ಐಟೆಲ್ ಸಂಸ್ಥೆಯಿಂದ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಟಿವಿಗಳು ಬಿಡುಗಡೆ!
ಬಜೆಟ್ ಬೆಲೆಯ ಸ್ಮಾರ್ಟ್‌ಟಿವಿಗಳಿಗೆ ಹೆಸರುವಾಸಿಯಾಗಿರುವ ಐಟೆಲ್ ಸಂಸ್ಥೆ ಭಾರತದಲ್ಲಿ ಆರು ಹೊಸ ಟಿವಿ ಮಾದರಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸರಣಿಯಲ್ಲಿ 32 ಇಂಚಿನಿಂದ 55 ಇಂಚಿನ ಪರದೆ ಹೊಂದಿರುವ ಟಿವಿಗಳು ಲಭ್ಯವಾಗಲಿವೆ. ಈ ಹೊಸ ಐಟೆಲ್ ಟಿವಿಗಳನ್ನು ಮೂರು ಹೊಸ ಶ್ರೇಣಿಗಳಾಗಿ ವಿಭಾಗಿಸಲಾಗಿದೆ. ಇದರಲ್ಲಿ ಐಟೆಲ್ ಐ ಸರಣಿ, ಇಟೆಲ್ ಸಿ ಸರಣಿ ಮತ್ತು ಇಟೆಲ್ ಎ ಸರಣಿ ಎಂದು ಹೆಸರಿಸಲಾಗಿದೆ. ಇನ್ನು ಈ ಹೊಸ ಟಿವಿ ಸೆಟ್‌ಗಳು ದೇಶದ ಶ್ರೇಣಿ 3 ಮತ್ತು ಕೆಳಗಿನ ಮಾರುಕಟ್ಟೆಗಳತ್ತ ಗುರಿಯಿರಿಸಲಾಗಿದೆ ಎಂದು ಕಂಪನಿ ಹೇಳಿದೆ.

ಹೌದು, ಐಟೆಲ್ ಸಂಸ್ಥೆ ತನ್ನ ಹೊಸ ಐಟೆಲ್ ಐ ಸರಣಿ, ಇಟೆಲ್ ಸಿ ಸರಣಿ ಮತ್ತು ಇಟೆಲ್ ಎ ಸರಣಿಯಲ್ಲಿ ಮೂರು ಟಿವಿ ಮಾದರಿಗಳನ್ನ ಪರಿಚಯಿಸಿದೆ. ಇನ್ನು ಐ ಸರಣಿಯಲ್ಲಿ ಎರಡು ಎಚ್‌ಡಿ ಮಾದರಿಯ ಟಿವಿಗಳನ್ನು ಪರಿಚಯಿಸಲಾಗಿದ್ದು, ಇದರಲ್ಲಿ 43 ಇಂಚಿನ ಫುಲ್-ಹೆಚ್‌ಡಿ I4314IE ಟಿವಿ, 32 ಇಂಚಿನ HD I32101IE ಟಿವಿಯನ್ನು ಪರಿಚಯಿಸಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್ I4314IE ಹೆಚ್‌ಡಿ ಸ್ಮಾರ್ಟ್ ಟಿವಿ
ಐಟೆಲ್ I4314IE ಎಚ್‌ಡಿ ಸ್ಮಾರ್ಟ್ ಟಿವಿ 4k ರೆಸಲ್ಯೂಶನ್ ಹೊಂದಿದ್ದು, ಅಲ್ಟ್ರಾ-ಸ್ಲಿಮ್ ಫ್ರೇಮ್‌ಲೆಸ್ ವಿನ್ಯಾಸವನ್ನು ಹೊಂದಿದೆ. ಇದು 4000: 1 ರ ವ್ಯತಿರಿಕ್ತ ಅನುಪಾತದೊಂದಿಗೆ ಸೂಪರ್ ಬ್ರೈಟ್‌ನೆಶ್ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು 8 ಮಿಲಿಸೆಕೆಂಡುಗಳ ಕಡಿಮೆ ಸುಪ್ತತೆಯನ್ನು ನೀಡುತ್ತದೆ. ಇನ್ನು ಈ ಇಟೆಲ್ I5514IE ಹೆಚ್‌ಡಿ ಸ್ಮಾರ್ಟ್ ಟಿವಿ ಡಾಲ್ಬಿ ಆಡಿಯೊಗೆ ಬೆಂಬಲದೊಂದಿಗೆ 20W ನ ಸೌಮಡ್ ಪ್ರೊಡಕ್ಷನ್ ಅನ್ನು ನೀಡಲಿದೆ. ಅಲ್ಲದೆ ಸರೌಂಡ್ ಸೌಂಡ್ ಕ್ರಿಯೆಟ್ ಮಾಡೋದಕ್ಕೆ ಅಂತಾನೆ ಇದರಲ್ಲಿ ಹೊಸ ಎಲೆಕ್ಟ್ರೋಕಾಸ್ಟಿಕ್ ಸೌಂಡ್ ಟೆಕ್ನಾಲಜಿಯನ್ನ ಸಂಯೋಜಿಸಲಾಗಿದೆ. ಸ್ಪೋರ್ಟ್ಸ್ ಮ್ಯಾಚ್‌ಅನ್ನು ನೋಡುವಾಗ ಅದರ ಅನುಭವವನ್ನು ಹೆಚ್ಚು ರೋಮಾಂಚನಗೊಳಿಸುವಂತೆ ಮಾಡಲು ಹಲವಾರು ಚಿತ್ರ ವಿಧಾನಗಳು ಮತ್ತು ಹೊಸ ಸ್ಪೋರ್ಟ್ಸ್ ಪಿಕ್ಯೂ ಮೋಡ್ ಅನ್ನು ಸಹ ನೀಡಲಾಗಿದೆ.

ಐಟೆಲ್ I32101IE ಹೆಚ್‌ಡಿ ಸ್ಮಾರ್ಟ್ ಟಿವಿ
ಐಟೆಲ್ I32101IE ಹೆಚ್‌ಡಿ ಸ್ಮಾರ್ಟ್ ಟಿವಿ ಐಟೆಲ್ ಐ ಸರಣಿಯ ಒನ್ ಆಪ್ ದಿ ಬೆಸ್ಟ್ ಸ್ಮಾರ್ಟ್‌ಟಿವಿ ಎನಿಸಿಕೊಂಡಿದೆ. ಇದು ಫ್ರೇಮ್‌ಲೆಸ್ ಬೆಜೆಲ್ ವಿನ್ಯಾಸದೊಂದಿಗೆ ಬರುತ್ತದೆ. ಇನ್ನು ಈ TV 1GB RAM ಮತ್ತು 8GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸ್ಮಾರ್ಟ್ ಓಎಸ್ 9.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಇಟೆಲ್‌ಕಾಸ್ಟ್ ಅನ್ನು ಸಹ ಬೆಂಬಲಿಸುತ್ತದೆ. ಈ ಟಿವಿಯಲ್ಲಿ ಡಾಲ್ಬಿ ಆಡಿಯೋ ಬೆಂಬಲದೊಂದಿಗೆ 20W ಸ್ಪೀಕರ್‌ಗಳಿವೆ. ಜೊತೆಗೆ ಫ್ರೀ ಲೋಡ್ ಮಾಡಲಾದ ಅಪ್ಲಿಕೇಶನ್‌ಗಳಲ್ಲಿ ಯೂಟ್ಯೂಬ್, ನೆಟ್‌ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋ ಸೇರಿವೆ.

ಐಟೆಲ್ I5514IE ಎಚ್‌ಡಿ ಸ್ಮಾರ್ಟ್ ಟಿವಿ
ಇನ್ನು ಐಟೆಲ್ I5514IE ಎಚ್‌ಡಿ ಸ್ಮಾರ್ಟ್ ಟಿವಿ 64-ಬಿಟ್ 1GHz ಕಾರ್ಟೆಕ್ಸ್ ಎ 53 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದರಲ್ಲಿ 1.5GB RAM ಮತ್ತು 8GB ಸಂಗ್ರಹ ಸಾಮರ್ಥ್ಯವನ್ನು ಸಹ ನೀಡಲಾಗಿದೆ. ಇನ್ನು ಈ ಟಿವಿ ಸ್ಮಾರ್ಟ್ ಓಎಸ್ 9.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಯೂಟ್ಯೂಬ್, ನೆಟ್‌ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋದಂತಹ ಪ್ರೀ ಲೋಡ್ ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. ಇನ್ನು ಬೋರ್ಡ್‌ನಲ್ಲಿರುವ ಆಪ್ ಸ್ಟೋರ್‌ಗಳಲ್ಲಿ ಗಯಾ ಮತ್ತು ನೆಟ್‌ರೇಂಜ್ ಅನ್ನು ಸಹ ನೀಡಲಾಗಿದೆ. ಇದು ಇಟಲ್‌ಕಾಸ್ಟ್‌ನೊಂದಿಗೆ ಫೋನ್ ಬಿತ್ತರಿಸುವಿಕೆಯನ್ನು ಸಹ ಬೆಂಬಲಿಸುತ್ತದೆ.

ಇಟೆಲ್C3210IE ಹೆಚ್‌ಡಿ ಸ್ಮಾರ್ಟ್‌ಟಿವಿ ಮೆಟಲ್ ಬಿಲ್ಡ್ ಮತ್ತು ನ್ಯಾರೋ ಬೆಜೆಲ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ 1,366x768 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದರ ರಿಫ್ರೆಶ್ ರೇಟ್ 60Hz ಆಗಿದ್ದು, 20W ಆಡಿಯೊ ಔಟ್‌ಪುಟ್ ಹೊಂದಿದೆ. ಜೊತೆಗೆ ಇದು ಸಹ ಎಲೆಕ್ಟ್ರೋಕಾಸ್ಟಿಕ್ ಸೌಂಡ್ ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ
ಇನ್ನು ಐಟೆಲ್ I5514IE ಸ್ಮಾರ್ಟ್‌ಟಿವಿ ಬೆಲೆ ರೂ. 34,999 ಮತ್ತು ಇಟೆಲ್ I4310IE ಸ್ಮಾರ್ಟ್‌ಟಿವಿ ಬೆಲೆ ರೂ. 24,499 ಆಗಿದೆ. ಇದಲ್ಲದೆ I4314IE ಟಿವಿ ಬೆಲೆ 21,999 ರೂ, ಆಗಿದ್ದರೆ, 32 ಇಂಚಿನ I32101IE ಸ್ಮಾರ್ಟ್‌ಟಿವಿ ಬೆಲೆ 11,999 ರೂ.ಆಗಿದೆ. ಐಟೆಲ್ ಪಾಲುದಾರ ಸಂಸ್ಥೆಗಳ ಮಳಿಗೆಗಳಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications