ಲದೆ ಈ ಬ್ಲೂಟೂತ್ ಸ್ಪೀಕರ್ ರಬ್ಬರ್ ಲೇಪಿತ ಮೇಲ್ಮೈಯನ್ನು ಹೊಂದಿದ್ದು, ಇದು ಟಚ್‌ ರೆಸ್ಪಾನ್ಸ್‌ ಉತ್ತಮವಾಗಿದೆ. ಅಲ್ಲದೆ ಇದು ಸ್ಪೀಕರ್‌ಗಳನ್ನು ಒಳಗೊಳ್ಳುವ ಸ್ಟೀಲ್ ಮೆಶ್ ಹೊಂದಿದೆ. ಇನ್ನು ಈ ಸ್ಪೀಕರ್ ಅನ್ನು ಆನ್ ಅಥವಾ ಆಫ್ ಮಾಡಲು ಮತ್ತು ಮ್ಯೂಸಿಕ್‌ ಅನ್ನು ಸ್ಟಾಪ್‌ ಮಾಡಲು ಅನುವು ಮಾಡಿಕೊಡುತ್ತದೆ. ಜೊತೆಗೆ ಫೋನ್ ಕಾಲ್‌ಗಳನ್ನು ಕಂಟ್ರೋಲ್‌ ಮಾಡಲು ಸಹ ಬಳಸಬಹುದಾಗಿದೆ. ಇನ್ನು ಈ ಬ್ಲೂಟೂತ್‌ ಸ್ಪೀಕರ್‌ ಬೆಲೆ 1,299 ರೂ ಆಗಿದೆ. ಸದ್ಯ ಈ ಸ್ಪೀಕರ್‌ ಅನ್ನು ಐಟೆಲ್‌ ಬ್ರಾಂಡ್ ವೆಬ್‌ಸೈಟ್‌ನಲ್ಲಿ, ಆಫ್‌ಲೈನ್ ಮಳಿಗೆಗಳ ಮೂಲಕ ಖರೀದಿಸಲು ಲಭ್ಯವಿದೆ.

Best Mobiles in India

English summary
Itel IBS-10 Bluetooth Speaker has multiple connectivity options including Bluetooth, aux, and a T-card slot.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X