ಭಾರತದಲ್ಲಿ ತನ್ನ ಮೊದಲ ಟ್ಯಾಬ್ಲೆಟ್ ಪರಿಚಯಿಸಿದ ಐಟೆಲ್! ಅಗ್ಗದ ಬೆಲೆ ಆಕರ್ಷಕ ಫೀಚರ್ಸ್!
ಅಗ್ಗದ ಬೆಲೆಯ ಫೋನ್‌ಗಳ ಮೂಲಕ ಗುರುತಿಸಿಕೊಂಡಿರುವ ಐಟೆಲ್ ಕಂಪೆನಿ ಇದೀಗ ಟ್ಯಾಬ್ಲೆಟ್ ವಲಯಕ್ಕೂ ಕಾಲಿಟ್ಟಿದೆ. ಇದೀಗ ತನ್ನ ಮೊದಲ ಐಟೆಲ್ ಪ್ಯಾಡ್ ಒನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಯುನಿಸೊಕ್ SC9863A1 ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಟ್ಯಾಬ್ಲೆಟ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ಹೌದು, ಐಟೆಲ್ ಕಂಪೆನಿ ತನ್ನ ಮೊದಲ ಟ್ಯಾಬ್ಲೆಟ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಈ ಸ್ಮಾರ್ಟ್ ಟ್ಯಾಬ್ಲೆಟ್ 5MP ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಜೊತೆಗೆ 8MP ವೈಡ್-ಆಂಗಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್ ಟ್ಯಾಬ್ಲೆಟ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್ ಪ್ಯಾಡ್ ಒನ್ ಫೀಚರ್ಸ್ ಹೇಗಿದೆ?
ಐಟೆಲ್ ಪ್ಯಾಡ್ ಒನ್ ಟ್ಯಾಬ್ಲೆಟ್ 10.1 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಟ್ಯಾಬ್ಲೆಟ್ ಥಿಕ್‌ನೆಸ್ ಬೆಜೆಲ್‌ಗಳನ್ನು ಒಳಗೊಂಡಿದೆ. ಅಲ್ಲದೆ ಡಿವೈಸ್ ಬಾಕ್ಸಿ ಫಾರ್ಮ್ ಫ್ಯಾಕ್ಟರ್‌ನೊಂದಿಗೆ ಮೆಟಲ್ ಯುನಿಬಾಡಿಯನ್ನು ಹೊಂದಿದೆ. ಇದು ಯುನಿಸೊಕ್ SC9863A1 ಆಕ್ಟಾ-ಕೋರ್ ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 12 Go ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಇನ್ನು ಈ ಟ್ಯಾಬ್ಲೆಟ್ 4GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಐಟೆಲ್ ಪ್ಯಾಡ್ ಒನ್ 5MP ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಅಲ್ಲದೆ 8MP ಸೆನ್ಸಾರ್ ವೈಡ್-ಆಂಗಲ್ ಲೆನ್ಸ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಐಟೆಲ್ ಪ್ಯಾಡ್ ಒನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಈ ಟ್ಯಾಬ್ಲೆಟ್ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಇದಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VoLTE, ವೈಫೈ, ಬ್ಲೂಟೂತ್, 3.5mm ಜ್ಯಾಕ್ ಮತ್ತು OTG ಬೆಂಬಲವನ್ನು ಒಳಗೊಂಡಿವೆ. ಇದು ರೆಡ್ಮಿ ಪ್ಯಾಡ್, ರೆಡ್ಮಿ ಪ್ಯಾಡ್ ಮಿನಿ, ಮೊಟೊ ಟ್ಯಾಬ್ G60 ಟ್ಯಾಬ್ಲೆಟ್‌ಗಳಿಗೆ ಪೈಪೋಟಿ ನೀಡಲಿದೆ ಎನ್ನಲಾಗಿದೆ.
ಐಟೆಲ್ ಪ್ಯಾಡ್ ಒನ್ ಬೆಲೆ ಮತ್ತು ಲಭ್ಯತೆ
ಐಟೆಲ್ ಪ್ಯಾಡ್ ಒನ್ ಭಾರತದಲ್ಲಿ 12,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದನ್ನು ಡೀಪ್ ಗ್ರೇ ಮತ್ತು ಲೈಟ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಟ್ಯಾಬ್ಲೆಟ್ ಅನ್ನು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು.

ಇನ್ನು ಐಟೆಲ್ ಕಂಪೆನಿ ಇತ್ತೀಚಿಗೆ ಹೊಸ ಐಟೆಲ್ A24 ಪ್ರೊ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಇದು 5 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 850 x 480 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 65.36 ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಯುನಿಸೋಕ್ SC9832E ಕ್ವಾಡ್‌ಕೋರ್ ಚಿಪ್‌ಸೆಟ್‌ನಲ್ಲಿ ರನ್ ಆಗಲಿದೆ. ಇದು ಆಂಡ್ರಾಯ್ಡ್ 12 (Go ಆವೃತ್ತಿ) ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ 2 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದಲ್ಲದೆ 0.3 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇನ್ನು ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಷ್ ಅನ್ನು ಕೂಡ ಅಳವಡಿಸಲಾಗಿದೆ.


Click it and Unblock the Notifications








