Home
ಸುದ್ದಿಜಾಲ

ಐಟೆಲ್‌ P55 ಮತ್ತು P55+ ಫೋನ್‌ಗಳು ಈಗ ಖರೀದಿಗೆ ಲಭ್ಯ! ಆಫರ್‌ ಏನಿದೆ

ಭಾರತದ ಮಾರುಕಟ್ಟೆಗೆ ಕಳೆದ ವಾರ ಎಂಟ್ರಿ ನೀಡಿದ್ದ ಐಟೆಲ್‌ P55 ಮತ್ತು P55+ ಸ್ಮಾರ್ಟ್‌ಫೋನ್‌ಗಳು ಇಂದಿನಿಂದ ಖರೀದಿಗೆ ಲಭ್ಯವಿವೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಇಂದು(ಫೆ. 13) ರಿಂದ ಸೇಲ್‌ ಆಗುತ್ತಿದ್ದು, ಅತ್ಯಾಕರ್ಷಕ ಬ್ಯಾಂಕ್ ಆಫರ್‌ಗಳ ಮೂಲಕ ಲಭ್ಯವಾಗುತ್ತಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳನ್ನು ಅಮೆಜಾನ್‌ನಲ್ಲಿ ಸಹ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.

ಹೌದು, ಐಟೆಲ್‌ P55 ಮತ್ತು P55+ ಸ್ಮಾರ್ಟ್‌ಫೋನ್‌ಗಳ ಮಾರಾಟ ಇಂದಿನಿಂದ ಆರಂಭವಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಕೈ ಗೆಟಕುವ ಬೆಲೆಯಲ್ಲಿ ಲಭ್ಯವಾಗುತ್ತಿರುವುದು ಟೆಕ್‌ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಇವುಗಳನ್ನು ಅರೋರಾ ಬ್ಲೂ, ಬ್ರಿಲಿಯಂಟ್‌ ಗೋಲ್ಟ್‌, ರಾಯಲ್ ಗ್ರೀನ್ ಮತ್ತು ಮೆಟಿಯರ್ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಹಾಗಾದರೆ ಐಟೆಲ್‌ P55 ಮತ್ತು P55+ ಸ್ಮಾರ್ಟ್‌ಫೋನ್‌ಗಳ ಮೇಲಿನ ಫಸ್ಟ್‌ ಸೇಲ್‌ ಆಫರ್‌ ಏನಿದೆ? ಇವುಗಳ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್‌ P55 ಮತ್ತು P55+ ಫೋನ್‌ಗಳು ಈಗ ಖರೀದಿಗೆ ಲಭ್ಯ! ಆಫರ್‌ ಏನಿದೆ

ಐಟೆಲ್‌ P55 ಮತ್ತು P55+ ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌ ಆಫರ್‌ ಏನು?
ಇಂದಿನಿಂದ ಐಟೆಲ್‌ P55 ಮತ್ತು P55+ ಸ್ಮಾರ್ಟ್‌ಫೋನ್‌ಗಳು ಇಂದಿನಿಂದ ಖರೀದಿಗೆ ಲಭ್ಯವಿದೆ. ಇದರಲ್ಲಿ ಐಟೆಲ್‌ P55 ಸ್ಮಾರ್ಟ್‌ಫೋನ್‌ 4GB (8GB ವರ್ಚುವಲ್ RAM) + 128GB ಸಂಗ್ರಹ ಆವೃತ್ತಿಗೆ 7499ರೂ ಬೆಲೆಯನ್ನು ಹೊಂದಿದೆ. ಆದರೆ ಅಮೆಜಾನ್‌ನಲ್ಲಿ 500ರೂ ಬ್ಯಾಂಕ್ ರಿಯಾಯಿತಿ ದೊರೆಯುತ್ತಿರುವುದರಿಂದ ಇದನ್ನು ಕೇವಲ 6999ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದರ 8GB (16GB ವರ್ಚುವಲ್ RAM) + 128GB ಸ್ಟೋರೇಜ್ ಆವೃತ್ತಿಯು 8,999ರೂ ಬೆಲೆಗೆ ದೊರೆಯಲಿದೆ. ಇನ್ನು ಸ್ಮಾರ್ಟ್‌ಫೋನ್‌ ಮೂನ್‌ಲೈಟ್‌ ಬ್ಲ್ಯಾಕ್‌, ಅರೋರಾ ಬ್ಲೂ ಮತ್ತು ಬ್ರಿಲಿಯಂಟ್‌ ಗೋಲ್ಡ್‌ ಬಣ್ಣದ ಆವೃತ್ತಿಯಲ್ಲಿ ಬರಲಿದೆ.

ಇನ್ನು ಐಟೆಲ್‌ P55+ ಸ್ಮಾರ್ಟ್‌ಫೋನ್‌ 8GB (8GB ವರ್ಚುವಲ್ RAM) + 256GB ಸ್ಟೋರೇಜ್ ಆವೃತ್ತಿಗೆ 9999ರೂ ಬೆಲೆಯನ್ನು ನಿಗಧಿಪಡಿಸಲಾಗಿದೆ. ಆದರೆ ಅಮೆಜಾನ್‌ನಲ್ಲಿ 500ರೂ ಬ್ಯಾಂಕ್ ರಿಯಾಯಿತಿ ನೀಡುತ್ತಿರುವುದರಿಂದ ಇದನ್ನು ಕೇವಲ 9499ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ ರಾಯಲ್ ಗ್ರೀನ್ ಮತ್ತು ಮೆಟಿಯರ್ ಬ್ಲ್ಯಾಕ್ ಬಣ್ಣಗಳಲ್ಲಿ ಬರುತ್ತದೆ.

ಐಟೆಲ್‌ P55 ಮತ್ತು P55+ ಫೋನ್‌ಗಳು ಈಗ ಖರೀದಿಗೆ ಲಭ್ಯ! ಆಫರ್‌ ಏನಿದೆ

ಐಟೆಲ್‌ P55 ಫೀಚರ್ಸ್‌ ಹೇಗಿದೆ?
ಐಟೆಲ್‌ P55 ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 6080 ಪ್ರೊಸೆಸರ್‌ ವೇಗವನ್ನು ಪಡೆದಿದೆ. ಹಾಗೆಯೆ 24GB RAM (8GB RAM + 16GB) ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, 128GB ಇಂಟರ್‌ ಸ್ಟೋರೇಜ್‌ ಆಯ್ಕೆಯೊಂದಿಗೆ ಲಭ್ಯವಿದೆ. ಇನ್ನು ಸ್ಮಾರ್ಟ್‌ಫೋನ್‌ 50 ಮೆಗಾಪಿಕ್ಸೆಲ್‌ ಎಐ ಡ್ಯುಯಲ್ ಕ್ಯಾಮೆರಾ (AI dual camera) ರಚನೆ ಪಡೆದಿದೆ. ಜೊತೆಗೆ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 18W ಫಾಸ್ಟ್ ಚಾರ್ಜ್ ಬೆಂಬಲ ಪಡೆದಿದೆ.

ಐಟೆಲ್‌ P55 ಪ್ಲಸ್‌ ಫೀಚರ್ಸ್‌ ಹೇಗಿದೆ?
ಐಟೆಲ್‌ P55 ಪ್ಲಸ್‌ ಸ್ಮಾರ್ಟ್‌ಫೋನ್‌ 6.6 ಇಂಚಿನ ಪಂಚ್ ಹೋಲ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, 267 ppi ಸಾಂದ್ರತೆಯನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇದು ಆಕ್ಟಾ ಕೋರ್ Unisoc T606 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 13 OS ನಲ್ಲಿ ರನ್‌ ಆಗಲಿದೆ.

ಇನ್ನು ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೂಪರ್ ಕ್ಲಿಯರ್ ಲೆನ್ಸ್‌ನೊಂದಿಗೆ ಬರಲಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ. ಇದು 45W ಹೈಪರ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ ಪ್ರೀಮಿಯಂ ಲೆದರ್ ವಿನ್ಯಾಸವನ್ನು ಹೊಂದಿದ್ದು, ಹಸಿರು ಬಣ್ಣದಲ್ಲೂ ಲಭ್ಯವಿದೆ.

Best Mobiles in India

English summary
Itel P55 and P55+ Smartphones Available on amazon website: Offers Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+