ಭಾರತಕ್ಕೆ ಎಂಟ್ರಿ ಕೊಟ್ಟ ಐಟೆಲ್ P55 ಪ್ಲಸ್ ಸ್ಮಾರ್ಟ್‌ಫೋನ್: ಬೆಲೆ ಎಷ್ಟು?
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಐಟೆಲ್ P55 ಪವರ್ ಸರಣಿ ಭಾರತದಲ್ಲಿ ಅನಾವರಣಗೊಂಡಿದೆ. ಈ ಸರಣಿಯಲ್ಲಿ Itel P55 Plus ಸ್ಮಾರ್ಟ್‌ಫೋನ್ ತನ್ನ ಪ್ರೀಮಿಯಂ ಲೆದರ್ ಫಿನಿಶಿಂಗ್ ವಿನ್ಯಾಸದಿಂದ ಗಮನಸೆಳೆದಿದೆ. ಇನ್ನು ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 45W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.
ಹೌದು, Itel P55 Plus ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಡೈನಾಮಿಕ್ ಬಾರ್ ಫೀಚರ್ಸ್ ಒಳಗೊಂಡಿದೆ. ಇದು ಐಫೋನ್‌ಗಳಲ್ಲಿರುವ ಡೈನಾಮಿಕ್ ಐಲ್ಯಾಂಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ನೀವು ಫೇಸ್ ಅನ್ಲಾಕ್, ಬ್ಯಾಕ್‌ಗ್ರೌಂಡ್ ಕಾಲ್, ಲೋ ಬ್ಯಾಟರಿ ರಿಮೈಂಡರ್ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹಾಗಾದ್ರೆ ಹೊಸ ಐಟೆಲ್ P55 Plus ಫೋನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Itel P55 Plus ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
Itel P55 Plus ಸ್ಮಾರ್ಟ್‌ಫೋನ್ 6.6 ಇಂಚಿನ ಪಂಚ್ ಹೋಲ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, 267 ppi ಸಾಂದ್ರತೆಯನ್ನು ಪಡೆದುಕೊಂಡಿದೆ. ಇದಲ್ಲದೆ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಜೊತೆಗೆ ಡೈನಾಮಿಕ್ ಬಾರ್ ಫೀಚರ್ಸ್ ಅನ್ನು ಸಹ ಹೊಂದಿದೆ.
Itel P55 Plus ಪ್ರೊಸೆಸರ್ ಯಾವುದು?
Itel P55 Plus ಸ್ಮಾರ್ಟ್‌ಫೋನ್ ಆಕ್ಟಾ ಕೋರ್ Unisoc T606 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 OS ನಲ್ಲಿ ರನ್ ಆಗಲಿದೆ. ಹಾಗೆಯೇ 16GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿದೆ. ಅಂದರೆ 8GB RAM + 8GB ಡೈನಾಮಿಕ್ RAM ರೂಪಾಂತರದಲ್ಲಿ ಲಭ್ಯವಿರುತ್ತದೆ. Itel P55 Plus ಸ್ಮಾರ್ಟ್‌ಫೋನ್ ಮೆಮೊರಿ ಕಾರ್ಡ್ ಬೆಂಬಲಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Itel P55 Plus ಕ್ಯಾಮೆರಾ
Itel P55 Plus ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೂಪರ್ ಕ್ಲಿಯರ್ ಲೆನ್ಸ್‌ನೊಂದಿಗೆ ಬರಲಿದೆ. ಇದು AI ಲೆನ್ಸ್ ಹೊಂದಿದ್ದು, AI ಕ್ಲಿಯರ್ ಪೋರ್ಟ್ರೇಟ್ ಫೀಚರ್ಸ್‌ನೊಂದಿಗೆ ಬರಲಿದೆ. ಇದಲ್ಲದೆ ಕ್ಯಾಮೆರಾ ಫೀಚರ್ಸ್‌ನಲ್ಲಿ ಸೂಪರ್ ನೈಟ್ ಮೋಡ್ ಮತ್ತು ಪನೋರಮಾ ಮೋಡ್‌ನೊಂದಿಗೆ ಹೊಂದಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿದೆ.
Itel P55 Plus ಬ್ಯಾಟರಿ ಮತ್ತು ಇತರೆ
Itel P55 Plus ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ. ಇದು 45W ಹೈಪರ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನು ಈ ಬ್ಯಾಟರಿಯು ಸ್ಮಾರ್ಟ್ ಚಾರ್ಜಿಂಗ್ ಮತ್ತು ಕಡಿಮೆ ಟೆಂಪ್ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಫೋನ್ ಪ್ರೀಮಿಯಂ ಲೆದರ್ ವಿನ್ಯಾಸವನ್ನು ಹೊಂದಿದ್ದು, ಹಸಿರು ಬಣ್ಣದಲ್ಲೂ ಲಭ್ಯವಿದೆ.

Itel P55 Plus ಬೆಲೆ ಮತ್ತು ಲಭ್ಯತೆ
Itel P55 Plus ಸ್ಮಾರ್ಟ್‌ಪೋನ್ ಭಾರತದಲ್ಲಿ 8GB RAM + 256GB ಸ್ಟೋರೇಜ್ ರೂಪಾಂತರವು 9,499ರೂ ಬೆಲೆಯನ್ನು ಹೊಂದಿದೆ. ಇದರ ಮೇಲೆ 500ರೂ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇದು ಫೆಬ್ರವರಿ 13 ರಿಂದ ಮಾರಾಟವಾಗಲಿದ್ದು, ನೀವು Amazon ನಲ್ಲಿ ಆರ್ಡರ್ ಮಾಡಬಹುದು.


Click it and Unblock the Notifications








