Home
ಸುದ್ದಿಜಾಲ

ಭಾರತದಲ್ಲಿ ಐಟೆಲ್‌ನಿಂದ ಹೊಸ ಮೊಬೈಲ್‌ ಬಿಡುಗಡೆ! 15 ದಿನಗಳ ಬ್ಯಾಟರಿ ಬ್ಯಾಕಪ್‌ ವಿಶೇಷ

ಸ್ಮಾರ್ಟ್‌ಫೋನ್‌ಗಳ ಅಬ್ಬರದ ನಡುವೆ ಇಂದಿಗೂ ಸಹ ಕೀಪ್ಯಾಡ್‌ ಸೆಟ್‌ಗಳು ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ತಮ್ಮ ಕೀಪ್ಯಾಡ್‌ ಮೊಬೈಲ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಐಟೆಲ್‌ ಕೂಡ ಒಂದಾಗಿದ್ದು, ಇದೀಗ ಹೊಸದಾಗಿ ಐಟೆಲ್‌ ಪವರ್‌ 450 ಮೊಬೈಲ್‌ ಅನ್ನು ಬಿಡುಗಡೆ ಮಾಡಿದೆ.

ಹೌದು, ಐಟೆಲ್‌ ಪವರ್‌ 450 ಮೊಬೈಲ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು 2G ಫೀಚರ್‌ ಫೋನ್ ಆಗಿದ್ದು, 13.4mm ಸ್ಲಿಮ್ ಬಾಡಿ ಮತ್ತು USB ಟೈಪ್-ಸಿ ಬೆಂಬಲವನ್ನು ಹೊಂದಿದೆ. ಜೊತೆಗೆ 15 ದಿನಗಳ ಬ್ಯಾಟರಿ ಬ್ಯಾಕಪ್‌ ಅನ್ನು ಸಹ ನೀಡಲಿದೆ. ಹಾಗಾದ್ರೆ ಐಟೆಲ್‌ ಪವರ್‌ 450 ಮೊಬೈಲ್‌ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಐಟೆಲ್‌ನಿಂದ ಹೊಸ ಮೊಬೈಲ್‌ ಬಿಡುಗಡೆ! 15 ದಿನಗಳ ಬ್ಯಾಟರಿ ಬ್ಯಾಕಪ್‌

ಐಟೆಲ್‌ ಪವರ್‌ 450 ಮೊಬೈಲ್‌ ಫೀಚರ್ಸ್‌ ಹೇಗಿದೆ?
ಐಟೆಲ್‌ ಪವರ್‌ 450 ಮೊಬೈಲ್‌ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನಿನ ಡಿಸ್ಪ್ಲೇ 320 x 240 ಪಿಕ್ಸೆಲ್ ಆಗಿದ್ದು, ಅತ್ಯುತ್ತಮ ಸೆಕ್ಯುರಿಟಿ ಫೀಚರ್ಸ್‌ ಅನ್ನು ಹೊಂದಿದೆ. ಅಂದರೆ ಸಾಮಾನ್ಯ ಫೀಚರ್‌ ಪೋನ್‌ಗಳಿಗಿಂತ ಸ್ವಲ್ಪ ದೊಡ್ಡ ಡಿಸ್‌ಪ್ಲೆಯೊಂದಿಗೆ ಬರುತ್ತದೆ.

ಇನ್ನು ಈ ಹ್ಯಾಂಡ್‌ಸೆಟ್‌ ಮೀಡಿಯಾಟೆಕ್‌ MTK6261D ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದು ಫೋನ್ D9 ಕೀಪ್ಯಾಡ್ ಬೆಂಬಲವನ್ನು ಹೊಂದಿದೆ. ಹಾಗೆಯೇ 8GB RAM ಮತ್ತು 32GB ಸಂಗ್ರಹದೊಂದಿಗೆ ಬರಲಿದೆ. ಈ ಫೋನ್‌ ಪ್ರೊಸೆಸರ್‌ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪಡೆದಿದ್ದು, ಗೇಮ್‌ಗಳನ್ನು ಸಹ ಆಡುವುದಕ್ಕೆ ಅವಕಾಶ ನೀಡಲಾಗಿದೆ. ಅಂದರೆ ಫೋನ್‌ ವಿನ್ಯಾಸ ಮತ್ತು ಸಾಫ್ಟ್‌ವೇರ್ ಸಿಸ್ಟಮ್‌ಗೆ ಐಟೆಲ್ ಹೆಚ್ಚು ಗಮನ ಹರಿಸಿದೆ.

ಭಾರತದಲ್ಲಿ ಐಟೆಲ್‌ನಿಂದ ಹೊಸ ಮೊಬೈಲ್‌ ಬಿಡುಗಡೆ! 15 ದಿನಗಳ ಬ್ಯಾಟರಿ ಬ್ಯಾಕಪ್‌

ಐಟೆಲ್‌ ಪವರ್ 450 ಬೀಚರ್ ಫೋನ್ ಗುಣಮಟ್ಟದ ಸ್ಪೀಕರ್‌ಗಳನ್ನು ಹೊಂದಿದೆ. ಫೋನ್ ಹಿಂಭಾಗದಲ್ಲಿ ಡಿಜಿಟಲ್ ಕ್ಯಾಮೆರಾವನ್ನು ಸಹ ನಿಡಲಾಗಿದೆ. ಈ ಫೋನ್ ಟಾರ್ಚ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಇದಲ್ಲದೆ ಹಿಂದಿ ಮತ್ತು ಇಂಗ್ಲಿಷ್ ಬೆಂಬಲದೊಂದಿಗೆ ಕಿಂಗ್ ವಾಯ್ಸ್ ಸ್ಪೀಚ್-ಟು-ಟೆಕ್ಸ್ಟ್ ಅಪ್ಲಿಕೇಶನ್ ಸಹ ನೀಡಲಾಗಿದ. ಜೊತೆಗೆ ಈ ಫೋನ್‌ 2500mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 15 ದಿನಗಳ ಬ್ಯಾಟರಿ ಬ್ಯಾಕಪ್ ನೀಡುವುದಾಗಿ ಕಂಪನಿ ಹೇಳಿದೆ.

ಇದಲ್ಲದೆ ವಾಯರ್‌ಲೆಸ್ ಎಫ್‌ಎಂ, 3.5 ಎಂಎಂ ಆಡಿಯೊ ಜಾಕ್ ಸೇರಿದಂತೆ ಹಲವು ಆಕರ್ಷಕ ಪೀಚರ್ಸ್‌ಗಳನ್ನು ಹೊಂದಿದೆ. ಇನ್ನು ಇಂಗ್ಲಿಷ್, ಹಿಂದಿ, ಗುಜರಾತಿ, ತಮಿಳು, ತೆಲುಗು, ಬೆಂಗಾಲಿ, ಕನ್ನಡ, ಮಲಯಾಳಂ ಮತ್ತು ಪಂಜಾಬಿ ಸೇರಿದಂತೆ ಒಂಬತ್ತು ಭಾಷೆಗಳಿಗೆ ಬೆಂಬಲವನ್ನು ನೀಡುತ್ತದೆ. ಇನ್ನು ಫೋನ್‌ ಡೀಪ್ ಬ್ಲೂ, ಡಾರ್ಕ್ ಗ್ರೀನ್, ಲೈಟ್ ಗ್ರೀನ್ ಮುಂತಾದ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ ಐಟೆಲ್‌ನಿಂದ ಹೊಸ ಮೊಬೈಲ್‌ ಬಿಡುಗಡೆ! 15 ದಿನಗಳ ಬ್ಯಾಟರಿ ಬ್ಯಾಕಪ್‌

ಬೆಲೆ ಮತ್ತು ಲಭ್ಯತೆ

ಪ್ರಸ್ತುತ, ಐಟೆಲ್ ಪವರ್ 450 ಫೀಚರ್ ಫೋನ್ ಮಾದರಿಯನ್ನು 1500ರೂ ಬೆಲೆಯಲ್ಲಿ ಖರೀದಿಸಬಹುದು. ಫೋನ್ ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಲು ಲಭ್ಯವಿದೆ. ಅದರಲ್ಲೂ ಐಟೆಲ್ ಪವರ್ 450 ಫೀಚರ್ ಫೋನ್ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆಯಿದೆ.

ಇನ್ನು ಐಟೆಲ್‌ ಕಳೆದ ವರ್ಷದ ಅಂತ್ಯದಲ್ಲಿ ಐಟೆಲ್‌ A05s ಸ್ಮಾರ್ಟ್‌ಫೋನಿನ ಹೊಸ ವೇರಿಯೆಂಟ್‌ ಆಯ್ಕೆಯನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಪ್ರಬಲ 1.6GHz ಯುನಿಸಾಕ್ SC9863A ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಸುಧಾರಿತ ಕಾರ್ಯಕ್ಷಮತೆಯನ್ನು ನೀಡಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Best Mobiles in India

English summary
itel Power 450 with type-C port launched in india: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+