itel: ಪವರ್ ಸರಣಿಯಲ್ಲಿ ತನ್ನ ಖದರ್ ತೋರಿಸಲಿದೆ ಐಟೆಲ್: ಬರಲಿವೆ ಮೂರು ಹೊಸ ಸ್ಮಾರ್ಟ್‌ಫೋನ್!
ಬಜೆಟ್ ಫೋನ್‌ಗಳ ತಯಾರಕ ಕಂಪೆನಿ ಐಟೆಲ್ ಇದೀಗ ಹೊಸ ಸ್ಮಾರ್ಟ್‌ಫೋನ್ ಸರಣಿ ಪರಿಚಯಿಸಲು ಮುಂದಾಗಿದೆ. ತನ್ನ ಪವರ್ ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದ್ದು, ಲಾಂಚ್ ಟೈಮ್‌ಲೈನ್ ಅನ್ನು ಬಹಿರಂಗಪಡಿಸಿದೆ. ಈ ಫೋನ್‌ಗಳು ಕೂಡ ಬಜೆಟ್ ಬೆಲೆಯಲ್ಲಿ ಬರಲಿವೆ ಅನ್ನೊದು ವಿಶೇಷ.
ಹೌದು, ಭಾರತದಲ್ಲಿ ಐಟೆಲ್ ಪವರ್ ಸರಣಿ ಸ್ಮಾರ್ಟ್‌ಫೋನ್‌ಗಳ ಲಾಂಚ್ ಟೈಮ್‌ಲೈನ್ ಬಹಿರಂಗವಾಗಿದೆ. ಈ ಸರಣಿಯು ಬಜೆಟ್ ಗ್ರಾಹಕರನ್ನು ಗುರಿಯಾಗಿಸುವ ಗುರಿಯನ್ನು ಹೊಂದಿದೆ. ಇನ್ನು ಐಟೆಲ್ ಪವರ್ ಸರಣಿಯು ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಲಿದ್ದು, ಫೆಬ್ರವರಿಯಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ. ಹಾಗಾದ್ರೆ ಐಟೆಲ್ ಪವರ್ ಸರಣಿಯ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್ ಪವರ್ ಸರಣಿಯ ನಿರೀಕ್ಷೆ ಏನು?
ಐಟೆಲ್ ಪವರ್ ಸರಣಿಯ ಮೊದಲ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಈ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವ ಏಕೈಕ ಫೋನ್ ಇದಾಗಿರಲಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗಾಗಿ ಅಮೆಜಾನ್ ಇಂಡಿಯಾದೊಂದಿಗೆ ಐಟೆಲ್ ಪಾಲುದಾರರಾಗಲಿದೆ ಎಂದು ವರದಿಯಾಗಿದ್ದು, ಇದಕ್ಕೆ ಐಟೆಲ್‌ನ ಟೀಸರ್ ಸುಳಿವು ನೀಡಿದೆ.
ಇನ್ನು ಪವರ್ ಸರಣಿಯ ಎರಡನೇ ಸ್ಮಾರ್ಟ್‌ಫೋನ್ ಸಾಕಷ್ಟು ವಿಭಿನ್ನತೆಯೊಂದಿಗೆ ಬರಲಿದೆ. ಬಜೆಟ್ ವಿಭಾಗದಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಗುರುತಿಸಿದರೂ ಕೂಡ ಇದು ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ದಕ್ಷ ಬ್ಯಾಟರಿ ಬಾಳಿಕೆಗಾಗಿ ಡಿವೈಸ್‌ನಲ್ಲಿ ಮಲ್ಟಿ ಆಪ್ಟಿಮೈಸೇಶನ್‌ಗಳನ್ನು ಸಹ ನೀಡಿರುವ ನಿರೀಕ್ಷೆ ಇಡಲಾಗಿದೆ.
ಆದರೆ ಪವರ್ ಸರಣಿಯಲ್ಲಿ ಬರಲಿರುವ ಮೂರನೇ ಸ್ಮಾರ್ಟ್‌ಫೋನ್ ಅತ್ಯಾಕರ್ಷಕ ಫೀಚರ್ಸ್‌ಗಳೊಂದಿಗೆ ಎಂಟ್ರಿ ನೀಡಲಿದೆ ಎನ್ನಲಾಗಿದೆ. ಅದರಲ್ಲೂ ವಿಶೇಷ ಮೆಮೊರಿ ಫೀಚರ್ಸ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಈ ಫೋನ್‌ನ ಲೀಕ್ ಇಮೇಜ್ ಪ್ರಕಾರ ಪೋರ್ಟ್ ಮತ್ತು ಬಟನ್ ನಿಯೋಜನೆಗಳ ಕಲ್ಪನೆಯನ್ನು ನೀಡುತ್ತದೆ ಮತ್ತು SIM ಕಾರ್ಡ್ ಟ್ರೇ ಸ್ಮಾರ್ಟ್‌ಫೋನ್‌ನ ಎಡಭಾಗದಲ್ಲಿ ಇರಲಿದೆ ಎಂದು ಹೇಳಲಾಗಿದೆ.

ಇದರೊಂದಿಗೆ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್‌ಗಳನ್ನು ಫೋನ್‌ನ ಬಲಭಾಗದಲ್ಲಿ ಕಾಣಬಹುದು. ಜೊತೆಗೆ ಐಟೆಲ್ ಡಿವೈಸ್ ಅನ್ನು ಫ್ಲಾಟ್ ಡಿಸ್‌ಪ್ಲೇ ಮತ್ತು ಸೆಂಟರ್ಡ್ ಪಂಚ್ ಹೋಲ್ ಕಟೌಟ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಸೆಲ್ಫಿ ಕ್ಯಾಮೆರಾವನ್ನು ಇರಿಸಲು ಸಜ್ಜುಗೊಳಿಸಲಾಗಿದೆ. ಇನ್ನು ಡಿವೈಸ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದು, ಈ ಕ್ಯಾಮೆರಾ ಮಾಡ್ಯೂಲ್ LED ಫ್ಲ್ಯಾಷ್‌ನೊಂದಿಗೆ ಬರಲಿದೆ.
ಇನ್ನು ಐಟೆಲ್ ಕಂಪೆನಿ ತೀರಾ ಇತ್ತೀಚಿಗೆ ಐಟೆಲ್ A70 ಸ್ಮಾರ್ಟ್‌ಫೋನ್ ಅನ್ನು ಸಹ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್+ ಡಿಸ್‌ಪ್ಲೇ ಅನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 1,612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದು 120Hz ವರೆಗಿನ ರಿಫ್ರೆಶ್ ರೇಟ್ ಸಪೋರ್ಟ್ ಒಳಗೊಂಡಿದ್ದು, 500 ನಿಟ್ಸ್‌ನ ಬ್ರೈಟ್‌ನೆಸ್ ಲೆವೆಲ್ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ Unisoc T603 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಗೋ ಆವೃತ್ತಿ ಆಧಾರಿತ ಐಟೆಲ್‌ಓಎಸ್ 13 ಸಪೋರ್ಟ್ ಕೂಡಾ ಇದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಸಹ ಪಡೆದುಕೊಂಡಿದೆ.


Click it and Unblock the Notifications








