ಭಾರತಕ್ಕೆ ಎಂಟ್ರಿ ನೀಡಲು ಐಟೆಲ್ ಐಕಾನ್ 2 ವಾಚ್ ಸಜ್ಜು: ಡಿಸೈನ್ ಹೇಗಿದೆ
ಐಟೆಲ್ ಕಂಪೆನಿ ಟೆಕ್ ವಲಯದಲ್ಲಿ ಹೊಸ ಸ್ಮಾರ್ಟ್‌ವಾಚ್ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ. ಈ ಸ್ಮಾರ್ಟ್‌ವಾಚ್ ಅನ್ನು ಐಟೆಲ್ ಐಕಾನ್ 2 ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ವಾಚ್ ಭಾರತದ ಮಾರುಕಟ್ಟೆಗೆ ಮಾರ್ಚ್ 5 ಎಂಟ್ರಿ ನೀಡುವುದಕ್ಕೆ ತಯಾರಿ ನಡೆಸಿದೆ. ಸದ್ಯ ಐಟೆಲ್ ಐಕಾನ್ 2 ವಾಚ್‌ನ ಲಾಂಚ್ ಪೇಜ್ ಅಮೆಜಾನ್‌ನಲ್ಲಿ ಲೈವ್ ಆಗಿದೆ.
ಹೌದು, ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್ ಮಾರ್ಚ್ 5 ರಂದು ಬಿಡುಗಡೆ ಆಗಲಿದೆ. ಸ್ಮಾರ್ಟ್‌ವಾಚ್‌ನ ಫೀಚರ್ಸ್ ಈಗಾಗಲೇ ಅಮೆಜಾನ್ ಲಾಂಚ್ ಪೇಜ್‌ನಲ್ಲಿ ಬಹಿರಂಗವಾಗಿದೆ. ಅದರಂತೆ ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್ ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ. ಇನ್ನುಳಿದಂತೆ ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್ ಐಕಾನ್ 2 ಫೀಚರ್ಸ್ ಹೇಗಿದೆ?
ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್ 1.83 ಇಂಚಿನ ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 550 ನಿಟ್ಸ್ ಬ್ರೈಟ್‌ನೆಸ್ ಲೆವೆಲ್ ಅನ್ನು ಹೊಂದಿರಲಿದ್ದು, ಸುಲಭ ನ್ಯಾವಿಗೇಷನ್‌ಗಾಗಿ ತಿರುಗುವ ಕಿರೀಟವನ್ನು ಹೊಂದಿದೆ. ಇದು ಕಸ್ಟಮೈಸೇಶನ್‌ಗಾಗಿ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ನೀಡುತ್ತದೆ.
ಇನ್ನು ಸ್ಮಾರ್ಟ್‌ವಾಚ್ ಬ್ಲೂಟೂತ್ v5.3 ಬೆಂಬಲದೊಂದಿಗೆ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಒಳಗೊಂಡಿದೆ. ಇನ್ನು ಬ್ಲೂಟೂತ್ ಕರೆ ಬೆಂಬಲದೊಂದಿಗೆ ತ್ವರಿತ ಸಂಪರ್ಕಗಳು, ಡಯಲ್ ಪ್ಯಾಡ್ ಮತ್ತು ಕರೆ ಇತಿಹಾಸವನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಇದು 30 ದಿನಗಳವರೆಗೆ ಸ್ಟ್ಯಾಂಡ್‌ಬೈ ಬ್ಯಾಟರಿ ಬ್ಯಾಕಪ್ ಅನ್ನು ಸಹ ನೀಡಲಿದೆ.
ಈ ಸ್ಮಾರ್ಟ್‌ವಾಚ್ ಫಿಟ್‌ನೆಸ್ ಉತ್ಸಾಹಿಗಳಿಗೆ SpO2, ಹೃದಯ ಬಡಿತ, ನಿದ್ರೆ ಮತ್ತು ಸ್ತ್ರೀ ಆರೋಗ್ಯಕ್ಕಾಗಿ ನಿರಂತರ ಆರೋಗ್ಯ ಟ್ರ್ಯಾಕಿಂಗ್ ಸೇರಿದಂತೆ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳ ಮೇಲ್ವಿಚಾರಣೆಯನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್ AI ಧ್ವನಿ ಸಹಾಯಕ, ಕ್ಯಾಮೆರಾ, ಸಂಗೀತ ನಿಯಂತ್ರಣಗಳು ಮತ್ತು IP68 ನೀರು ಮತ್ತು ಧೂಳಿನ ಪ್ರತಿರೋಧವನ್ನು ಸಹ ಒಳಗೊಂಡಿದೆ.
ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್ ಭಾರತದಲ್ಲಿ 2000ರೂ ಕ್ಕಿಂತ ಕಡಿಮೆ ಬೆಲೆಯಲ್ಲಿ ಬರಲಿದೆ. ಇದು ಅಮೆಜಾನ್.ಇನ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ವಾಚ್ ಮಾರ್ಚ್ 5 ರಂದು ಕಪ್ಪು, ನೀಲಿ ಮತ್ತು ರೋಸ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನು ಇತ್ತೀಚಿಗೆ ಭಾರತದಲ್ಲಿ ಐಟೆಲ್ P55 ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 6.6 ಇಂಚಿನ ಪಂಚ್ ಹೋಲ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದಲ್ಲದೆ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಜೊತೆಗೆ ಡೈನಾಮಿಕ್ ಬಾರ್ ಫೀಚರ್ಸ್ ಅನ್ನು ಸಹ ಹೊಂದಿದೆ.
ಇದು ಆಕ್ಟಾ ಕೋರ್ Unisoc T606 SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 13 OS ನಲ್ಲಿ ರನ್ ಆಗಲಿದೆ. ಹಾಗೆಯೇ 16GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿದೆ. ಅಂದರೆ 8GB RAM + 8GB ಡೈನಾಮಿಕ್ RAM ರೂಪಾಂತರದಲ್ಲಿ ಲಭ್ಯವಿರುತ್ತದೆ. Itel P55 Plus ಸ್ಮಾರ್ಟ್‌ಫೋನ್ ಮೆಮೊರಿ ಕಾರ್ಡ್ ಬೆಂಬಲಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಐಟೆಲ್ P55 ಪ್ಲಸ್ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೂಪರ್ ಕ್ಲಿಯರ್ ಲೆನ್ಸ್‌ನೊಂದಿಗೆ ಬರಲಿದೆ. ಇದು AI ಲೆನ್ಸ್ ಹೊಂದಿದ್ದು, AI ಕ್ಲಿಯರ್ ಪೋರ್ಟ್ರೇಟ್ ಫೀಚರ್ಸ್‌ನೊಂದಿಗೆ ಬರಲಿದೆ. Itel P55 Plus ಬ್ಯಾಟರಿ ಮತ್ತು ಇತರೆ Itel P55 Plus ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ. ಇದು 45W ಹೈಪರ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.


Click it and Unblock the Notifications








